ಬೆಂಗಳೂರು : ಜೊಂಬಿ ಡ್ರಗ್ಸ್ ಸೇವಿಸುತ್ತಿದ್ದ ಎಂಬ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಮಿಷನರ್ ರಿಂದ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಇದೊಂದು ಸುಳ್ಳು ಸುದ್ದಿ ಆಗಿದ್ದು, ಈ ಒಂದು ವಿಡಿಯೋ ವೈರಲ್ ಮಾಡಿದ ಯುವಕನನ್ನು ಸದ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದರು. ಬೆಂಗಳೂರಲ್ಲಿ ಮಾಧ್ಯಮಗಳಲ್ಲಿ ಮಾತನಾಡಿದ ಅವರು ಜೊಂಬಿ ಡ್ರಗ್ಸ್ ಏನು ಇಲ್ಲ. ಅದು ಸತ್ಯಕ್ಕೆ ದೂರವಾದದ್ದು ಪಂಜಾಬ್ ಮೂಲದ ಲಾರಿ ಚಾಲಕನಿಗೆ ಕುಡಿತದ ಅಭ್ಯಾಸವಿತ್ತು. ಹಿಂದೆ ಪಂಜಾಬ್ ನಲ್ಲಿ ಡ್ರಗ್ಸ್ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾನೆ. ಯಾವುದೋ ಆರೋಗ್ಯ ಸಮಸ್ಯೆಗಳಿಗೂ ಔಷಧ ತೆಗೆದುಕೊಂಡಿದ್ದ. ಹಾಗಾಗಿ ಆತನಿಗೆ ಅದರಿಂದ ಪರಿಣಾಮ ಆಗಿತ್ತು. ಈ ಬಗ್ಗೆ ಜಾಲತಾಣದಲ್ಲಿ ಪೋಸ್ಟ್ ಮಾಡಿದವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿಸಿದರು. ಜೊಂಬಿ ಡ್ರಗ್ಸ್ ಸೇವಿಸುತ್ತಿದ್ದ ಎಂದು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಯುವಕ ಒಬ್ಬ ವೈರಲ್ ಮಾಡಿದ್ದ. ಈ ಕುರಿತಂತೆ ಬೆಂಗಳೂರಿನ ಬಾಗಲೂರು ಪೊಲೀಸರು ಹೇಮಂತ ಎಂಬತನನ್ನ ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರಂ ನಿವಾಸಿಯಾಗಿರುವ ಹೇಮಂತ್ ಈ ಒಂದು ವಿಡಿಯೋ ವೈರಲ್ ಮಾಡಿದ್ದ. ಎರಡು ದಿನಗಳ ಹಿಂದೆ ಜೊಂಬಿ ಸೇವಿಸುತ್ತಿದ್ದ ಎಂದು ವಿಡಿಯೋ ವೈರಲ್ ಮಾಡಿದ್ದ. ಇದು ಸುಳ್ಳು ಸುದ್ದಿ ಎಂದು ಪೊಲೀಸರು ಸ್ಪಷ್ಟನೆ ಕೊಟ್ಟಿದ್ದರು ಬಳಿಕ ಬಾಗಲೂರು ಪೊಲೀಸರು ಹೇಮಂತನು ಅರೆಸ್ಟ್ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
