Breaking News

ಮೊಬೈಲ್ ಅಂಗಡಿಯಲ್ಲಿ ಕಳವು, ನಾಲ್ವರು 10ನೇ ತರಗತಿ ವಿದ್ಯಾರ್ಥಿಗಳ ಬಂಧನ!

ಉತ್ತರ ಕನ್ನಡದ ಮುಂಡಗೋಡಿನಲ್ಲಿ ಮೊಬೈಲ್ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಶಾಲೆಯ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ, ₹63,920 ಮೌಲ್ಯದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ರಾತ್ರಿ ವಸತಿ ನಿಲಯದಿಂದ ಹೊರಬಂದು, ಮೊಬೈಲ್ ಅಂಗಡಿಯ ಬೀಗ ಮುರಿದು ಮೊಬೈಲ್‌ಗಳು, ಪವರ್ ಬ್ಯಾಂಕ್, ಇಯರ್‌ಬಡ್ಸ್, ಸ್ಪೀಕರ್ ಹಾಗೂ ಚಾರ್ಜರ್‌ಗಳನ್ನು ಕಳವು ಮಾಡಿದ್ದರು. ಕೃತ್ಯಕ್ಕೆ ಬಳಸಿದ ಉಪಕರಣಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆಯಲ್ಲಿ ವಿದ್ಯಾರ್ಥಿಗಳು ಈ ಹಿಂದೆ ಮತ್ತೊಂದು ಮೊಬೈಲ್ ಅಂಗಡಿಯಲ್ಲೂ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ವಸತಿ ನಿಲಯದಿಂದ ಅವರು ಮಧ್ಯರಾತ್ರಿ ಹೊರಹೋಗಿದ್ದು ಹೇಗೆ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಬಳ್ಳಾರಿಯಲ್ಲಿ ₹350 ಕೋಟಿ ಜಿಎಸ್‌ಟಿ ವಂಚನೆ: ದಂಗಾದ ಸೈಬರ್ ಕ್ರೈಂ ಪೊಲೀಸರು!

ಬಳ್ಳಾರಿಯಲ್ಲಿ ಬೃಹತ್ ಜಿಎಸ್‌ಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ತಿಂಗಳಿಗೆ ಕೇವಲ ₹15 ಸಾವಿರ ಸಂಬಳ ಪಡೆಯುವ ಶೋರೂಂ ಉದ್ಯೋಗಿ …

Leave a Reply

Your email address will not be published. Required fields are marked *