Breaking News

BigTv News

ಬಾಕಿ ಬಿಲ್‌ ಕೇಳಿದ ಮಾಲಕ: ಅಂಗಡಿ ಬ್ಯಾನರ್‌ಗೆ ಬೆಂಕಿ ಹಚ್ಚಿದ ಗ್ರಾಹಕ!

ದಿನಸಿ ಅಂಗಡಿಯೊಂದರಲ್ಲಿ ಸಾಮಾನು ಖರೀದಿಸಿ ಬಿಲ್‌ ನೀಡದೆ ಬಾಕಿ ಉಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಹಕನೋರ್ವ ಅಂಗಡಿ ಬ್ಯಾನರ್‌ಗೆ ಬೆಂಕಿ ಹಚ್ಚಿದ ಘಟನೆ ಗುರುವಾಯನಕೆರೆಯಲ್ಲಿ ನಡೆದಿದೆ.ಅರೋಪಿತನು ಸಾಮಾನು ಖರೀದಿಯ ದುಡ್ಡನ್ನು ಬಾಕಿ ಯಿರಿಸಿದ್ದು, ಅದನ್ನು ಮಾಲಕ ಕೇಳಿದ್ದಕ್ಕೆ ಕೋಪಗೊಂಡು ಈ ಕೃತ್ಯವನ್ನು ಎಸಗಿದ್ದಾನೆ. ಇದರಿಂದ 3000 ರೂ. ನಷ್ಟ ಉಂಟಾಗಿದೆ ಎಂದು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ನೀಡಿದ ದೂರಿನಂತೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

Read More »

GAIL ಗ್ಯಾಸ್ ಪೈಪ್ ಲೈನ್ ಹಾನಿಯಾಗಿ ಅನಿಲ ಸೋರಿಕೆ: ಮಲ್ಲೇಶ್ವರದ ನಿವಾಸಿಗಳಲ್ಲಿ ಆತಂಕ!

ಬಿಡಬ್ಲ್ಯುಎಸ್ ಎಸ್ ಬಿ ನಡೆಸುತ್ತಿರುವ ಕಾಮಗಾರಿ ಸಮಯದಲ್ಲಿ GAIL ಅನಿಲ ಪೈಪ್‌ಲೈನ್ ಆಕಸ್ಮಿಕವಾಗಿ ಹಾನಿಗೊಳಗಾಗಿ ಮಲ್ಲೇಶ್ವರಂನಲ್ಲಿ ಭಯಯ ವಾತಾವರಣ ನಾಗರಿಕರಲ್ಲಿ ಉಂಟಾಯಿತು. 8ನೇ ಮುಖ್ಯ ರಸ್ತೆಯಲ್ಲಿ ಅಗೆಯುವ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಇದರಿಂದ ಅನಿಲ ಸೋರಿಕೆಯುಂಟಾಯಿತು.ಅನಿಲ ಸೋರಿಕೆಯು ದೇಶೀಯ ಸಿಎನ್‌ಜಿ ಸರಬರಾಜನ್ನು ಅಡ್ಡಿಪಡಿಸಿತು. ಪ್ರದೇಶದ ಅನೇಕ ಮನೆಗಳು ಅಡುಗೆಗಾಗಿ ಎಲ್‌ಪಿಜಿಯಿಂದ ಪೈಪ್ಡ್ ಸಿಎನ್‌ಜಿಗೆ ಬದಲಾಯಿಸಿವೆ. ಸೋರಿಕೆಯ ನಂತರ, ಹೆಚ್ಚಿನ ಅಪಾಯವನ್ನು ತಡೆಗಟ್ಟಲು ಗೈಲ್ ಅಧಿಕಾರಿಗಳು ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ.ಗ್ಯಾಸ್ ಪೂರೈಕೆ …

Read More »

ಮಂಗಳೂರು: ಸುರತ್ಕಲ್ ನ MRPL ಘಟಕದಲ್ಲಿ ಅನಿಲ ಸೋರಿಕೆ; ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

ಪೆಟ್ರೋಲಿಯಂ ರಿಫೈನರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂಆರ್‌ಪಿಎಲ್‌ ನ ತ್ಯಾಜ್ಯ ತೈಲ ಸಂಗ್ರಹಣ ಘಟಕದಲ್ಲಿ ಲೆವೆಲ್‌ ಬದಲಾವಣೆ ಪರಿಶೀಲನೆಗೆ ತೆರಳಿದ್ದ ಕಾರ್ಮಿಕ ವಾಪಾಸ್ ಬಾರದೇ ಇದ್ದುದನ್ನು ಕಂಡು ಇನ್ನಿಬ್ಬರು ಕಾರ್ಮಿಕರು ತೆರಳಿದ್ದಾರೆ ಈ ವೇಳೆ ಮೂವರು ಅಸ್ವಸ್ಥಗೊಂಡಿದ್ದಾರೆ.ತ್ಯಾಜ್ಯ ತೈಲ ಸಂಗ್ರಹ ಟ್ಯಾಂಕ್‌ನಲ್ಲಿ ಹೈಡ್ರೋಜನ್ ಸಲ್ಫೈಡ್ ಅನಿಲ ಸೋರಿಕೆಯಾಗಿ ಈ ದುರಂತ ಸಂಭವಿಸಿದ್ದು. ಕಾರ್ಮಿರಲ್ಲಿ ಒಬ್ಬರು ಕನ್ನಡಿಗರಾಗಿದ್ದು, ಇಬ್ಬರು ಹೊರರಾಜ್ಯದವರೆಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More »

ಧರ್ಮಸ್ಥಳದಲ್ಲಿ ಅಪರಾಧ ಕೃತ್ಯ ಕುರಿತ ಆರೋಪ, ಪ್ರತ್ಯೇಕ ತನಿಖೆ!

ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಅಪರಾಧ ಕೃತ್ಯಗಳು ನಡೆದಿವೆ’ ಎಂದು ವಕೀಲರ ಮೂಲಕ ಪೊಲೀಸರಿಗೆ ದೂರು ನೀಡಿದ್ದ ವ್ಯಕ್ತಿ, ಶುಕ್ರವಾರ ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್ ಕೆ. ಅವರ ಮುಂದೆ ಹಾಜರಾಗಿದ್ದಾರೆ.ದೂರುದಾರರು ಸ್ವತಃ ಹೊರ ತೆಗೆದಿರುವುದಾಗಿ ತಿಳಿಸಿರುವ ಅಸ್ಥಿ ಪಂಜರದ ಅವಶೇಷ ಹಾಜರುಪ ಡಿಸಿದ್ದಾರೆ. ಅವುಗಳನ್ನು ಸಾಕ್ಷಿ ದೂರುದಾರರ ಪರ ವಕೀಲರು, ಪಂಚರ ಸಮ್ಮುಖದಲ್ಲಿ ಸ್ವಾಧೀನ‌ ಪಡಿಸಿಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ …

Read More »

ಬೆಂಗಳೂರು : ಚೂರಿಯಿಂದು ಇರಿದು ಹತ್ಯೆಗೆ ಯತ್ನ!

ಪ್ರೇಯಸಿಗೆ ಕೊಟ್ಟ ಹಣವನ್ನು ವಾಪಸ್‌ ಕೇಳಿದ್ದನೆಂಬ ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ನೆಲಮಂಗಲದ ಜ್ಯೂಸ್‌ ಸೆಂಟರ್‌ ನಲ್ಲಿ ಕೆಲಸ ಮಾಡುತ್ತಿದ್ದ ಸುದೀಪ್‌ ಹಾಗೂ ಆತನ ಸ್ನೇಹಿತ ಚೇತನ್‌ ಚೂರಿ ಇರಿತದಿಂದ ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ.ಇಬ್ಬರೂ ಸಹ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೆಲಮಂಗಲ ಠಾಣೆಯ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Read More »

ಕಿರಿಯ ಮಗಳ ಜತೆ ಅಕ್ರಮ ಸಂಬಂಧ ಹೊಂದಿದ್ದ ಹಿರಿಯ ಅಳಿಯನ ತಲೆಕಡಿದು, ದೇಹ ತುಂಡರಿಸಿದ ಮಾವ!

ಆಂಧ್ರಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಮಾವನೊಬ್ಬ ತನ್ನ ಅಳಿಯನನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಅನೈತಿಕ ಸಂಬಂಧ ಮತ್ತು ಆಸ್ತಿ ವಿವಾದವೇ ಈ ಅಮಾನುಷ ಕೃತ್ಯಕ್ಕೆ ಕಾರಣ ಎಂದು ಹೇಳಲಾಗಿದ್ದು, ಅಳಿಯನ ಶಿರಚ್ಛೇದ ಮಾಡಿ, ದೇಹವನ್ನು ತುಂಡು ತುಂಡಾಗಿ ಕತ್ತರಿಸಲಾಗಿದೆ.ಪೊಲೀಸ್ ತನಿಖೆ ವೇಳೆ, ವಿಶ್ವನಾಥ್ ಅವರ ಮೊಬೈಲ್ ಫೋನ್ ಟವರ್ ಲೊಕೇಷನ್ ಬಳಸಿಕೊಂಡು ಆರೋಪಿಗಳನ್ನು ಪತ್ತೆ ಹಚ್ಚಲಾಯಿತು. ವೆಂಕಟರಮಣಪ್ಪ, ಕಟ್ಟಮಯ್ಯ ಮತ್ತು ಇತರ ಮೂವರ ಫೋನ್‌ಗಳು ಕೊಲೆ ನಡೆದ ಸ್ಥಳದಲ್ಲೇ ಇದ್ದುದನ್ನು …

Read More »

ಕಲ್ಲು ನುಂಗಿದ್ದೀನಿ ಅಂತಾ ಆಸ್ಪತ್ರೆಗೆ ಬಂದ ; ಆಪರೇಷನ್ ಮಾಡಿದ ಡಾಕ್ಟರ್‌ಗೆ ಶಾಕ್..?

ಶಿವಮೊಗ್ಗದ ನ್ಯಾಯಾಲಯವು ಪ್ರಕರಣವೊಂದರಲ್ಲಿ ಈತನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆತ ಜೂ. 24ರಂದು ಜೈಲಿನ ಆಸ್ಪತ್ರೆಗೆ ಬಂದು, ತಾನು ಕಲ್ಲು ನುಂಗಿದ್ದೇನೆ ಎಂದು ವೈದ್ಯರಿಗೆ ತಿಳಿಸಿದ್ದನು. ಕೈದಿಯನ್ನು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಿದ್ದರು.ಎಕ್ಸ್‌ರೇ ಮಾಡಿದಾಗ ಕೈದಿ ದೌಲತ್‌ ಹೊಟ್ಟೆಯಲ್ಲಿ ವಸ್ತು ಇರುವುದು ಪತ್ತೆಯಾಗಿದೆ. ಶಸ್ತ್ರಚಿಕಿತ್ಸೆ ನಡೆಸಿದಾಗ ಖೈದಿ ಹೊಟ್ಟೆಯಲ್ಲಿ ಪತ್ತೆಯಾದ ಚಿಕ್ಕ ಮೊಬೈಲ್‌ ಸಿಕ್ಕಿದೆ. ಜೈಲಿನೊಳಗೆ ಮೊಬೈಲ್‌ ಫೋನ್‌ ತಲುಪಿರುವ ಕುರಿತು ತನಿಖೆ ನಡೆಸುವಂತೆ …

Read More »

Zooಗೆ ಬಂದ ಮಹಿಳೆ ಮೇಲೆ ಸಿಂಹ ಡೆಡ್ಲಿ ಅಟ್ಯಾಕ್‌!

ಆಸ್ಟ್ರೇಲಿಯಾದ ಮೃಗಾಲಯದಲ್ಲಿ ಸಿಂಹದ ದಾಳಿಗೆ ಒಳಗಾದ ಮಹಿಳೆಯೊಬ್ಬಳು ತನ್ನ ಕೈಗಳನ್ನು ಕಳೆದುಕೊಂಡಿದ್ದಾಳೆ. ಮಾಹಿತಿ ಪ್ರಕಾರ , 50 ವರ್ಷದ ಶಾಲಾ ಶಿಕ್ಷಕಿ ಜೋನ್ನೆ ಕ್ಯಾಬ್ಬನ್ ಡಾರ್ಲಿಂಗ್ ಡೌನ್ಸ್ ಮೃಗಾಲಯಕ್ಕೆ ಭೇಟಿ ನೀಡಿದ್ದಾಗ ಅಚಾನಕ್ ಆಗಿ ಸಿಂಹವೊಂದು ಅವಳ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ.ತಕ್ಷಣ ಅವಳನ್ನು ಶಸ್ತ್ರಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ಬ್ರಿಸ್ಬೇನ್‌ನ ಪ್ರಿನ್ಸೆಸ್ ಅಲೆಕ್ಸಾಂಡ್ರಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.ರಕ್ತಸ್ರಾವವನ್ನು ನಿಲ್ಲಿಸಲು ಸಿಬ್ಬಂದಿ ಸದಸ್ಯ ತನ್ನ ಪತ್ನಿಯ ಚರ್ಮದ ಬೆಲ್ಟ್ ಅನ್ನು ತಾತ್ಕಾಲಿಕ ಟೂರ್ನಿಕೆಟ್ …

Read More »

ಮದ್ಯದ ಬಾಟಲಿ ಕದಿಯಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಕುಡುಕ!

ಕುಡುಕನೊಬ್ಬ ಮದ್ಯದ ಬಾಟಲಿಯನ್ನು ತೆಗೆದುಕೊಳ್ಳುವುದಕ್ಕಾಗಿ ಮದ್ಯದ ಅಂಗಡಿಯ ಕಬ್ಬಿಣದ ಗ್ರಿಲ್‌ನಲ್ಲಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದ್ದು, ಈ ಹಾಸ್ಯಾಸ್ಪದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಂತರ ಇತರ ಗ್ರಾಹಕರು ಕಷ್ಟಪಟ್ಟು ಅವನನ್ನು ಅದರಿಂದ ರಕ್ಷಿಸಿದ್ದಾರೆ.ವೈರಲ್ ಆದ ವಿಡಿಯೊದಲ್ಲಿ ಕುಡಿದ ಮತ್ತಿನಲ್ಲಿದ್ದ ವೃದ್ಧನೊಬ್ಬ ಜನನಿಬಿಡ ಮದ್ಯದ ಅಂಗಡಿಯಲ್ಲಿ ಮದ್ಯದ ಬಾಟಲಿಯನ್ನು ಕಳ್ಳತನ ಮಾಡಲು ಹೋದಾಗ ಅಂಗಡಿಯ ಕಬ್ಬಿಣದ ಗ್ರಿಲ್‍ನಲ್ಲಿ ಸಿಲುಕಿಕೊಂಡಿರುವುದು ಸೆರೆಹಿಡಿಯಲಾಗಿದೆ

Read More »

ಮ್ಯಾನ್ಮಾರ್’ನಲ್ಲಿ ಬೌದ್ಧ ಮಠದ ಮೇಲೆ ಏರ್ ಸ್ಟ್ರೈಕ್ : ನಾಲ್ವರು ಮಕ್ಕಳು ಸೇರಿದಂತೆ 23 ಮಂದಿ ಸಾವು.!

ಮ್ಯಾನ್ಮಾರ್ನಲ್ಲಿರುವ ಬೌದ್ಧ ಮಠವೊಂದರ ಮೇಲೆ ಮ್ಯಾನ್ಮಾರ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ 23 ನಾಗರಿಕರು ಸಾವನ್ನಪ್ಪಿದ್ದಾರೆ.ದೇಶದ ಎರಡನೇ ಅತಿದೊಡ್ಡ ನಗರವಾದ ಮಂಡಲೆಯಿಂದ ವಾಯುವ್ಯಕ್ಕೆ 35 ಕಿಲೋಮೀಟರ್ ದೂರದಲ್ಲಿರುವ ಪ್ರತಿರೋಧದ ಭದ್ರಕೋಟೆಯಾದ ಸಾಗೈಂಗ್ ಪಟ್ಟಣದ ಲಿನ್ ಟಾ ಲು ಗ್ರಾಮದಲ್ಲಿ ಗುರುವಾರ ಈ ಮಾರಕ ದಾಳಿ ನಡೆದಿದೆ.ನಾಲ್ಕು ಮಕ್ಕಳು ಸೇರಿದಂತೆ ಇಪ್ಪತ್ತಮೂರು ನಾಗರಿಕರು ಸಾವನ್ನಪ್ಪಿದ್ದು,. ಸುಮಾರು 30 ಇತರರು ಗಾಯಗೊಂಡರು. ಅವರಲ್ಲಿ ಹತ್ತು ಜನರ ಸ್ಥಿತಿ …

Read More »