Breaking News

ಯುಪಿ ಚುನಾವಣೆ : 3 ಅಧಿಕಾರಿಗಳ ಕರ್ತವ್ಯದಿಂದ ಬಿಡುಗಡೆ


ಲಖನೌ/ವಾರಾಣಸಿ : ಉತ್ತರ ಪ್ರದೇಶ ಲೋಕಸಭಾ ಚುನಾವಣೆಯ ಏಳನೇ ಹಂತದ ಮತದಾನದಲ್ಲಿ ಬಳಸಲಾಗಿದ್ದ ಮತಯಂತ್ರಗಳ ಸಾಗಣೆ ಮತ್ತು ನಿರ್ವಹಣೆಯಲ್ಲಿ ಲೋಪವಾಗಿರುವ ಹಿನ್ನಲೆ ಮೂವರು ಅಧಿಕಾರಿಗಳನ್ನು ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಸಮಾಜವಾದಿ ಪಕ್ಷವು ರಾಜ್ಯ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿತ್ತು.

ಮತಯಂತ್ರಗಳು ನಾಪತ್ತೆಯಾಗಿರುವ ಹಿನ್ನಲೆ ವಾರಾಣಸಿ ಜಿಲ್ಲಾಧಿಕಾರಿ ಮತ್ತು ವಿಭಾಗೀಯ ಆಯುಕ್ತರನ್ನು ವರ್ಗಾವಣೆ ಮಾಡಬೇಕು’ ಎಂದು ಸಮಾಜವಾದಿ ಪಕ್ಷದ ನಿಯೋಗವು ದೂರಿನಲ್ಲಿ ಆಗ್ರಹಿಸಿತ್ತು.

ಘಟನೆ : ‘ಮತಯಂತ್ರಗಳನ್ನು ತಿರುಚುವ ಉದ್ದೇಶದಿಂದ ಅಕ್ರಮವಾಗಿ, ಅವುಗಳನ್ನು ಸ್ಟ್ರಾಂಗ್‌ರೂಂಗಳಿಂದ ಸಾಗಿಸಲಾಗಿದೆ. ವಾರಾಣಸಿಯ ಪಹಾಡಿಯಾ ಎಣಿಕಾ ಕೇಂದ್ರದಿಂದ ಮೂರು ಟ್ರಕ್‌ಗಳಲ್ಲಿ ಮತಯಂತ್ರಗಳನ್ನು ಸಾಗಿಸಲಾಗಿದೆ. ಒಂದು ಟ್ರಕ್‌ ಅನ್ನು ನಮ್ಮ ಪಕ್ಷದ ಕಾರ್ಯಕರ್ತರು ತಡೆದು ನಿಲ್ಲಿಸಿದ್ದಾರೆ. ಎರಡು ಟ್ರಕ್‌ಗಳು ಅಲ್ಲಿಂದ ಪರಾರಿಯಾಗಿವೆ.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *