Breaking News

BigTv News

ಕಾನ್‌ಸ್ಟೆಬಲ್ ಮರ್ಮಾಂಗ ಕತ್ತರಿಸಿ ಚಿತ್ರಹಿಂಸೆ ಕೇಸ್​​, ಸಿಬಿಐನಿಂದ 8 ಪೊಲೀಸರ ಬಂಧನ!

ಜಮ್ಮು ಮತ್ತು ಕಾಶ್ಮೀರದ 8 ಪೊಲೀಸ್ ಅಧಿಕಾರಿಗಳನ್ನು ಸಿಬಿಐ (CBI) ತಂಡ ಬಂಧಿಸಿದೆ. ಎರಡು ವರ್ಷಗಳ ಹಿಂದೆ 2023 ರಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ ಒಬ್ಬರಿಗೆ ಈ ಪೊಲೀಸ್ ಅಧಿಕಾರಿಗಳು ಕಸ್ಟಡಿಯಲ್ಲಿ ಇರಿಸಿಕೊಂಡು ಆತನನ್ನು ಅತಿ ಕ್ರೂರವಾಗಿ ನಡೆಸಿಕೊಂಡು ಚಿತ್ರಹಿಂಸೆ ನೀಡಿದ್ದ ಆರೋಪವಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಗಳನ್ನು ಕಸ್ಟಡಿಗೆ ನೀಡಲು ಸಿಬಿಐ ಅಧಿಕಾರಿಗಳು ಶ್ರೀನಗರ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.ಈ ವೇಳೆ ಕಾನ್‌ಸ್ಟೆಬಲ್ ಚೋಹನ್ ಮೇಲಿನ ಕಿರುಕುಳಕ್ಕೆ ಸಹಕರಿಸಿದ್ದಕ್ಕಾಗಿ ಮತ್ತು …

Read More »

ಯುವತಿ ಜೊತೆ ಓಡಿ ಹೋದ ಅಪ್ರಾಪ್ತ ಬಾಲಕನ ಕಟ್ಟಿಹಾಕಿ 8 ದಿನ ಹಲ್ಲೆ!

ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದ್ದು, ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ 16 ವರ್ಷದ ಅಪ್ರಾಪ್ತ ವಯಸ್ಕನೊಬ್ಬ 25 ವರ್ಷದ ಯುವತಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ ಎಂಬ ಆರೋಪವಿದೆ. ಇದಷ್ಟೇ ಅಲ್ಲ, ಈ ಆರೋಪದ ಮೇಲೆ ಹುಡುಗಿಯ ಕುಟುಂಬವು ಅಪ್ರಾಪ್ತ ವಯಸ್ಕನಿಗೆ ಕಠಿಣ ಶಿಕ್ಷೆಯನ್ನೂ ನೀಡಿದೆ.ಕೋಟಾ ಜಿಲ್ಲಾ ಗ್ರಾಮೀಣ ಎಸ್ಪಿ ಸುಜಿತ್ ಶಂಕರ್ ಈ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More »

ಮದುವೆಯಾಗುವಂತೆ ಒತ್ತಡ ಹೇರಿದ ಮಹಿಳೆ ಕೊಂದು ತುಂಡುಗಳಾಗಿ ಕತ್ತರಿಸಿ ಬಾವಿಗೆ ಎಸೆದ ದುಷ್ಕರ್ಮಿಗಳು!

ಝಾನ್ಸಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಛಿದ್ರಗೊಂಡ ಶವ ಬಾವಿಯಲ್ಲಿ ಪತ್ತೆಯಾಗಿದೆ. ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.ಸಂತ್ರಸ್ತೆಯ ಪ್ರಿಯಕರ ಎಂದು ಗುರುತಿಸಲಾದ ಗ್ರಾಮದ ಮಾಜಿ ಮುಖ್ಯಸ್ಥ ಮತ್ತು ಆತನ ಸೋದರಳಿಯ ಬಂಧಿತರಾಗಿದ್ದು, ಕೊಲೆಗೆ ಸಹಾಯ ಮಾಡಿದ ಮೂರನೇ ಸಹಚರ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ತೋಡಿಫತೇಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಿಶೋರ್‌ಪುರ ಗ್ರಾಮದ ಬಾವಿಯಿಂದ ಮಹಿಳೆಯ ದೇಹದ ಭಾಗಗಳನ್ನು ಹೊಂದಿರುವ ಎರಡು ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಹಿಳೆಯ ತಲೆಯನ್ನು ಲಖೇರಿ ನದಿಯಿಂದ ವಶಪಡಿಸಿಕೊಳ್ಳಲಾಗಿದೆ.

Read More »

ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಕಿರುಕುಳ: ಪ್ರಕರಣ ದಾಖಲು!

ಸಜೀಪನಡು ಜಂಕ್ಷನ್‌ನಲ್ಲಿರುವ ಕ್ಷೌರಿಕನಲ್ಲಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಮೋನು ಎಂಬಾತನು ಬಾಲಕನನ್ನು ಸ್ಕೂಟರ್‌ನಲ್ಲಿ ಕರೆದೊಯ್ದು ಬಾಗಿಲು ಮುಚ್ಚಿದ್ದ ಕ್ಷೌರದಂಗಡಿಯ ಹಿಂಬದಿಗೆ ಹೋಗಿ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.ಮೋನು ಯಾನೆ ಪಿಲಿಮೋನು ಎಂಬಾತನ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.ಗಾಯ ಗೊಂಡ ಬಾಲಕನಿಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡ ಲಾಗಿದೆ. ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

Read More »

ದಿನಕ್ಕೊಂದು ಬಲಿ ಪಡೆಯುತ್ತಿರುವ ಬಿಎಂಟಿಸಿ, 10 ವರ್ಷದ ಶಾಲಾ ಬಾಲಕಿಯ ತಲೆ ಮೇಲೆ ಹರಿದ ಬಸ್‌!

ಯಲಹಂಕ ಕೋಗಿಲು ಕ್ರಾಸ್ ಬಳಿ ಘಟನೆ ನಡೆದಿದ್ದು, KA57 F:5375 ಬಸ್ ನಿಂದ ಅಪಘಾತ ಸಂಭವಿಸಿದೆ. ಮಾರುತಿನಗರ ಹತ್ತಿರ ಹೋಗುವಾಗ ಎಡಗಡೆ ದ್ವಿಚಕ್ರ ವಾಹನ ಬಂದಿದೆ. ಈ ವೇಳೆ ಬೈಕ್‌ ಸ್ಕಿಡ್‌ ಆಗಿದ್ದರಿಂದ ಬಸ್‌ನ ಚಕ್ರದಡಿ ಮಗು ಸಿಲುಕಿ ಸಾವು ಕಂಡಿದೆ. ಈ ಘಟನೆ ನಡೆದಿದ. ಈ ಸಂಬಂಧ N E S ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.ಸಂಜಯನಗರದಲ್ಲಿ ಟೆಕ್ಕಿ ರೋಷನ್ ಎಂಬುವವರು ತಮ್ಮ ಬೈಕ್‌ನಲ್ಲಿ ಬಿಎಂಟಿಸಿ ಬಸ್ …

Read More »

ರಸ್ತೆಯಲ್ಲಿ ಹೋಗುವಾಗಲೇ `ವಿದ್ಯುತ್ ತಂತಿ ಸ್ಪರ್ಶಿಸಿ’ ಬಾಲಕ ಸಾವು!

ಮೀಟರ್ ಬಾಕ್ಸ್ ಬಳಿ ತೆರೆದ ಹೈಟೆನ್ಷನ್ ತಂತಿ ಬಿದ್ದಿತ್ತು. ಬಾಲಕ ನಡೆದುಕೊಂಡು ಹೋಗುವಾಗ ತುಳಿದಿದ್ದು, ಈ ವೇಳೆ ಕರೆಂಟ್ ಶಾಕ್ ನಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ಅಪಘಾತಕ್ಕೆ ಬಲಿಯಾದ ಬಾಲಕನ ಹೆಸರು ದೀಪಕ್ ಪಿಳ್ಳೈ. ಭಾಂಡಪ್ ರಸ್ತೆ ಜಲಾವೃತವಾಗಿದ್ದು, ಮಳೆಯಿಂದಾಗಿ ಪ್ರದೇಶವು ತೇವವಾಗಿದೆ ಎಂದು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ.ಸ್ಥಳೀಯ ಜನರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ತಲುಪಿ ದೀಪಕ್ನನ್ನು ಆಸ್ಪತ್ರೆಗೆ …

Read More »

ಅಪಘಾತ, ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ!

ಅಜಾಗರೂಕತೆ ವಾಹನ ಚಾಲನೆ ಗಂಭೀರ ಅಪಾಯಕ್ಕೆ ಕಾರಣವಾಗುತ್ತಿದೆ. ಬೆಂಗಳೂರಿನಲ್ಲಿ ಇದೀಗ ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿಯಾದ ಘಟನೆ ನಡೆದಿದೆ. ಜಾಲಹಳ್ಳಿ ಸರ್ಕಲ್ ಬಳಿ ಇರುವ ಸಿಗ್ನಲ್ ದಾಟುತ್ತಿದ್ದ ಮಹಿಳೆ ಮೇಲೆ ಲಾರಿದ ಹರಿದು ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.ಜಾಲಹಳ್ಳಿ ಸರ್ಕಲ್ ಸಿಗ್ನಲ್ ದಾಟುವ ಪ್ರಯತ್ನದಲ್ಲಿದ್ದ ಮಹಿಳೆ ಮೇಲೆ ಚಾಲಕ ಲಾರಿ ಹತ್ತಿಸಿದ್ದಾನೆ. 20 ಅಡಿ ಉದ್ದದ ಲಾರಿ ಯೂಟರ್ನ್ ಮಾಡುವಾಗ ಘಟನೆ ನಡೆದಿದೆ.

Read More »

ಮೇಖ್ರಿ ಸರ್ಕಲ್ ಬಳಿ ಅಪಘಾತದಲ್ಲಿ ಬೈಕ್ ಸವಾರ ಸಾವು!

ಮೇಖ್ರಿ ಸರ್ಕಲ್ ಬಳಿ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. 23 ವರ್ಷದ ಲೂಯಿಸ್ ಫರ್ನಾಂಡಿಸ್ ಬಸ್ ಓರ್ ಟೇಕ್ ಮಾಡುವಾಗ ಅಪಘಾತ ಸಂಭವಿಸಿದೆ. ಬಸ್ ಟಚ್ ಆಗಿ ಕೆಳಕ್ಕೆ ಬಿದ್ದ ಸವಾರನ ಮೇಲೆ ಬಸ್ ಹರಿದಿದೆ. ಸದಾಶಿವ ನಗರ ಟ್ರಾಫಿಕ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More »

ಸಂಜಯನಗರ ಅಪಘಾತದಲ್ಲಿ ಬೈಕ್ ಸವಾರ ಸಾವು!

ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಮೃತಪಟ್ಟ ಘಟನೆ ಸಂಜಯನಗರದಲ್ಲಿ ವರದಿಯಾಗಿತ್ತು. ಬಸ್ ಓವರ್ ಟೇಕ್ ಮಾಡಲು ಹೋದ ಬೈಕ್ ಸವಾರ ಬಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಮೃತನನ್ನು ಸಂಜಯನಗರ ನಿವಾಸಿ ರೋಷನ್ ಎಂದು ಗುರುತಿಸಲಾಗಿದೆ. ಹೆಬ್ಬಾಳದಿಂದ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಕಡೆಗೆ ಸಂಚರಿಸುತ್ತಿದ್ದ ಬಸ್ ಚಕ್ರಕ್ಕೆ ಸಿಲುಕಿ ರೋಷನ್ ಮೃತಪಟ್ಟಿದ್ದ.

Read More »

BMTC ಬಸ್ ಕೆಳಗೆ ಸಿಲುಕಿ ಟೆಕ್ಕಿ ಸಾವು, ಚಾಲಕ ಬಂಧನ!

ಬೆಂಗಳೂರಿನಲ್ಲಿ BMTCಗೆ ಮತ್ತೊಂದು ಬಲಿಯಾಗಿದ್ದು, ಬಸ್ ಅಡಿ ಸಿಲುಕಿ ಟೆಕ್ಕಿ ಸಾವನ್ನಪ್ಪಿರುವ ಘಟನೆ ಸಂಜಯನಗರ ಮುಖ್ಯ ರಸ್ತೆಯ ವೈಭವ್ ಥಿಯೇಟರ್ ಬಳಿ ಮಂಗಳವಾರ ನಡೆದಿದೆ.ಸಂಜಯ್ ನಗರದ ಎಇಸಿಎಸ್ ಲೇಔಟ್ ನಿವಾಸಿ ರೋಷನ್ (38) ಮೃತಪಟ್ಟವರು. ಇವರು ಕೊಡಗು ಮೂಲದವರಾಗಿದ್ದು, ನಗರದಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.

Read More »