Breaking News

BigTv News

ಕಾಂತಾರ ಚಾಪ್ಟರ್ 1 ರಲ್ಲಿ ಕುಲಶೇಖರನಾಗಿ ಗುಲ್ಷನ್ ದೇವಯ್ಯ – ಹೊಸ ಅಪ್ಡೇಟ್ ಕೊಟ್ಟ ಚಿತ್ರತಂಡ!

ಕಾಂತಾರ ಚಿತ್ರತಂಡ ಇದೀಗ ಒಂದೊಂದಾಗಿ ಪಾತ್ರಗಳ ಪರಿಚಯವನ್ನು ಮಾಡುತ್ತಿದೆ. ಇತ್ತೀಚೆಗಷ್ಟೇ ನಟಿ ರುಕ್ಮೀಣಿ ವಸಂತ್ ಅವರ ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದ ತಂಡ ಇದೀಗ ಮತ್ತೊಂದು ಪ್ರಮುಖ ಪಾತ್ರದ ಫಸ್ಟ್ ಲುಕ್ ರೀವಿಲ್ ಮಾಡಿದೆ.ಕನ್ನಡಗಿ ಹೆಚ್ಚಾಗಿ ಬಾಲಿವುಡ್ ಸಿನೆಮಾಗಳಲ್ಲಿ ಕಾಣಿಸಿಕೊಂಡಿರು ನಟ ಗುಲ್ಷನ್ ದೇವಯ್ಯ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕುಲಶೇಖರ ಹೆಸರಿನ ಪಾತ್ರದಲ್ಲಿ ಗುಲ್ಷನ್ ದೇವಯ್ಯ ನಟಿಸುತ್ತಿದ್ದಾರೆ. ರಾಜನ ರೀತಿ ಪೋಷಾಕು ಧರಿಸಿ …

Read More »

ಬಾಲಿವುಡ್ ನಟ ಅಚ್ಯುತ್ ಪೋತ್‌ದಾರ್(91) ನಿಧನ!

ಬಾಲಿವುಡ್ ನಟ ಅಚ್ಯುತ್ ಪೋತ್‌ದಾರ್ ಇಂದು ನಿಧನರಾಗಿದ್ದಾರೆ. 91 ವರ್ಷ ವಯಸ್ಸಿನ ಅಚ್ಯುತ್ ಪೋತ್‌ದಾರ್ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಥಾಣೆಯ ಜ್ಯೂಪಿಟರ್ ಆಸ್ಪತ್ರೆಯಲ್ಲಿ ಅಚ್ಯುತ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದಾರೆ.ಅಚ್ಯುತ್ ಅವರು ತ್ರೀ ಈಡಿಯಟ್ಸ್ ಸೇರಿ ಹಲವು ಚಿತ್ರಗಳಲ್ಲಿ, ಸಿರಿಯಲ್‌ನಲ್ಲೂ ನಟಿಸಿದ್ದಾರೆ. ಅಚ್ಯುತ್ ಸಾವಿಗೆ ಬಾಲಿವುಡ್ ಚಿತ್ರರಂಗ, ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.

Read More »

ಉಚಿತ ಬಸ್ ಪ್ರಯಾಣ- ಶಕ್ತಿ ಯೋಜನೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರ್ಪಡೆ!

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಹಾಗೂ ಮಹಿಳಾ ಸಬಲೀಕರಣದ‌ ದಿಟ್ಟ ಯೋಜನೆಯಾದ ಶಕ್ತಿ ಯೋಜನೆಯು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ನಲ್ಲಿ ಅತಿ ಹೆಚ್ಚು ಮಹಿಳಾ ಪ್ರಯಾಣಿಕರು ಪ್ರಯಾಣಿಸಿರುವ (2023ರ ಜೂನ್ 11 ರಿಂದ 2025 ರ ಜುಲೈ 25 ಅವಧಿ) 5 ಬಿಲಿಯನ್, 49‌ ಮಿಲಿಯನ್, 426 ಸಾವಿರ, 417 ಮಹಿಳೆಯರು ಅಂದರೆ 500 ಕೋಟಿ ಮಹಿಳಾ ಪ್ರಯಾಣಿಕರ ಟಿಕೆಟ್ ಪ್ರಯಾಣವು ವಿಶ್ವ ದಾಖಲೆಯಲ್ಲಿ ಸ್ಥಾನ‌ ಪಡೆದಿದೆ.ವಿಶ್ವ …

Read More »

ಉಪ ರಾಷ್ಟ್ರಪತಿ ಚುನಾವಣೆ | ಸುಪ್ರೀಂ ಕೋರ್ಟ್ ಮಾಜಿ ಸಿಜೆಐ ಬಿ ಸುದರ್ಶನ್‌ ರೆಡ್ಡಿ “ಇಂಡಿಯಾ” ಅಭ್ಯರ್ಥಿ!

ಚುನಾವಣ ಆಯೋಗ ಸೆ.9ರಂದು ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ದಿನಾಂಕ ನಿಗದಿ ಘೋಷಣೆ ಮಾಡಿದೆ.ಈ ಬೆನ್ನಲ್ಲೇ ಸುಪ್ರೀಂಕೋರ್ಟ್ ಮಾಜಿ ಸಿಜೆಐ ಬಿ.ಸುದರ್ಶನ್ ರೆಡ್ಡಿ ಅವರನ್ನು ಉಪ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದಾಗಿ ಇಂಡಿಯಾ ಮೈತ್ರಿಕೂಟ ಇಂದು(ಮಂಗಳವಾರ, ಆ.19) ಘೋಷಿಸಿದೆ.

Read More »

ಮೈಸೂರು: ಎಪಿಎಂಸಿ ಮಾರುಕಟ್ಟೆಯಲ್ಲಿ ಕಳ್ಳರ ಹಾವಳಿ!

ಏಷ್ಯಾದ ಅತಿದೊಡ್ಡ ಮಾರುಕಟ್ಟೆ ಮೈಸೂರಿನ ಎಪಿಎಂಸಿಯಲ್ಲಿ ಕಳ್ಳರ ಹಾವಳಿ ಮುಂದುವರಿದಿದ್ದು, ಕಳೆದ ತಡರಾತ್ರಿ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ.ಅಂಗಡಿಯ ಶಟರ್‌ ಮುರಿದು ಒಳಗೆ ನುಗ್ಗಿರುವ ಖದೀಮರು, ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.20 ಅಂಗಡಿಗಳಿಗೆ ಖನ್ನ ಹಾಕಿರುವ ಖದೀಮರು, ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.ಈ ಸಂಬಂಧ ಮೈಸೂರಿನ ದಕ್ಷಿಣ ಉಪವಿಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Read More »

ಅನಾರೋಗ್ಯ ಪೀಡಿತ ಪತ್ನಿಯನ್ನು ‘ಜೀವಂತ ಸಮಾಧಿ’ ಮಾಡಲು ಮುಂದಾದ ವೃದ್ಧ!

ಅನಾರೋಗ್ಯ ಪೀಡಿತ ಪತ್ನಿಯನ್ನು ಜೀವಂತ ಸಮಾಧಿ ಮಾಡಲು ವೃದ್ಧನೋರ್ವ ಮುಂದಾಗಿದ್ದು, ಆಘಾತಕಾರಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಆರೋಪಿ 70 ವರ್ಷದ ಖಲೀಲುರ್ ರೆಹಮಾನ್, ಕಾಕಿಲಕುರಾ ಒಕ್ಕೂಟದ ಖೋಶಾಲ್ಪುರ್ ಕಣಿಪಾರ ಗ್ರಾಮದಲ್ಲಿರುವ ತನ್ನ ಮನೆಯ ಅಂಗಳದಲ್ಲಿ ಗುಂಡಿ ತೋಡಿ, ದೀರ್ಘಕಾಲದಿಂದ ಅಸ್ವಸ್ಥಳಾಗಿದ್ದ ತನ್ನ 65 ವರ್ಷದ ಪತ್ನಿ ಮೋಶಾ ಖೋರ್ಶೆದಾ ಬೇಗಂ ಅವರನ್ನು ಹೂಳಲು ಯತ್ನಿಸಿದ್ದಾನೆ ಎಂದು ವರದಿಯಾಗಿದೆ.ಸ್ಥಳೀಯರು ಆತನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

Read More »

ತ್ರಿವರ್ಣ ಧ್ವಜಕ್ಕಾಗಿ’ ಲಂಡನ್‌ನಲ್ಲಿ ಪಾಕಿಸ್ತಾನಿಗಳೊಂದಿಗೆ ಭಾರತದ ಮುಸ್ಲಿಂ ಹೆಣ್ಣುಮಕ್ಕಳ ಘರ್ಷಣೆ!

ಬ್ರಿಟಿಷ್ ರಾಜಧಾನಿ ಲಂಡನ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ಜನರ ನಡುವೆ ಮತ್ತೊಮ್ಮೆ ಘರ್ಷಣೆ ನಡೆದಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಲಂಡನ್‌ನ ಬೀದಿಗಳಲ್ಲಿ ಬಂದ ಭಾರತೀಯರೊಂದಿಗೆ ಪಾಕಿಸ್ತಾನಿಗಳು ಅಸಭ್ಯವಾಗಿ ವರ್ತಿಸಿದ್ದು, ಈ ವೇಳೆ ಭಾರತೀಯ ಮುಸ್ಲಿಂ ಹೆಣ್ಣು ಮಕ್ಕಳು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಮುಸ್ಲಿಂ ಹುಡುಗಿಯರು ಬಲವಾದ ಪ್ರತ್ಯುತ್ತರವನ್ನು ನೀಡಿದರು ಮತ್ತು ಪಾಕಿಸ್ತಾನಿಗಳನ್ನು ಹಿಂತಿರುಗುವಂತೆ ಒತ್ತಾಯಿಸಿದರು ಮತ್ತು ಹಿಂದೂಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗಿದರು.

Read More »

ಹಿಂದೂ ಸಂಘಟನೆಯ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪ್ರಕರಣ ದಾಖಲು!

ಆರೆಸ್ಸೆಸ್ ಮುಖಂಡ ಬಿ.ಎಲ್ ಸಂತೋಷ್ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪದಡಿ ಹಿಂದೂ ಸಂಘಟನೆಯ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇನ್ನೊಂದು ಪ್ರಕರಣದಲ್ಲಿ ಶರತ್ ಶೆಟ್ಟಿ ಎಂಬಾತನ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶರತ್ ಶೆಟ್ಟಿ ಈ ಮೊದಲು ವಸಂತ್ ಗಿಳಿಯಾರ್ ಮಾಡಿದ್ದ ಪೋಸ್ಟ್ ನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದ ಎಂದು ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.

Read More »

ಆಲಮಟ್ಟಿ ಡ್ಯಾಂ ಒಳಹರಿವು ಹೆಚ್ಚಳ : ಎಚ್ಚರ ವಹಿಸುವಂತೆ ಅಧಿಕಾರಿಗಳ ಸೂಚನೆ

ಕೃಷ್ಣಾ ಕಣಿವೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ, ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ನದಿ ಪಾತ್ರಕ್ಕೆ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾಗಿದ್ದು, 1 ಲಕ್ಷ 25 ಸಾವಿರ ಕ್ಯುಸೇಕ್ ನೀರು ಬಿಡುಗಡೆಯಾಗಿದೆ.ನದಿ ಪಾತ್ರಕ್ಕೆ ತೆರಳದಂತೆ, ಜಾನುವಾರುಗಳನ್ನು ಬಿಡದಂತೆ, ಎಚ್ಚರಿಕೆಯಿಂದಿರುವಂತೆ ಸ್ಥಳೀಯರಿಗೆ ಆಲಮಟ್ಟಿ ಜಲಾಶಯದ ಅಧಿಕಾರಿಗಳು ಸೂಚಿಸಿದ್ದಾರೆ.

Read More »

ಅಕ್ರಮ ಸಂಬಂಧಕ್ಕೆ ಅಡ್ಡಿ: ಲವರ್ʼಗೋಸ್ಕರ ಪತ್ನಿಯನ್ನೇ ಕೊಂದ BJP ನಾಯಕ..!

ರಾಜಸ್ಥಾನದ ಅಜ್ಮೀರ್‌ನಲ್ಲಿ ಭೀಕರ ಘಟನೆ ಬೆಳಕಿಗೆ ಬಂದಿದೆ. ಬಿಜೆಪಿ ನಾಯಕ ರೋಹಿತ್ ಸೈನಿ, ತನ್ನ ಪ್ರೇಯಸಿ ರಿತು ಸೈನಿ ಒತ್ತಡದಿಂದಲೇ ಪತ್ನಿ ಸಂಜು ಅವರನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ಬಹಿರಂಗಪಡಿಸಿದ್ದಾರೆ. ಆಗಸ್ಟ್ 10ರಂದು ನಡೆದ ಈ ಕೊಲೆ ಪ್ರಕರಣವನ್ನು ಆರಂಭದಲ್ಲಿ ದರೋಡೆ ಎಂದು ತೋರಿಸಲಾಗಿತ್ತು.ವಿಚಾರಣೆ ನಡೆಸಿದಾಗ, ಕೊಲೆ ಪಿತೂರಿ ಬಹಿರಂಗವಾಯಿತು. ರೋಹಿತ್ ಸೈನಿ ಸ್ವತಃ ಪತ್ನಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ.ರೋಹಿತ್ ತನ್ನ ಪತ್ನಿಯನ್ನು ಪೂರ್ವಯೋಜಿತವಾಗಿ ಕೊಂದಿದ್ದಾನೆ. ಪ್ರಸ್ತುತ ರೋಹಿತ್ ಸೈನಿ ಹಾಗೂ …

Read More »