ಹುಣಸಗಿ ತಾಲೂಕಿನ ಕೊಡೇಕಲ್ ದೀಪಾವಳಿ ಅಮವಾಸ್ಯೆ ದಿನ ಮನೆಯಿಂದ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿ ಶನಿವಾರ ಶವವಾಗಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕೊಡೇಕಲ್ ಗ್ರಾಮದ ಶರಣಪ್ಪ ಹಡಪದ ಎಂಬುವರ ಮಗಳು ಸೌಜನ್ಯ (17) ಶಹಾಪೂರ ತಾಲೂಕಿನ ಗೋಗಿ ಬಳಿಯ ಕೃಷ್ಣಾ ಎಡದಂಡೆ ಕಾಲುವೆಯಲ್ಲಿ ಶವ ಪತ್ತೆಯಾಗಿದೆ.ಕೊಡೇಕಲ್ ಠಾಣೆಯಲ್ಲಿ ನಾಪತ್ತೆ ಹಾಗೂ ಅಪಹರಣ ಕುರಿತಾಗಿ ಪ್ರಕರಣ.ಪೊಲೀಸ್ ಠಾಣೆಯವರರು ಕಾಲುವೆಯಲ್ಲಿ ಗುರುತು ಸಿಗದ ಸ್ಥಿತಿಯಲ್ಲಿದ ಶವದ ಫೋಟೋವನ್ನು ಕೊಡೇಕಲ್ ಪೊಲೀಸ್ ಅಪ್ರಾಪ್ತ ಸೌಜನ್ಯಳ ಪಾಲಕರು …
Read More »ಸ್ನೇಹಿತೆಯ ನಿಶ್ಚಿತಾರ್ಥಕ್ಕೆ ಬಂದಿದ್ದ ಯುವತಿ ಅನುಮಾನಾಸ್ಪದ ಸಾವು!!
ಸ್ನೇಹಿತೆಯ ನಿಶ್ಚಿತಾರ್ಥಕ್ಕೆ ಬಂದಿದ್ದ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಹಾಂದಿ ಗ್ರಾಮದ ಹೋಂ ಸ್ಟೇನಲ್ಲಿ ನಡೆದಿದೆ.ಬೇಲೂರು ತಾಲೂಕು ದೇವಲಾಪುರದ 27 ವರ್ಷದ ರಂಜಿತಾ ಮೃತಪಟ್ಟ ಯುವತಿ. ಅವರ ಕುಟುಂಬದವರು ಮೂಡಿಗೆರೆಯಲ್ಲಿ ವಾಸವಾಗಿದ್ದಾರೆ.ಗ್ಯಾಸ್ ಗೀಸರ್ ಸೋರಿಕೆಯಿಂದ ಉಸಿರುಗಟ್ಟಿ, ಇಲ್ಲವೇ ಹೃದಯಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕಾರಣ ತಿಳಿಯಲಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Read More »ಪ್ರತಿಷ್ಠಿತ ಉದ್ಯಮಿ ಕಸ್ತೂರಿ ಪ್ರಭಾಕರ್ ಪೈ ನಿಧನ..
ನಗರದ ಬಲ್ಮಠ ನಿವಾಸಿ, ಪ್ರತಿಷ್ಠಿತ ಉದ್ಯಮಿ ಮತ್ತು ದಕ್ಷಿಣ ಕನ್ನಡ ಆಟೋಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಷನ್ನ ಅಧ್ಯಕ್ಷರಾದ ಕಸ್ತೂರಿ ಪ್ರಭಾಕರ್ ಪೈ (75) ಅವರು ಶನಿವಾರ (ಅ.25) ಸಂಜೆ 7:00 ಗಂಟೆಗೆ ಅಲ್ಪಕಾಲದ ಅನಾರೋಗ್ಯದ ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರ ಅಂತಿಮ ದರ್ಶನ ಭಾನುವಾರ (ಅ. 26) ಬೆಳಿಗ್ಗೆ 9:00 ಗಂಟೆಗೆ ಅವರ ನಿವಾಸ “ಪ್ರಕೃತಿ”, ಬಲ್ಮಠ ಕಲೆಕ್ಟರ್ಸ್ ಗೇಟ್ (ಡಿಸಿ ಬಂಗಲೆ ಪಕ್ಕದಲ್ಲಿ) ಇಲ್ಲಿ ನೆರವೇರಲಿದೆ.
Read More »ಕನ್ನಡದ ಏಕೈಕ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ನ ಪ್ರಖ್ಯಾತ ನಟ ಸತೀಶ್ ಶಾ ನಿಧನ
ಬಾಲಿವುಡ್ನ ಹಿರಿಯ ನಟ ಸತೀಶ್ ಶಾ ಶನಿವಾರ ಮಧ್ಯಾಹ್ನ 2:30 ರ ಸುಮಾರಿಗೆ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಶಾ ಅವರ ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ.ದೀರ್ಘಕಾಲದವರೆಗೆ ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಇತ್ತೀಚೆಗೆ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು.
Read More »ಕೋಲಾರದಲ್ಲಿ ನಾಪತ್ತೆಯಾಗಿದ್ದಂತ ‘ಇಬ್ಬರು ವಿದ್ಯಾರ್ಥಿನಿ’ಯರು ಬೆಂಗಳೂರಲ್ಲಿ ಪತ್ತೆ
ಶಾಲೆಗೆಂದು ತೆರಳಿದ್ದಂತ ಎಸ್ ಎಸ್ ಎಲ್ ಸಿ ಓದುತ್ತಿದ್ದಂತ ಇಬ್ಬರು ವಿದ್ಯಾರ್ಥಿನಿಯರು ಮರಳಿ ಮನೆಗೆ ಬಂದಿರಲಿಲ್ಲ. ಹೀಗಾಗಿ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವುದಾಗಿ ಪೊಲೀಸರು ಕೋಲಾರ ಠಾಣೆಗೆ ದೂರು ನೀಡಿದ್ದರು. ಈ ಬೆನ್ನಲ್ಲೇ ಇಂದು ಬೆಂಗಳೂರಲ್ಲಿ ಸುರಕ್ಷಿತವಾಗಿ ಇಬ್ಬರು ಬಾಲಕಿಯರು ಪತ್ತೆಯಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
Read More »ಮಕ್ಕಳನ್ನು ಕಾಡಿಗೆ ಕರೆದುಕೊಂಡು ಹೋಗಿ ಕತ್ತುಸೀಳಿ ಕೊಂದ ಪಾಪಿ ತಂದೆ!!
ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಬುಲ್ದಾನಾದಲ್ಲಿ ಗಂಡ-ಹೆಂಡತಿ ನಡುವಿನ ಜಗಳ ಅಮಾಯಕ ಅವಳಿ ಮಕ್ಕಳ ಕತ್ತು ಸೀಳಿ ಕೊಲೆಯಾಗುವುದರೊಂದಿಗೆ ಅಂತ್ಯವಾಗಿದೆ. ಅವಳಿ ಮಕ್ಕಳನ್ನು ಕೊಂದ ವ್ಯಕ್ತಿಯನ್ನು ರಾಹುಲ್ ಚವಾಣ್ ಎಂದು ಗುರುತಿಸಲಾಗಿದೆ. ಗಂಡ-ಹೆಂಡತಿ ನಡುವೆ ಗಲಾಟೆ ಆಗುತ್ತಿದ್ದ ಸಮಯದಲ್ಲಿಯೇ ಸಿಟ್ಟಿಗೆದ್ದ ಹೆಂಡತಿ ಇಡೀ ಕುಟುಂಬವನ್ನೇ ತೊರೆದು ತವರುಮನೆಗೆ ಸೇರಿಕೊಂಡಿದ್ದಳು.ಹೆಂಡತಿ ತನ್ನ ಬಿಟ್ಟು ತವರು ಮನೆಗೆ ಹೋದ ಸಿಟ್ಟಿನಲ್ಲಿಯೇ ಆ ವ್ಯಕ್ತಿ ತನ್ನ ಎರಡು ವರ್ಷದ ಅವಳಿ ಮಕ್ಕಳನ್ನು ಕಾಡಿಗೆ ಕರೆದುಕೊಂಡು ಹೋಗಿ …
Read More »ಚೀನಾದಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಸಂಚು: ಕಾರಲ್ಲಿ ಕರೆದೊಯ್ದು ಪಾರುಮಾಡಿದ ಪುಟಿನ್; ಢಾಕಾದಲ್ಲಿ US ಅಧಿಕಾರಿ ನಿಗೂಢ ಸಾವು ಬಿಚ್ಚಿಟ್ಟ ಸ್ಫೋಟಕ ರಹಸ್ಯ!
ಕಳೆದ ತಿಂಗಳು ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘದ ಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ನಡೆಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಈಗ ಬಹಿರಂಗವಾಗಿದೆ. ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ವಿರುದ್ಧ ಇಂಥಹದ್ದೊಂದು ಆರೋಪ ಕೇಳಿಬರುತ್ತಿದ್ದು, ಈ ಕುರಿತಂತೆ ಸಾಕಷ್ಟು ಮಾಧ್ಯಮಗಳು ವರದಿಗಳನ್ನು ಪ್ರಕಟಿಸುತ್ತಿದೆ.
Read More »ತೆಲಂಗಾಣ :ಬಸ್ ಪಲ್ಟಿ… 20 ಮಂದಿಗೆ ಗಾಯ!!
ಹೈದರಾಬಾದ್ ನಿಂದ ಆಂಧ್ರಪ್ರದೇಶಕ್ಕೆ ಪ್ರಯಾಣಿಸುತ್ತಿದ್ದ ಖಾಸಗಿ ಐಷಾರಾಮಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿಯಾದ ಪರಿಣಾಮ ಇಪ್ಪತ್ತು ಮಂದಿ ಗಾಯಗೊಂಡಿರುವ ಘಟನೆ ಶನಿವಾರ (ಅ.25) ಬೆಳಿಗ್ಗೆ ಸಂಭವಿಸಿದೆ .ಬಸ್ಸಿನಲ್ಲಿದ್ದ ಎಲ್ಲಾ 20 ಮಂದಿಯೂ ಗಾಯಗೊಂಡಿದ್ದು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ .ಬಸ್ಸು ಶನಿವಾರ ಮುಂಜಾನೆ ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಪೆದ್ದಾ ಅಂಬರ್ ಪೇಟೆಯ ತಿರುವಿನಲ್ಲಿ ಸಂಚರಿಸುತ್ತಿದ್ದಂತೆ …
Read More »‘ಸಾರಾಭಾಯ್ ವರ್ಸಸ್ ಸಾರಾಭಾಯ್’ ನಟ ಸತೀಶ್ ಶಾ ವಿಧಿವಶ |
ನವದೆಹಲಿ: ಹಿರಿಯ ಬಾಲಿವುಡ್ ಮತ್ತು ಟಿವಿ ನಟ ಸತೀಶ್ ಶಾ ನಿಧನರಾಗಿದ್ದಾರೆ. ನಿರ್ದೇಶಕ ಅಶೋಕ್ ಪಂಡಿತ್ ವೀಡಿಯೊ ಹಂಚಿಕೊಳ್ಳುವ ಮೂಲಕ ಇದನ್ನು ದೃಢಪಡಿಸಿದ್ದಾರೆ. ಅವರು ತಮ್ಮ ನಟನಾ ವೃತ್ತಿಜೀವನದುದ್ದಕ್ಕೂ ಹಲವಾರು ಅಪ್ರತಿಮ ಪ್ರದರ್ಶನಗಳನ್ನು ನೀಡಿದ್ದಾರೆ. ಅವರ ಗಮನಾರ್ಹ ಪಾತ್ರಗಳಲ್ಲಿ ಕಲ್ ಹೋ ನಾ ಹೋ, ಜಾನೆ ಭಿ ದೋ ಯಾರೋ, ಸಾರಾಭಾಯ್ ವರ್ಸಸ್ ಸಾರಾಭಾಯ್, ಮೈ ಹೂ ನಾ ಸೇರಿವೆ.
Read More »ವಿದ್ಯುತ್ ಅವಘಡ: ಕರೆಂಟ್ ಶಾಕ್ ಹೊಡೆದು ಕೋಳಿಫಾರ್ಮ್ ಮಾಲೀಕ ಸಾವು
ಬೆಳಗಾವಿ ಕೋಳಿ ಫಾರ್ಮ್ ನಲ್ಲಿ ವಿದ್ಯುತ್ ತಂತಿ ತಗುಲಿ ಕೋಳಿ ಫಾರ್ಮ್ ಮಾಲೀಕ ಸಾವುವನ್ನಪ್ಪಿರುವ ಘಟನೆ ಬೆಳಗಾವಿಯ ಬಂಬರಗಾ ಗ್ರಾಮದಲ್ಲಿ ನಡೆದಿದೆ.ಕಂಗ್ರಾಳಿ ಕೆಎಚ್ ಗ್ರಾಮದ ರಾಮನಗರ ನಿವಾಸಿ ಅಮೋಲ್ ಜಾಧವ್ (43) ಮೃತ ದುರ್ದೈವಿ. ತನ್ನದೇ ಕೋಳಿ ಫಾರ್ಮ್ ನಲ್ಲಿ ಕಟ್ ಆಗಿಬಿದ್ದಿದ್ದ ವಿದ್ಯುತ್ ತಂತಿ ಜೋಡಿಸಲು ಹೋಗಿ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ.ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





