Breaking News

BigTv News

ಕೊಲ್ಲೂರು ದೇವಸ್ಥಾನದಲ್ಲಿ ಚಿನ್ನದ ಸರ ಕಳವು ಪ್ರಕರಣ: ಆರೋಪಿ ಮಹಿಳೆ ಬಂಧನ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ಚಿನ್ನದ ಸರ ಕಳವು ಪ್ರಕರಣವನ್ನು ಕೊಲ್ಲೂರು ಪೊಲೀಸರು 24 ಗಂಟೆಗಳ ಒಳಗಾಗಿ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಗಣೇಶ ನಗರದ ಯಾಧವ ದುರ್ಗಮ್ಮ ಎಂದು ಗುರುತಿಸಲಾಗಿದೆ.

Read More »

ಶಿಕ್ಷಕಿಗೆ ಅಶ್ಲೀಲ ಸಂದೇಶ: 12 ಮಂದಿ ವಿರುದ್ಧ ಎಫ್‌ಐಆರ್.

ಸರ್ಕಾರಿ ಶಾಲಾ ಶಿಕ್ಷಕಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ನಿಂದಿಸಿ, ಅತ್ಯಾಚಾರದ ಬೆದರಿಕೆಯ ಪೋಸ್ಟ್‌ ಹಾಕಿದ ಆರೋಪದ ಮೇಲೆ 12 ವ್ಯಕ್ತಿಗಳ ಮೇಲೆ ಗೋವಿಂದರಾಜನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಂತ್ರಸ್ತ ಶಿಕ್ಷಕಿಯ ಪತಿ ನೀಡಿರುವ ದೂರು ಆಧರಿಸಿ, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More »

ಅಡಿಕೆ ವ್ಯಾಪಾರಿಯ ₹1 ಕೋಟಿ ದರೋಡೆ ಮಾಡಿದ ಗ್ಯಾಂಗ್ 15 ನಿಮಿಷದಲ್ಲೇ ಅರೆಸ್ಟ್!

ಕಾರಿನಿಂದಲೇ ಅಡಿಕೆ ವ್ಯಾಪಾರಿಗೆ ಸೇರಿದ 1 ಕೋಟಿಗೂ ಹೆಚ್ಚು ಹಣವನ್ನು ದರೋಡೆ ಮಾಡಿದ್ದ ಎಂಟು ಮಂದಿಯ ಒಂದು ದೊಡ್ಡ ಗ್ಯಾಂಗ್ ಅನ್ನು ಬೆಂಗಳೂರಿನ ಹುಳಿಮಾವು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಕೃತ್ಯ ನಡೆದ ಕೇವಲ 15 ನಿಮಿಷದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಾರ್ಯಚರಣೆಯಿಂದಾಗಿ ದರೋಡೆ ಆಗಿದ್ದ ಸಂಪೂರ್ಣ ಹಣ ಪೊಲೀಸರ ಕೈಸೇರಿದೆ. ಬಂಧಿತ ಆರೋಪಿಗಳನ್ನು ನರಸಿಂಹ, ಜೀವನ್, ಕಿಶೋರ್, ವೆಂಕಟರಾಜು, ಚಂದ್ರ ಅಲಿಯಾಸ್ ಚಂದಿರನ್, ಕುಮಾರ್, ರವಿಕಿರಣ್, ಮತ್ತು ನಮನ್ ಎಂದು ಗುರುತಿಸಲಾಗಿದೆ.

Read More »

ಹಾಸನದಲ್ಲಿ ಬಟ್ಟೆ ಆಫರ್ ಗೋಸ್ಕರ ನೂಕು ನುಗ್ಗುಲು : ಜನರನ್ನು ಚದುರಿಸಲು ಪೊಲೀಸರಿಂದ ಲಾಠಿ ಚಾರ್ಜ್!

ಹಬ್ಬದ ಸೀಸನ್ ದಸರಾ, ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳು ಆರಂಭವಾಗಿದ್ದು, ಇದೇ ಸಮಯದಲ್ಲಿ ಜನರು ಬಟ್ಟೆ ಖರೀದಿಸಲು ಬಟ್ಟೆ ಅಂಗಡಿಗಳಲ್ಲಿ ಆಫರ್ ಗಳ ಮೊರೆ ಹೋಗುತ್ತಾರೆ. ಇಲ್ಲಿ ಹಾಸನದಲ್ಲಿ ಬಟ್ಟೆ ಆಫರ್ ಗೋಸ್ಕರ ಮುಗಿದ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.ಲಕ್ಷಿ ಬ್ಯಾಡ್ಮಿಂಟನ್ ಅಕಾಡೆಮಿ ಕಟ್ಟಡದಲ್ಲಿ ಬಟ್ಟೆ ಖರೀದಿಗೆ ಆಫರ್ ನೀಡಲಾಗಿತ್ತು.ಅರುಣ್ ಅಡ್ಡ ಮೆನ್ಸ್ ವೇರ್‌ನವರು ಈ ಬಿಗ್ ಆಫರ್ ನೀಡಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ …

Read More »

ಹೈಟೆಕ್ ತಂತ್ರಜ್ಞಾನ ಬಳಸಿ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಅಭ್ಯರ್ಥಿ ಲಾಕ್!

ಕಣ್ಣೂರಿನಲ್ಲಿ ಸರ್ಕಾರಿ ಹುದ್ದೆ ಸೆಕ್ರೆಟರಿಯೇಟ್ ಅಸಿಸ್ಟೆಂಟ್ ಪರೀಕ್ಷೆಯಲ್ಲಿ ಅಭ್ಯರ್ಥಿಯೊಬ್ಬ ನಕಲು ಪರೀಕ್ಷಾ ಕೇಂದ್ರದಿಂದಲೇ ಈ ಅಭ್ಯರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಾಡಿ ಸಿಕ್ಕಿಬಿದ್ದಿದ್ದಾನೆ. ಈತ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪರೀಕ್ಷೆ ನಕಲು ಮಾಡಲು ಪ್ರಯತ್ನಿಸಿದ್ದು ಕೊನೆಗೂ ಸಿಕ್ಕಿಬಿದ್ದಿದ್ದಾನೆ.

Read More »

₹20ಕ್ಕೆ ಕೇವಲ 4 ಪಾನಿಪುರಿ: ರಸ್ತೆಯಲ್ಲಿ ಕುಳಿತು ಮಹಿಳೆ ಪ್ರತಿಭಟನೆ!

ಮಹಿಳೆ ₹20 ಕೊಟ್ಟು ಒಂದು ಪ್ಲೇಟ್ ಪಾನಿಪುರಿ ಖರೀದಿಸಿದ್ದು, ಅಂಗಡಿಯಾತ 6 ಪಾನಿಪುರಿ ಕೊಡುವ ಬದಲು ಕೇವಲ 4 ಅನ್ನು ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.ಪಾನಿಪುರಿ ಮಾರುವವನ ಮೋಸದಿಂದ ಹತಾಶೆಗೊಂಡ ಮಹಿಳೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಬೈಕರ್‌ಗಳು ಈ ಮಹಿಳೆಯ ವಿಡಿಯೊ ಚಿತ್ರೀಕರಿಸಿದ್ದಾರೆ. ಬಳಿಕ, ಮಧ್ಯಪ್ರವೇಶಿಸಿದ ವಡೋದರ ಪೊಲೀಸರು ಸಮಸ್ಯೆ ಬಗೆಹರಿಸಿದ್ದಾರೆ ಎಂದು ಸಾಗರ್ ಪಟೋಲಿಯಾ ಎಂಬವರು ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Read More »

ಶಾರ್ಟ್ ಸರ್ಕ್ಯೂಟ್‌ನಿಂದ ಜೀವ ಬಿಟ್ಟ ಜನಪ್ರಿಯ ನಟಿಯ ಇಬ್ಬರು ಪುತ್ರರು!

ಕೋಟಾದಲ್ಲಿ, ಶನಿವಾರ ರಾತ್ರಿ 2 ಗಂಟೆಗೆ ನಗರದ ಫ್ಲಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು.. ಫ್ಲಾಟ್‌ನಿಂದ ಹೊಗೆ ಬರುತ್ತಿರುವುದನ್ನು ನೆರೆಹೊರೆಯವರು ನೋಡಿದರು. ಅವರು ತಕ್ಷಣ ಬಾಗಿಲು ಒಡೆದು, ಮಕ್ಕಳನ್ನು ಹೊರಗೆ ಕರೆದೊಯ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ವೈದ್ಯರು ಇಬ್ಬರೂ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಹಿರಿಯ ಮಗ ಶೌರ್ಯ (15) ಖಾಸಗಿ ಕೋಚಿಂಗ್ ಸೆಂಟರ್‌ನಿಂದ ಐಐಟಿಗೆ ತಯಾರಿ ನಡೆಸುತ್ತಿದ್ದರೆ, ಕಿರಿಯ ಮಗ ವೀರ್ ಧಾರಾವಾಹಿಗಳು ಮತ್ತು ರಾಜಸ್ಥಾನಿ ಹಾಡುಗಳಲ್ಲಿ ನಟಿಸಿದ್ದ. ವೀರ್ ಬಾಲ …

Read More »

ಹಾಸನ: ಕೆಎಸ್‌ಆರ್‌ಟಿಸಿ-ಸ್ಕೂಟರ್ ನಡುವೆ ಭೀಕರ ಅಪಘಾತ: ಮೂವರು ಸಾವು.

ಕೆಎಸ್​​​ಆರ್​​ಟಿಸಿ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ಮೂವರು ಯುವಕರು ಸಾವನ್ನಪ್ಪಿರುವ ಭೀಕರ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಯಡೇಗೌಡನಹಳ್ಳಿ ಬಳಿ ನಡೆದಿದೆ.ಸ್ಕೂಟಿಯಲ್ಲಿದ್ದ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೂ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಯುವಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ

Read More »

ಚಿನ್ನದ ಅಂಗಡಿಯ ಕೆಲಸಗಾರನನ್ನು ಅಪಹರಿಸಿ 1.5 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿ ದರೋಡೆ!

ಚಿನ್ನದ ಅಂಗಡಿಯೊಂದರ ಕೆಲಸಗಾರ ಮುಸ್ತಫ ಎಂಬವರನ್ನು ದುಷ್ಕರ್ಮಿಗಳು ಅಪಹರಿಸಿ 1.5 ಕೋಟಿ ರೂ.ಮೌಲ್ಯದ 1,650 ಗ್ರಾಂ ಚಿನ್ನದ ಗಟ್ಟಿಯನ್ನು ದೋಚಿದ್ದು, ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದಾರಿ ಮಧ್ಯ ಆರೋಪಿಗಳು ಮುಸ್ತಫಾರಿಗೆ ಕೈಯಿಂದ ಹಲ್ಲೆ ನಡೆಸಿ ಸ್ಟೇಟ್‌ಬ್ಯಾಂಕ್, ಪಾಂಡೇಶ್ವರ ಮಾರ್ಗವಾಗಿ ಗೋರಿಗುಡ್ಡ, ಉಜ್ಜೋಡಿ ಫ್ಲೈಓವರ್ ರಸ್ತೆಯ ಕೆಳಗಡೆಯಿಂದ ಸರ್ವಿಸ್ ರಸ್ತೆಯಲ್ಲಿ ಸಾಗುತ್ತಲೇ ಚಿನ್ನದ ಗಟ್ಟಿಯ ಬಗ್ಗೆ ವಿಚಾರಿಸಿದ್ದಾರೆ.ಬಳಿಕ ಮುಸ್ತಫಾ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಪಡೆದು ಸ್ನೇಹಿತನಿಗೆ ಕರೆ …

Read More »

ರಸ್ತೆ ಗುಂಡಿ ತಪ್ಪಿಸಲು ಹೋಗಿ, ಕಾಲೇಜು ವಿದ್ಯಾರ್ಥಿನಿ ಬಲಿ!

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಕುರಿತು ನಿನ್ನೆ ತಾನೆ ಸಿಎಂ ಸಿದ್ದರಾಮಯ್ಯ ಬೆಂಗಳೂರು ಸಿಟಿ ರೌಂಡ್ ಮಾಡಿ ಅಧಿಕಾರಿಗಳಿಗೆ ಒಂದು ತಿಂಗಳಲ್ಲಿ ರಸ್ತೆ ಗುಂಡಿ ಮುಚ್ಚುವಂತೆ ಕಡಕ್ ಸೂಚನೆ ನೀಡಿದ್ದಾರೆ.ಇದರ ಬೆನ್ನಲ್ಲೆ, ರಸ್ತೆ ಗುಂಡಿ ತಪ್ಪಿಸಲು ಹೋಗಿ ಟಿಪ್ಪರ್ ಡಿಕ್ಕಿಯಾಗಿ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ.ದ್ವಿತೀಯ ವರ್ಷದ ಬಿಕಾಂ ಪದವಿ ಓದುತ್ತಿದ್ದ ಧನುಶ್ರೀ (22) ವಿದ್ಯಾರ್ಥಿನಿ ದುರ್ಮರಣ ಹೊಂದಿದ್ದಾಳೆ.

Read More »