ನಗರದ ಬಲ್ಮಠ ನಿವಾಸಿ, ಪ್ರತಿಷ್ಠಿತ ಉದ್ಯಮಿ ಮತ್ತು ದಕ್ಷಿಣ ಕನ್ನಡ ಆಟೋಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಕಸ್ತೂರಿ ಪ್ರಭಾಕರ್ ಪೈ (75) ಅವರು ಶನಿವಾರ (ಅ.25) ಸಂಜೆ 7:00 ಗಂಟೆಗೆ ಅಲ್ಪಕಾಲದ ಅನಾರೋಗ್ಯದ ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರ ಅಂತಿಮ ದರ್ಶನ ಭಾನುವಾರ (ಅ. 26) ಬೆಳಿಗ್ಗೆ 9:00 ಗಂಟೆಗೆ ಅವರ ನಿವಾಸ “ಪ್ರಕೃತಿ”, ಬಲ್ಮಠ ಕಲೆಕ್ಟರ್ಸ್ ಗೇಟ್ (ಡಿಸಿ ಬಂಗಲೆ ಪಕ್ಕದಲ್ಲಿ) ಇಲ್ಲಿ ನೆರವೇರಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

