ಸರ್ಕಾರದ ಉಚಿತ ಔಷಧ ಯೋಜನೆಯಡಿ ವಿತರಿಸಲಾದ ಕೆಮ್ಮಿನ ಸಿರಪ್ಗೆ ಸಂಬಂಧಿಸಿದಂತೆ ರಾಜಸ್ಥಾನದಲ್ಲಿ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಸಿಕಾರ್ ಜಿಲ್ಲೆಯ ಖೋರಿ ಬ್ರಹ್ಮಣನ್ ಗ್ರಾಮದಲ್ಲಿ 5 ವರ್ಷದ ಬಾಲಕ ಸಿರಪ್ ಸೇವಿಸಿ ಸಾವನ್ನಪ್ಪಿದ್ದಾನೆ, ಭರತ್ಪುರ ಜಿಲ್ಲೆಯಲ್ಲಿ ಇನ್ನೂ ಹಲವರು ಅದೇ ಔಷಧಿಯಿಂದ ಅಸ್ವಸ್ಥರಾಗಿದ್ದಾರೆ.ತನಿಖೆ ಮಾಡಲು, ಸಿಎಚ್ಸಿ ಉಸ್ತುವಾರಿ ಮತ್ತು ಇಬ್ಬರು ಆಂಬ್ಯುಲೆನ್ಸ್ ಚಾಲಕರು ಸ್ವತಃ ಸಿರಪ್ ಅನ್ನು ಪರೀಕ್ಷಿಸಿದರು, ನಂತರ ಅವರ ಆರೋಗ್ಯವೂ ಹದಗೆಟ್ಟಿತು. ಅವರೆಲ್ಲರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು.
Read More »ಸಿದ್ದಾಪುರ | ಪತಿಯಿಂದ ಜಿಂಕೆ ಬೇಟೆ: ಪತ್ನಿ ದೂರು!!
ದುಬಾರೆ ಮೀಸಲು ಅರಣ್ಯ ವ್ಯಾಪ್ತಿಯ ಅವರೆಗುಂದ ಅರಣ್ಯದಲ್ಲಿ ಜಿಂಕೆಯು ಉರುಳಿಗೆ ಸಿಲುಕಿ ಮೃತಪಟ್ಟಿದ್ದು, ಪತಿಯೇ ಉರುಳು ಹಾಕಿರುವುದಾಗಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಆರೋಪಿಯ ಪತ್ತೆಗೆ ಶೋಧ ನಡೆಯುತ್ತಿದೆ.ಪತಿ ಪ್ರಾಣಿಗಳನ್ನು ಬೇಟೆ ಆಡುತ್ತಾರೆ ಎಂಬ ಮಹಿಳೆ ದೂರಿನ ಮೇರೆಗೆ ಸ್ಥಳ ಪರಿಶೀಲಿಸಿದಾಗ, 4 ವರ್ಷದ ಗಂಡು ಜಿಂಕೆ ಕಳೇಬರ ಕಂಡುಬಂತು’ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.ಕುಶಾಲನಗರ ವಲಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.
Read More »ಕಿಕ್ಕೇರಿ | ಹಾವು ಕಡಿದು ರೈತ ಮಹಿಳೆ ಸಾವು!
ತೋಟದಲ್ಲಿದ್ದ ಸೇವಂತಿಗೆ ಹೂವು ಕೀಳಲು ತೆರಳಿದ್ದಾಗ ವಿಷಪೂರಿತ ಹಾವು ಕಡಿದು ರೈತ ಮಹಿಳೆ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.ಮರಿಯನಹೊಸೂರು ಗ್ರಾಮದ ರೈತ ಕೆಂಪೇಗೌಡರ ಪತ್ನಿ ಗೌರಮ್ಮ(45) ಮೃತರು.ಹಾವು ಕಡಿತದಿಂದ ತೀವ್ರ ಅಸ್ವಸ್ಥರಾದ ಅವರನ್ನು ತುರ್ತು ಚಿಕಿತ್ಸೆಗೆ ಕಿಕ್ಕೇರಿ ಆಸ್ಪತ್ರೆಗೆ ಕರೆದೊಯ್ದಿದ್ದಾಗ ಚಿಕಿತ್ಸೆ ಲಭ್ಯವಿಲ್ಲದೆ ಚನ್ನರಾಯಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ.
Read More »ಟವೆಲ್ ನಿಂದ ಕತ್ತು ಬಿಗಿದು, ಬಿಹಾರ ಮೂಲದ ವ್ಯಕ್ತಿಯ ಬರ್ಬರ ಹತ್ಯೆ!
ಕಗ್ಗನೂರು ಚೆಕ್ ಪೋಸ್ಟ್ ನ ರಸ್ತೆ ಬದಿಯ ಪೊದೆಯಲ್ಲಿ ಶವ ಪತ್ತೆಯಾಗಿದೆ. ಹಗ್ಗದಿಂದ ಕೈಗಳನ್ನು ಕಟ್ಟಿ ಬಳಿಕ ಟವೆಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಸರ್ಜಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಟವೆಲ್ ನಿಂದ ಕತ್ತು ಬಿಗಿದು ರಾಮ್ ಕುಮಾರ್ (40) ಎನ್ನುವ ವ್ಯಕ್ತಿಯನ್ನು ಹತ್ಯೆಗೈಯ್ಯಲಾಗಿದೆ.
Read More »ಗುಜರಾತ್ | ಗರ್ಬಾ ಕಾರ್ಯಕ್ರಮದಲ್ಲಿ ದಲಿತ ವಿದ್ಯಾರ್ಥಿನಿಗೆ ಹಲ್ಲೆ : ನಾಲ್ವರು ಮಹಿಳೆಯರ ವಿರುದ್ಧ ಪ್ರಕರಣ.
ಗುಜರಾತ್ನ ಮಹಿಸಾಗರ ಜಿಲ್ಲೆಯಲ್ಲಿ ಗರ್ಬಾ ಕಾರ್ಯಕ್ರಮವೊಂದರಲ್ಲಿ ದಲಿತ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿ ಆಕೆಯ ಕೂದಲು ಹಿಡಿದೆಳೆದು ಕಾರ್ಯಕ್ರಮದಿಂದ ಹೊರಕ್ಕೆ ತಳ್ಳಿದ್ದಕ್ಕಾಗಿ ನಾಲ್ವರು ಮಹಿಳೆಯರ ವಿರುದ್ಧ ಪೋಲಿಸರು ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.ಗಾಂಧಿನಗರದ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ವಿದ್ಯಾರ್ಥಿನಿಯಾಗಿರುವ ರಿಂಕು ವಂಕಾರ್(25) ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
Read More »ಮಹಿಳಾ ಸಹೋದ್ಯೋಗಿಗೆ ಅಸಭ್ಯ ಸಂದೇಶ: ಹಿರೇಕೆರೂರು ಇನ್ಸ್ಪೆಕ್ಟರ್ ಬಸವರಾಜ ಅಮಾನತು.
ಮಹಿಳಾ ಸಹೋದ್ಯೋಗಿಯೊಬ್ಬರಿಗೆ ಅಸಭ್ಯ ಸಂದೇಶ ಕಳುಹಿಸಿ ಕರ್ತವ್ಯ ಲೋಪ ಎಸಗಿದ್ದಾರೆ’ ಎಂಬ ಆರೋಪದಡಿ ಹಿರೇಕೆರೂರು ಸರ್ಕಲ್ ಇನ್ಸ್ಪೆಕ್ಟರ್ ಬಸವರಾಜ್ ಪಿ.ಎಸ್. ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಸಹೋದ್ಯೋಗಿಯೊಬ್ಬರಿಗೆ ಸಂಬಂಧಪಟ್ಟಂತೆ ಅಸಭ್ಯ ಸಂದೇಶ ಕಳುಹಿಸಿದ್ದರೆಂಬ ಆರೋಪ ಬಂದಿತ್ತು. ಪ್ರಾಥಮಿಕ ತನಿಖೆ ವರದಿ ಪಡೆದು ಇನ್ಸ್ಪೆಕ್ಟರ್ ಬಸವರಾಜ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ’.
Read More »ಇನ್ಶೂರೆನ್ಸ್ ಹಣಕ್ಕಾಗಿ ಇಡೀ ಕುಟುಂಬವನ್ನೇ ಕೊಂದ ವ್ಯಕ್ತಿ.
ವ್ಯಕ್ತಿಯೊಬ್ಬ ವಿಮೆ ಹಣಕ್ಕಾಗಿ ಇಡೀ ಕುಟುಂಬ ಸದಸ್ಯರನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತನ್ನ ತಂದೆ-ತಾಯಿ ಹಾಗೂ ಪತ್ನಿಯನ್ನು ಕೊಂದು ರಸ್ತೆ ಅಪಘಾತ ಎಂದು ಸುಳ್ಳು ಹೇಳಿ ಬಹು ವಿಮಾ ಕಂಪನಿಗಳಿಂದ ಕೋಟ್ಯಂತರ ರೂಪಾಯಿಗಳನ್ನು ಪಡೆದಿರುವ ಆತಂಕಕಾರಿ ಪ್ರಕರಣ ಬೆಳಕಿಗೆ ಬಂದಿದೆ.ವಿಮಾ ಕಂಪನಿಗಳಿಂದ 39 ಕೋಟಿ ರೂ. ಹಣ ಪಡೆಯಲು ಮನೆಯ ಎಲ್ಲರನ್ನೂ ಹತ್ಯೆ ಮಾಡಿದ್ದಾನೆ. ವಿಮಾ ಕಂಪನಿ ಏಜೆಂಟ್ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು …
Read More »ಮಗುವನ್ನು ರಸ್ತೆ ಬದಿಯಲ್ಲಿ ಬಿಟ್ಟು ಅಣೆಕಟ್ಟಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಂಪತಿ.
ಎರಡು ವರ್ಷದ ಮಗನನ್ನು ರಸ್ತೆಬದಿಯಲ್ಲಿ ಬಿಟ್ಟು ದಂಪತಿ ಅಣೆಕಟ್ಟಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಲ್ತೈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಶುಭಮ್ ಕರ್ದಾತೆ (25) ಮತ್ತು ಅವರ ಪತ್ನಿ ರೋಶ್ನಿ (24) ಆತಹತ್ಯೆ ಮಾಡಿಕೊಂಡಿರುವ ದಂಪತಿ. ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಬುಕಾಖೇಡಿ ಅಣೆಕಟ್ಟೆಯಿಂದ ಜಿಗಿದು ಆತಹತ್ಯೆ ಮಾಡಿಕೊಂಡಿದ್ದಾರೆ.
Read More »40 ಬಾರಿ ಇರಿದು ಪತ್ನಿಯ ಕೊಂದು ಪತಿ ಆತ್ಮಹತ್ಯೆ..
ಕೆಲಸ ಬಿಡಲು ಒಪ್ಪದ ಪತ್ನಿಯನ್ನು ಪತಿಯೇ 40ಕ್ಕೂ ಹೆಚ್ಚು ಬಾರಿ ಇರಿದು ಭೀಕರವಾಗಿ ಹತ್ಯೆ ಗೈದ ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಜ್ಞಾನ ಭಾರತಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಪ್ರಸ್ ಲೇಔಟ್ ನಿವಾಸಿ ಮಂಜು (27) ಕೊಲೆಯಾದ ಮಹಿಳೆ.ಬಳಿಕ ಪತಿ ಧರ್ಮಶೀಲನ್ (29) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಾನುವಾರ ರಾತ್ರಿ ಉಲ್ಲಾಳ ಮುಖ್ಯರಸ್ತೆಯ ಪ್ರಸ್ ಲೇಔಟ್ ನಲ್ಲಿ ದುರ್ಘಟನೆ ನಡೆದಿದೆ.
Read More »ಅತ್ಯಾಚಾರ ಆರೋಪ ಮಾಡಿದ ಗೆಳತಿ, ಮನನೊಂದು ರೈಲಿನೆದುರು ಹಾರಿ ಪ್ರಾಣಬಿಟ್ಟ ಟೆಕ್ಕಿ.
ಗೆಳತಿ ಅತ್ಯಾಚಾರ ಆರೋಪ ಮಾಡಿದ್ದಕ್ಕಾಗಿ ಮನನೊಂದು ಟೆಕ್ಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. 29 ವರ್ಷದ ಎಂಜಿನಿಯರ್ ಗೆಳತಿಯೇ ತನ್ನ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದಕ್ಕೆ ರೈಲಿನ ಮುಂದೆ ಹಾರಿ ಪ್ರಾಣ ಬಿಟ್ಟಿದ್ದಾರೆ.ಪೊಲೀಸರು ಸೆಕ್ಟರ್ 37 ರಲ್ಲಿರುವ ವಸತಿ ಸೊಸೈಟಿಯಲ್ಲಿರುವ ಅವರ ಫ್ಲಾಟ್ ಅನ್ನು ತಲುಪಿದಾಗ, ಶರ್ಮಾಳ ದೇಹವು ನೆಲದ ಮೇಲೆ ಬಿದ್ದಿರುವುದು ಕಂಡುಬಂದಿತು, ಆ ಸ್ಕಾರ್ಫ್ ಅನ್ನು ಆಕೆಯ ಕುತ್ತಿಗೆ ಹಿಸುಕಿ ಕೊಲ್ಲಲು ಬಳಸಲಾಗಿತ್ತು.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





