Breaking News

ಮುಡಾ ಹಗರಣದಲ್ಲಿ ಯಾರು ಸಾಚಾ ಇಲ್ಲ: ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ್

ಹುಬ್ಬಳ್ಳಿ: ಮುಡಾ ಹಗರಣದಲ್ಲಿ ಯಾರು ಸಾಚಾ ಇಲ್ಲ ಮೂಡಾಗೆ ಸಂಬಂಧಿಸಿ ಇಡಿ 300 ಕೋಟಿ ಆಸ್ತಿ ಅಟ್ಯಾಚ್ ಮಾಡಿದೆ ಆದರೆ ಇದರಲ್ಲಿ ಸಿದ್ದರಾಮಯ್ಯ ಅವರ ಹೆಸರು ಮಾತ್ರ ಹೈಲೈಟ್ ಆಗ್ತಿದೆ ಈ ವಿಚಾರದಲ್ಲಿ ಸಿದ್ದರಾಮಯ್ಯ ತಪ್ಪು ಮಾಡ್ತಿದ್ದಾರೆ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ್ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮೂಡಾಗೆ ಸಂಬಂಧಿಸಿ ಇಡಿ 300 ಕೋಟಿ ಆಸ್ತಿ ಅಟ್ಯಾಚ್ ಮಾಡಿದೆ ಆದರೆ ಇದರಲ್ಲಿ ಸಿದ್ದರಾಮಯ್ಯ ಅವರ ಹೆಸರು ಮಾತ್ರ ಹೈಲೈಟ್ ಆಗ್ತಿದೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ತಪ್ಪು ಮಾಡ್ತಿದ್ದಾರೆ. ಮುಡಾ ಹಗರಣದಲ್ಲಿ ವಿಜಯೇಂದ್ರ, ಜಿ ಟಿ ದೇವೇಗೌಡ ಮೊದಲಾದವರು ಶಾಮೀಲಾಗಿದ್ದಾರೆ ಇದರ ವಿರುದ್ಧವು ತನಿಖೆ ನಡೆಯಬೇಕು ಎಂದರು.

ಎಸ್. ಸಿ., ಎಸ್.ಟಿ. ಗೆ ಮೀಸಲಿಟ್ಟ ಹಣ ದುರ್ಬಳಕೆ ಆಗಿದೆ 185 ಕೋಟಿ ವಾಲ್ಮೀಕಿ ಹಗರಣವನ್ನು ಸಿಎಂ ಒಪ್ಪಿಕೊಳ್ತಾರೆ. ಕೇಂದ್ರ ಸರ್ಕಾರದ ಯಾರನ್ನು ಟಾರ್ಗೆಟ್ ಮಾಡಿಲ್ಲ ಆದರೆ ರಾಜ್ಯದಲ್ಲಿ ನನ್ನ ಮತ್ತು ಸಿಟಿ ರವಿ ಟಾರ್ಗೆಟ್ ಮಾಡಿದ್ದಾರೆ. ಹಿಂದೂಗಳ ಪರವಾಗಿ ಮಾತನಾಡಿದ್ರೆ ಕೇಸ್ ಹಾಕುತ್ತಾರೆ. ವಿಜಯೇಂದ್ರ ಮೇಲೆ ಪ್ರಕರಣ ದಾಖಲು ಮಾಡಲ್ಲ.

ಕಾರವಾರ ಜಿಲ್ಲೆಯಲ್ಲಿ ಗರ್ಭ ಹೊತ್ತ ಗೋವಿನ ಹತ್ಯೆ ವಿಚಾರವಾಗಿ ಮಾತನಾಡಿದ ಅವರು, ಹಿಂದೂಗಳ ಭಾವನೆ ಕೇರಳಿಸಿ, ರಾಜ್ಯದ ದಂಗೆ ಏಳಿಸಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಇಷ್ಟು ಧೈರ್ಯ ಮುಸ್ಲಿಂ ಸಮುದಾಯಕ್ಕೆ ಹೇಗೆ ಬಂದಿದೆ. ಈ ಹಿಂದೆ ನಮ್ಮ ಬಿಜೆಪಿ ಅಧಿಕಾರದಲ್ಲಿ ಏನು ಮಾಡಿಲ್ಲ ನಾವು ಸಹ ಈ ವಿಚಾರದಲ್ಲಿ ತಪ್ಪು ಮಾಡಿದ್ದೇವೆ. ನಮ್ಮ ಸರ್ಕಾರದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ರೆ ಈ ರೀತಿ ಘಟನೆಗಳು ಆಗುತ್ತಿರಲಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ ತಿಳಿಸಿದ್ದಾರೆ.

Share News

About Shaikh BigTv

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *