ಓವರ್ ಹೆಡ್ ಟ್ಯಾಂಕ್ಗೆ ಪೈಂಟ್ ಮಾಡುತ್ತಿದ್ದ ಕಾರ್ಮಿಕ 100ಕ್ಕೂ ಹೆಚ್ಚು ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಹೊಳೆನರಸೀಪುರದ ಮಾಕವಳ್ಳಿ ಗ್ರಾಮದಲ್ಲಿ ನಡೆದಿದೆ.ಮೃತನನ್ನು ಆಕಾಶ್ (31) ಎಂದು ಗುರುತಿಸಲಾಗಿದೆ. ಓವರ್ ಹೆಡ್ ಟ್ಯಾಂಕ್ಗೆ ಅಳವಡಿಸಿದ್ದ ಕಬ್ಬಿಣದ ರಾಡ್ ಮೇಲೆ ನಿಂತು ಅವರು ಪೈಂಟ್ ಮಾಡುತ್ತಿದ್ದರು.ಈ ವೇಳೆ, ಕಬ್ಬಿಣದ ರಾಡ್ ಮುರಿದಿದೆ. ಈ ವೇಳೆ ಟ್ಯಾಂಕ್ ಮೇಲಿನಿಂದ ಅವರು ಕೆಳಗೆ ಬಿದ್ದಿದ್ದಾರೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಳೆನರಸೀಪುರ ಗ್ರಾಮಾಂತರ …
Read More »RTI ಸುಲಿಗೆಕೋರರ ಮೇಲೆ ಕಮಿಷನರ್ N ಶಶಿಕುಮಾರ್ ದಿಟ್ಟ ಕ್ರಮ!
ಸರ್ಕಾರಿ ಅಧಿಕಾರಿಗಳು ಮತ್ತು ಕೋಆಪರೇಟಿವ್ ಬ್ಯಾಂಕ್ಗಳ ವಿರುದ್ಧ RTI ಹಕ್ಕು ದುರುಪಯೋಗ ಮಾಡಿಕೊಂಡು ಹಣ ಬೇಡುತ್ತಿದ್ದ ಆರೋಪಿಗಳು ಈಗ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾರೆ. ಸಮೃದ್ಧಿ ಕೋ ಆಪರೇಟಿವ್ ಸೊಸೈಟಿಯಿಂದ ಒಂದು ಕೋಟಿ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದಾಗಲೇ ಪೊಲೀಸರು ಬಲೆ ಬಿಚ್ಚಿ ಬಂಧಿಸಿದ್ದಾರೆ. ಗದಗ ಮೂಲದ ಮಂಜುನಾಥ ಹದ್ದಣ್ಣನವರ್, ಮುಂಡಗೋಡ ಮೂಲದ ವೀರೇಶ್ ಮತ್ತು ಮಹಾದೇವ ಲಿಂಗದಾಳ.ಇನ್ನೂ ನಾಲ್ವರು ಆರೋಪಿಗಳು ಈ ಸುಲಿಗೆ ಗ್ಯಾಂಗ್ನಲ್ಲಿ ಶಾಮೀಲಾಗಿರುವ ಶಂಕೆ ಹಿನ್ನಲೆ ಪೊಲೀಸರು …
Read More »ಮಂಗಳೂರು| ವೈಯಕ್ತಿಕ ಸಮಸ್ಯೆಗಳನ್ನು ಪೂಜೆ ಮಾಡಿ ಪರಿಹರಿಸುವುದಾಗಿ ನಂಬಿಸಿ 28.78 ಲಕ್ಷ ರೂ. ವಂಚನೆ; ಆರೋಪಿಯ ಬಂಧನ
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಾರ್ವಜನಿಕರಿಗೆ ವೈಯಕ್ತಿಕ ಸಮಸ್ಯೆಗಳನ್ನು ಶೀಘ್ರ ಪೂಜೆ ಮಾಡಿ ಪರಿಹರಿಸುವುದಾಗಿ ಜಾಹೀರಾತು ನೀಡಿ, ವ್ಯಕ್ತಿಯೊಬ್ಬರಿಗೆ ಸುಮಾರು 24,78,274 ರೂ. ಸೈಬರ್ ವಂಚನೆ ನಡೆಸಿದ ಆರೋಪದಲ್ಲಿ ಯವಂತಪುರದ ವಾಸುವೇವ ಆರ್(32) ಎಂಬಾತನನ್ನು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ವ್ಯಕ್ತಿಯೊಬ್ಬರು ನೀಡಿದ ದೂರಿನಂತೆ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.ಆರೋಪಿಯನ್ನು ನ.5ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು …
Read More »ಪರವಾನಿಗೆಯಿಲ್ಲದೆ ಕೆಂಪು ಕಲ್ಲು ಸಾಗಾಟ: ಟಿಪ್ಪರ್ ವಶಕ್ಕೆ.
ಕಲ್ಸಂಕ-ಗುಂಡಿಬೈಲು ಕಡೆಗೆ ಬರುತ್ತಿದ್ದ ಟಿಪ್ಪರ್ ವಾಹನವನ್ನು ಪೊಲೀಸರು ನಿಲ್ಲಿಸಿ ವಿಚಾರಿಸಿದಾಗ ಚಾಲಕ ಹಾಗೂ ಮಾಲಕ ಅವಿನಾಶ್ ಸುಮಾರು 150 ಕೆಂಪು ಕಲ್ಲನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.ಸಾಗಾಟ ಪರವಾನಿಗೆಯ ಬಗ್ಗೆ ವಿಚಾರಿಸಿದಾಗ ಯಾವುದೇ ಪರವಾನಿಗೆ ಇರಲಿಲ್ಲ. ಪೊಲೀಸರು ಟಿಪ್ಪರ್ ಹಾಗೂ ವಾಹನದಲ್ಲಿದ್ದ 7,000 ರೂ. ಮೌಲ್ಯದ ಸುಮಾರು 150 ಕೆಂಪುಕಲ್ಲನ್ನು ವಶಪಡಿಸಿಕೊಂಡಿದ್ದಾರೆ.
Read More »ನಡು ರಸ್ತೆಯಲ್ಲೇ ಹೊತ್ತಿ ಉರಿದ ಮತ್ತೊಂದು ಸರ್ಕಾರಿ ಬಸ್ : ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ.!
ವಿಶಾಖಪಟ್ಟಣದಿಂದ ಜೈಪುರ (ಒಡಿಶಾ) ಗೆ ಹೋಗುತ್ತಿದ್ದ ಒಡಿಶಾ ಆರ್ಟಿಸಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಪ್ರಯಾಣಿಕರು ಭಯಭೀತರಾಗಿದ್ದರು. ಚಾಲಕ ಸಕಾಲದಲ್ಲಿ ಬಸ್ ನಿಲ್ಲಿಸಿದನು ಮತ್ತು ಪ್ರಯಾಣಿಕರು ತಕ್ಷಣ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾದರು. ಮಾಹಿತಿ ಪಡೆದ ಸಾಲೂರು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಿಯಂತ್ರಿಸಿದರು. ಸಕಾಲಿಕ ಕ್ರಮದಿಂದಾಗಿ ದೊಡ್ಡ ಅಪಘಾತವೊಂದು ತಪ್ಪಿತು. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದರಿಂದ ಆರ್ಟಿಸಿ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
Read More »ತಿಂಗಳಿನಿಂದ ಪೊಲೀಸ್ ಠಾಣೆಯಲ್ಲೇ ನಿಂತಿದ್ದ ಕಾರಲ್ಲಿತ್ತು ಚಿನ್ನ, ಬೆಳ್ಳಿ ಮತ್ತು ಕಂತೆ ಕಂತೆ ಹಣ!
ಪೊಲೀಸರು ಸೀಜ್ ಮಾಡಿದ್ದ ಕಾರಣ ಒಂದು ತಿಂಗಳಿನಿಂದ ಪೊಲೀಸ್ ಠಾಣೆಯಲ್ಲಿ ನಿಂತಿದ್ದ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಹಣ, ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದಿದೆ. ಮಾಜಿ ಶಿಕ್ಷಣ ಸಚಿವ ದಿ .ಗೋವಿಂದೇಗೌಡರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ನೇಪಾಳಿ ಗ್ಯಾಂಗ್ನ ಸಾಂಗ್ಲಿ ಪೊಲೀಸರ ನೆರವು ಪಡೆದು ಬಂಧಿಸಲಾಗಿತ್ತು.ಈಗ ನ್ಯಾಯಾಲಯ ಕಾರನ್ನ ರಿಲೀಸ್ ಮಾಡುವಂತೆ ಆದೇಶಿಸಿದೆ. ಈ ಹಿನ್ನಲೆ ಕಾರನ್ನು ಪರಿಶೀಲಿಸುವಾಗ ಹಣ, ಚಿನ್ನ …
Read More »ಧರ್ಮಸ್ಥಳ-ಸುಬ್ರಹ್ಮಣ್ಯ ಬಸ್ ಸೇವೆ ಸ್ಥಗಿತ ಪ್ರಯಾಣಿಕರ ಪರದಾಟ : ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕೆಲವು ತಿಂಗಳ ಹಿಂದೆ ವಿದ್ಯಾರ್ಥಿಗಳ ಹಾಗೂ ಪ್ರಯಾಣಿಕರ ಬೇಡಿಕೆ ಪರಿಗಣಿಸಿ ಧರ್ಮಸ್ಥಳದಿಂದ ಗ್ರಾಮೀಣ ಭಾಗಗಳಿಗೆ ಹೊಸ ಬಸ್ ರೂಟ್ಗಳಿಗೆ ಚಾಲನೆ ನೀಡಿದ್ದರು.ಈ ಪೈಕಿ ಧರ್ಮಸ್ಥಳದಿಂದ ಕೊಕ್ಕಡ-ನೆಲ್ಯಾಡಿ-ಬಲ್ಯ-ಕಡಬ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮೂರು ವಾರಗಳಿಂದ ಭಾನುವಾರದ ಸಂಚಾರ ನಿಲ್ಲಿಸಿದೆ.ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸ್ಥಳೀಯ ಜನರ ಸಂಚಾರ ಕಸಿದುಕೊಳ್ಳುವ ಅಧಿಕಾರಿಗಳ ಕ್ರಮ ಸರಿಯಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.
Read More »ಕಾಗವಾಡ :20 ಎಕರೆ ಕಬ್ಬು ಬೆಂಕಿಗಾಹುತಿ.
ಉಗಾರ ಬಿಕೆ ಗ್ರಾಮದಲ್ಲಿ ಬುಧವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಆರು ಮಂದಿ ರೈತರಿಗೆ ಸೇರಿದ 20 ಎಕರೆಯಷ್ಟು ಕಬ್ಬು ಸುಟ್ಟಿದ್ದು, ₹25 ಲಕ್ಷದಷ್ಟು ನಷ್ಟವಾಗಿದೆ ಎಂದು ರೈತರು ಅಂದಾಜಿಸಿದ್ದಾರೆ.ಭರತೇಶ ಖಂಡೇರಾಜುರೆ ಅವರ 5 ಎಕರೆ, ಚಂದ್ರಕಾಂತ ಅಕಿವಾಟೆ, ಧರೆಪ್ಪ ಕುಸನಾಳೆ ಅವರ ತಲಾ 3 ಎಕರೆ, ಮಲ್ಲು ಕುರುಬರ, ಅಣ್ಣು ಕುರಬರ, ಮಹಾದೇವ ಕುರುಬರ ಅವರಿಗೆ ಸೇರಿದ 9 ಎಕರೆ ಬೆಂಕಿಗೆ ಆಹುತಿಯಾಗಿದೆ.ಕಾಗವಾಡದಿಂದ ಅಗ್ನಿ ಶಾಮಕ ದಳದ ವಾಹನ ಬರುವಷ್ಟರಲ್ಲಿ …
Read More »ಮಹಿಳೆ’ ಕಾಮದಾಹಕ್ಕೆ 19 ವರ್ಷದ ಯುವಕ ಬಲಿ : ‘ಆಂಟಿ’ ಕಿರುಕುಳಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ.!
ಮಹಿಳೆ ಕಾಮದಾಹಕ್ಕೆ 19 ವರ್ಷದ ಯುವಕ ಬಲಿಯಾಗಿದ್ದಾನೆ. ಹೌದು, 38 ವರ್ಷದ ‘ಆಂಟಿ’ ಕಿರುಕುಳಕ್ಕೆ ಬೇಸತ್ತು ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.ಕಾಚನಹಳ್ಳಿ ಕೆರೆ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕ ನಿಖಿಲ್ ಕುಮಾರ್ (19) ಶವ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕ ನಿಖಿಲ್ ಕುಮಾರ್ 38 ವರ್ಷದ ಮಹಿಳೆ ಶಾರದಾ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಶಾರದಾ ಪತಿಗೆ ವಿಚ್ಚೇದನ ನೀಡಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. …
Read More »ಗೋವಾದಲ್ಲಿ ಅಂಗಡಿಗಳ ಮೇಲೆ ಪಾಕಿಸ್ತಾನ ಪರ ಘೋಷಣೆ- 9 ಮಂದಿ ಅರೆಸ್ಟ್.
ಉತ್ತರ ಗೋವಾದಲ್ಲಿ ಬಾಗಾ ಮತ್ತು ಅರ್ಪೋರಾ ಗ್ರಾಮಗಳು ಪರಸ್ಪರ ಪಕ್ಕದಲ್ಲಿವೆ. ಎರಡು ಅಂಗಡಿಗಳೊಂದಿಗೆ ಸಂಪರ್ಕ ಹೊಂದಿದ್ದ ಒಂಬತ್ತು ಜನರನ್ನು ಬಂಧಿಸಲಾಗಿದೆ. ಅಂಗಡಿಗಳು ಪರಸ್ಪರ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಂಗಳವಾರ ಸಂಜೆ ಎರಡೂ ಅಂಗಡಿಗಳಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ಒಂದೇ ಸಮಯದಲ್ಲಿ ಪ್ರದರ್ಶಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಕ್ಯಾಲಂಗುಟ್ ಪೊಲೀಸರು ನಾಲ್ವರನ್ನು ಮತ್ತು ಅಂಜುನಾ ಪೊಲೀಸರು ಐವರನ್ನು ಬಂಧಿಸಿದ್ದಾರೆ ಎಂದು ಅವರು ಹೇಳಿದರು.ಪೊಲೀಸರು ಎಲ್ಇಡಿ ಬೋರ್ಡ್ಗಳ ಸಂಪರ್ಕ ಕಡಿತಗೊಳಿಸಿದ್ದಾರೆ ಮತ್ತು ಭಾರತೀಯ ನ್ಯಾಯ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





