ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೆ ಮುನ್ನಲೆಗೆ ಬಂದಿದೆ ಮೇಯರ್ ಗೌನ್ ಚರ್ಚೆ. ಅಭಿವೃದ್ಧಿಗಿಂತ ಮೇಯರ್ ಗೌನ್ ಬಗ್ಗೆ ಚರ್ಚೆ ಜೋರಾಗಿದ್ದು, ಸ್ವಪಕ್ಷದಲ್ಲಿಯೇ ಮೇಯರ್ ಗೌನ್ ವಿಷಯದಲ್ಲಿ ದ್ವಂದ್ವ ನಿಲುವು ವ್ಯಕ್ತವಾಗಿದೆ..

ಈ ಹಿಂದೆ ಮೇಯರ್ ಆಗಿದ್ದ ಈರೇಶ ಅಂಚಟಗೇರಿ ಮತ್ತು ವೀಣಾ ಭಾರದ್ವಾಡ ಗೌನ್ ಹಾಕಿಕೊಳ್ಳಲು ನಿರಾಕರಣೆ ಮಾಡಿದ್ದರು. ಗೌನ ಬೇಡ ಎಂದು ಸರ್ಕಾರದ ಮೊರೆ ಹೋಗಿದ್ದ ಅವಾಗಿನ ಮೇಯರ್ ಈರೇಶ ಅಂಚಟಗೇರಿ, ಮೇಯರ್ ಗೌನ್ ಹಾಕಿಕೊಳ್ಳುವುದು ಬ್ರಿಟಿಷ್ ಸಂಸ್ಕೃತಿ, ನಾನು ಗೌನ್ ಹಾಕಿಕೊಳ್ಳಲ್ಲ ಎಂದಿದ್ದರು. ಈರೇಶ ಅಂಚಟಗೇರಿಯಂತೆ ನಾನು ಗೌನ್ ಹಾಕಲ್ಲ ಎಂದಿದ್ದ ವೀಣಾ ಭಾರದ್ವಾಡ. ಆದ್ರೆ ಗೌನ್ ಹಾಕಿಯೇ ಸಿದ್ದ ಎನ್ನುತ್ತಿದ್ದಾರೆ

ಹುಬ್ಬಳ್ಳಿ-ಧಾರವಾಡ ನೂತನ ಮೇಯರ್. ಅದೇ ಬಿಜೆಪಿ ಪಕ್ಷದ ಮೇಯರ್‌ನಲ್ಲಿ ದ್ವಂದ್ವ ನಿಲುವು ವ್ಯಕ್ತವಾಗಿದೆ.ಇನ್ನೂ ಗೌನ್ ಶಿಷ್ಟಾಚಾರವನ್ನೇ ಗಾಳಿಗೆ ತೂರುತ್ತಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಆಯ್ಕೆ ಆಗುತ್ತಿರುವ ಮೇಯರ್‌ಗಳು, ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ನಿಯಮಗಳ ಬದಲಾವಣೆ ಮಾಡುತ್ತಿದ್ದಾರೆ. ಒಂದೇ ಪಕ್ಷದ ಮೇಯರ್‌ಗಳಿಂದ ಗೌನ್ ವಿಷಯದಲ್ಲಿ ಹುಚ್ಚರಾಟ ನಡೆಸಿದ್ದಾರೆ. ಒಬ್ಬೊಬ್ಬ ಮೇಯರ್‌ನಿಂದ ಒಂದೊಂದು ರೂಲ್ಸ್. ಈ ಹಿಂದೆ ಇಬ್ಬರು ಮೇಯರ್ ಗೌನ್ ಹಾಕಿಕೊಳ್ಳಲ್ಲ ಎಂದಿದ್ದರು, ಆದ್ರೆ ಹೊಸ ಗೌನ್‌ನ್ನೇ ಸಿದ್ದಪಡಿಸಿದ್ದಾರೆ.ಈ ಹಿಂದೆಯೂ

ಹುಬ್ಬಳ್ಳಿ-ಧಾರವಾಡದಲ್ಲಿ ಅಭಿವೃದ್ಧಿಗಿಂತ ಹೆಚ್ಚು ಸದ್ದು ಮಾಡಿದ್ದ ಗೌನ್, ಕಳೆದ ಎರಡೂ ವರ್ಷಗಳ ಹಿಂದೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯನ್ನು ಸಹ ಗೌನ್ ನುಂಗಿ ಹಾಕಿತ್ತು. ಗೌನ್ ಹಾಕಿಕೊಳ್ಳವುದಿಲ್ಲ ಎಂದು ಪಟ್ಟು ಹಿಡಿದಿದ್ದ ಮೇಯರ್ ಈರೇಶ ಅಂಚಟಗೇರಿ, ಗೌನ್ ಹಾಕಿಕೊಳ್ಳುವುದು ಬ್ರಿಟಿಷ್ ಪದ್ದತಿ, ಅದನ್ನ ನಾನು ಅನುಸರಿಸುವದಿಲ್ಲ ಎಂದಿದ್ದ ಅಂದಿನ ಮೇಯರ್, ಅಲ್ಲದೇ ಅವಳಿ ನಗರಕ್ಕೆ ಗಣ್ಯರು ಭೇಟಿ ನೀಡಿದಾಗ ಗೌನ ಹಾಕಿಕೊಳ್ಳದೆ ಸ್ವಾಗತ ಕೋರಿದ್ದರು. ಆದ್ರೆ ನೂತನ ಮೇಯರ್ ಗೌನ್‌ಗೆ ತನ್ನದೇ ಆದ ಶಿಷ್ಟಾಚಾರ ಇದೆ. ಇದನ್ನ ಎಲ್ಲರೂ ಹಾಕಿಕೊಳ್ಳಲು ಬರುವುದಿಲ್ಲ, ಮೇಯರ್‌ಗಳು ಮಾತ್ರ ಗೌನ್ ಹಾಕಲು ಸಾದ್ಯ. ಹೀಗಾಗಿ ಗೌನ ಹಾಕುತ್ತೆನೆ ಎನ್ನುತ್ತಿದ್ದಾರೆ ನೂತನ ಮೇಯರ್ ರಾಮಣ್ಣ ಬಡಿಗೇರ.
bigtvnews | Hubli Dharwad News | Kannada News | Karnataka News Hubli News | News In Hubli | Local news

