ಟ್ರ್ಯಾಕ್ಟರ್ ನಿಂದ ವಿದ್ಯುತ್ ಕಂಬಗಳನ್ನು ಎತ್ತಿಕೊಂಡು ತಲಕಾಡಿಗೆ ಬರುತ್ತಿದ್ದ ವೇಳೆ ಟ್ರಾಕ್ಟರ್ ಮುಗುಚಿ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ವ್ಯಕ್ತಿಯ ಮೇಲೆ ಬಿದ್ದು ಸಾವನಪ್ಪಿದ್ದಾನೆ.ಸ್ಥಳಕ್ಕೆ ತಲಕಾಡು ಪೊಲೀಸರು ಭೇಟಿ, ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.ಮಹದೇವಪುರದ ನಿವಾಸಿ ಲೋಕೇಶ್(27) ಮೃತ ವ್ಯಕ್ತಿ.
Read More »ಕಳ್ಳನಿಂದ ಪತ್ನಿಯನ್ನು ರಕ್ಷಿಸಲು ಹೋಗಿ ಕೈ ಕಳೆದುಕೊಂಡ ವೈದ್ಯ!!
ಚಲಿಸುತ್ತಿರುವ ರೈಲಿನಲ್ಲಿ ಪತ್ನಿಯ ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಳ್ಳಲು ಬಂದ ದರೋಡೆಕೋರನಿಂದ ತನ್ನ ಪತ್ನಿಯನ್ನು ರಕ್ಷಿಸುವ ಭರದಲ್ಲಿ ಪತಿಯೊರ್ವ ತನ್ನ ಒಂದು ಕೈಯನ್ನೇ ಕಳೆದುಕೊಂಡಿರುವ ಆಘಾತಕಾರಿ ಘಟನೆ ಮುಂಬೈಯಲ್ಲಿ ನಡೆದಿದೆ.ಓರ್ವ ಕಳ್ಳ ಇವರ ಬಳಿ ಬಂದು ದೀಪಾಲಿ ಅವರ ಕೈಯಲ್ಲಿದ್ದ ಬ್ಯಾಗ್ ಎಳೆಯಲು ಯತ್ನಿಸಿದ್ದಾನೆ ಆದರೆ ದೀಪಾಲಿ ಮಾತ್ರ ತನ್ನ ಕೈಯಲ್ಲಿದ್ದ ಬ್ಯಾಗ್ ಬಿಡಲಿಲ್ಲ ಈ ವೇಳೆ ಇಬ್ಬರ ನಡುವೆ ಹೊಯ್ ಕೈ ನಡೆದು ಕಳ್ಳ ಮಹಿಳೆಯನ್ನು ಬ್ಯಾಗ್ ಸಮೇತ ಬೋಗಿಯ …
Read More »ಪತ್ನಿ, ಮಾವನಿಗೆ ಆಳಿಯನಿಂದ ಮಾರಣಾಂತಿಕ ಹಲ್ಲೆ!!
ವರದಕ್ಷಿಣೆ ತರದಿದ್ದಕ್ಕೆ ಹೆಂಡತಿ ಹಾಗೂ ಮಾವನಿಗೆ ನಡು ಬೀದಿಯಲ್ಲೇ ಅಳಿಯ ಮತ್ತು ಆತನ ಕುಟುಂಬಸ್ಥರು ಹಲ್ಲೆ ನಡೆಸಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಹಲ್ಲೆಗೊಳಗಾದವರನ್ನು ಶ್ರೇಯಾ, ಅವರ ತಂದೆ ವಿರೂಪಾಕ್ಷ ಮುಸ್ಕೆ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ, ಗಾಯಾಳುಗಳನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
Read More »ಮನನೊಂದ ತಾಯಿ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಸಾವು!
ಕೌಟುಂಬಿಕ ಕಲಹದಿಂದ ಮನನೊಂದ ತಾಯಿ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಸಾವಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳ ಗ್ರಾಮದಲ್ಲಿ ನಡೆದಿದೆ. ಬಾಧಗಾನಹಳ್ಳಿ ಗ್ರಾಮದ ಲಾವಣ್ಯ (30) ನಿಹಾರಿಕಾ (10) ನೇಹಾ (6) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.ಮೃತದೇಹಗಳನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಮೃತ ಲಾವಣ್ಯ ನಿನ್ನೆ ಪತಿ ಜಯಣ್ಣನ ಜೊತೆ ಜಗಳವಾಡಿದ್ದು, ಚೆನ್ನಾಗಿ ದುಡಿ, ಏರ್ಪೋರ್ಟ್ಗೆ ಡ್ರೈವರ್ ಕೆಲಸಕ್ಕೆ ಹೋಗು ಎಂದು ಒತ್ತಾಯಿಸಿದ್ದರು ಎನ್ನಲಾಗಿದೆ.
Read More »ವೇಗವಾಗಿ ಬಂದ ಬೈಕ್ ಗೋಡೆಗೆ ಡಿಕ್ಕಿ, ವಿದ್ಯಾರ್ಥಿ ಸ್ಥಳದಲ್ಲೇ ಸಾವು!!
ಬುಧವಾರ ಸಂಜೆ ಆಶ್ರಿತ್ ತನ್ನ ಸ್ನೇಹಿತನೊಂದಿಗೆ 150CC ಬೈಕ್ ಅನ್ನು ಅತಿ ವೇಗದಲ್ಲಿ ಓಡಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ 21 ವರ್ಷದ MBBS ವಿದ್ಯಾರ್ಥಿ ಮೃತಪಟ್ಟ ಘಟನೆ ವಿಯೆಟ್ನಾಂನಲ್ಲಿ ನಡೆದಿದೆ.ಮೃತ ವಿದ್ಯಾರ್ಥಿಯನ್ನು ಅರ್ಷಿದ್ ಆಶ್ರಿತ್ (21) ಎಂದು ಗುರುತಿಸಲಾಗಿದ್ದು, ಎಂಬಿಬಿಎಸ್ ಮೂರನೇ ವರ್ಷದಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದೆ.
Read More »ತೆಲಂಗಾಣ : ಸೂಟ್ಕೇಸ್ನಲ್ಲಿ ಮಹಿಳೆಯ ಕೊಳೆತ ಶವ ಪತ್ತೆ!
ಬಚುಪಲ್ಲಿ ಪೊಲೀಸರು ಮೆರೂನ್ ಸೂಟ್ ಧರಿಸಿದ್ದ ಮಹಿಳೆಯ ಶವವನ್ನು ಪತ್ತೆಯಾಗಿದ್ದು, ಕೊಲೆ 10 ರಿಂದ 12 ದಿನಗಳ ಹಿಂದೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಮಹಿಳೆಯ ಗುರುತು ಇನ್ನೂ ದೃಢಪಟ್ಟಿಲ್ಲ. ಯಾರೋ ಆಕೆಯನ್ನು ಬೇರೆಡೆ ಕೊಂದು ಇಲ್ಲಿ ಶವವನ್ನು ಎಸೆದಿರುವಂತೆ ತೋರುತ್ತಿದೆ’ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ತನಿಖೆಯ ಮೇಲ್ವಿಚಾರಣೆ ಮಾಡಲು ಮತ್ತು ತಂಡಗಳಿಗೆ ಅಗತ್ಯ ಸೂಚನೆಗಳನ್ನು ಎಸಿಪಿ ಅಪರಾಧ ಸ್ಥಳಕ್ಕೆ ಭೇಟಿ ನೀಡಿದರು. ಮೃತ ಮಹಿಳೆಯ ಗುರುತು ಅಥವಾ ಆಕೆಯ ಸಾವಿನ ಸುತ್ತಲಿನ ಸಂದರ್ಭಗಳ …
Read More »ಕಲಬುರಗಿ :ನಡುರಸ್ತೆಯಲ್ಲೇ ವ್ಯಕ್ತಿಯ ಭೀಕರ ಕೊಲೆ!
ನಗರದ ಹೊರವಲಯದ ಫಿರೋಜಾಬಾದ ಬಳಿ ಹಳೇ ದ್ವೇಷ ಹಿನ್ನಲೆ ವ್ಯಕ್ತಿಯೊಬ್ಬರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ನಿಜಾಮುದ್ದೀನ್ ಬಾವರ್ಚಿ ಎಂದು ಗುರುತಿಸಲಾಗಿದೆ.ಕೊಲೆಗೆ ಹಳೇ ದ್ವೇಷವೇ ಕಾರಣ ಎನ್ನಲಾಗಿದೆ. ನಡು ರಸ್ತೆಯಲ್ಲಿ ಬರ್ಬರ ಹತ್ಯೆ ಮಾಡಿರೋ ಶಂಕೆಯಿದೆ. ಕೊಲೆಯಾದ ವ್ಯಕ್ತಿ ಸಹ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಕೆಲ ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ
Read More »ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಮಾಡಿಸಿರುವ ತಾಯಿ!!
ಮಗಳು ತನ್ನ ತಂದೆಯ ಜೊತೆ ಉಳಿದುಕೊಂಡಿದ್ದು, ಅಪರೂಪಕ್ಕೆ ತಾಯಿ ಬಳಿ ಬರುತ್ತಿದ್ದಳು.ಈ ವೇಳೆ ತಾಯಿ ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತನಿಂದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಿಸಿದ್ದಾಳೆ ಎನ್ನಲಾಗಿದೆ. ಜನವರಿಯಿಂದ ಮಾರ್ಚ್ವರೆಗೆ ಹರಿದ್ವಾರ, ಬೃಂದಾವನ ಮತ್ತು ಆಗ್ರಾದಲ್ಲಿ ಹಲವು ಬಾರಿ ಅತ್ಯಾಚಾರ ನಡೆಸಲಾಗಿದೆ ಎಂದು ಮನನೊಂದ ಮಗಳು ತನ್ನ ತಂದೆ ಬಳಿ ಹೇಳಿಕೊಂಡಿದ್ದಾಳೆ.ಕೂಡಲೇ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ತಾಯಿ ಆಕೆಯ ಪ್ರಿಯಕರ ಸುಮಿತ್ ಪತ್ವಾಲ್ …
Read More »ಅಜಾಗರುಕತೆಯಿಂದ ಮಗುಚಿದ ಲಾರಿ, ಚಾಲಕನ ಬಂಧನ!!
ಕಾಸರಗೋಡಿನ ಪಾಲಕುನ್ನಿನಲ್ಲಿ ಗುರುವಾರ ರಸ್ತೆ ವಿಭಾಜಕಕ್ಕೆ ಡಿಕ್ಕಿಯಾಗಿ ಲಾರಿ ಮಗುಚಿದೆ. ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ ಪಾರಾಗಿದ್ದಾರೆ. ಅಜಾಗರೂಕತೆಯಿಂದ ಲಾರಿ ಚಲಾಯಿಸಿದ ಆರೋಪದಲ್ಲಿ ಚಾಲಕ ಕೆ.ಇಂತಿಯಾಝ್ ಎಂಬಾತನನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.
Read More »ಮಹಿಳೆಯೊಂದಿಗೆ ಅಸಭ್ಯ ವರ್ತನೆ, ವ್ಯಕ್ತಿ ಬಂಧನ!!
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಸೊಂದರಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಆಲಪ್ಪುಳ ನಿವಾಸಿ ನಾಸರ್ (53) ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಈತನನ್ನು ಸಹಪ್ರಯಾಣಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





