ರಾಜಸ್ಥಾನದ ಅಜ್ಮೀರ್ನಲ್ಲಿ ಭೀಕರ ಘಟನೆ ಬೆಳಕಿಗೆ ಬಂದಿದೆ. ಬಿಜೆಪಿ ನಾಯಕ ರೋಹಿತ್ ಸೈನಿ, ತನ್ನ ಪ್ರೇಯಸಿ ರಿತು ಸೈನಿ ಒತ್ತಡದಿಂದಲೇ ಪತ್ನಿ ಸಂಜು ಅವರನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ಬಹಿರಂಗಪಡಿಸಿದ್ದಾರೆ. ಆಗಸ್ಟ್ 10ರಂದು ನಡೆದ ಈ ಕೊಲೆ ಪ್ರಕರಣವನ್ನು ಆರಂಭದಲ್ಲಿ ದರೋಡೆ ಎಂದು ತೋರಿಸಲಾಗಿತ್ತು.ವಿಚಾರಣೆ ನಡೆಸಿದಾಗ, ಕೊಲೆ ಪಿತೂರಿ ಬಹಿರಂಗವಾಯಿತು. ರೋಹಿತ್ ಸೈನಿ ಸ್ವತಃ ಪತ್ನಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ.ರೋಹಿತ್ ತನ್ನ ಪತ್ನಿಯನ್ನು ಪೂರ್ವಯೋಜಿತವಾಗಿ ಕೊಂದಿದ್ದಾನೆ. ಪ್ರಸ್ತುತ ರೋಹಿತ್ ಸೈನಿ ಹಾಗೂ ರಿತು ಸೈನಿಯನ್ನು ಪೊಲೀಸರು ಬಂಧಿಸಿದ್ದು, ಇಬ್ಬರೂ ಜೈಲಿನಲ್ಲಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

