ನಯಾಗರಾ ಜಲಪಾತದಿಂದ 54 ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾಗಿ 5 ಜನರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಪ್ರವಾಸಿ ಬಸ್ನಲ್ಲಿದ್ದ ಐದು ಪ್ರಯಾಣಿಕರು ಶುಕ್ರವಾರ ನ್ಯೂಯಾರ್ಕ್ ರಾಜ್ಯ ಹೆದ್ದಾರಿಯಲ್ಲಿ ಚಾಲಕನ ಗಮನ ಬೇರೆಡೆಗೆ ತಿರುಗಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Read More »ಲವರ್’ ರಾಗಿ ಮುದ್ದೆಯಲ್ಲಿ ವಿಷ ಹಾಕಿ ಅತ್ತೆಯನ್ನೇ ಕೊಂದ ಸೊಸೆ.!
ಮಹಿಳೆಯೊಬ್ಬಳು ಲವರ್ ಗಾಗಿ ಸ್ವಂತ ಅತ್ತೆಯನ್ನೇ ಮುದ್ದೆಯಲ್ಲಿ ವಿಷ ಹಾಕಿ ಕೊಂದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದ ತಡಗ ಗ್ರಾಮದಲ್ಲಿ ನಡೆದಿದೆ.ಪ್ರಿಯಕರನಿಗಾಗಿ ಅಶ್ವಿನಿ ಮನೆಯಲ್ಲಿ ಚಿನ್ನಾಭರಣ ಹಾಗೂ ಕಳುವು ಮಾಡುತ್ತಿದ್ದಳು. ಕದ್ದ ಹಣ ಹಾಗೂ ಚಿನ್ನಾಭರಣವನ್ನು ಪ್ರಿಯಕರ ಆಂಜನೇಯನಿಗೆ ಕೊಡುತ್ತಿದ್ದಳು. ಈ ವಿಷಯ ಗೊತ್ತಾದ ಬಳಿಕ ಅತ್ತೆಯನ್ನೇ ಸೊಸೆ ಅಶ್ವಿನಿ ವಿಷ ಹಾಕಿ ಕೊಂದಿದ್ದಾಳೆ. ಬಳಿಕ ಮನೆಯವರಿಗೆ ದೇವಿರಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ನಂಬಿಸಿದ್ದಳು. ಮನೆಯಲ್ಲಿ 100 ಗ್ರಾಂ ಚಿನ್ನ …
Read More »ಶಾಲೆಗೆ ಬೀಗ: ರಾತ್ರಿಯಿಡೀ ಕಿಟಕಿಯ ಗ್ರಿಲ್ ನಲ್ಲಿ ತಲೆ ಸಿಲುಕಿಕೊಂಡು 2ನೇ ತರಗತಿ ಬಾಲಕಿ ನರಳಾಟ!
ಕಿಯೋಂಜಾರ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಬೀಗ ಹಾಕಿದ್ದರಿಂದ 2 ನೇ ತರಗತಿಯ ಬಾಲಕಿ ಗುರುವಾರ ರಾತ್ರಿಯಿಡೀ ಶಾಲಾ ಕಟ್ಟಡದೊಳಗೆ ಕಾಲ ಕಳೆದಿದ್ದಾಳೆ. ಮರುದಿನ ಬೆಳಿಗ್ಗೆ ಗಂಭೀರ ಸ್ಥಿತಿಯಲ್ಲಿ ಕಂಡುಬಂದ ಬಾಲಕಿ ರಕ್ಷಿಸಲಾಗಿದೆ.ಬಾಲಕಿ ಕಿಟಕಿಗಳ ಮೇಲಿನ ಕಬ್ಬಿಣದ ಸರಳುಗಳನ್ನು ಮುರಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಳು. ಕೊನೆಗೆ ಅವಳು ಒಳಗೆ ನುಗ್ಗಿದಳು. ಆದರೆ ಅವಳ ತಲೆ ಸರಳುಗಳ ನಡುವೆ ಸಿಲುಕಿಕೊಂಡಿತು, ಇದರಿಂದಾಗಿ ಗಂಭೀರ ಗಾಯಗಳಾಗಿದ್ದವು. ಮರುದಿನ ಬೆಳಿಗ್ಗೆ, ಗ್ರಾಮಸ್ಥರು ಹುಡುಗಿ ಕಿಟಕಿಯಲ್ಲಿ ಸಿಲುಕಿಕೊಂಡಿರುವುದನ್ನು ಕಂಡು …
Read More »ISRO BAS | ಭಾರತದ ಮೊದಲ ಬಾಹ್ಯಾಕಾಶ ನಿಲ್ದಾಣ ‘ಬಾಸ್’ ಅನಾವರಣ, 2028ಕ್ಕೆ ಮೊದಲ ಹಂತದ ಉಡಾವಣೆ!
ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಭವಿಷ್ಯಕ್ಕೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ‘ಭಾರತೀಯ ಅಂತರಿಕ್ಷ ಸ್ಟೇಷನ್ ಮಾದರಿಯನ್ನು ಅನಾವರಣಗೊಳಿಸಿದೆ.ಬಾಹ್ಯಾಕಾಶ ನಿಲ್ದಾಣವು ಮಾನವನ ಆರೋಗ್ಯದ ಮೇಲೆ ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಣಾಮಗಳನ್ನು ಅಧ್ಯಯನ ಮಾಡಲು ಸಹಕಾರಿಯಾಗಿದೆ. ಇದು ಬಾಹ್ಯಾಕಾಶ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದ್ದು, ಭಾರತವು ವಾಣಿಜ್ಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಡಲಿದೆ. ಜಾಗತಿಕ ಸಹಕಾರ ಮತ್ತು ಯುವ ಪೀಳಿಗೆಯಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಇದು …
Read More »ಜಾತಿ ಕುರಿತು ಅವಹೇಳನ ಆರೋಪ; ವಕೀಲ ಜಗದೀಶ್ ಬಂಧನ!
ಸಾಮಾಜಿಕ ಜಾಲತಾಣದಲ್ಲಿ ಜಾತಿ ಕುರಿತು ನಿಂದನೆ ಮಾಡಿ ಮಾತನಾಡಿದ ಆರೋಪದ ಮೇಲೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಮತ್ತು ವಕೀಲ ಜಗದೀಶ್ ಅವರನ್ನು ಕೊಡಿಗೆಹಳ್ಳಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಬೇಡ್ಕರ್ ದಲಿತ ಧ್ವನಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ಅವರು ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
Read More »ಡೋರ್ ತೆರೆಯುತ್ತಿದ್ದಂತೆಯೇ ಹಿಂದಕ್ಕೆ ಚಲಿಸಿದ Harrier EV, ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು!
ಕಾರಿನ ಡೋರ್ ತೆರೆಯುತ್ತಿದ್ದಂತೆಯೇ ಟಾಟಾ ಹ್ಯಾರಿಯರ್ ಕಾರು ಹಿಂದಕ್ಕೆ ಚಲಿಸಿದ ಪರಿಣಾಮ ವ್ಯಕ್ತಿ ಅದರಡಿ ಸಿಲುಕಿ ಸಾವನ್ನಪ್ಪಿರುವ ಭೀಕರ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.ಕಾರು ನಿಲ್ಲಿಸಿದ್ದಾಗ ಓರ್ವ ವ್ಯಕ್ತಿ ಕಾರಿನ ಡೋರ್ ತೆಗೆದಿದ್ದಾನೆ. ಈ ವೇಳೆ ಕಾರಿನ ಸಮನ್ಸ್ ಮೋಡ್ ಆಕಸ್ಮಿಕವಾಗಿ ಸಕ್ರಿಯಗೊಂಡಿದ್ದು, ನೋಡ ನೋಡುತ್ತಲೇ ಕಾರು ಹಿಂದಕ್ಕೆ ಚಲಿಸಲಾರಂಭಿಸಿದೆ. ಇಳಿಜಾರಾಗಿದ್ದಕಾರಣ ಕಾರು ಕೊಂಚ ಹಿಂದಕ್ಕೆ ಬರುತ್ತಲೇ ವೇಗವಾಗಿ ಹಿಂದಕ್ಕೆ ಚಲಿಸಿದೆ.ಈ ವೇಳೆ ಕಾರು ಹತ್ತಲು ಹೋಗಿದ್ದ ವ್ಯಕ್ತಿ ಅದನ್ನು ನಿಯಂತ್ರಿಸಲಾಗಿದೇ …
Read More »ವಕೀಲ ಜಗದೀಶ್ ಬಂಧನಕ್ಕೆ ತೆರಳಿದ ಪೊಲೀಸರು ಬರಿಗೈಲಿ ವಾಪಸ್!
ಜಾತಿ ನಿಂದನೆ ಆರೋಪದ ಮೇಲೆ ವಕೀಲ ಜಗದೀಶ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲು ತೆರಳಿದ ಪೊಲೀಸರು ಬರಿಗೈಲಿ ವಾಪಸ್ಸಾಗಿದ್ದಾರೆ. ಜಗದೀಶ್ ಮನೆ ಬಾಗಿಲು ತೆರೆಯಲು ಮತ್ತು ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದಾರೆ.ಪೊಲೀಸರು ಮುಂದಿನ ಕಾನೂನು ಕ್ರಮಗಳ ಬಗ್ಗೆ ನಿರ್ಧರಿಸಲಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
Read More »ರಸಗೊಬ್ಬರ ಪೂರೈಕೆಯಲ್ಲಿ ಲೋಪ ಆರೋಪ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು.
ಟಿಎಪಿಸಿಎಂಎಸ್ನ ಆವರಣದಲ್ಲಿ ಗುರುವಾರ ಕೃಷಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಕಬ್ಬು, ಭತ್ತ, ರಾಗಿ ಬೆಳೆಗಳ ಇಳುವರಿ ಹೆಚ್ಚಿಸುವ ತರಬೇತಿ ಹಾಗೂ ಅರಿವು ಕಾರ್ಯಕ್ರಮದಲ್ಲಿ ಈ ಪ್ರಸಂಗ ನಡೆಯಿತು.ರಸಗೊಬ್ಬರದ ಪೂರೈಕೆಯಲ್ಲಿ ಲೋಪ ಸೇರಿದಂತೆ ಕೃಷಿ ಅಧಿಕಾರಿಗಳು ಬೇಜವಾಬ್ದಾರಿ ವರ್ತನೆ ತೋರುತ್ತಿದ್ದಾರೆ ಎಂದು ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಉಪ ಕೃಷಿ ನಿರ್ದೇಶಕ ಮುನೇಗೌಡ, ಸಹಾಯಕ ಕೃಷಿ ನಿರ್ದೇಶಕಿ ಪ್ರತಿಭಾ, ಟಿಎಪಿಸಿಎಂಎಸ್ನ ಅಧ್ಯಕ್ಷ ಮಹದೇವು, ಪಶುಸಂಗೋಪನಾ ಇಲಾಖೆಯ ಅಧಿಕಾರಿ ರವಿಶಂಕರ್, ರೇಷ್ಮೆ ಇಲಾಖೆಯ ಸಹಾಯಕ …
Read More »ಚಿತ್ರದುರ್ಗ: ಕೊಲೆಯಾದ ವಿದ್ಯಾರ್ಥಿನಿ 8 ತಿಂಗಳ ಗರ್ಭಿಣಿ! ಇನ್ಸ್ಟಾಗ್ರಾಂ ಪ್ರೀತಿ.
ಗೋನೂರು ಬಳಿ ಕೊಲೆಯಾದ ಪದವಿ ವಿದ್ಯಾರ್ಥಿನಿ ವರ್ಷಿತಾ 8 ತಿಂಗಳ ಗರ್ಭಿಣಿಯಾಗಿದ್ದರು. ವಿವಾಹ ಮಾಡಿಕೊಳ್ಳುವಂತೆ ಒತ್ತಾಯ ಮಾಡಿದ್ದ ಕಾರಣ ಆರೋಪಿ ಚೇತನ್ ರಾಷ್ಟ್ರೀಯ ಹೆದ್ದಾರಿ 48ರ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.ಮರಣೋತ್ತರ ಪರೀಕ್ಷೆಯ ವೇಳೆ 8 ತಿಂಗಳ ಭ್ರೂಣ ಪತ್ತೆಯಾಗಿದೆ. ವರದಿ ಇನ್ನೂ ಬರಬೇಕಿದೆ. ಕಳೆದ 10 ತಿಂಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. …
Read More »ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಹಾಗೂ ಸಹೋದರರ ನಿವಾಸದ ಮೇಲೆ ಮೇಲೆ E.D ದಾಳಿ.!
ಕಾಂಗ್ರೆಸ್ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರಿಗೆ ಇ.ಡಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಕೆಸಿ ವೀರೇಂದ್ರ ಹಾಗೂ ಅವರ ಸಹೋದರರ ನಿವಾಸದ ಮೇಲೆ ಇ.ಡಿ ದಾಳಿ ನಡೆಸಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.ಚಳ್ಳಕೆರೆ ಪಟ್ಟಣದಲ್ಲಿರುವ ಕೆ.ಸಿ.ವೀರೇಂದ್ರ ಪಪ್ಪಿ, ಕೆ.ಸಿ.ನಾಗರಾಜ, ಕೆ.ಸಿ.ತಿಪ್ಪೇಸ್ವಾಮಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಇಡಿ ಅಧಿಕಾರಿಗಳು ಖಾಸಗಿ ವಾಹನಗಳಲ್ಲಿ ಆಗಮಿಸಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





