ಕುಂದಾಪುರ: ಕಾಳಾವರ ಗ್ರಾಮದ ಅರೆಕಲ್ಲು ಜನತಾ ಕಾಲೂನಿ ಹತ್ತಿರದ ಸರಕಾರಿ ಹಾಡಿಯಲ್ಲಿ ಡಿ.20ರಂದು ರಾತ್ರಿ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಮೂವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆರಾಕೇಶ್(24), ಮ್ಯಾಕ್ಸಿ ರೋಶನ್(39), ಸತೀಶ್(37) ಬಂಧಿತ ಆರೋಪಿಗಳು.ಉಳಿದಂತೆ ಪ್ರಕಾಶ, ರಾಜೇಶ್ ಮತ್ತು ಸುಜನ್ ಎಂಬವರು ಪೊಲೀಸ್ ದಾಳಿ ವೇಳೆ ಓಡಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರಿಂದ 4,450ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಮೂಳೂರು: ಲಾರಿಗೆ ವಾಹನ ಅಡ್ಡವಿಟ್ಟು ಸಿಬಂದಿಗೆ ಹಲ್ಲೆ
ಮುಂಬಯಿಯಿಂದ ಕೊಚ್ಚಿಗೆ ಹೋಗುತ್ತಿದ್ದ ಲಾರಿಗೆ 2 ಟೆಂಪೋ ಟ್ರಾವಲೆರ್ ವಾಹನಗಳನ್ನು ಅಡ್ಡವಿರಿಸಿ ಚಾಲಕ ಮತ್ತು ನಿರ್ವಾಹಕನಿಗೆ ಕಬ್ಬಿಣದ ರಾಡ್, ಲಿವರ್, ಸ್ಪಾನರ್ನಿಂದ ಹಲ್ಲೆಗೈದು ಪರಾರಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಲ್ಲಿ ರವಿವಾರ ರಾತ್ರಿ ನಡೆದಿದೆ.ಕೇರಳದ ಚಾಲಕ ಯೂನೂಸ್ ಪಿ.ಕೆ. ಮತ್ತು ಕ್ಲೀನರ್ ಮುಹಮ್ಮದ್ ಮದನಿ ನಜರ್ ಹಲ್ಲೆಗೊಳಗಾದರು.ಕೃತ್ಯ ಎಸಗಿದ ಬಳಿಕ ಆರೋಪಿಗಳು ವಾಹನ ಸಹಿತವಾಗಿ ಮಂಗಳೂರಿನತ್ತ ತೆರಳಿದ್ದಾರೆ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಗಾಯಾಳುಗಳು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. …
Read More »ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯರೊಬ್ಬರು ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಹಿಮಾಚಲ ಪ್ರದೇಶದ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಭಾನುವಾರ ವೈದ್ಯರೊಬ್ಬರು ರೋಗಿಯ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.ಶಿಮ್ಲಾ ಜಿಲ್ಲೆಯ ಕುಪ್ವಿ ಉಪವಿಭಾಗಕ್ಕೆ ಉಸಿರಾಟದ ತೊಂದರೆ ಎಂದು ಬಂದಿದ್ದ ತನ್ನ ಬಗ್ಗೆ ವೈದ್ಯರು ಕೆಟ್ಟದಾಗಿ ವರ್ತಿಸಿದ್ದಾರೆ, ಅವಮಾನ ಮಾಡಿದ್ದಾರೆ ಎಂದು ರೋಗಿ ಆರೋಪಿಸಿದ್ದಾರೆ. ಗೌರವದಿಂದ ಮಾತನಾಡಲು ಕೇಳಿದಾಗ …
Read More »ಈಜಲು ಹೋದವನ ದುರಂತ ಅಂತ್ಯ: ನೀರಿನ ಸೆಳೆತಕ್ಕೆ ಕೊಚ್ಚಿ ಹೋದ ಯುವಕ
ಮಳವಳ್ಳಿ ತಾಲೂಕು, ಹಲಗೂರು ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟ ಘಟನೆ ನಡೆದಿದೆ.ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ನಿವಾಸಿ ಪ್ರಹ್ಲಾದ್ (21) ಮೃತಪಟ್ಟ ಯುವಕ. ಪ್ರಹ್ಲಾದ್ ತನ್ನ ಸ್ನೇಹಿತರೊಂದಿಗೆ ಮುತ್ತತ್ತಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪ್ರವಾಸ ಬಂದಿದ್ದನು.ಕಾವೇರಿ ನದಿಯಲ್ಲಿ ಈಜಲು ಹೋದಾಗ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ. ನುರಿತ ಈಜುಗಾರರ ಸಹಾಯದಿಂದ ಯುವಕನ ಮೃತದೇಹವನ್ನು ಹೊರತೆಗೆಯಲಾಯಿತು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ …
Read More »ಚಿನ್ನ ವಾಪಾಸು ಕೇಳಿದ್ದಕ್ಕೆ ಜೀವ ಬೆದರಿಕೆ: ದೂರು
ಕುಂದಾಪುರ: ವಿದೇಶಕ್ಕೆ ಹೋಗಲು ಹಣದ ಸಮಸ್ಯೆಯಿದೆ ಎಂದು ಹೇಳಿಕೊಂಡು ಶಾಗೀಲ್ ಎಂಬಾತ 2023ರಲ್ಲಿ 7 ಪವನ್ ಚಿನ್ನವನ್ನು ಮತ್ತು 2024ರಲ್ಲಿ ರೆಹನ ಎಂಬಾತ 15 ಪವನ್ ಚಿನ್ನ ಪಡೆದಿದ್ದು, ಈಗ ಮರಳಿ ಕೇಳಿದಾಗ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಕೋಟೇಶ್ವರದ ನಿವಾಸಿ ಮೈಮುನ್ನಿಸಾ (62) ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ.ಇನ್ನೋರ್ವ ಆರೋಪಿ ಮೊಹಮ್ಮದ್ ಸಲೀಂ ಸಹ ಜೀವ ಬೆದರಿಕೆ ಹಾಕಿರುವುದಾಗಿ ತಿಳಿಸಿದ್ದಾರೆ.
Read More »ಉ. ಪ್ರದೇಶದಲ್ಲಿ ‘ಸಿಗರೇಟ್’ ಖರೀದಿಸಲು ರೈಲು ನಿಲ್ಲಿಸಿದ ಲೋಕೋ ಪೈಲಟ್..!
ಉತ್ತರ ಪ್ರದೇಶದ ಬರೇಲಿಯಲ್ಲಿ ಲೋಕೋ ಪೈಲಟ್ ಒಬ್ಬರು ಮಲ್ಕನ್ ರೈಲ್ವೆ ಕ್ರಾಸಿಂಗ್’ನಲ್ಲಿ ಸುಮಾರು 10 ನಿಮಿಷಗಳ ಕಾಲ ಸರಕು ರೈಲನ್ನ ನಿಲ್ಲಿಸಿದ್ದಾರೆ, ಇದರಿಂದಾಗಿ ಜನನಿಬಿಡ ಲೆವೆಲ್ ಕ್ರಾಸಿಂಗ್’ನಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಈ ಅನಿರೀಕ್ಷಿತ ನಿಲುಗಡೆಯನ್ನ ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಘಟನೆ ಸಾರ್ವಜನಿಕರ ಗಮನಕ್ಕೆ ಬಂದಿದೆ.ಮಾಧ್ಯಮ ವರದಿಗಳ ಪ್ರಕಾರ, ರೈಲ್ವೆ ಅಧಿಕಾರಿಗಳು ಈ ನಿಲುಗಡೆಯ ಹಿಂದಿನ ಸಂದರ್ಭಗಳನ್ನ ತಿಳಿಯಲು ತನಿಖೆಯನ್ನು ಪ್ರಾರಂಭಿಸಿದ್ದಾರೆ. ವೈರಲ್ ಆಗಿರುವ …
Read More »ಸಿರುಗುಪ್ಪ: ಹೊಸ ರೇಷನ್ ಕಾರ್ಡ್ ಮಾಡಿಸಲು ₹ 4 ಸಾವಿರ ಬೇಡಿಕೆ
ಹೊಸ ರೇಷನ್ ಕಾರ್ಡ್ ನೀಡಲು ₹ 4 ಸಾವಿರ ಬೇಡಿಕೆ ಇಟ್ಟ ಆನ್ ಲೈನ್ ಸೆಂಟರ್ ಅವರ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವದಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಆಹಾರ ನಿರೀಕ್ಷಕ ಎಂ.ವಿಜಯಕುಮಾರ್ ಅವರು ಸಿರುಗುಪ್ಪ ಪೊಲೀಸ್ ರಾಣೆಯಲ್ಲಿ ದೂರು ನೀಡಿರುತ್ತಾರೆ.ಸಿರುಗುಪ್ಪ ನಗರದ ಹಳೆ ಆಂಜನೇಯ ದೇವಸ್ಥಾನದ ಬಳಿ ಇರುವ ಆನ್ಲೈನ್ ಕೇಂದ್ರದ ನಿರ್ವಾಹಕ ರಾಘವೇಂದ್ರ, ಅವರು ಹೊಸ ಪಡಿತರ ಚೀಟಿಗಾಗಿ ₹ 4,000 ಬೇಡಿಕೆ ಇಡುತ್ತಿರುವ ವಿಡಿಯೊ ರಾಜಕೀಯ ಪಕ್ಷವೊಂದರ ಫೇಸ್ಬುಕ್ …
Read More »ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ
ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿ ಬಳಿ ಸೋಮವಾರ ರಾತ್ರಿ ಇಬ್ಬರು ಚಿಕ್ಕ ಮಕ್ಕಳು ಸೇರಿದಂತೆ ನಾಲ್ವರ ಕುಟುಂಬದ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆ ಅಥವಾ ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ ಎಂದು ಪಯ್ಯನ್ನೂರು ಪೊಲೀಸ್ ಇನ್ಸ್ಪೆಕ್ಟರ್ ರಾಜೀಶ್ ತೇರುವತ್ ಪೀಡಿಕಾಯಿಲ್ ಹೇಳಿದ್ದಾರೆ.ಮೃತರನ್ನು 40 ವರ್ಷದ ಕಲಾಧರನ್, ಅವರ ವೃದ್ಧ ತಾಯಿ ಉಷಾ ಮತ್ತು ಏಳು ಮತ್ತು ಎರಡು ವರ್ಷದ ಅವರ ಇಬ್ಬರು ಹೆಣ್ಣುಮಕ್ಕಳು ಎಂದು ಗುರುತಿಸಲಾಗಿದೆ. ಮೃತರು ರಾಮಂಥಳಿ ಪಂಚಾಯತ್ನ …
Read More »ನೇಣು ಬೀಗಿದುಕೊಂಡು ಆತ್ಮಹತ್ಯೆ
ಉಡುಪಿ: ನೇಪಾಲ ಮೂಲದ 76 ಬಡಗುಬೆಟ್ಟು ಗ್ರಾಮದ ನಿವಾಸಿಯ ಪುತ್ರನೊಬ್ಬ ನೇಣು ಬಿಗದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ನೇಪಾಳದ ಪದಮ್ ಬಹದೂರ್ ಅವರು ಸುಮಾರು 10 ವರ್ಷಗಳ ಹಿಂದೆ ಉಡುಪಿಗೆ ಬಂದು ನೆಲೆಸಿದ್ದು ಪ್ರಸ್ತುತ ಚಂದು ಮೈದಾನದ ಬಳಿ ಬಾಡಿಗೆ ಮನೆಯಲ್ಲಿ ವಾಸಮಾಡಿದ್ದು ಅವರು ಡಿ.21ರ ರಾತ್ರಿ 8 ಗಂಟೆಗೆ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಹೋಗಿದ್ದರು. ಇದೇ ವೇಳೆ ಮಗ ಸಂಜಯ್ ಮನೆಯ ಹಿಂಬದಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪದಮ್ …
Read More »ಶಿವಮೊಗ್ಗ | ಹೊಟೇಲ್ ಕಾರ್ಮಿಕನಿಗೆ ಪಿಎಸ್ಸೈ ಥಳಿತ: ಆರೋಪ
ಹೊಟೇಲ್ ಯಾಕೆ ಬಂದ್ ಮಾಡಿಲ್ಲ ಎಂದು ಪ್ರಶ್ನಿಸಿ ಕಾರ್ಮಿಕನೊಬ್ಬನಿಗೆ ಪಿಎಸ್ಸೈಯೊಬ್ಬರು ಥಳಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿರುವುದಾಗಿ ವರದಿಯಾಗಿದೆ.ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಹೊಟೇಲ್ನಲ್ಲಿ ಈ ಘಟನೆ ನಡೆದಿದ್ದು, ಷಾವಾಸ್(24) ಎಂಬ ಕಾರ್ಮಿಕನ ಮೇಲೆ ದೊಡ್ಡಪೇಟೆಯ ಪಿಎಸ್ಸೈ ನಾರಾಯಣ ಮಧುಗಿರಿ ಥಳಿಸಿರುವ ವೀಡಿಯೊ ವೈರಲ್ ಆಗಿದೆ.ಪಿಎಸ್ಸೈ ಹಲ್ಲೆ ಮಾಡುವ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹಲ್ಲೆಗೊಳಗಾಗಿದ್ದ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





