Breaking News

BigTv News

ಬೋನಿನಲ್ಲಿ ಕರು ಕಟ್ಟಿದ ಅರಣ್ಯ ಇಲಾಖೆ: ಬೋನಿಗೆ ಬಿದ್ದರೂ ಕರುವನ್ನು ತಿನ್ನದೇ ಬಿಟ್ಟ ಚಿರತೆ.

ಹೆಚ್‌ಡಿ ಕೋಟೆಯಲ್ಲಿ ಚಿರತೆ ಹಾವಳಿಯಿಂದ ಬೇಸತ್ತ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿಯಲು ಅಲ್ಲಿ ಬೋನ್ ಇಟ್ಟಿದ್ದು, ಬೋನಿಗೆ ಪುಟ್ಟ ಕರುವೊಂದನ್ನು ಕಟ್ಟಿದ್ದರು. ಆದರೆ ಬೋನಿಗೆ ಬಿದ್ದ ಚಿರತೆ ಕರುವನ್ನು ತಿನ್ನದೇ ಹಾಗೆಯೇ ಸುಮ್ಮನೆ ಕುಳಿತು ಗುರಾಯಿಸುತ್ತಾ ಗುರುಗುರುಡುತ್ತಿದ್ದ ದೃಶ್ಯ ಈಗ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಬೋನಿನಲ್ಲಿ ಕರುವನ್ನು ಕಟ್ಟಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಾಡಿನಿಂದ ನಾಡಿಗೆ ಬಂದು ಜನರಲ್ಲಿ …

Read More »

ಸಿಂದಗಿ ಪಟ್ಟಣದಲ್ಲಿ ಭೂಮಿ ಕಂಪಿಸಿದ ಅನುಭವ : ಬೆಚ್ಚಿ ಬಿದ್ದ ಜನ.!

ನಿನ್ನೆ ಒಂದೇ ದಿನದಲ್ಲಿ ಸಿಂದಗಿ ಪಟ್ಟಣದ ಸುತ್ತಮುತ್ತ 4 ಬಾರಿ ಭೂಮಿ ಕಂಪಿಸಿದ ಅನುಭವ ಆಗಿದೆ. ಮಧ್ಯಾಹ್ನ 3 ಗಂಟೆ, ರಾತ್ರಿ 10:11, ಮತ್ತೆ ರಾತ್ರಿ 10:25, ಮತ್ತೊಮ್ಮೆ ರಾತ್ರಿ 10:47 ಒಟ್ಟು 4 ಬಾರಿ ಭೂಮಿ ಕಂಪನಿಸಿದಂತೆ ಭಾಸವಾಗಿದೆ.ಹೀಗಾಗಿಸಿಂದಗಿ ಜನರಲ್ಲಿ ಆತಂಕ ಮೂಡಿದ್ದು, ಮನೆ ಬಿಟ್ಟು ಅನೇಕರು ಹೊರಬಂದಿದ್ದಾರೆ.

Read More »

ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನ: ನಿವೃತ್ತ ಯೋಧ ಅರೆಸ್ಟ್ .

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಆರೋಪದ ಮೇಲೆ ಸಕಲೇಶಪುರದ ನಿವೃತ್ತ ಯೋಧ ವಸಂತ್ ಕುಮಾರ್ (40) ಅವರನ್ನು ಸಿಸಿಬಿ ಸೈಬರ್ ಪೊಲೀಸರು ಬಂಧಿಸಿದ್ದಾರೆ.ಸೋಶಿಯಲ್ ಮೀಡಿಯಾದಲ್ಲಿ ಸಾರ್ವಜನಿಕ ವ್ಯಕ್ತಿಗಳ ವಿರುದ್ಧ ಅವಹೇಳನಾತ್ಮಕ ಬರಹಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸರು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದು, ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ

Read More »

ಪ್ರೇಮ ವೈಫ‌ಲ್ಯ: ನದಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ.

ವಿದ್ಯಾರ್ಥಿನಿಯೊಬ್ಬಳು ಪ್ರೇಮ ವೈಫ‌ಲ್ಯದಿಂದ ಮನನೊಂದು ಲಕ್ಷ್ಮಣ ತೀರ್ಥ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ತೂಗುಸೇತುವೆ ಬಳಿ ಗುರುವಾರ ನಡೆದಿದೆ.ಗಾವಡಗೆರೆ ಹೋಬಳಿಯ ಹರವೆ ಗ್ರಾಮದ ನಂಜುಂಡಸ್ವಾಮಿ ಮತ್ತು ಅಂಬುಜ ದಂಪತಿ ಪುತ್ರಿ ದೀಪಿಕಾ.ಎಚ್‌.ಎನ್‌ (19) ವರ್ಷ ಪ್ರೇಮ ವೈಫ‌ಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಾಕೆ.ದೀಪಿಕಾ ತನ್ನ ಸಾವಿಗೆ ನಾನೇ ಕಾರಣ, ತನ್ನ ತಂದೆ-ತಾಯಿಯ ಮನಸ್ಸು ನೋಯಿಸಿರುವ ಕಾರಣ ನೀಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್‌ ಠಾಣೆಯಲ್ಲಿ ತಂದೆ ನಂಜುಂಡಸ್ವಾಮಿ ಪ್ರಕರಣ …

Read More »

ಬೆಳಗಾವಿ ಕಾರಕೂನ ದುರಂತ ಅಂತ್ಯ; ಹೆಂಡತಿ ಮೇಲೆ ಕಣ್ಣಾಕಿದ ಕ್ಲರ್ಕ್ ಕಥೆ ಮುಗಿಸಿದ ಗಂಡ!

ಸ್ನೇಹಿತನ ಹೆಂಡತಿಯೊಂದಿಗೆ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜು ಕ್ಲರ್ಕ್ ಮಹಾಂತೇಶ್ ಬುಕನಟ್ಟಿ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾತ್ರಿ ಮನೆಗೆ ಹಿಂದಿರುಗುತ್ತಿದ್ದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದ್ದಾನೆ.ಮಹಾಂತೇಶ್ ಬುಕನಟ್ಟಿ (24) ಎಂಬ ಯುವಕ ಹತ್ಯೆಯಾದ ದುರ್ದೈವಿ.ಲಾಂಗ್ ಮತ್ತು ಮಚ್ಚುಗಳಿಂದ ಕತ್ತು, ಹೊಟ್ಟೆ, ಬೆನ್ನು ಸೇರಿದಂತೆ ಎಲ್ಲೆಂದರಲ್ಲಿ ಮನಬಂದಂತೆ ಕೊಚ್ಚಿ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.ಘಟನೆ ನಡೆದ ತಕ್ಷಣ …

Read More »

ಲವರ್’ಗಾಗಿ ಹೆತ್ತ ಮಗಳನ್ನೇ ಕೊಂದ ಪಾಪಿತಾಯಿ.!

ಗಂಡನನ್ನು ಬಿಟ್ಟು ಇನ್ನೊಬ್ಬ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದ ಅಂಜಲಿ ಎಂಬ ಮಹಿಳೆ ತನ್ನ ಮಗಳನ್ನು ಕೊಲೆ ಮಾಡಿದ್ದಾಳೆ. ಬಳಿಕ ಪೊಲೀಸರ ಬಳಿ ತಾನು ಮತ್ತು ತನ್ನ ಮಗಳು ಕೆರೆಗೆ ಬಂದಿರುವುದಾಗಿ ಮತ್ತು ತನ್ನ ಮಗಳು ಸ್ವಲ್ಪ ಸಮಯದ ಹಿಂದೆ ಕಾಣೆಯಾಗಿದ್ದಾಳೆ ಎಂದು ಅವಳು ಹೇಳಿದಳು. ಇದರೊಂದಿಗೆ, ಪೊಲೀಸರು ಅಂಜಲಿಯೊಂದಿಗೆ ರಾತ್ರಿಯಿಡೀ ಮಗುವನ್ನು ಹುಡುಕಿದರು. ಆದರೆ, ಯಾವುದೇ ಫಲಿತಾಂಶ ಬಾರದ ಕಾರಣ ಮರುದಿನ ಬೆಳಿಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು.ಪೊಲೀಸ್ ತನಿಖೆಯಲ್ಲಿ ನಿಜವಾದ ಕಥೆ …

Read More »

2800 ಕೋಟಿ ರೂಪಾಯಿ ವಂಚನೆ ಪ್ರಕರಣ: ಅನಿಲ್ ಅಂಬಾನಿ ಸೇರಿ ಐವರ ವಿರುದ್ಧ ಆರೋಪಪಟ್ಟಿ.

ನಕಲಿ ಸಾಲ ವ್ಯವಹಾರದಿಂದಾಗಿ ಯೆಸ್ ಬ್ಯಾಂಕ್ ಗೆ 2797 ಕೋಟಿ ರೂಪಾಯಿ ನಷ್ಟವಾಗಿದೆ ಎನ್ನಲಾದ ಪ್ರಕರಣದಲ್ಲಿ ಧೀರೂಬಾಯಿ ಅಂಬಾನಿ ಉದ್ಯಮ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ, ಬ್ಯಾಂಕಿನ ಸಹ ಸಂಸ್ಥಾಪಕ ರಾಣಾ ಕಪೂರ್, ಆತನ ಪತ್ನಿ ಬಿಂದು, ಪುತ್ರಿಯರಾದ ರಾಧಾ ಕಪೂರ್ ಮತ್ತು ರೋಶನಿ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ.ಯೆಸ್ ಬ್ಯಾಂಕಿಗೆ ವಂಚಿಸಿದ ಪ್ರಕರಣದಲ್ಲಿ ಸಿಬಿಐ ಈ ಮುನ್ನ ಡಿಎಚ್‌ಎಫ್‌ಎಲ್ ನ ಪ್ರವರ್ತಕ ಕಪಿಲ್ ವಾಧ್ವಾನಿ ಮತ್ತು ಸಹೋದರ ಧೀರಜ್ …

Read More »

ಐಪಿಎಲ್ ನಿವೃತ್ತಿಯ ಒಂದು ತಿಂಗಳ ನಂತರ ಆಡಲು ಮುಂದಾದ ಆರ್​. ಅಶ್ವಿನ್.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೇರಿದಂತೆ ಎಲ್ಲಾ ಪ್ರಮುಖ ಕ್ರಿಕೆಟ್ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ ಕೆಲವೇ ವಾರಗಳಲ್ಲಿ, ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ ಭಾರತದ ಜೆರ್ಸಿ ತೊಡಲು ಸಜ್ಜಾಗಿದ್ದಾರೆ. ನವೆಂಬರ್ 7 ರಿಂದ 9 ರವರೆಗೆ ನಡೆಯಲಿರುವ ಹಾಂಗ್ ಕಾಂಗ್ ಸಿಕ್ಸಸ್ 2025 ಟೂರ್ನಿಗಾಗಿ ಭಾರತ ತಂಡದಲ್ಲಿ 38 ವರ್ಷದ ಈ ಆಫ್-ಸ್ಪಿನ್ನರ್ ಆಯ್ಕೆಯಾಗಿದ್ದಾರೆ.ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ಅಶ್ವಿನ್ ಅವರ ಸೇರ್ಪಡೆಯು, ಈ ವೇಗದ, …

Read More »

ಸೆನ್ಸೆಕ್ಸ್ 150 ಪಾಯಿಂಟ್ ಕುಸಿತ, 25,400 ಕ್ಕಿಂತ ಕೆಳಗಿಳಿದ ನಿಫ್ಟಿ, ಅದಾನಿ ಗ್ರೂಪ್ ಷೇರುಗಳು ಜಿಗಿತ.

ಬೆಂಚ್ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಶುಕ್ರವಾರ ಇಳಿಕೆ ಕಂಡವು, ಐಟಿ ವಲಯದ ಷೇರುಗಳು ಸೆನ್ಸೆಕ್ಸ್ ಮತ್ತು ನಿಫ್ಟಿ ಅನ್ನು ಎಳೆದಿವೆ. ಅದಾನಿ ಗ್ರೂಪ್ ಷೇರುಗಳು ಆರಂಭಿಕ ವಹಿವಾಟಿನಲ್ಲಿ ಲಾಭ ಗಳಿಸಿದ್ದು, ಮಾರುಕಟ್ಟೆಯ ಕುಸಿತವನ್ನು ತಡೆಯಲು ಸಹಾಯ ಮಾಡಿವೆ.ಎಸ್ & ಪಿ ಬಿಎಸ್ ಇ ಸೆನ್ಸೆಕ್ಸ್ 260.39 ಪಾಯಿಂಟ್ ಗಳ ಕುಸಿತ ಕಂಡು 82,753.5 ಕ್ಕೆ ತಲುಪಿದರೆ, ಎನ್ ಎಸ್ ಇ ನಿಫ್ಟಿ 50 56.95 ಪಾಯಿಂಟ್ ಗಳ ಕುಸಿತ ಕಂಡು …

Read More »

ರೂಮ್ ಮೇಟ್ ಜತೆ ಜಗಳವಾಡಿದ್ದಕ್ಕೆ ತೆಲಂಗಾಣ ಟೆಕ್ಕಿಯನ್ನು ಗುಂಡಿಕ್ಕಿ ಕೊಂದ US ಪೋಲಿಸರು.

ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ 29 ವರ್ಷದ ವ್ಯಕ್ತಿಯನ್ನು ಅಮೆರಿಕದ ರೂಮ್ ಮೇಟ್ ಜತೆ ಜಗಳದ ನಂತರ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅವರ ಕುಟುಂಬ ಗುರುವಾರ ತಿಳಿಸಿದೆ.ಕ್ಯಾಲಿಫೋರ್ನಿಯಾದ ಸಾಫ್ಟ್ ವೇರ್ ವೃತ್ತಿಪರ ಮೊಹಮ್ಮದ್ ನಿಜಾಮುದ್ದೀನ್ ಅವರನ್ನು ಸೆಪ್ಟೆಂಬರ್ 3 ರಂದು ಸಾಂಟಾ ಕ್ಲಾರಾ ಪೊಲೀಸರು ಹತ್ಯೆ ಮಾಡಿದ್ದರು ಎಂದು ಆರೋಪಿಸಲಾಗಿದೆ.

Read More »