admin
March 10, 2022
Breaking News, World
ಕೋಲಾರ: 5 ರಾಜ್ಯಗಳ ಚುನಾವಣಾ ಫಲಿತಾಂಶ ಘೋಷಣೆಯಾದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುಲಾಗುವುದು. ‘ಸದ್ಯ ನಮ್ಮ ಪಾಡಿಗೆ ನಾವಿದ್ದೇವೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ,ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ನೋಡಿಕೊಂಡು ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನ ಮಾಡುತ್ತೇವೆ’. ಬಿಜೆಪಿಯೋ, ಜೆಡಿಎಸ್ ಅಥವಾ ಕಾಂಗ್ರೆಸೋ ಏನೂ ಬೇಕಾದರೂ ಆಗಬಹುದು. ಸದ್ಯ ಶಾಸಕನಾಗಿ ಇರುವವರೆಗೂ ಜೆಡಿಎಸ್’ ಎಂದರು.
Read More »
admin
March 10, 2022
Breaking News, World
ಗೀವಿಧಾನಸಭಾ ಚುನಾವಣೆಯ ಚುನಾವಣೆ ಮುಗಿದಿದ್ದು, ಇದೀಗ ಮತಗಳ ಏಣಿಕೆ ಪ್ರಾರಂಭ ವಾಗಿದೆ. ಎಲ್ಲರೂ ಫಿಲತಾಂಶಕ್ಕೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಮತ ಎಣಿಕೆ ಕಾರ್ಯ ಮುಂದುವರೆದಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದೆ. ಗೋವಾದ 40 ವಿಧಾನಸಭಾ ಕ್ಷೇತ್ರಗಳ ಪೈಕಿ 36 ಕ್ಷೇತ್ರಗಳ ಮುನ್ನಡೆ ವಿವರ ಲಭ್ಯವಾಗಿದ್ದು, ಕಾಂಗ್ರೆಸ್ 20 ಹಾಗೂ ಬಿಜೆಪಿ 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.
Read More »
admin
March 10, 2022
Breaking News, World
ಲಖನೌ/ವಾರಾಣಸಿ : ಉತ್ತರ ಪ್ರದೇಶ ಲೋಕಸಭಾ ಚುನಾವಣೆಯ ಏಳನೇ ಹಂತದ ಮತದಾನದಲ್ಲಿ ಬಳಸಲಾಗಿದ್ದ ಮತಯಂತ್ರಗಳ ಸಾಗಣೆ ಮತ್ತು ನಿರ್ವಹಣೆಯಲ್ಲಿ ಲೋಪವಾಗಿರುವ ಹಿನ್ನಲೆ ಮೂವರು ಅಧಿಕಾರಿಗಳನ್ನು ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಸಮಾಜವಾದಿ ಪಕ್ಷವು ರಾಜ್ಯ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿತ್ತು. ಮತಯಂತ್ರಗಳು ನಾಪತ್ತೆಯಾಗಿರುವ ಹಿನ್ನಲೆ ವಾರಾಣಸಿ ಜಿಲ್ಲಾಧಿಕಾರಿ ಮತ್ತು ವಿಭಾಗೀಯ ಆಯುಕ್ತರನ್ನು ವರ್ಗಾವಣೆ ಮಾಡಬೇಕು’ ಎಂದು ಸಮಾಜವಾದಿ ಪಕ್ಷದ ನಿಯೋಗವು ದೂರಿನಲ್ಲಿ ಆಗ್ರಹಿಸಿತ್ತು. ಘಟನೆ : ‘ಮತಯಂತ್ರಗಳನ್ನು …
Read More »
admin
March 9, 2022
Breaking News, World
ಲಖನೌ: ವಾರಾಣಸಿಯಲ್ಲಿ ಮತಯಂತ್ರಗಳನ್ನು ಕದಿಯಲಾಗುತ್ತಿದೆ. ಟ್ರಕ್‌ಗಳಲ್ಲಿ ಇವಿಎಂಗಳನ್ನು ಸಾಗಿಸಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಬಿಜೆಪಿ ಮತಗಳನ್ನು ಕದಿಯಲು ಪ್ರಯತ್ನಿಸುತ್ತಿದೆ ಎಂದು ಅಖಿಲೇಶ್ ಆರೋಪಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂಬ ವಾತವರಣ ಸೃಷ್ಟಿಸಲು ಮತಗಟ್ಟೆ ಸಮೀಕ್ಷೆಗಳು ನಡೆದಿವೆ ಎಂದು ಎಂದ ಅವರು, ಸಮೀಕ್ಷೆ ಫಲಿತಾಂಶಗಳನ್ನು ತಳ್ಳಿಹಾಕಿದರು. ಬಿಜೆಪಿ ಈ ಚುನಾವಣೆಯಲ್ಲಿ ಸೋಲಲಿದೆ. ಹೀಗಾಗಿ ಮತಗಳ ಎಣಿಕೆಯನ್ನು ನಿಧಾನಗೊಳಿಸುವಂತೆ ಸರ್ಕಾರದ ಅಧಿಕಾರಿಗಳು ಅಧೀನ ಅಧಿಕಾರಿಗಳಿಗೆ ನಿರ್ದೇಶಿಸುತ್ತಿದ್ದಾರೆ …
Read More »
admin
March 9, 2022
Breaking News, World
ನ್ಯಾಟೋಗೆ ಸೇರುವ ಉದ್ದೇಶದಿಂದ ಯುದ್ಧ ಮಾಡುತ್ತಿರುವ ಉಕ್ರೇನ್ ಯುದ್ಧದಿಂದ ತತ್ತರಿಸಿದ್ದು, ಅಚ್ಚರಿ ನಿರ್ಧಾರ ಪ್ರಕಟಿಸಿದೆ. ಇನ್ನು ಮುಂದೆ NATO ಸದಸ್ಯತ್ವಕ್ಕೆ ಒತ್ತಾಯಿಸಲ್ಲ ಎಂದು ರಷ್ಯಾಕ್ಕೆ ಒಪ್ಪಿಗೆ ಸೂಚಿಸಿದೆ. ನಾವು ಅರ್ಥಮಾಡಿಕೊಂಡಿದ್ದೇವೆ. ಬಹಳ ಹಿಂದೆಯೇ ಈ ಪ್ರಶ್ನೆಗೆ ಸಂಬಂಧಿಸಿದಂತೆ ನಾನು ತಣ್ಣಗಾಗಿದ್ದೇನೆ. NATO ಸೇರಲು ಉಕ್ರೇನ್ ಸಿದ್ಧವಾಗಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ ಸ್ಕಿ ಹೇಳಿದ್ದಾರೆ. ವೊಲೊಡಿಮಿರ್ ಝೆಲೆನ್ಸ್ಕಿ ಅವರು, ಉಕ್ರೇನ್‌ಗೆ ನ್ಯಾಟೋ ಸದಸ್ಯತ್ವಕ್ಕಾಗಿ ಇನ್ನು ಮುಂದೆ ಒತ್ತಾಯಿಸುವುದಿಲ್ಲ. ಇದು …
Read More »
admin
March 7, 2022
Breaking News, World
ಭಾರತೀಯ ನಾಗರಿಕರನ್ನು ರಕ್ಷಿಸಲು ಆರಂಭವಾದ ಆಪರೇಷನ್ ಗಂಗಾ ಅಡಿಯಲ್ಲಿ ಉಕ್ರೇನ್‌ನಲ್ಲಿ ನೆರೆಯ ದೇಶಗಳಿಂದ 11 ವಿಶೇಷ ನಾಗರಿಕ ವಿಮಾನಗಳ ಮೂಲಕ 2135 ಭಾರತೀಯರನ್ನು ವಾಪಸ್ ಕರೆತರಲಾಗಿದೆ. ವಿಶೇಷ ನಾಗರಿಕ ವಿಮಾನಗಳಲ್ಲಿ 9 ಹೊಸದಿಲ್ಲಿಗೆ ಬಂದಿಳಿದವು ಮತ್ತು ಎರಡು ಮುಂಬೈ ತಲುಪಿದವು.ಬುಡಾಪೆಸ್ಟ್ ನಿಂದ 6 ವಿಮಾನಗಳು, ಬುಕಾರೆಸ್ಟ್ ನಿಂದ 2, ಜೆರ್‌ಸ್ಜೋವ್ ನಿಂದ 2 ಮತ್ತು ಕೊಸಿಸ್ ನಿಂದ 1 ವಿಮಾನಗಳು ಆಗಮಿಸಿದವು. ಇದರೊಂದಿಗೆ ಫೆಬ್ರವರಿ 22 ರಂದು ವಿಶೇಷ ವಿಮಾನಗಳು …
Read More »
admin
March 7, 2022
Breaking News, World
ಜೈಪುರ: 2020ರಲ್ಲಿ ನಡೆದಿದೆ ಎನ್ನಲಾಗಿದ್ದ ಟೆಲಿಫೋನ್ ಕದ್ದಾಲಿಕೆ ಹಗರಣಕ್ಕೆ ಸಂಬಂಧಿಸಿ ಜೈಪುರದ ಸ್ಥಳೀಯ ನ್ಯಾಯಾಲಯವು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗೆ ನೋಟಿಸ್ ಜಾರಿಗೊಳಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಸಾರ್ವಜನಿಕ ಆರೋಗ್ಯ ಅಭಿಯಂತರ ಇಲಾಖೆಯ ಸಚಿವ ಮಹೇಶ್ ಜೋಷಿ, ರಾಜ್ಯ ಸರಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ರಾಜೀವ ಸ್ವರೂಪ್ ಹಾಗೂ ಇನ್ನಿತರ ನಿವೃತ್ತ ಉನ್ನತ ಅಧಿಕಾರಿಗಳಿಗೆ ನೋಟಿಸ್ ಜಾರಿಯಾಗಿದೆ.
Read More »
admin
March 6, 2022
Breaking News, World
ಬಾಗಲಕೋಟೆ/ಬೀದರ್: ಖಾರ್ಕೀವ್ ಬಳಿಯ ಪೆಸೊಚಿನ್ ಪ್ರದೇಶದಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸೇರಿದ 37 ಮಂದಿಯೂ ಸೇರಿದಂತೆ ಭಾರತದ 296 ವಿದ್ಯಾರ್ಥಿಗಳು ಬಸ್ನಲ್ಲಿ ಹೊರಟಿದ್ದು, ಲೆವಿವ್ ತಲುಪಿ ನಂತರ ಪೊಲ್ಯಾಂಡ್ ಅಥವಾ ರೊಮೇನಿಯಾ ಮಾರ್ಗವಾಗಿ ಭಾರತವನ್ನು ಸೇರಲಿದ್ದಾರೆ. ಬೀದರನಿಂದ ಯೂಕ್ರೇನ್ಗೆ ಎಂಬಿಬಿಎಸ್ ವ್ಯಾಸಂಗಕ್ಕಾಗಿ ಹೋಗಿದ್ದ ಶಶಾಂಕ, ವಿವೇಕ ಹಾಗೂ ಬಾಗಲಕೋಟೆಯ ಕಿರಣ ಸವದಿ ಸೇರಿ 296 ಜನ ಭಾರತೀಯರು ಬಸ್ ಮೂಲಕ ಯೂಕ್ರೇನ್ನಿಂದ ಭಾರತದತ್ತ ಹೊರಟಿದ್ದಾರೆ.
Read More »
admin
March 6, 2022
Breaking News, World
ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಇಂದು ವಾಯುಪಡೆಯ ವಿಶೇಷ ವಿಮಾನದ ಮೂಲಕ 210 ಭಾರತೀಯರನ್ನು ದೆಹಲಿಗೆ ಕರೆತರಲಾಯಿತು.ದೆಹಲಿಯ ಹಿಂದನ್ ಏರ್ ಬೇಸ್ ಗೆ ವಿಮಾನ ಆಗಮಿಸಿದ್ದು, ವಿದ್ಯಾರ್ಥಿಗಳು ಸೇರಿದಂತೆ 210 ಜನರು ತಾಯ್ನಾಡಿಗೆ ಸುರಕ್ಷಿತವಾಗಿ ವಾಪಾಸ್ ಆಗಿದ್ದಾರೆ. ಉಕ್ರೇನ್ ನ ನೆರೆ ರಾಷ್ಟ್ರ ರೊಮೇನಿಯಾದಿಂದ ಹೊರಟ ವಿಮಾನ ಇಂದು ಮುಂಜಾನೆ 5 ಗಂಟೆಗೆ ದೆಹಲಿ ತಲುಪಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ. ಶನಿವಾರ …
Read More »
admin
March 5, 2022
Breaking News, World
ಕಳೆದ 10 ದಿನಗಳಿಂದ ಉಕ್ರೇನ್ ಮೇಲೆ ಯುದ್ದ ಆರಂಭಿಸಿರುವ ರಷ್ಯಾ ಇಂದು ಕದನ ವಿರಾಮ ಘೋಷಿಸಿದೆ.ಸಂಪೂರ್ಣ ಉಕ್ರೇನ್ ನಲ್ಲಿ ಕದನ ವಿರಾಮ ಘೋಷಣೆ ಮಾಡಲಾಗಿದ್ದು, 6 ಗಂಟೆಯಿಂದ ಇದು ಜಾರಿಗೆ ಬಂದಿದೆ. ಅಲ್ಲಿನ ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳಲು ಅನುವಾಗುವಂತೆ ಈ ಕದನ ವಿರಾಮ ಘೋಷಣೆ ಮಾಡಲಾಗಿದೆ ಎನ್ನಲಾಗಿದೆ.ರಷ್ಯಾದ ಈ ನಡೆ ವಿಶ್ವವನ್ನು ಅಚ್ಚರಿಗೊಳಿಸಿದ್ದು, ಏಕಾಏಕಿ ಕದನ ವಿರಾಮ ಘೋಷಿಸಿರುವುದರಿಂದ ಈಗಾಗಲೇ ಉಕ್ರೇನ್ ನ್ನು ರಷ್ಯಾ ತನ್ನ ಕೈ ವಶ …
Read More »