ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದ ಬೆಂಗಳೂರಿನ ಮಹಿಳೆಯೊಬ್ಬರು ಇಲ್ಲಿನ ಸೌಪರ್ಣಿಕಾ ನದಿಗೆ ಬಿದ್ದು ಮೃತಪಟ್ಟಿದ್ದಾರೆ. ಅವರನ್ನು ಬೆಂಗಳೂರು ತ್ಯಾಗರಾಜನಗರ ನಿವಾಸಿ ಸಿ.ಆರ್.ಗೋವಿಂದರಾಜು-ವಿಮಲಾ ಎಂಬುವರ ಪುತ್ರಿ ವಸುಧಾ ಚಕ್ರವರ್ತಿ (46) ಎಂದು ಗುರುತಿಸಲಾಗಿದೆ.ವಸುಧಾ ಚಕ್ರವರ್ತಿ ಅವರಿಗೆ ಚೆನ್ನಾಗಿ ಈಜು ಬರುತ್ತಿದ್ದು, ಅವರು ಈಜುವುದಕ್ಕೆಂದು ನದಿಗೆ ಇಳಿದು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿರಬಹುದೇ ಅಥವಾ ಅವರು ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬುದು ಖಚಿತವಾಗಿಲ್ಲ.
Read More »ನೀರಿನ ಸೆಳೆತಕ್ಕೆ ಸಿಲುಕಿ ವಿದ್ಯಾರ್ಥಿಯ ಸಾವು!
ಚೆರ್ಕಳ ಪಾಡಿಯಲ್ಲಿ ಆರನೇ ತರಗತಿ ವಿದ್ಯಾರ್ಥಿ ನೀರಿನ ಸೆಳೆತಕ್ಕೆ ಸಿಲುಕಿ ಸಾವಿಗೀಡಾದ ಘಟನೆ ನಡೆದಿದೆ. ಮುಟ್ಟತ್ತೋಡಿ ಗ್ರಾಮದ ಕಲ್ಲಕಟ್ಟ ಬೆಳ್ಳೂರಡ್ಕದ ಹಸೈನಾರ್ ಅವರ ಪುತ್ರ ಮಿಥ್ಲಾಜ್ (11) ಸಾವಿಗೀಡಾದ ಬಾಲಕ. ಸ್ನೇಹಿತರೊಂದಿಗೆ ಶನಿವಾರ ಸಂಜೆ ತೋಡಿನಲ್ಲಿ ಈಜಾಡಲು ಹೋಗಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ನೀರು ಪಾಲಾಗಿದ್ದು, ವಿದ್ಯಾನಗರ ಪೊಲೀಸ್, ಅಗ್ನಿಶಾಮಕ ದಳ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಯಿತು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
Read More »ಹುಣಸಗಿ: ಕೃಷ್ಣಾನದಿ ಪ್ರವಾಹದಲ್ಲಿ ಕೊಚ್ಚಿ ಹೋದ 187 ಕುರಿಗಳು.
ಗಡಿಭಾಗದಲ್ಲಿರುವ ಕೃಷ್ಣಾ ನದಿ ತೀರದಲ್ಲಿರುವ ಮೇಲಿನಗಡ್ಡಿ, ಜಂಗಿನ ಗಡ್ಡಿ ಸ್ಥಳಕ್ಕೆ ಯಾದಗಿರಿ ಪಶುಪಾಲನ ಉಪನಿರ್ದೇಶಕ ರಾಜು ದೇಶಮುಖ ಹಾಗೂ ಪಶುವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.ಒಟ್ಟು 187 ಕುರಿಗಳು ನದಿಯಲ್ಲಿ ಕೊಚ್ಚಿ ಹೋಗಿದ್ದು ಕೆಲವು ಅಲ್ಲಲ್ಲಿ ಕೃಷ್ಣಾ ನದಿ ತೀರದ ಕಲ್ಲುಬಂಡೆಗಳ ಮಧ್ಯೆ ಮೃತ ಕುರಿಗಳ ಕಳೆಬರ ಪತ್ತೆಯಾಗಿದ್ದರೆ ಬಹುತೇಕ ನದಿಯಲ್ಲಿ ಕೊಚ್ಚಿಹೋಗಿವೆ ಎಂದು ಮಾಹಿತಿ ತಿಳಿದು ಬಂದಿದೆ.
Read More »ಹುಣಸಗಿಯಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ: ಕುಸಿದು ಬಿದ್ದು ಸ್ಥಳದಲ್ಲೇ ವ್ಯಕ್ತಿ ಸಾವು.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ವಜ್ಜಲ್ ಗ್ರಾಮದಲ್ಲಿ ನಡೆದ ಘಟನೆಯೊಂದು ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಗ್ರಾಮದಲ್ಲಿ ನಡೆಯುತ್ತಿದ್ದ ಇಸ್ಪೀಟ್ ಆಟದ ಅಡ್ಡೆಯ ಮೇಲೆ ಹುಣಸಗಿ ಪೊಲೀಸರು ದಾಳಿ ನಡೆಸಿದ ವೇಳೆ, ಆಟದಲ್ಲಿ ತೊಡಗಿಕೊಂಡಿದ್ದ ಮಂಜು ಮಡಿವಾಳ (35) ಎಂಬಾತ ಅಕಸ್ಮಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
Read More »ಶಿವಮೊಗ್ಗ: ಆನೆ ನಿಯಂತ್ರಣಕ್ಕೆ ತೆಗೆದಿದ್ದ ಗುಂಡಿಗೆ ಬಿದ್ದು ವ್ಯಕ್ತಿ ಮೃತ್ಯು.
ಆನೆ ನಿಯಂತ್ರಣಕ್ಕೆ ಅರಣ್ಯ ಇಲಾಖೆ ತೆಗೆದಿದ್ದ ಗುಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲೂಕು ತಮ್ಮಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡಿನಕೊಟ್ಟಿಗೆ ಗ್ರಾಮದಲ್ಲಿ ನಡೆದಿದೆಮೃತರನ್ನು ನಾಗರಾಜ್ (32) ಎಂದು ಗುರುತಿಸಲಾಗಿದೆ. ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
Read More »ಶೌಚಾಲಯದಲ್ಲಿ ಶಾಲಾ ಬಾಲಕಿ ಹೆರಿಗೆ – ಪ್ರಮುಖ ಆರೋಪಿ ಅರೆಸ್ಟ್!
ಯಾದಗಿರಿಯ ಶಹಾಪುರದ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಗೆ ಹೆರಿಗೆ ಪ್ರಕರಣ ಸಂಬಂಧ ಪ್ರಮುಖ A1 ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಹಾಸ್ಟೆಲ್ ವಾರ್ಡನ್ ಸೇರಿ ಐವರ ವಿರುದ್ಧ ಕೇಸ್ ದಾಖಲಾಗಿತ್ತು.ಸುರಪುರ ತಾಲೂಕಿನ ಕಕ್ಕೇರ ಗ್ರಾಮದ ಪರಮಣ್ಣ(30) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.ಆರೋಪಿ ಪರಮಣ್ಣ, ಅಪ್ರಾಪ್ತ ಬಾಲಕಿ ಜೊತೆ ಸಂಬಂಧ ಬೆಳೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕೃತ್ಯದ ಬಗ್ಗೆ ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಕೂಸದ್ಯ ಇಡೀ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಶಹಾಪುರ …
Read More »ಅಪ್ರಾಪ್ತ ಬಾಲಕಿಯೊಂದಿಗೆ ಹಸೆಮಣೆಯೇರಿ ಕಳ್ಳಾಟವಾಡಿದ ಪಂಚಾಯಿತಿ ಅಧ್ಯಕ್ಷನಿಗೆ ಬಂಧನ ಭೀತಿ.
ಅಪ್ರಾಪ್ತ ಬಾಲಕಿಯೊಂದಿಗೆ ಹಸೆಮಣೆಯೇರಿ, ಬಳಿಕ ಬಾಲಕಿಯ ನಕಲಿ ಪ್ರಮಾಣಪತ್ರವನ್ನು ಬಿಡುಗಡೆ ಮಾಡುವ ಮೂಲಕ ಕಳ್ಳಾಟವಾಡಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷನಿಗೆ ಈಗ ಬಂಧನ ಭೀತಿ ಎದುರಾಗಿದೆ. ಬಸ್ಸಾಪುರ ಗ್ರಾಮ ಪಂಚಯಿತಿ ಅಧ್ಯಕ್ಷ ಭೀಮಶಿ ಕಾಲಿಮಣಿ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹುಕ್ಕೇರಿ ತಾಲೂಕಿನ ಯಮಕನಮರಡಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. 2023ರ ನ.5 ರಂದು ಅಪ್ರಾಪ್ತೆ ಜೊತೆಗೆ ಭೀಮಶಿ ಕಾಲಿಮಣಿ ವಿವಾಹವಾಗಿದ್ದ ಎನ್ನಲಾಗಿದೆ. ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಭೀಮಶಿ ಕಳ್ಳಾಟ …
Read More »ಫೇಸ್ಬುಕ್ ಸ್ನೇಹಿತನಿಂದ ಯುವತಿ ಮೇಲೆ ರೇಪ್!
ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಪರಿಚಯವಾದ ಯುವತಿ ಮೇಲೆ ಅತ್ಯಾಚಾರ ಎಸಗಿದಲ್ಲದೆ, ಆಕೆಯ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಯುವಕನನ್ನು ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಸವೇಶ್ವರನಗರ ನಿವಾಸಿ ನಿರಂಜನ್(30) ಬಂಧಿತ.ಮತ್ತೊಂದೆಡೆ ನಿರಂಜನ್ ತಂದೆ ರಾಜಶೇಖರ್ ವಿರುದ್ಧವೂ ಇದೇ ಯುವ ತಿ ಯಿಂದ ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
Read More »ಚಿಕ್ಕಜಾಜೂರು: ಕರಡಿ ಹಾವಳಿ; ರೈತರಲ್ಲಿ ಹೆಚ್ಚಿದ ಆತಂಕ.
ಚಿಕ್ಕಜಾಜೂರಿನ ಮಾರುತಿನಗರ ಬಡಾವಣೆ ಹಾಗೂ ಕಾವಲುಹಟ್ಟಿ ಗ್ರಾಮಗಳ ಮಧ್ಯದಲ್ಲಿ ಕಡಿದಾದ ಬೆಟ್ಟದ ಇಳಿಜಾರು ಪ್ರದೇಶ ಹಾಗೂ ಹಳ್ಳದಲ್ಲಿ ಕರಡಿವಾಸಿಸುತ್ತಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.ರೈತರು ಜಾನುವಾರುಗಳಿಗೆ ಮೇವು ತರಲು ಜಮೀನುಗಳಿಗೆ ಹೋಗುವಾಗ ಅಲ್ಲಿನ ರೈಲ್ವೆ ಹಳಿಯನ್ನು ಕರಡಿ ದಾಟುತ್ತಿದ್ದು, ಆ ದೃಶ್ಯವನ್ನು ರೈತರೊಬ್ಬರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.
Read More »ಕುಟುಂಬ ಸಮೇತರಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ನಟ ಕಿಚ್ಚ ಸುದೀಪ್.
ನಟ ಕಿಚ್ಚ ಸುದೀಪ್ ಪತ್ನಿ ಸಮೇತರಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.ಸುದೀಪ್ ದಂಪತಿ ಜೊತೆ ಬಿಗ್ಬಾಸ್ ಸ್ಪರ್ಧಿ ವಿನಯ್ ಗೌಡ, ಪತ್ನಿ ಅಕ್ಷತಾ ಹಾಗೂ ಪುತ್ರ, ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ.ಇತ್ತೀಚೆಗಷ್ಟೆ ಅಗಲಿದ್ದ ತಾಯಿಯ ಹುಟ್ಟುಹಬ್ಬವನ್ನು ಶನಿವಾರ ಗಿಡ ನೆಡುವ ಮೂಲಕ ಸುದೀಪ್ ವಿಶೇಷವಾಗಿ ಆಚರಿಸಿದ್ದರು.ಅಲ್ಲದೇ ಇದೇ ಸೆಪ್ಟೆಂಬರ್ 2 ರಂದು ಸುದೀಪ್ ಕೂಡ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





