Breaking News

ಬೆಂಗಳೂರಲ್ಲಿ ಪಾಪಿ ಪತಿಯಿಂದ ಪೈಶಾಚಿಕ ಕೃತ್ಯ.. ಪತ್ನಿಯ ಜೀವ ತೆಗೆದು ಮೋರಿಗೆ ಎಸೆದ! ಕಾರಣ?

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪತಿಯೇ ಪತ್ನಿಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿ, ಮೃತದೇಹವನ್ನು ಕಸದ ಮೋರಿಗೆ ಎಸೆದಿರುವ ಘಟನೆ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗೀತಾ (48) ಕೊಲೆಯಾದ ಮಹಿಳೆಯಾಗಿದ್ದು, ಆಕೆಯ ಪತಿ ಆಂಟೋನಿ (63) ಆರೋಪಿಯಾಗಿದ್ದಾನೆ. ಆಂಟೋನಿಗೆ ಕುಡಿತದ ಚಟವಿದ್ದು, ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಘಟನೆ ನಡೆದ ದಿನವೂ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ಆಂಟೋನಿ, ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಗೀತಾಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಮನೆಯ ಸಮೀಪದ ಕಸದ ಮೋರಿಗೆ ಎಸೆದಿದ್ದ ಎನ್ನಲಾಗಿದೆ. ಮಾಹಿತಿ ಪಡೆದ ವಿವೇಕನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಆರೋಪಿ ಆಂಟೋನಿಯನ್ನು ಬಂಧಿಸಿದ್ದಾರೆ. ಕೊಲೆಗೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಹಾಲು ಉಕ್ಕಿಸುವ ನೆಪದಲ್ಲಿ ಮಹಿಳೆ ಕಟ್ಟಿ ಹಾಕಿ ದರೋಡೆ, ಮೂವರ ಬಂಧನ!

ಬೆಂಗಳೂರು: ನಾಗಸಂದ್ರದಲ್ಲಿ ಬಾಡಿಗೆ ಮನೆಗೆ ಹಾಲು ಉಕ್ಕಿಸುವ ಕಾರ್ಯಕ್ರಮಕ್ಕೆ ಆಹ್ವಾನಿಸಿ ಮಹಿಳೆಯೊಬ್ಬರಿಂದ ₹1 ಲಕ್ಷ ನಗದು ಹಾಗೂ ಚಿನ್ನದ ಮಾಂಗಲ್ಯ …

Leave a Reply

Your email address will not be published. Required fields are marked *