Breaking News

World

Et ullamcorper sollicitudin elit odio consequat mauris, wisi velit tortor semper vel feugiat dui, ultricies lacus. Congue mattis luctus, quam orci mi semper

ಉಕ್ರೇನ್ , ರಷ್ಯಾ ಯುದ್ಧ : ಖ್ಯಾತಿ ನಟಿ ಬಲಿ

ಕೀವ್ : ಉಕ್ರೇನ್​ ನಗರಗಳ ಮೇಲೆ ರಷ್ಯಾ ದಾಳಿ ಮುಂದುವರಿದಿದೆ. ನಗರದ ವಸತಿ ಕಟ್ಟಡದ ಮೇಲೆ ರಷ್ಯಾ ಸೈನಿಕರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಖ್ಯಾತ ನಟಿಯೊಬ್ಬರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ನಗರದ ವಸತಿ ಕಟ್ಟಡದ ಮೇಲೆ ರಷ್ಯಾ ಸೈನಿಕರು ನಡೆಸಿದ ರಾಕೆಟ್​ ಶೆಲ್​ ದಾಳಿಯಲ್ಲಿ ಖ್ಯಾತ ನಟಿ ಒಕ್ಸಾನಾ ಶ್ವೆಟ್ಸ್​ನ್ನು (67) ಕೊಂದಿದ್ದಾರೆ ಎಂದು ಯಂಗ್ ಥಿಯೇಟರ್ ತಂಡ ಹೇಳಿಕೆ ನೀಡಿದೆ.

Read More »

ಯುದ್ದಪೀಡಿತ ಉಕ್ರೇನ್ ನಲ್ಲಿ ಅಮೆರಿಕ ಪತ್ರಕರ್ತ ಬ್ರೆಂಟ್‌ ರೆನಾಡ್‌ ಬಲಿ

ಇರ್ಪಿನ್: ಉಕ್ರೇನ್ ರಾಜಧಾನಿ ಕೀವ್ ಪ್ರಾಂತ್ಯದ ಇರ್ಪಿನ್ ನಗರದಲ್ಲಿ ರಷ್ಯಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಅಮೆರಿಕದ ಪತ್ರಕರ್ತ ಬ್ರೆಂಟ್‌ ರೆನಾಡ್‌ ಅವರು ಭಾನುವಾರ ಬಲಿಯಾಗಿದ್ದಾರೆ. ಮತ್ತೊಬ್ಬ ಪತ್ರಕರ್ತ ಗಾಯಗೊಂಡಿದ್ದಾರೆ ಎಂದು ಕೀವ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಆಯಂಡ್ರಿಯ್ ನ್ಯೆಬಿತೋವ್ ತಿಳಿಸಿದ್ದಾರೆ. ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ವಿಡಿಯೋ ಜರ್ನಲಿಸ್ಟ್‌ ಆಗಿದ್ದ ಬ್ರೆಂಟ್‌ ಪ್ರತಿಭಾವಂತ ಛಾಯಾಗ್ರಾಹಕ ಮತ್ತು ಚಿತ್ರ ನಿರ್ಮಾಪಕ ಆಗಿದ್ದರು. ಅವರು ಪತ್ರಿಕೆಗೆ ಉತ್ತಮ ಕೊಡುಗೆ ನೀಡಿದ್ದರು. ಅವರ ಅಗಲಿಕೆ …

Read More »

ಆಟೋ ಅಪಘಾತದಲ್ಲಿ 5 ಭಾರತೀಯ ವಿದ್ಯಾರ್ಥಿಗಳು ಸಾವು

ಮಾರ್ಚ್ 13 ರಂದು ಟೊರೊಂಟೊ ಬಳಿ ಆಟೋ ಅಪಘಾತದಲ್ಲಿ ಕನಿಷ್ಠ 5 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆನಡಾದಲ್ಲಿ ಸಂಭವಿಸಿದೆ. ಕೆನಡಾದ ಭಾರತದ ಕಮಿಷನರ್ ಅಜಯ್ ಬಿಸಾರಿಯಾ ತಿಳಿಸಿದ್ದಾರೆ. ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ತಂಡವು ಸಹಾಯಕ್ಕಾಗಿ ಸಂತ್ರಸ್ತರ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದೆ.ಟ್ವಿಟರ್‌ನಲ್ಲಿ ಅಜಯ್ ಬಿಸಾರಿಯಾ ಅವರು ಸಂತ್ರಸ್ತರ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Read More »

ಏಕಾಏಕಿ 12 ಸಾವಿರ ಸೈನಿಕರನ್ನು ರಷ್ಯಾದ ಗಡಿಗೆ ನಿಯೋಜಿಸಿದ ಅಮೆರಿಕ ಅಧ್ಯಕ್ಷ

ಕೀವ್‌/ಮಾಸ್ಕೋ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಶನಿವಾರ ಏಕಾಏಕಿ ತನ್ನ 12 ಸಾವಿರ ಸೈನಿಕರನ್ನು ರಷ್ಯಾದ ಗಡಿ ಯುದ್ದಕ್ಕೂ ನಿಯೋಜಿಸಿದ್ದಾರೆ. ರಷ್ಯಾದೊಂದಿಗೆ ಗಡಿ ಹಂಚಿಕೊಂಡಿರುವ ಲಾಟ್ವಿಯಾ ಎಸ್ಟೋನಿಯಾ, ಲಿಥುವೇನಿಯಾ, ರೊಮೇನಿಯಾ ದೇಶಗಳಲ್ಲಿ ಅಮೆರಿಕದ ಸೇನೆಗಳಿವೆ. ಜತೆಗೆ, ಉಕ್ರೇನ್‌ನಲ್ಲಿ ಆರಂಭಿಸಿರುವ ಯುದ್ಧವು ಪುತಿನ್‌ಗೆ ಯಾವ ಕಾರಣಕ್ಕೂ ಜಯ ತಂದುಕೊಡುವುದಿಲ್ಲ ಎಂದೂ ಬೈಡೆನ್‌ ಗುಡುಗಿದ್ದಾರೆ. ಸೇನೆ ಜಮಾಯಿಸುವ ಮೂಲಕ ಅಮೆರಿಕವು ರಷ್ಯಾ ವಿರುದ್ಧ ನೇರ ಹೋರಾಟಕ್ಕೆ ಸಜ್ಜಾಗಿರುವ ಸುಳಿವು ನೀಡಿದೆ. ಅಮೆರಿಕವು …

Read More »

ಒಂದೇ ದಿನದಲ್ಲಿ 81 ಜನರನ್ನು ಗಲ್ಲಿಗೇರಿಸಿದ ಸೌದಿ ಅರೇಬಿಯಾ

ರಿಯಾದ್‌: 2021ರಲ್ಲಿ ಸೌದಿಯಲ್ಲಿ 67 ಮಂದಿಗೆ ಮರಣದಂಡನೆ ವಿಧಿಸಲಾಗಿದ್ದು, ಭಯೋತ್ಪಾದನೆ ಸಂಬಂಧಿಸಿದ ವಿವಿಧ ಅಪರಾಧಗಳ ಮೇಲೆ ಒಂದೇ ದಿನದಲ್ಲಿ 81 ಜನರನ್ನು ಗಲ್ಲಿಗೇರಿಸಿರುವುದಾಗಿ ಸೌದಿ ಅರೇಬಿಯಾ ಶನಿವಾರ ಹೇಳಿದೆ. ಇದು 2021 ರಲ್ಲಿ ಜಾರಿಗೆ ತಂದಿದ್ದ ಮರಣದಂಡನೆಗಳಿಗಿಂತಲೂ ಹೆಚ್ಚು ಎಂದು ಸರ್ಕಾರ ತಿಳಿಸಿದೆ. ಶಿಕ್ಷೆಗೊಳಗಾದವರು ಇಸ್ಲಾಮಿಕ್ ಸ್ಟೇಟ್, ಅಲ್-ಖೈದಾ, ಹೌತಿ ಮತ್ತು ಇತರ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದವರಾಗಿದ್ದರು ಎಂದು ಸೌದಿಯ ಸರ್ಕಾರಿ ಹೇಳಿದೆ. ಮರಣದಂಡನೆಗೆ ಒಳಗಾದವರೆಲ್ಲರೂ ಪ್ರಮುಖ ಸ್ಥಳಗಳ …

Read More »

ಉತ್ತರ ಪ್ರದೇಶ ಸಿಎಂ ಸ್ಥಾನಕ್ಕೆ ಯೋಗಿ ಆದಿತ್ಯನಾಥ್ ರಾಜಿನಾಮೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಲಕ್ನೋದ ರಾಜಭವನದಲ್ಲಿ ರಾಜ್ಯಪಾಲ ಆನಂದ್ ಮಣಿಬೆನ್ ಪಟೇಲ್ ಅವರಿಗೆ ರಾಜೀನಾಮೆ ಸಲ್ಲಿಸಿದರು. ಮೂಲಗಳ ಪ್ರಕಾರ, ಯೋಗಿ ಆದಿತ್ಯನಾಥ್ ಅವ್ರು ಹೋಳಿಗಿಂತ ಮೊದಲು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದು ಮಾರ್ಚ್ 14 ಅಥವಾ 15ರಂದು ನಡೆಯುವ ಸಾಧ್ಯತೆಯಿದೆ. ಏತನ್ಮಧ್ಯೆ, ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಉನ್ನತಾಧಿಕಾರಿ ನಾಯಕರು ಮತ್ತು ಎನ್ ಡಿಎ ಆಡಳಿತವಿರುವ ರಾಜ್ಯಗಳ ಇತರ …

Read More »

ತವರಿಗೆ ತೆರೆಳಿ ತಾಯಿಯ ಆಶೀರ್ವಾದ ಪಡೆದ ಪ್ರಧಾನಿ

ಗುಜರಾತ್ : ದಿನ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಮೋದಿ ಅವರೀಗ ಗುಜರಾತ್‌ಗೆ ತೆರಳಿ, ತಮ್ಮ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.ಅಲ್ಲದೆ, ಅವರ ಜತೆ ಕುಳಿತು ಊಟ ಮಾಡುವ ಮೂಲಕ ಒಂದಷ್ಟು ಸಮಯ ಕಳೆದರುವ ಫೋಟೊಗಳು ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಗುಜರಾತ್‌ನ ಗಾಂಧಿನಗರದಲ್ಲಿರುವ ನಿವಾಸಕ್ಕೆ ತೆರಳಿದ ಪ್ರಧಾನಿಯವರು, ತಾಯಿಯ ಆರೋಗ್ಯ ವಿಚಾರಿಸಿದರು. ಇದಾದ ಕೆಲವೇ ಹೊತ್ತಿನಲ್ಲಿ ಹೀರಾಬೆನ್‌ ಅವರ ಆಶೀರ್ವಾದ ಪಡೆದರು. ಅಲ್ಲದೆ, ಒಟ್ಟಿಗೆ ಕುಳಿತು ಊಟ …

Read More »

ರಾಜಸ್ಥಾನ ರೇಪ್​ನಲ್ಲಿ ಮೊದಲ ಸ್ಥಾನದಲ್ಲಿ ಇದೆ ಯಾಕೆಂದರೆ ಪುರಷರಿರುವ ರಾಜ್ಯ : ಶಾಂತಿ ಕುಮಾರ್ ಧರಿವಾಲ್

‘ರೇಪ್​ನಲ್ಲಿ ರಾಜಸ್ಥಾನ ಮೊದಲ ಸ್ಥಾನದಲ್ಲಿ ಇದೆ. ಯಾಕೆ ನಾವು ನಂಬರ್ ಒನ್ ಸ್ಥಾನದಲ್ಲಿದ್ದೇವೆ..? ಯಾಕಂದರೆ ರಾಜಸ್ಥಾನ ಪುರಷರಿರುವ ರಾಜ್ಯ. ಅದಕ್ಕೆ ನಾವೇನು ಮಾಡೋಕೆ ಆಗುತ್ತೆ..?’ ಎಂದು ರಾಜಸ್ಥಾನದ ಕಾಂಗ್ರೆಸ್​ ಮಂತ್ರಿ ಶಾಂತಿ ಕುಮಾರ್ ಧರಿವಾಲ್ ಹೇಳಿದ್ದಾರೆ. ಧರಿವಾಲ್ ಸದನದಲ್ಲಿ ಈ ಹೇಳಿಕೆ ನೀಡಿದಾಗ ಸದನದಲ್ಲಿ ಕುಳಿತಿದ್ದ ಆಡಳಿತ ಪಕ್ಷದ ನಾಯಕರೂ ನಗೆಗಡಲಲ್ಲಿ ತೇಲಿದ್ದಾರೆ. ಅವರ ಹೇಳಿಕೆಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು. ಬಳಿಕ ವಿರೋಧ ಪಕ್ಷ ಹಾಗೂ ಆಡಳಿತ …

Read More »

ಸಂಸದ ಪುತ್ರ ರಸ್ತೆ ಅಪಘಾತದಲ್ಲಿ ನಿಧನ

ಚೆನ್ನೈ: ಕಾರು ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್​ಗೆ ಡಿಕ್ಕಿ ಹೊಡೆದು ಅಪಘಾತದ ಸಂಭವಿದ್ದು, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ರಾಜ್ಯಸಭಾ ಸದಸ್ಯ ಎನ್​​.ಆರ್​. ಇಳಂಗೋವನ್ ಅವರ ಪುತ್ರ ರಾಕೇಶ್​ (22) ರಾಕೇಶ್​ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಪ್ರಯಾಣಿಕ ಗಂಭೀರವಾರ ಗಾಯಗೊಂಡಿರುವ ಘಟನೆ ಗುರುವಾರ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಇನ್ನು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ರಾಕೇಶ್​ ಮೃತದೇಹವನ್ನು ಸ್ಥಳೀಯ …

Read More »

ಯೋಗಿ ಆದಿತ್ಯನಾಥ್ ಗೋರಖ್ ಪುರದಲ್ಲಿ ಭರ್ಜರಿ ಗೆಲುವು

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್ ಪುರದಲ್ಲಿ ಭರ್ಜರಿ ಜಯ ಸಾಧಿಸಿ ದಾಖಲೆಗಳನ್ನು ಬರೆದಿದ್ದಾರೆ. ಯೋಗಿ ಆದಿತ್ಯ ನಾಥ 1 ಲಕ್ಷಕ್ಕೂ ಹೆಚ್ಚು ಮತ ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಆಡಳಿತ ಪಕ್ಷವೊಂದು ಅಧಿಕಾರಕ್ಕೆ ಮರಳುತ್ತಿರುವುದು 37ವರ್ಷಗಳಲ್ಲಿ ಇದೇ ಮೊದಲು.ಈ ನಡುವೆ ಗುಡ್ಡಗಾಡು ರಾಜ್ಯ ಉತ್ತರಾಖಂಡದಲ್ಲಿ ಉತ್ತರಾಖಂಡದ ಜನಪ್ರಿಯ ಅಭ್ಯರ್ಥಿಗಳಲ್ಲಿ ಒಬ್ಬರಾದ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಸೋಲು ಕಂಡಿದ್ದಾ ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಭಾರತೀಯ …

Read More »