ಬೆಂಗಳೂರು: ಗಣೇಶ ವಿಸರ್ಜನೆ ವೇಳೆ ಎರಡು ರೌಡಿಶೀಟರ್‌ಗಳ ಗುಂಪಿನ ನಡುವೆ ನಡೆದ ಹೊಡೆದಾಟದಲ್ಲಿ ದೀಪಕ್ ಎಂಬ ರೌಡಿಶೀಟರ್ ಕೊಲೆಯಾದ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶನಿವಾರ ದೀಪಕ್ ಹಾಗೂ ಈಶ್ವರ್, ನೇಪಾಳಿ ಸುಮನ್ ಗುಂಪಿನ ನಡುವೆ ಗಲಾಟೆ ನಡೆದಿತ್ತು. ಭಾನುವಾರ ಚೊಕ್ಕಸಂದ್ರ ಕೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಮತ್ತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಕಾಲು ತುಳಿದ ವಿಚಾರಕ್ಕೆ ದೀಪಕ್‌ಗೆ ಡ್ರಾಗರ್‌ನಿಂದ ಇರಿಯಲಾಗಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ದೀಪಕ್‌ನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

