ಚಿಕ್ಕಬಳ್ಳಾಪುರ: ಹಿಂದೆ ನಮ್ಮ ಬಿಜೆಪಿ ಸರಕಾರ ಇದ್ದಾಗ ಕೇಂದ್ರ ಸರಕಾರದ ಹಣಕ್ಕಾಗಿ ಕಾಯದೇ ಒಂದೇ ತಿಂಗಳಲ್ಲಿ ಬರ ಪರಿಹಾರಕ್ಕಾಗಿ ಹಣ ಬಿಡುಗಡೆ ಮಾಡಿದ್ದೆವು. ಆದರೆ ಈಗಿನ ಸರಕಾರ ಹಣ ಬಿಡುಗಡೆ ಮಾಡದೇ ಕೇವಲ ಮೊಸಳೆ ಕಣ್ಣೀರು ಹಾಕುತ್ತಿದೆ. ಹಣವಿಲ್ಲದೆ ಇದ್ದರೆ ಪಾಪರ್ ಆಗಿದ್ದೇವೆ ಎಂದು ಘೋಷಿಸಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದರು.
ಬರ ವೀಕ್ಷಣೆಗೆ ಆಗಮಿಸಿದ್ದ ಅವರು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕೇವಲ ಒಂದು ಸಾವಿರ ಮತ್ತು ಎರಡು ಸಾವಿರ ರೂ. ಬರ ಪರಿಹಾರ ಬಿಡುಗಡೆಗೆ ಹೇಳಿರುವುದು ನಾಚಿಕೆ ಗೇಡಿನ ಸಂಗತಿ. ಇದು ರೈತರಿಗೆ ಮಾಡುತ್ತಿರುವ ಅವಮಾನ. ಈ ರೀತಿಯ ಬೇಜವಾಬ್ದಾರಿ ಸರಕಾರಕ್ಕೆ ಕಿವಿ ಹಿಂಡಿವ ಕೆಲಸವನ್ನು ಶಾಸಕರು, ಮೈತ್ರಿ ಪಕ್ಷ ಜೆಡಿಎಸ್ ಅವರ ಜತೆ ಸಮಾಲೋಚಿಸಿ ಮಾಡುತ್ತೇನೆ ಎಂದು ಹೇಳಿದರು.ಪಿಡಿ ಖಾತೆಯಿಂದ ರೈತರಿಗೆ ಪರಿಹಾರ ಕೊಡಲು ಸಾಧ್ಯವಿಲ್ಲ. ಆ ಅಕೌಂಟ್ ಇರೋದು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಇರೋದು. ಬೋರ್‌ವೆಲ್ ಕೂಡಾ ಹಾಕಲು ಸಾಧ್ಯವಿಲ್ಲ. ಮಾತೆತ್ತಿದರೆ ಪಿಡಿ ಅಕೌಂಟ್ ಪಿಡಿ ಅಕೌಂಟ್ ಎನ್ನುತ್ತಾ ಮೊಸಳೆ ಕಣ್ಣು ಸುರಿಸುತ್ತಿದ್ದಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





