ಹುಬ್ಬಳ್ಳಿ: ಕರ್ತವ್ಯಲೋಪ ಆರೋಪದ ಮೇಲೆ ಇಲ್ಲಿನ ರಾಜನಗರದ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯದ ನಿಲಯ ಪಾಲಕಿಯನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೊರಡಿಸಿದ್ದಾರೆ.ಶೋಭಾ ಚಾಕಲಬ್ಬಿ ಅಮಾನತುಗೊಂಡವರು. ವಿದ್ಯಾರ್ಥಿನಿಲಯದಲ್ಲಿನ ಅವ್ಯವಸ್ಥೆ ಬಗೆಗಿನ ವರದಿ ಆಧರಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಖುದ್ದು ಪರಿಶೀಲನೆ ನಡೆಸಿದ್ದಾರೆ.ಅವರ ವರದಿ ಆಧರಿಸಿ ಇಲಾಖಾ ವಿಚಾರಣೆ ಕಾಯ್ದಿರಿಸಿ, ಅಮಾನತಿನಲ್ಲಿ ಇರಿಸಲಾಗಿದೆ. ಮೇಲಧಿಕಾರಿಗಳ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡುವಂತಿಲ್ಲ …
Read More »ಶಾಲಾ ಬಸ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ
ಸಾಗರ: ತಾಲ್ಲೂಕಿನ ಇಡುವಾಣಿ ಗ್ರಾಮದ ಬಳಿ ಕೆಎಸ್ಆರ್ಟಿಸಿ ಬಸ್ ಹಾಗೂ ನಗರದ ಪ್ರಗತಿ ಸಂಯುಕ್ತ ಪ್ರೌಢಶಾಲೆಯ ವಾಹನದ ನಡುವೆ ಗುರುವಾರ ಮುಖಾಮುಖಿ ಡಿಕ್ಕಿಯಾಗಿದ್ದು ಎರಡೂ ಬಸ್ಗಳ ಚಾಲಕರು , ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.ಸಾಗರದಿಂದ ಕಾರ್ಗಲ್ ಕಡೆ ತೆರಳುತ್ತಿದ್ದ ಸರ್ಕಾರಿ ಬಸ್ ಹಾಗೂ ಕಾರ್ಗಲ್ನಿಂದ ಸಾಗರಕ್ಕೆ ಬರುತ್ತಿದ್ದ ಶಾಲಾ ವಾಹನದ ನಡುವೆ ಈ ಅಪಘಾತ ಸಂಭವಿಸಿದೆ.ಶಾಲಾ ವಾಹನದ ಬಸ್ ಚಾಲಕ ಪ್ರವೀಣ್, ಸರ್ಕಾರಿ ಬಸ್ ಚಾಲಕ ಆರೀಫ್, ವಿದ್ಯಾರ್ಥಿ ಸಾತ್ವಿಕ್ ಅವರಿಗೆ ಗಂಭೀರ …
Read More »ಶಿವಶಂಕರಪ್ಪ ಅಂತಿಮ ದರ್ಶನದ ವೇಳೆ ವ್ಯಕ್ತಿಯ ಜೇಬಿಗೆ ಕತ್ತರಿ: ₹36 ಸಾವಿರ ಕಳವು
ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಂತಿಮ ದರ್ಶನಕ್ಕೆ ಬಂದಿದ್ದ ನಗರದ ವ್ಯಕ್ತಿಯೊಬ್ಬರ ಜೇಬಿನಿಂದ ದುಷ್ಕರ್ಮಿಗಳು ₹36,000 ನಗದು ಕಳವು ಮಾಡಿರುವ ಘಟನೆ ತಡವಾಗಿ ಗೊತ್ತಾಗಿದೆ.ನಗರದ ಬಿಐಟಿ ಲೇಔಟ್ ನಿವಾಸಿಯೊಬ್ಬರು ಅಂತಿಮ ದರ್ಶನ ಪಡೆಯಲು ಎಂಸಿಸಿ ‘ಬಿ’ ಬ್ಲಾಕ್ನಲ್ಲಿರುವ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಿವಾಸದ ಬಳಿಗೆ ಬಂದಿದ್ದರು. ಈ ವೇಳೆ ಗೇಟ್ ಬಳಿ ಭಾರಿ ಸಂಖ್ಯೆಯ ಜನರು ಸೇರಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು, ವ್ಯಕ್ತಿಯ ಪ್ಯಾಂಟ್ ಜೇಬು ಕತ್ತರಿಸಿ …
Read More »ಸಿಲಿಂಡರ್ ಸ್ಫೋಟ ಪ್ರಕರಣ : ಗಾಯಗೊಂಡಿದ್ದ ಇಬ್ಬರು ಮೃತ್ಯು
ಕೊಪ್ಪಳ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಮೃತಪಟ್ಟಿರುವುದು ವರದಿಯಾಗಿದೆಸುರೇಶ್ (29) ಎಂಬ ಯುವಕ ಈ ಮೊದಲೇ ಮೃತಪಟ್ಟಿದ್ದರೆ, ರಾಜಣ್ಣ (40) ಎಂಬವರು ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಎಂಟು ದಿನಗಳ ಹಿಂದೆ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡು ಮನೆಯಲ್ಲಿದ್ದ ರಾಜು, ದುರಗೆಪ್ಪ, ಸುರೇಶ್, ಹುಸೇನಮ್ಮ, ನಾಗರಾಜ್, ವಿಷ್ಣು, ಶ್ರೀಕಾಂತ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ …
Read More »ಬೆಂಗಳೂರಲ್ಲಿ ಅಮಾನವೀಯ ಘಟನೆ : ಆಟವಾಡುತ್ತಿದ್ದ ಬಾಲಕನಿಗೆ ಏಕಾಏಕಿ ಬಂದು ಒದ್ದ ದುರುಳ!
ಬೆಂಗಳೂರಲ್ಲಿ ಅಮಾನವೀಯ ಘಟನೆ ನಡೆದಿದ್ದು, ಆಟವಾಡುತ್ತಿದ್ದ ಬಾಲಕನಿಗೆ ಕಾಲಿನಿಂದ ಒದ್ದು ಅಮಾನವೀಯ ಕೃತ್ಯ ಎಸಗಿರುವ ಘಟನೆ ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಡಿಸೆಂಬರ್ 14ನೇ ತಾರೀಕಿನಂದು ನಡೆದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.ಈ ವೇಳೆ ಹಿಂದಿನಿಂದ ಬಂದಂತಹ ವ್ಯಕ್ತಿ ಬಾಲಕನಿಗೆ ಕಾಲಿನಿಂದ ಒದ್ದಿದ್ದಾನೆ. ರಂಜಿನ್ ಎನ್ನುವಂತಹ ವ್ಯಕ್ತಿ ಬಾಲಕನಿಗೆ ಓಡಿ ಬಂದು ಓದಿದ್ದಾನೆ. ರಂಜನ್ ಓಡಿಬಂದು ಬಾಲಕನಿಗೆ ಏಕಾಏಕಿ ಒದ್ದಿದ್ದು ಆತ ಹೋಗಿ …
Read More »ಸುಟ್ಟು ಕರುಕಲಾದ ಕೆಎಸ್ಆರ್ ಟಿಸಿ ಬಸ್; ಅದೃಷ್ಟವಶಾತ್ ಪ್ರಯಾಣಿಕರು ಪಾರು!
ಚಲಿಸುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಕರುಕಲಾದ ಘಟನೆ ನಂಜನಗೂಡಿನ ಹೊಸಹಳ್ಳಿ ಗ್ರಾಮದ ಗೇಟ್ ಬಳಿ ನಡೆದಿದೆ.ಬಸ್ ನಲ್ಲಿದ್ದ 40 ಕ್ಕೂ ಹೆಚ್ಚು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮೈಸೂರಿನಿಂದ ಕೇರಳಾಗೆ ತೆರಳುತ್ತಿದ್ದ KL-15, A- 2444 ನೊಂದಣಿ ಸಂಖ್ಯೆ ಬಸ್ ನಲ್ಲಿ ಮಧ್ಯರಾತ್ರಿ ಸರಿಸುಮಾರು 3:00 ಗಂಟೆಯ ವೇಳೆ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ.ಎಚ್ಚೆತ್ತ ಚಾಲಕ ಹೊಸಹಳ್ಳಿ ಗೇಟ್ ಬಳಿ ನಿಲ್ಲಿಸಿ ಪ್ರಯಾಣಿಕರನ್ನ ಬಸ್ಸಿನಿಂದ …
Read More »ಬೆಂಗಳೂರಲ್ಲಿ ಪ್ರೀತ್ಸೆ ಅಂತ 19ರ ಹುಡ್ಗಿ ಹಿಂದೆ ಬಿದ್ದ 40ರ ಅಂಕಲ್ ನ ಭೀಕರ ಹತ್ಯೆ!
ಲವ್ ಮಾಡು ಎಂದು ಯುವತಿಯ ಬೆನ್ನು ಹತ್ತಿದ್ದ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. 19 ವರ್ಷದ ಯುವತಿಯ ಹಿಂದೆ 40 ವರ್ಷದ ವ್ಯಕ್ತಿ ಲವ್ ಮಾಡು ಎಂದು ದುಂಬಾಲು ಬಿದಿದ್ದಾನೆ. ನನ್ನನ್ನು ಪ್ರೀತಿ ಮಾಡು ಎಂದು ಬೆನ್ನು ಬಿದ್ದಿದ್ದ. ಇದನ್ನ ಸಹಿಸದ ಯುವತಿಯ ತಂದೆ ಹಾಗೂ ಸೋದರ ಮಾವ 40 ವರ್ಷದ ಚೆಲುವ ಎನ್ನುವ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ.ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದ ಬಳಿ ವ್ಯಕ್ತಿಯ ಕೊಲೆ ಮಾಡಲಾಗಿದೆ. …
Read More »ರುಬಿಯಾಜ್ ಷರೀಫ್ ನ ಮೂರು ವರ್ಷದ ಮಗು ಆಸ್ಪತ್ರೆಗೆ ದಾಖಲಾಗಿತ್ತು. ಈ ವೇಳೆ ಮಗುವನ್ನು ನೋಡಲು ರುಬಿಯಾಜ್ ಷರೀಫ್ ಚಪ್ಪಲಿ ಧರಿಸಿಯೇ ಆಸ್ಪತ್ರೆಯೊಳಗೆ ಬಂದಿದ್ದ. ಆಗ ವೈದ್ಯರು ಚಪ್ಪಲಿ ಹೊರಗೆ ಬಿಟ್ಟು ಬನ್ನಿ ಎಂದು ಹೇಳಿದ್ದರು. ಚಪ್ಪಲಿ ಹೊರಗೆ ಬಿಡುವುದಿಲ್ಲ ಎಂದು ಗಲಾಟೆ ಮಾಡಿದ್ದ ರುಬಿಯಾಜ್, ನೀವು ಮಾತ್ರ ಹಾಕಿಕೊಳ್ಳಬಹುದಾ ಎಂದು ಪುಂಡಾಟಿಕೆ ಶುರು ಮಾಡಿದ್ದ. ಅದಕ್ಕೆ ಉತ್ತರಿಸಿದ ವೈದ್ಯರು ನಾನೂ ಹೊರಗೆ ಬಿಟ್ಟು ಬಂದಿದ್ದೇನೆ ನೋಡಿ ಎಂದು ತೋರಿಸಲು ಹೊರಗೆ ಬಂದಿದ್ದರು. ಈ ವೇಳೆ ಏಕಾಏಕಿ ರುಬಿಯಾಜ್ ವೈದ್ಯರ ಮೇಲೆ ಹಲ್ಲೆ ನಡೆಸಿದ್ದ. ಹಲ್ಲೆಗೆ ರುಬಿಯಾಜ್ ತಂದೆಯೂ ಸಾಥ್ ನೀಡಿದ್ದ. ಆರೋಪಿಗಳ ವಿರುದ್ದ ಉದಯಗಿರಿ ಠಾಣೆಯಲ್ಲಿ ಎಫ್ಐಆರ್ ದಾಖಲಾದರೂ ಸಹ ಆರೋಪಿಗಳನ್ನು ಬಂದಿಸಿಲ್ಲ ಎಂದು ಪೊಲೀಸರ ವಿರುದ್ದವೂ ವೈದ್ಯರು ದೂರಿದ್ದಾರೆ.
ಮೈಸೂರು : ಡಾ. ಅನೂಪ್ ಹಲ್ಲೆಗೊಳಗಾದ ವೈದ್ಯರಾಗಿದ್ದು, ರುಬಿಯಾಷ್ ಷರೀಫ್ ಎಂಬಾತ ಹಾಗೂ ಆತನ ತಂದೆ ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.ರುಬಿಯಾಜ್ ಷರೀಫ್ ನ ಮೂರು ವರ್ಷದ ಮಗು ಆಸ್ಪತ್ರೆಗೆ ದಾಖಲಾಗಿತ್ತು. ಈ ವೇಳೆ ಮಗುವನ್ನು ನೋಡಲು ರುಬಿಯಾಜ್ ಷರೀಫ್ ಚಪ್ಪಲಿ ಧರಿಸಿಯೇ ಆಸ್ಪತ್ರೆಯೊಳಗೆ ಬಂದಿದ್ದ. ಆಗ ವೈದ್ಯರು ಚಪ್ಪಲಿ ಹೊರಗೆ ಬಿಟ್ಟು ಬನ್ನಿ ಎಂದು ಹೇಳಿದ್ದರು. ಚಪ್ಪಲಿ ಹೊರಗೆ ಬಿಡುವುದಿಲ್ಲ ಎಂದು ಗಲಾಟೆ ಮಾಡಿದ್ದ ರುಬಿಯಾಜ್, ನೀವು …
Read More »ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
ಬೈಂದೂರ: ಉಪ್ಪುಂದ ಗ್ರಾಮದ ಮಡಿಕಲ್ ಬಳಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯಿಂದ ಮೀನುಗಾರ ರೊಬ್ಬರು ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.ಮೃತರನ್ನು ಹರಿಶ್ಚಂದ್ರ ಖಾರ್ವಿ ಎಂದು ಗುರುತಿಸಲಾಗಿದೆ. ಇವರು ಮಹಾಸತಿ ದೋಣಿಯಲ್ಲಿ ಇತರ ಮೀನುಗಾರರೊಂದಿಗೆ ಡಿ.15ರಂದು ಸಂಜೆ ಮೀನುಗಾರಿಕೆಗೆ ತೆರಳಿದ್ದು, ಸಮುದ್ರ ಮಧ್ಯೆ ಮೀನುಗಾರಿಕೆ ಮಾಡುತ್ತಿದ್ದಾಗ ಹರಿಶ್ಚಂದ್ರ ಖಾರ್ವಿ ದೋಣಿಯಿಂದ ಆಯತಪ್ಪಿ ನೀರಿಗೆ ಬಿದ್ದರೆನ್ನಲಾಗಿದೆ.ಕೂಡಲೇ ಅವರನ್ನು ಇತರ ಮೀನುಗಾರರು ನೀರಿನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ …
Read More »ವಿದ್ಯುತ್ ಸ್ಪರ್ಶಿಸಿ 7ನೇ ತರಗತಿ ವಿದ್ಯಾರ್ಥಿ ಮೃತ್ಯು
ಚಿಕ್ಕೋಡಿ: ತಾಲೂಕಿನ ಸದಲಗಾ ಪಟ್ಟಣದ ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದ 7ನೇ ತರಗತಿ ವಿದ್ಯಾರ್ಥಿ ಕೃಷ್ಣಾ ಮಂಜುನಾಥ್ ಹೆಗಡೆ (13) ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ನಡೆದಿದೆ.ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ವಿದ್ಯಾರ್ಥಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಶಾಲಾ ಆವರಣದಲ್ಲಿ ಶೋಕದ ವಾತಾವರಣ ಆವರಿಸಿದೆ.ಬಾಲಕನ ಅಕಾಲಿಕ ಮರಣಕ್ಕೆ ಕಾರಣವಾದ ನಿರ್ಲಕ್ಷ್ಯದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂಬ ಆರೋಪ ಪೋಷಕರಿಂದ ಕೇಳಿ ಬಂದಿದೆ. ಸದಲಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





