ಭಿಕ್ಷೆ ಬೇಡುತ್ತಾ ರಸ್ತೆ ದಾಟುತ್ತಿದ್ದ ವೃದ್ಧನ ಮೇಲೆ ಲಾರಿಯೊಂದು ಹರಿದು ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಬೆಳಗಾವಿ ನಗರದ ಕೃಷ್ಣದೇವರಾಯ ವೃತ್ತದ ಸಿಗ್ನಲ್ನಲ್ಲಿ ವೃದ್ಧನೋರ್ವ ಭಿಕ್ಷೆ ಬೇಡುತ್ತಾ ರಸ್ತೆ ದಾಡುತ್ತಿದ್ದಾಗ ಲಾರಿ ಚಾಲಕನೋರ್ವ ಲಾರಿಯನ್ನು ಮುಂದೆ ಚಲಾಯಿಸಿದ ಪರಿಣಾಮ ಭಿಕ್ಷುಕ ವೃದ್ದ ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.ಅಪಘಾತದ ಭೀಕರ ದೃಶ್ಯ ಅಲ್ಲಿಯೇ ಇದ್ದ ಸಿಸಿಟವಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಸದ್ಯ ಬೆಳಗಾವಿ ಉತ್ತರ ಸಂಚಾರಿ ಪೊಲೀಸರು ಅಪಘಾತ ಮಾಡಿದ ಲಾರಿ, ಲಾರಿ ಚಾಲಕನನ್ನ ವಶಕ್ಕೆ …
Read More »ದೊಡ್ಡಬಳ್ಳಾಪುರ : ಅಪಘಾತದಲ್ಲಿ ಇಬ್ಬರು ಯುವಕರ ಸಾವು
ರಾಮಯ್ಯನಪಾಳ್ಯದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.ಮೃತರನ್ನು ಚಿಕ್ಕತಿಮನಹಳ್ಳಿ ಗ್ರಾಮದ ನಂದನ್ಕುಮಾರ್ (22), ರವಿಕುಮಾರ್ (24) ಎಂದು ಗುರುತಿಸಲಾಗಿದೆ.ಪ್ರಾಥಮಿಕ ಮಾಹಿತಿ ಪ್ರಕಾರ, ಇಬ್ಬರೂ ಕೆಲಸದ ನಿಮಿತ್ತ ದೊಡ್ಡಬಳ್ಳಾಪುರ ಕಡೆಗೆ ಬರುತ್ತಿದ್ದ ವೇಳೆ, ರಾಮಯ್ಯನಪಾಳ್ಯದ ಬಳಿ ದ್ವಿಚಕ್ರವಾಹನ ನಿಯಂತ್ರಣ ತಪ್ಪಿ ನೆಲಕ್ಕುರುಳಿದೆ. ಈ ವೇಳೆ ಅದೇ ಮಾರ್ಗವಾಗಿ ಹೋಗುತ್ತಿದ್ದ ಆಟೋವೊಂದು ಕೆಳಗೆ ಬಿದ್ದಿದ್ದ ಇವರ ಮೇಲೆ ಹರಿದು ಈ ಘಟನೆ ಸಂಭವಿಸಿದೆ.ಗಂಭೀರವಾಗಿ ಗಾಯಗೊಂಡ ಇಬ್ಬರು ಸ್ಥಳದಲ್ಲೇ …
Read More »ಬಾಗಲಕೋಟೆಯಲ್ಲಿ ದೀಪಾವಳಿ ಹಬ್ಬದಂದು ಅಗ್ನಿ ದುರಂತ ಕೇಸ್ : ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಿಸದೇ ಸಾವು!
ಬಾಗಲಕೋಟೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ದೀಪಾವಳಿಯಂದೆ ಭೀಕರ ಅಗ್ನಿ ಅವಘಡ ಸಂಭವಿಸಿತ್ತು. ಒಂದು ಅಗ್ನಿ ದುರಂತದಲ್ಲಿ ಎಂಟು ಬೈಕ್ಗಳು ಹಾಗೂ ಮನೆಯ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸ್ನೇಹ ಮೇದಾರ ಸಾವನಪ್ಪಿದ್ದಾಳೆ.ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸ್ನೇಹ ಚಿಕಿತ್ಸೆ ಪಡೆಯುತ್ತಿದ್ದಾಲಿ. ಆದರೆ l ಚಿಕಿತ್ಸೆ ಫಲಿಸದೆ ಸ್ನೇಹ ಸಾವನ್ನಪ್ಪಿದ್ದಾಳೆ. ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ನಲ್ಲಿ ಘಟನೆ ನಡೆದಿತ್ತು ಹಬ್ಬಕ್ಕೆ ಹಚ್ಚಿದ ದೀಪಗಳಿಂದ ಬೆಂಕಿ …
Read More »ಕುಸಿದುಬಿದ್ದು ಆಟೋ ಚಾಲಕ ಸಾವು
ಸರಕು ಸಾಗಾಣಿಕೆ ಆಟೋದ ಚಾಲಕನೊಬ್ಬ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನವೀನ್ಕುಮಾರ್(25) ಮೃತ ಚಾಲಕ. ಭುವನೇಶ್ವರಿ ನಗರದಲ್ಲಿ ತಮ ಅಣ್ಣ ವಸಂತ್ ಅವರೊಂದಿಗೆ ನವೀನ್ಕುಮಾರ್ ವಾಸವಾಗಿದ್ದು ಟಾಟಾಏಸ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು.ಕಳೆದ ಎರಡು ದಿನಗಳ ಹಿಂದೆ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮನೆ ಹತ್ತಿರದ ಆಸ್ಪತ್ರೆಯೊಂದರಲ್ಲಿ ನವೀನ್ ಕುಮಾರ್ ಚಿಕಿತ್ಸೆ ಪಡೆದಿದ್ದರು. ಆದರೆ ಮುಂಜಾನೆ 4 ಗಂಟೆ ಸಂದರ್ಭದಲ್ಲಿ ಪುನಃ ಎದೆನೋವು ಕಾಣಿಸಿಕೊಂಡಿದ್ದು, …
Read More »ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ: ಫುಡ್ ಡೆಲಿವರಿ ಹುಡುಗನ ಬಂಧನ
ಬ್ರೆಜಿಲ್ ದೇಶದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಅಡಿ ಫುಡ್ ಡೆಲಿವರಿ ಹುಡುಗನನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿದ್ದಾರೆಕುಮಾರ್ (22) ಬಂಧಿತ ಆರೋಪಿ.ಕಿರುಕುಳಕ್ಕೆ ಒಳಗಾದ ವಿದೇಶಿ ಮಹಿಳೆ ಕೆಲಸ ಮಾಡುತ್ತಿದ್ದ ಕಂಪನಿಯ ಸಹೋದ್ಯೋಗಿ ಕಾರ್ತಿಕ್ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.ಉದ್ಯೋಗ ವೀಸಾದ ಅಡಿ ಎರಡು ತಿಂಗಳ ಹಿಂದೆ ಸಂತ್ರಸ್ತೆ ನಗರಕ್ಕೆ ಬಂದಿದ್ದರು. ಅ.17ರಂದು ಸಂತ್ರಸ್ತೆ ತಮ್ಮ ಮೊಬೈಲ್ನಲ್ಲಿ ದಿನಸಿ ವಸ್ತುಗಳಿಗೆ ಆರ್ಡರ್ ಮಾಡಿದ್ದರು. …
Read More »ಖಾಸಗಿ ಬಸ್ ನಲ್ಲಿ 1 ಕೋಟಿ ರೂಪಾಯಿ ದಾಖಲೆ ಇಲ್ಲದ ಹಣ ಸಾಗಾಟ: ಹಣದ ಸಮೇತ ಇಬ್ಬರು ವಶಕ್ಕೆ
ಖಾಸಗಿ ಬಸ್ ನಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಹಣ ಅಕ್ರಮ ಸಾಗಾಟ ಮಾಡುತ್ತುದ್ದ ವೇಳೆ ಹಣದ ಸಮೇತ ಇಬ್ಬರನ್ನು ವಶಕ್ಕೆ ಪದೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯಲ್ಲಿ ನಡೆದಿದೆ.ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ಹಣದ ಸಮೇತ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಗೋವಾದಿಂದ ಬೆಂಗಳೂರಿಗೆ 1 ಕೋಟಿ ರೂ ಹಣವನ್ನು ಸಾಗಿಸಲಾಗುತ್ತಿತ್ತು. ಮಾಜಾಳಿ ಚಕ್ ಪೋಸ್ಟ್ ನಲ್ಲಿ ಬಸ್ ಪರಿಶೀಲನೆ ನಡೆಸಿದಾಗ ಈ ಹಣ ಪತ್ತೆಯಾಗಿದೆ.ಕಲ್ಪೇಶಕುಮಾರ್ …
Read More »ಹುಡುಗಿ ವಿಚಾರಕ್ಕೆ ಬಸ್ ನಿಲ್ದಾಣದಲ್ಲೇ ಮಚ್ಚಿನಿಂದ ಕೊಚ್ಚಿ ಸ್ನೇಹಿತನ ಹತ್ಯೆ
ಹಾಸನ ಜಿಲ್ಲೆ ಬೇಲೂರು ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಶೌಚಾಲಯ ಸಮೀಪ ಸೋಮವಾರ ಹಾಡಹಗಲೇ ಗೆಳೆಯನನ್ನೇ ಯುವಕನೊಬ್ಬ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.ಹುಡುಗಿಯ ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಮಚ್ಚಿನಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಗಿರೀಶ್ ಕೊಲೆಯಾದ ಯುವಕ. ಸೀನ ಕೊಲೆ ಆರೋಪಿ. ಸೀನ ಮತ್ತು ಗಿರೀಶ್ ಸ್ನೇಹಿತರಾಗಿದ್ದು, ಪ್ರೀತಿಸುತ್ತಿದ್ದ ಯುವತಿ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿ ವಿಕೋಪಕ್ಕೆ ತಿರುಗಿದೆ.ಗಿರೀಶ್ ಬಸ್ ನಿಲ್ದಾಣದ ಶೌಚಾಲಯಕ್ಕೆ ಹೋಗಿ ವಾಪಸ್ ಬರುವಾಗ ಕೋಳಿ ಅಂಗಡಿಯಲ್ಲಿ …
Read More »ಉಪನ್ಯಾಸಕನಿಗೆ ₹17 ಲಕ್ಷ ವಂಚನೆ
ತುಮಕೂರು:ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ, ಉತ್ತಮ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರದ ಶಾಂತಿನಗರದ ಉಪನ್ಯಾಸಕ ಬಿ.ಆರ್.ಶ್ರೀನಿವಾಸಪ್ರಭು ₹17.93 ಲಕ್ಷ ಕಳೆದುಕೊಂಡಿದ್ದಾರೆ.ಶ್ರೀನಿವಾಸಪ್ರಭು ಅವರು ಫೇಸ್ಬುಕ್ನಲ್ಲಿ ‘Up-Stok 19 th Investment Plan’ ಜಾಹೀರಾತು ಕ್ಲಿಕ್ ಮಾಡಿದ್ದಾರೆ.ನಂತರ ಅವರ ನಂಬರ್ ‘Visionary Leaders Forum-223’ ವಾಟ್ಸ್ ಆಯಪ್ ಗ್ರೂಪ್ಗೆ ಸೇರಿಸಲಾಗಿದೆ. ಸದರಿ ಗ್ರೂಪ್ನಲ್ಲಿ ವನ್ಷಿಕಾ ಎಂಬುವರು ‘Upstoxpro’ ಆಯಪ್ ಇನ್ಸ್ಟಾಲ್ ಮಾಡಿಕೊಂಡು ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ.ಮೊದಲಿಗೆ ₹15 …
Read More »ಅಕ್ರಮ ಸಂಬಂಧಕ್ಕೆ ಬಲಿಯಾದ 3 ಜೀವ: ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ ವಿರುದ್ಧವೇ ಕೇಸ್
ಕೊಪ್ಪಳ ಜಿಲ್ಲೆ ಕುಕನೂರು ಪೊಲೀಸ್ ಠಾಣೆಯಲ್ಲಿ ತಾಯಿ ವಿರುದ್ಧವೇ ಕೇಸು ದಾಖಲಿಸಲಾಗಿದೆ. ಮೃತ ಲಕ್ಷ್ಮಿ ಮತ್ತು ಗ್ರಾಮದ ಬೀರಪ್ಪ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.ಮೃತ ಲಕ್ಷ್ಮಿಯ ತಾಯಿ ಬಸಮ್ಮ ಅವರ ದೂರು ಆಧರಿಸಿ ಎಫ್ಆರ್ ದಾಖಲಿಸಲಾಗಿದೆ.ಬೀರಪ್ಪ ಎಂಬುವವರ ಜೊತೆಗೆ ಲಕ್ಷ್ಮಿ ಅನೈತಿಕ ಸಂಬಂಧ ಹೊಂದಿದ್ದರು. ಹಲವು ಬಾರಿ ಜನರು ಬುದ್ಧಿವಾದ ಹೇಳಿದ್ದರೂ ಬದಲಾಗಿರಲಿಲ್ಲ. ನಿನ್ನೆ ಕೂಡ ಈ ವಿಚಾರ ಗ್ರಾಮದಲ್ಲಿ ಗೊತ್ತಾಗಿತ್ತು. ಹಿರಿಯರು ಬೀರಪ್ಪನನ್ನು ಕರೆದು ಬುದ್ಧಿಮಾತು ಹೇಳಿದ್ದರು. ಬೀರಪ್ಪ …
Read More »ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಸೀನಿಯರ್ ವಿದ್ಯಾರ್ಥಿನಿ ಒನ್ ಸೈಡ್ ಲವ್ ನಿಂದ ದುಡುಕಿನ ನಿರ್ಧಾರ ಶಂಕೆ
ತುಮಕೂರಿನಲ್ಲಿ ನರ್ಸಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೊಪ್ಪಳದ ಸುರೇಶ್(20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಸೀನಿಯರ್ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ ಸುರೇಶ್ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.ಸಾವಿಗೂ ಮುನ್ನ ಮೃತ ಸುರೇಶ್ ಸ್ಟೇಟಸ್ ಹಾಕಿದ್ದು,. ಪೊಲೀಸರ ತನಿಖೆಯ ವೇಳೆ ಹೊಸ ಅನುಮಾನ ಮೂಡಿದೆ.ತನ್ನದೇ ಕಾಲೇಜಿನ ಸೀನಿಯರ್ ಯುವತಿ ಮೇಲಿನ ಒನ್ ಸೈಡ್ ಲವ್ ನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗೆಳೆಯರ ವಿಚಾರಣೆಯ ವೇಳೆ ಮೇಲ್ನೋಟಕ್ಕೆ ಈ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





