ಕನಕಪುರ: ಹೊಸ ಮಾದರಿಯಲ್ಲಿ ಸರ್ವೆ ಕಾರ್ಯ ಆರಂಭಿಸುವ ಮೂಲಕ ಯಾವುದೇ ಗೊಂದಲ ಇಲ್ಲದೆ, ರೈತರು ತಾಲೂಕು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಬದಲಾವಣೆಯ ಪರ್ವ ಆರಂಭಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ತಾಲೂಕಿನ ದೊಡ್ಡಆಲಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ವತಿಯಿಂದ ಆಯೋಜಿಸಿದ್ದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಯೋಗಿಕವಾಗಿ ನಮ್ಮ ಹೋಬಳಿಯಿಂದ ಹೊಸ ಸರ್ವೆ ಕಾರ್ಯವನ್ನು ಪ್ರಾರಂಭಿಸಿದ್ದು, ಅಲ್ಲದೇ …
Read More »ರಾಜ್ಯದ ಪರೀಕ್ಷಾರ್ಥಿಗಳಿಗೆ ಸಿಹಿಸುದ್ದಿ: ಒಮ್ಮೆ ಸಲ್ಲಿಸುವ ದಾಖಲೆಗಳು ಇನ್ಮುಂದೆ ಎಲ್ಲ ಪರೀಕ್ಷೆಗಳಿಗೂ ಅನ್ವಯ
ಬೆಂಗಳೂರು: ರಾಜ್ಯದ ಎಲ್ಲಾ ಪರೀಕ್ಷಾರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದ್ದು, ಕೆ-ಸೆಟ್ ಪರೀಕ್ಷೆ ಸೇರಿ ಯಾವುದೇ ನೇಮಕಾತಿ ಪರೀಕ್ಷೆಗಳಿಗೆ ಒಮ್ಮೆ ಸಲ್ಲಿಸುವ ದಾಖಲೆಗಳು ಮುಂದಿನ ಎಲ್ಲಾ ಪರೀಕ್ಷೆಗಳಿಗೂ ಅನ್ವಯವಾಗುವಂತೆ ತಂತ್ರಾಂಶ ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಚ್ಚುವರಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಕೆ – ಸೆಟ್ 2024 ಅರ್ಹ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದ …
Read More »ಜಮ್ಮು ಕಾಶ್ಮೀರದಲ್ಲಿ ಝಡ್ ಮೋರ್ಹ್ ಸುರಂಗ ಮಾರ್ಗವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸೋನಾಮಾರ್ಗ್ಗೆ ವರ್ಷಪೂರ್ತಿ ಸಂಪರ್ಕವನ್ನು ಕಲ್ಪಿಸುವ ಝಡ್-ಮೋರ್ಹ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಜಮ್ಮು ಮತ್ತು ಕಾಶ್ಮೀರದ ಗಂಡರ್ಬಾಲ್ ಜಿಲ್ಲೆಯಲ್ಲಿ ಇಂದು 6.5 ಕಿ.ಮೀ ಉದ್ದದ ಝಡ್-ಮೋರ್ಹ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಇದು ಸೋನಾಮಾರ್ಗ್ ಪ್ರವಾಸಿ ರೆಸಾರ್ಟ್ಗೆ ವರ್ಷಪೂರ್ತಿ ಪ್ರವೇಶವನ್ನು ಒದಗಿಸುತ್ತದೆ. ಹಾಗೇ, ಈ ಹಿಂದೆ ಉಗ್ರರ ದಾಳಿಗೆ ಬಲಿಯಾದವರಿಗೆ ಗೌರವ ಸಲ್ಲಿಸಿದರು. ಸುರಂಗದ ಉದ್ಘಾಟನೆಯ ನಂತರ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ …
Read More »ರಾಯಚೂರು: ಭತ್ತ, ಜೋಳ ಖರೀದಿ ಕೇಂದ್ರ ತೆರೆಯದ ಕಾರಣ ಜಿಪಿಎಸ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವ ರೈತರು
ರಾಯಚೂರು: ಜಿಲ್ಲೆಯಲ್ಲಿ ಭತ್ತ ಹಾಗೂ ಜೋಳ ಚೆನ್ನಾಗಿ ಬೆಳೆದಿದೆ. ಸಕಾಲದಲ್ಲಿ ಕೆಲವು ಕಡೆ ಖರೀದಿ ಕೇಂದ್ರಗಳನ್ನು ತೆರೆಯದ ಕಾರಣ ಹಾಗೂ ಜೆಪಿಎಸ್ ಸಮಸ್ಯೆಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಶೇಕಡ 60ರಷ್ಟು ರೈತರು ಭತ್ತ ಮಾರಾಟ ಮಾಡಿದ್ದಾರೆ. ಅವರು ಮಾರಾಟ ಮಾಡಿದ ವೇಳೆಯಲ್ಲಿ ಬೆಲೆ ಕಡಿಮೆ ಇತ್ತು. ಜಿಲ್ಲೆಯಲ್ಲಿ ಭತ್ತದ ಬೆಲೆ ₹ 2300 ಇದ್ದಾಗ ತೆಲಂಗಾಣ ಸರ್ಕಾರ ಅಲ್ಲಿನ ರೈತರಿಗೆ ₹ 500 ಪ್ರೋತ್ಸಾಹಧನ ನೀಡಿ ಖರೀದಿಸಿತು. ಇಲ್ಲಿಯ …
Read More »ರಾಜ್ಯದಲ್ಲಿ ಜಿಲ್ಲಾ, ತಾಲೂಕು ಪಂಚಾಯತಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ನಿರ್ಧಾರ
ಬೆಳಗಾವಿ: ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಬಾಕಿ ಇದೆ. ಈ ಚುನಾವಣೆಗೆ ಈಗ ಮುಹೂರ್ತ ಫಿಕ್ಸ್ ಆದಂತೆ ಆಗಿದೆ. ಜಿಲ್ಲಾ, ತಾಲ್ಲೂಕು ಪಂಚಾಯ್ತಿಗೆ ಏಪ್ರಿಲ್ ಒಳಗೆ, ಸ್ಥಳೀಯ ಸಂಸ್ಥೆಗಳಿಗೆ ಏಪ್ರಿಲ್, ಮೇ ಒಳಗೆ ಚುನಾವಣೆ ನಡೆಯೋದು ಖಚಿತವಾಗಿದೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಿರುವಂತ ರಾಜ್ಯ ಚುನಾವಣಾ ಆಯುಕ್ತ ಸಂಗ್ರೇಶಿ ಅವರು, ಚುನಾವಣಾ ಆಯೋಗದಿಂದ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ತಯಾರಿ, ಸಿದ್ಧತೆ …
Read More »ಹಗರಿಬೊಮ್ಮನಹಳ್ಳಿ: ಅಭಿವೃದ್ದಿ ಕಾಣದ ರಸ್ತೆ: ಜೀವ ಹಿಡಿದುಕೊಂಡೆ ಜನಸಾಮಾನ್ಯರು ಸಂಚಾರ
ಹಗರಿಬೊಮ್ಮನಹಳ್ಳಿ: ಪಟ್ಟಣದ ಮೂಲಕ ಹಾದುಹೋಗಿರುವ ಬೆಂಗಳೂರು -ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ -215 ತುಂಬೆಲ್ಲಾ ಆಳವಾದ ಕುಣಿಗಳೇ ತುಂಬಿವೆ. ಇಲ್ಲಿ ಸಂಚರಿಸಿದರೆ ಅಪಘಾತ ಮಾತ್ರವಲ್ಲ ದೂಳು ಉಚಿತ, ರೋಗ ಖಚಿತ ಎನ್ನುವಂತಾಗಿದೆ. ಬನ್ನಿಕಲ್ಲು ಗ್ರಾಮದಿಂದ ಆರಂಭವಾಗಿರುವ ಈ ಹೆದ್ದಾರಿ ತಾಲ್ಲೂಕು ಕೇಂದ್ರದಿಂದ ರಾಷ್ಟ್ರೀಯ ಹೆದ್ದಾರಿ ತಲುಪಲು 20ಕಿಲೋ ಮೀಟರ್ ಅಂತರ ಇದೆ. ಪಟ್ಟಣದ ವಾಲ್ಮೀಕಿ ವೃತ್ತದಿಂದ ಕೆಚ್ಚಿನಬಂಡಿ, ಹಂಪಾಪಟ್ಟಣ ಕ್ರಾಸ್, ರಾಯರಾಳ ತಾಂಡಾ, ಗುಳೇದಾಳು ಕ್ರಾಸ್, …
Read More »ಛತ್ತೀಸಗಢದಲ್ಲಿ ಅದಾನಿ ಗ್ರೂಪ್ ನಿಂದ 65,000 ಕೋಟಿ ಹೂಡಿಕೆ: ಸರಕಾರ
ರಾಯ್ಪುರ: ಛತ್ತೀಸ್ಗಢದ ವಿದ್ಯುತ್ ಮತ್ತು ಸಿಮೆಂಟ್ ಉದ್ದಿಮೆ ವಲಯದಲ್ಲಿ 65,000 ಕೋಟಿ ರೂ. ಹೂಡಿಕೆ ಮಾಡಲಿದ್ದಾರೆ. ಸಿಎಂ ವಿಷ್ಣು ದೇವ್ ಸಾಯಿ ಜತೆಗೆ ಉದ್ಯಮಿ ಗೌತಮ್ ಅದಾನಿ ಮಾತುಕತೆ ನಡೆಸಿದ ಬಳಿಕ ಈ ಬಗ್ಗೆ ಘೋಷಣೆ ಮಾಡಲಾಗಿದೆ. ರಾಯ್ಪುರ, ಕೊರ್ಬಾ, ರಾಯ ಗಢದಲ್ಲಿ 60,000 ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಸ್ಥಾವರ ಸ್ಥಾಪಿಸಲಾಗುತ್ತದೆ. 5000 ಕೋಟಿ ರೂ. ವೆಚ್ಚದಲ್ಲಿ ಸಿಮೆಂಟ್ ಘಟಕಗಳನ್ನು ಮೇಲ್ದರ್ಜೆಗೆ ಏರಿಸಲು ಹೂಡಿಕೆ ಮಾಡಲು ಅದಾನಿ ಒಪ್ಪಿಕೊಂಡಿದ್ದಾರೆ ಎಂದು ಸರಕಾರ …
Read More »ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು 86ರ ಗಡಿ ದಾಟಿದ ರೂಪಾಯಿ ಮೌಲ್ಯ
ನವದೆಹಲಿ: ಭಾರತದ ರುಪಾಯಿ ಕರೆನ್ಸಿ ಮೌಲ್ಯ ಕುಸಿಯುವುದು ಮುಂದುವರಿಯುತ್ತಲೇ ಇದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು ರುಪಾಯಿ ಮೌಲ್ಯ 86ರ ಗಡಿ ದಾಟಿದೆ. ಶುಕ್ರವಾರ ಸಂಜೆ 85.9650 ಯೊಂದಿಗೆ ಮುಕ್ತಾಯಗೊಂಡಿದ್ದ ರುಪಾಯಿ, ಇಂದು ಸೋಮವಾರ 86.2050 ಮಟ್ಟದೊಂದಿಗೆ ಆರಂಭಗೊಂಡಿದೆ. ಡಾಲರ್ ಎದುರು ರುಪಾಯಿ ಮೊದಲ ಬಾರಿಗೆ 86ರ ಗಡಿ ದಾಟಿದೆ. ನಾನಾ ಕಾರಣಗಳಿಂದ ಡಾಲರ್ ಎದುರು ರುಪಾಯಿ ಉಸಿರುಗಟ್ಟುತ್ತಿದೆ. ಹಿಂದಿನ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಡಾಲರ್ …
Read More »ಜಮ್ಮು ಕಾಶ್ಮೀರದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಝಡ್ ಮೋರ್ಹ್ ಸುರಂಗ ಮಾರ್ಗಕ್ಕೆ ಚಾಲನೆ
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಝಡ್ ಮೋರ್ಹ್ ಸುರಂಗ ಮಾರ್ಗಕ್ಕೆ ಇಂದು ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಗಂಡರ್ಬಾಲ್ ಜಿಲ್ಲೆಯಲ್ಲಿ ಬಹು ನಿರೀಕ್ಷಿತ ಝಡ್- ಮೋರ್ಹ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಲಿದ್ದಾರೆ. ಈ ಯೋಜನೆಯು ಸೋನಾಮಾರ್ಗ್ ಪಟ್ಟಣಕ್ಕೆ ವರ್ಷಪೂರ್ತಿ ಸಂಪರ್ಕವನ್ನು ಕಲ್ಪಿಸಲಿದೆ. ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ, ಸುರಂಗವನ್ನು ಪರಿಶೀಲಿಸಿದ್ದಾರೆ ಮತ್ತು ಹೆಗ್ಗುರುತು …
Read More »ಸುಖ ಸಂಸಾರಕ್ಕೆ ಇಬ್ಬರು ಮಕ್ಕಳು ಇದ್ದರೇ ಸಾಕು: ಸಿಎಂ ಸಿದ್ದರಾಮಯ್ಯ ಸಲಹೆ
ಹೊಸಪೇಟೆ: ಜನಸಂಖ್ಯೆಯಲ್ಲಿ ಭಾರತ ಚೀನಾ ದೇಶವನ್ನು ಹಿಂದಿಕ್ಕಿದ್ದು, ದೇಶದ ಜನಸಂಖ್ಯೆ 140 ಕೋಟಿ ತಲುಪಿದೆ. ಹೀಗಾಗಿ ಆರತಿಗೊಂದು, ಕೀರ್ತಿಗೊಂದು ಎರಡು ಮಕ್ಕಳಿಗೆ ಜನ್ಮ ನೀಡಿ ಸಾಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಭಾನುವಾರ ಮಾಜಿ ಶಾಸಕ ಸಿರಾಜ್ ಶೇಖ್ ಅವರ ಪುತ್ರನ ಆರತಕ್ಷತೆ ಸಮಾರಂಭದಲ್ಲಿ ಆಯೋಜಿಸಿದ್ದ ಸರ್ವ ಧರ್ಮಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಸ್ವಾಮೀಜಿಯೊಬ್ಬರು ಹೆಚ್ಚು ಹೆಚ್ಚು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





