Breaking News

BigTv News

ಮಾದಕವಸ್ತು ಮಾರಾಟ ಪ್ರಕರಣ ಇಬ್ಬರ ಬಂಧನ

ಮಂಗಳೂರಿನಲ್ಲಿ ಮಾದಕವಸ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಉರ್ವ ಹಾಗೂ ಉಳ್ಳಾಲ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೋಡಿಕಲ್ ಫಲ್ಗುಣಿ ನಗರದ ಪಂಪ್‌ಹೌಸ್ ಬಳಿ ಗಾಂಜಾ ಮಾರಾಟಕ್ಕೆ ಬಂದಿದ್ದ ಕೇರಳದ ಶಾಯಿನ್ ಸಿ. (26)ನನ್ನು ಬಂಧಿಸಿ 39 ಗ್ರಾಂ ಗಾಂಜಾ, ನಗದು, ಮೊಬೈಲ್ ಹಾಗೂ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಉಳ್ಳಾಲ ಮುಕ್ಕಚೇರಿಯ ಸೀ ಗ್ರೌಂಡ್ ಬಳಿ ಎಂಡಿಎಂಎ ಮಾರಾಟಕ್ಕೆ ಬಂದಿದ್ದ ನಿಜಾಮುದ್ದೀನ್ ಫೈರೋಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ₹50 …

Read More »

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೋಟ್ಯಂತರ ರೂ. ಹಗರಣ : ‘ವಾರ್ತಾಭಾರತಿ’ ವರದಿಯ ಬೆನ್ನಲ್ಲೇ ಪ್ರಮುಖ ಆರೋಪಿ ರವಿಂದ್ರಕುಮಾರ ಬಂಧನ

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರವೀಂದ್ರಕುಮಾರ ಬೇವಿನಾಳ, ಅವರ ಪತ್ನಿ ರಮಾ ಹಾಗೂ ಸಹೋದರ ಅನಿಲ್‌ಕುಮಾರ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಿವೇಶನ ನೀಡುವುದಾಗಿ ಹೇಳಿ, ಆಯುಕ್ತರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಇವರ ಮೇಲಿದೆ. ರವೀಂದ್ರಕುಮಾರ ಪ್ರಾಧಿಕಾರದಲ್ಲಿ ದಿನಗೂಲಿ ಲೆಕ್ಕಾಧಿಕಾರಿಯಾಗಿ ಹಾಗೂ ಇಎಸ್‌ಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸಾರ್ವಜನಿಕರಿಂದ ಸಂಗ್ರಹಿಸಿದ ಹಣ …

Read More »

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ತಂದೆ ವಿರುದ್ಧ ಪೋಕ್ಸೋ ದಾಖಲು

ಯಾದಗಿರಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಆಕೆಯ ತಂದೆ ಹಾಗೂ ಸಂಬಂಧಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮಕ್ಕಳ ಆರೈಕೆ ಕೇಂದ್ರದಲ್ಲಿದ್ದ ಬಾಲಕಿ ಕೌನ್ಸೆಲಿಂಗ್ ವೇಳೆ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಹೇಳಿಕೆ ನೀಡಿದ್ದಾಳೆ. ಚಿಕ್ಕವಳಿದ್ದಾಗ ತಂದೆ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿ ದೌರ್ಜನ್ಯ ನಡೆಸಿದ್ದಾಗಿ ಬಾಲಕಿ ಆರೋಪಿಸಿದ್ದಾಳೆ. ಬಳಿಕ ಈ ವಿಚಾರ ತಾಯಿಗೆ ತಿಳಿದ ನಂತರ ಬಾಲಕಿ ಹಾಗೂ ಆಕೆಯ ಅಕ್ಕನನ್ನು ಸಂಬಂಧಿಕರ ಮನೆಯಲ್ಲಿ …

Read More »

ದಿಲ್ಲಿ | ದಲಿತ ಯುವಕನ ಲಾಕಪ್ ಡೆತ್ : 6 ಪೊಲೀಸರ ವಿರುದ್ಧ FIR ದಾಖಲು

ಹೊಸದಿಲ್ಲಿ: ತಮಿಳುನಾಡಿನ ಶಿವಗಂಗಾ ಜಿಲ್ಲೆಯ 26 ವರ್ಷದ ದಲಿತ ಯುವಕ ಆಕಾಶ್ ಡೆಲಿಸನ್ ಕಸ್ಟಡಿ ಸಾವಿನ ಪ್ರಕರಣದಲ್ಲಿ ಆರು ಪೊಲೀಸರ ವಿರುದ್ಧ ಸಿಬಿ-ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆಕಾಶ್‌ ಪರಿಶಿಷ್ಟ ಜಾತಿಯ ದೇವೇಂದ್ರ ಕುಲ ವೆಳ್ಳಾಲರ್ ಸಮುದಾಯಕ್ಕೆ ಸೇರಿದವನೆಂದು ಪೊಲೀಸರಿಗೆ ತಿಳಿದಿದ್ದರೂ, ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಮಾರ್ಚ್ 6ರಂದು ಆಕಾಶ್ ಹಾಗೂ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದರು. ಮಾರ್ಚ್ 8ರಂದು …

Read More »

ಮನೆಗಳಲ್ಲಿ ಕಳ್ಳತನ, ಇಬ್ಬರ ಬಂಧನ

ಉಡುಪಿಯಲ್ಲಿ ಬಹುದಿನಗಳಿಂದ ಬೀಗ ಹಾಕಿರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅರುಣ್‌ ಎಸ್‌. ಆಚಾರಿ (43) ಮತ್ತು ಕೌಶಿಕ್‌ ಪಿ. ಆಚಾರ್ಯ (19) ಬಂಧಿತ ಆರೋಪಿಗಳು. ಆರೋಪಿಗಳು 5 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ₹23.56 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ, ನಗದು, ಮೊಬೈಲ್‌, ಬೈಕ್‌ ಹಾಗೂ ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿದೇಶಿ ಕರೆನ್ಸಿ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳು ಆರೋಪಿಗಳಿಂದ ಪತ್ತೆಯಾಗಿವೆ. ಖಚಿತ …

Read More »

ಈದ್‌ ಮೆರವಣಿಗೆ ವೇಳೆ ಹಿಂದೂ ಯುವಕನ ಮೇಲೆ ಹಲ್ಲೆ : 3 ಆರೋಪಿಗಳ ಬಂಧನ

ಬೆಂಗಳೂರು ಬಸವನಗುಡಿಯ ಕೆಆರ್‌ ರಸ್ತೆಯಲ್ಲಿ ಈದ್‌-ಮಿಲಾದ್‌ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಮುರಳಿ ಎಂಬ ಯುವಕನ ಮೇಲೆ ಆಯುಧದಿಂದ ಹಲ್ಲೆ ಮಾಡಲಾಗಿದೆ. ಗಾಯಗೊಂಡಿರುವ ಮುರಳಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂರು ಎಫ್‌ಐಆರ್‌ ದಾಖಲಾಗಿದ್ದು, ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪುನೀತ್‌ ಕೆರೆಹಳ್ಳಿ, ಗೋಪಿಗೌಡ ಹಾಗೂ ವಿನೋದ್‌ ನಾಯಕ್‌ ಮತ್ತು ಅಕಲ್‌ ಪಾಷಾ, ಅಬೂಬಕರ್‌ ಸಿದ್ಧಿಕ್‌, ಸೈಯ್ಯದ್‌ ಅನಸ್‌ ಬಂಧಿತರು. ಘಟನಾ …

Read More »

ಮಲಗಿದ್ದ ಪತ್ನಿಯ ಕುತ್ತಿಗೆ ಹಿಚುಕಿ ಜೀವ ತೆಗೆದ.. ‘ಹೃದಯಾಘಾತ’ ಎಂದು ಕತೆ ಕಟ್ಟಿದ್ದ ಪತಿ ಲಾಕ್ ಆಗಿದ್ದೇಗೆ?

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ದೊಡ್ಡಗುಂಡ ಗ್ರಾಮದಲ್ಲಿ ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಪತಿ ಗಣಪತಿ ಮಂಜುನಾಥ ನಾಯ್ಕನನ್ನು ಪೊಲೀಸರು ಬಂಧಿಸಿದ್ದಾರೆ. ಮೃತಳನ್ನು ಮಂಗಲಾ ಗಣಪತಿ ನಾಯ್ಕ (27) ಎಂದು ಗುರುತಿಸಲಾಗಿದೆ. ಮದ್ಯದ ಮತ್ತಿನಲ್ಲಿ ಮನೆಗೆ ಬಂದ ಗಣಪತಿ, ಮಲಗಿದ್ದ ಪತ್ನಿಯ ಕುತ್ತಿಗೆ ಹಿಚುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಪತ್ನಿಗೆ ಹೃದಯಾಘಾತವಾಗಿ ಸಾವಾಗಿದೆ ಎಂದು ನಾಟಕವಾಡಿದ್ದ. ಮಂಗಲಾಳ ಸಹೋದರಿಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಪೊಲೀಸರಿಗೆ …

Read More »

ಗದಗದಲ್ಲಿ ಅನೈತಿಕ ಸಂಬಂಧಕ್ಕೆ ಬಿತ್ತು ಹೆಣ : ಮಹಿಳೆ ಕುಟುಂಬಸ್ಥರಿಂದ ಯುವಕನ ಬರ್ಬರ ಹತ್ಯೆ!

ಗದಗ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಲಕ್ಷ್ಮೇಶ್ವರ ತಾಲೂಕಿನ ಪುಟ್ಟಗಾಂವ್ ಬಡ್ನಿ ಗ್ರಾಮದಲ್ಲಿ ನಡೆದಿದೆ. ಈರಣ್ಣ ಅಗಸಿಬಾಗಿಲು (35) ಕೊಲೆಯಾದ ಯುವಕ. ರೇಣುಕಾ ಎಂಬುವರ ಜೊತೆ ಈರಣ್ಣ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಕುಟುಂಬಸ್ಥರು ಹಲವು ಬಾರಿ ಬುದ್ಧಿವಾದ ಹೇಳಿದ್ದರೂ, ಈರಣ್ಣ ಮತ್ತೆ ರೇಣುಕಾಗೆ ಸನ್ನೆ ಮಾಡಿದ್ದರಿಂದ ಆಕೆಯ ಪತಿ ಹಾಗೂ ಕುಟುಂಬಸ್ಥರು ಆತನ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆ …

Read More »

ಮಂಗಳೂರು: ಸ್ವಂತ ತಂಗಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆಗೈದಿದ್ದ ಅಣ್ಣನಿಗೆ 4 ವರ್ಷ ಜೈಲು ಶಿಕ್ಷೆ

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಸ್ವಂತ ತಂಗಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದ ಸ್ಯಾಮ್ಸನ್ ಫ್ರಾನ್ಸಿಸ್ ಕುಟಿನ್ಹಾಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 2019ರ ಅಕ್ಟೋಬರ್ 8ರಂದು ಮೊಬೈಲ್ ಬಳಸುವ ವಿಚಾರಕ್ಕೆ ತಂಗಿ ಫಿಯೋನಾ ಸ್ವೀಡಲ್ ಕುಟಿನ್ಹಾ ಜೊತೆ ಜಗಳವಾಡಿದ್ದ ಸ್ಯಾಮ್ಸನ್, ಸುತ್ತಿಗೆಯಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿದ್ದ. ಬಳಿಕ ಮೃತದೇಹವನ್ನು ಮನೆಯ ಹಿಂಭಾಗದ ಪೊದೆಯಲ್ಲಿ ಬಚ್ಚಿಟ್ಟಿದ್ದ. ಐಪಿಸಿ 304(II) ಅಡಿ 4 …

Read More »

ಬೆಂಗಳೂರಲ್ಲಿ ದೂರು ನೀಡಲು ಬಂದ ವ್ಯಕ್ತಿಯಿಂದ ಗರ್ಭಿಣಿ ಪೊಲೀಸ್ ಸಿಬ್ಬಂದಿ ಮೇಲೆ ರಾಡ್‌ನಿಂದ ಹಲ್ಲೆ : ಆರೋಪಿ ಅರೆಸ್ಟ್!

ಬೆಂಗಳೂರು: ಮೆಜೆಸ್ಟಿಕ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಗರ್ಭಿಣಿ ಪಿಸಿ ಶಿಲ್ಪಾ ಅವರ ಮೇಲೆ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ಚೆನ್ನೈ ಮೂಲದ ಗಜೇಂದ್ರ ಮೊಬೈಲ್ ಕಳೆದುಹೋದ ಬಗ್ಗೆ ದೂರು ನೀಡಲು ಬಂದಿದ್ದ. ಹಿರಿಯ ಅಧಿಕಾರಿಗಳು ಇಲ್ಲದ ಕಾರಣ ಬೆಳಿಗ್ಗೆ ಬರುವಂತೆ ಶಿಲ್ಪಾ ತಿಳಿಸಿದ್ದಕ್ಕೆ ಕೋಪಗೊಂಡು, ಬಳಿಕ ಠಾಣೆಗೆ ಮರಳಿ ಬಂದು ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಶಿಲ್ಪಾ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ …

Read More »