ಹುಬ್ಬಳ್ಳಿ: ಮೀಟರ್ ಬಡ್ಡಿ ಕಿರುಕಳ ತಾಳಲಾರದೆ ಯುವಕ ಕಳೆದ ರಾತ್ರಿ ವಾಟ್ಸ್ ಆಫ್ ಮೆಸೇಜ್ ಮಾಡಿ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಸುನೀಲ್ ದೊಂಗಡಿ ಪ್ರಾಣ ಕಳೆದುಕೊಂಡ ಯುವಕ.
ಸ್ಥಳಕ್ಕೇ ಬಂದು ಮೋಬೈಲ್ ಚಪ್ಪಲಿ ನೋಡಿ ಕುಸಿದು ಬಿದ್ದು ಸಹೋದರ ರಾಜು ದೊಂಗಡಿ. ಆತ್ಮಹತ್ಯೆ ವಿಷಯ ತಿಳಿದು ಸ್ಥಳದಲ್ಲೇ ಸಹೋದರ ಕೊನೆಯುಸಿರು ಎಳೆದಿದ್ದಾನೆ. ವ್ಯಾಪಾರಕ್ಕೆ ಅಂತ ಬಡ್ಡಿ ಸಾಲವನ್ನು ಸುನೀಲ್ ಡೊಂಗಡಿ ಪಡೆದಿದ್ದರು. ಬಡ್ಡಿ ದಂಧೆಕೋರರ ಕಿರುಕುಳ ತಾಳಲಾರದೆ ಸ್ನೇಹಿತನಿಗೆ ಹಾಗೂ ಸಹೋದರನಿಗೆ ವಾಟ್ಸ್ ಆ್ಯಪ್ ಸಂದೇಶ ಹಾಕಿ ಸುನಿಲ್ ದೊಂಗಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





