Breaking News

Shaikh BigTv

ವಕೀಲರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದನ್ನು ಖಂಡಿಸಿ ಪ್ರತಿಭಟನೆ

ಧಾರವಾಡ: ತಮಿಳುನಾಡಿನ ಹೊಸೂರು ಕೋರ್ಟ್ ಆವರಣದಲ್ಲೇ ವಕೀಲರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದನ್ನು ಖಂಡಿಸಿ ಧಾರವಾಡ ವಕೀಲರ ಸಂಘದ ಸದಸ್ಯರೂ ಕೂಡ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಧಾರವಾಡದ ಜಿಲ್ಲಾ ನ್ಯಾಯಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದ ವಕೀಲರು, ಜ್ಯುಬಿಲಿ ವೃತ್ತವನ್ನು ಕೆಲ ಕಾಲ ಬಂದ್ ಮಾಡಿ ಪ್ರತಿಭಟಿಸಿದರು. ನಂತರ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ …

Read More »

ನ. 23ರಂದು “ಅಂಬಾ” ದೇವಿಯ ವರ್ಣನೆಯಿಂದ ಕೂಡಿದ ನೃತ್ಯ ವೈಭವ

ಹುಬ್ಬಳ್ಳಿ: ಮಯೂರ ನೃತ್ಯ ಅಕ್ಯಾಡೆಮಿ ವತಿಯಿಂದ “ಅಂಬಾ” ದೇವಿಯ ವರ್ಣನೆಯಿಂದ ಕೂಡಿದ ನೃತ್ಯ ವೈಭವವನ್ನು ಇದೇ ನವೆಂಬರ್ 23 ಶನಿವಾರದಂದು ಮಧ್ಯಾಹ್ನ 3:30 ಕ್ಕೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿದುಷಿ ಹೇಮಾ ವಾಘಮೋಡೆ ಹೇಳಿದರು. “ಅಂಬಾ” ಎಂಬ ದೇವಿಯ ವರ್ಣನೆಯಿಂದ ಕೂಡಿದ ಈ ನೃತ್ಯ ವೈಭವದಲ್ಲಿ ಸುಮಾರು 500 ಮಕ್ಕಳು ಭಾಗವಹಿಸುತ್ತಿದ್ದು, 40 ದೇವತಾ ಸ್ತುತಿಗಳನ್ನು ಹಾಗೂ ಅಂಬಾ “ಎಂಬ” ನೃತ್ಯರೂಪಕವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ …

Read More »

ಇಂದು ಚಾಕಲಬ್ಬಿ ಗ್ರಾಮದಲ್ಲಿ ಖಾಲಿ ಗಾಡಿ ಓಡಿಸುವ ಸ್ಪರ್ಧೆ

ಕುಂದಗೋಳ : ಚಾಕಲಬ್ಬಿ ಗ್ರಾಮದಲ್ಲಿ ಎರಡನೇ ಬಾರಿ ಖಾಲಿ ಗಾಡಾ ಓಡಿಸುವ ಭಾರಿ ಷರತ್ತು ನಾಳೆ ನವೆಂಬರ್ 21 ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಖಾಲಿ ಗಾಡಾ ಓಡಿಸುವ ಸ್ಪರ್ಧೆ ಸರ್ಕಾರಿ ಶಾಲೆಯ ಹಿಂಭಾಗದಲ್ಲಿ ಪೋಲಿಸಗೌಡ್ರ ಇವರ ಜಮೀನಿನಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಜೋಡೆತ್ತಿಗೆ ಪ್ರಥಮ 50 ಸಾವಿರ ದ್ವಿತೀಯ 40 ಸಾವಿರ ತೃತೀಯ 30 ಸಾವಿರ ಚತುರ್ಥ 25 ಸಾವಿರ ಸೇರಿ ಕ್ರಮವಾಗಿ 20 ಬಹುಮಾನಗಳಿವೆ.

Read More »

ಮಹಾರಾಷ್ಟ್ರದಲ್ಲಿ ನಮಗೆ ಒಳ್ಳೆಯ ರಿಸ್ಪಾನ್ಸ್ ಇದೆ : ಶೆಟ್ಟರ್

ಹುಬ್ಬಳ್ಳಿ: ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ವಿಧಾನ ಸಭೆಯ ಮತದಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಂಸದ ಜಗದೀಶ್ ಶೆಟ್ಟರ್, ಮಹಾರಾಷ್ಟ್ರದಲ್ಲಿ ನಮಗೆ ಒಳ್ಳೆಯ ರಿಸ್ಪಾನ್ಸ್ ಇದೆ ಎಂದಿದ್ದಾರೆ. ನಾನು ಎರಡು ದಿನಗಳ ಕಾಲ ಮಹಾರಾಷ್ಟ್ರದ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇನೆ. ಜತ್ತ, ಸೊಲ್ಲಾಪುರ, ಅಕ್ಕಲಕೋಟೆಯ ಭಾಗಗಳಲ್ಲಿ ಒಳ್ಳೆಯ ವಾತಾವರಣ ಇದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಾರ್ಖಂಡ್ …

Read More »

ಕೋವಿಡ್ ಹಗರಣದ ಮಧ್ಯಂತರ ವರದಿ ತರಾತುರಿಯಲ್ಲಿ ಮಂಡನೆ ಮಾಡತ್ತಾರೆ : ಶೆಟ್ಟರ್

ಹುಬ್ಬಳ್ಳಿ: ಕೋವೀಡ್‌ ಹಗರಣದಲ್ಲಿ ನೇಮಕ ಮಾಡಿದ ಕುನ್ಹಾ ವರದಿ ಸಿಎಂ ಕಚೇರಿಯಿಂದೇ ಸೋರಿಕೆ ಆಗತಾ ಇದೆ ಎಂಬ ವಿಚಾರ, ಯಾವುದಾದರೂ ಒಂದು ಹಗರಣ ಕುರಿತು ತನಿಖಾ ವರದಿ ಬಂದಿಲ್ಲಾ. ಅದರಲ್ಲೂ ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಆದರೆ ಬಹಳಷ್ಟು ಸೂಕ್ಷ್ಮ ಇರುತ್ತದೆ. ಇದರಲ್ಲಿ ಏನಾದರೂ ಮಾಡುವುದಾದರೆ ಮಾಡಿ ಸಚಿವ ಸಂಪುಟದ ಮುಂದೆ ಇಡುತ್ತಾರೆಂದು ಸಂಸದ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಹುಬ್ಬಳ್ಳಿ ಯಲ್ಲಿ ಮಾತನಾಡಿದ ಅವರು, ಇನ್ನು ಕೋವಿಡ್ ಹಗರಣದ ಮಧ್ಯಂತರ …

Read More »

ಟಿಪ್ಪು ಸುಲ್ತಾನ್ ಜಯಂತಿ ಆಚರಣೆ: 31 ಕಾರ್ಯಕರ್ತರ ಬಂಧನ

ಹುಬ್ಬಳ್ಳಿ: 270ನೇ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ, ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಎಸ್‌ಡಿಪಿಐ ಸಂಘಟನೆಯ ಕಾರ್ಯಕರ್ತರು ಆಚರಣೆ ಮಾಡಿದರು. ಆದ್ರೆ ಮೆರವಣಿಗೆ ಮಾಡುವ ವೇಳೆ 31 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ, SDPI ಕಾರ್ಯಕರ್ತರು ಟಿಪ್ಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ವಂದನೆ ಸಲ್ಲಿಸಿದರು. ಬಳಿಕ ಟಿಪ್ಪು ಮೆರವಣಿಗೆಗೆ ಕಾರ್ಯಕರ್ತರು ಮುಂದಾದರು. ಈ ವೇಳೆ ಮೆರವಣಿಗೆಗೆ ಅನುಮತಿಯಿಲ್ಲದ ಕಾರಣ 31 ಜನ ಎಸ್‌ಡಿಪಿಐ ಕಾರ್ಯಕರ್ತರನ್ನು …

Read More »

2024-25 ಸಾಲಿನ ಸಾಂಸ್ಕೃತಿಕ ಚಟುವಟಿಕೆ

ನವಲಗುಂದ : ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆಗಳು ಉತ್ತಮ ಮನರಂಜನೆ ಜೊತೆಗೆ ಕಲಿಕೆಗೆ ಪೂರಕ ಉತ್ತೇಜನ ನೀಡುತ್ತವೆ ಎಂದು ಶಂಕರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜಯರಾಮ ಲಮಾಣಿ ಹೇಳಿದರು. ಅವರು ಪಟ್ಟಣದ ಶ್ರೀ ಶಂಕರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಪದವಿಪೂರ್ವ ಪ್ರಥಮ ಹಾಗೂ ದ್ವಿತೀಯ ವರ್ಗದ ವಿದ್ಯಾರ್ಥಿಗಳಿಗೆ 2024-25 ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರಾಸಾವಿಕವಾಗಿ ಮಾತಾಡಿದ ಭೀಮರಾಶಿ …

Read More »

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವಕ್ಕೆ ಚಾಲನೆ ನೀಡಿದ ಕೋನರೆಡ್ಡಿ

ನವಲಗುಂದ : ತಾಲೂಕು ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿಯೂ ನಮ್ಮ ತಾಲೂಕಿಗೆ ಹೆಸರು ತರಬೇಕು ಎಂದು ಶಾಸಕ ಎನ್.ಎಚ್.ಕೋನರೆಡ್ಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಸಮೀಪದ ಖನ್ನೂರ ಗ್ರಾಮದ ಆರ್‌ವಿಎಸ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕಿನ 10 ವಲಯಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 100ಕ್ಕೂ ಹೆಚ್ಚು ನಿರ್ಣಾಯಕರು …

Read More »

ಶ್ರೀ ರೇಣುಕಾ ಯಲ್ಲಮ್ಮ ಭಕ್ತರಿಗೆ ಗುಡ್ ನ್ಯೂಸ್ ನೀಡಿದ ಸಾರಿಗೆ ಇಲಾಖೆ

ಸುಕ್ಷೇತ್ರ ಬೆಳಗಾವಿ ಜಿಲ್ಲೆಜಿಲ್ಲೆಯ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ಭಕ್ತರಿಗೆ ಸಾರಿಗೆ ಇಲಾಖೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಸಂಚಾರ ದಟ್ಟಣೆ ಇರುವ ಕಾರಣ ಭಕ್ತರಿಗೆ ಕರ್ನಾಟಕ ವಾಯುವ್ಯ ರಸ್ತೆರಾಜ್ಯ ಸಾರಿಗೆ ಸಂಸ್ಥೆಯು ವಿಶೇಷ ಬಸ್‌ ಸೌಲಭ್ಯ ಕಲ್ಪಿಸಿದೆ. ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿ ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು ಹುಬ್ಬಳ್ಳಿಯಿಂದ ಯಲ್ಲಮ್ಮನಗುಡ್ಡಕ್ಕೆ ವಿಶೇಷ ಬಸ್ ಗಳಬಸ್ಥಳ ವ್ಯವಸ್ಥೆ ಮಾಡಲು ಮುಂದಾಗಿದೆ. ಮುಂದಿನ ಛಟ್ಟಿ ಅಮವಾಸೆಯವರೆಗೆ ಅಮಾವಾಸ್ಯೆಯವರೆಗೆ …

Read More »

ಕರ್ನಾಟಕ ಲೋಕಾಯುಕ್ತದಿಂದ ಕುಂದುಕೊರತೆ ಅಹವಾಲು ಸ್ವೀಕಾರ

ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ. ಎನ್. ಫಣೀಂದ್ರ ಅವರು ನವೆಂಬರ 21 ರಿಂದ 23 ವರೆಗೆ ಧಾರವಾಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ನವೆಂಬರ 21, ರಂದು ಬೆಳಿಗ್ಗೆ 10 ರಿಂದ 1: 30 ರವರೆಗೆ ಮತ್ತು ಮಧ್ಯಾಹ್ನ 2: 30 ರಿಂದ 5 ರವರೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರತೆ ಅಹವಾಲುಗಳನ್ನು ಸ್ವೀಕರಿಸಿ, ವಿಚಾರಣೆ ನಡೆಸಲಿದ್ದಾರೆ. ಆದಕಾರಣ ಸಾರ್ವಜನಿಕರು ಕುಂದು ಕೊರತೆ ದೂರಗಳನ್ನು ಸಲ್ಲಿಸಬಹುದು.

Read More »