Breaking News

ದಕ್ಷಿಣ ಕನ್ನಡ

ಸಚಿವ ಆರ್ ವಿ ದೇಶಪಾಂಡೆ ಕಡಲ್ಕೊರೆತ ದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ

ರಾಜ್ಯ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಅವರು ಇಂದು ಕಡಲ್ಕೊರೆತ ದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಸಿಹಿತ್ಲು ಕಡಲ ಕಿನಾರೆಗೆ ಭೇಟಿ ನೀಡಿ ಮಳೆ ಯಿಂದ ಆಗಿರುವ ಹಾನಿಯ ಕುರಿತು ಪರಿಶೀಲಿಸಿದರು .ಸ್ಥಳೀಯ ನಿವಾಸಿಗಳು ಕೂಡಾ ಸಚಿವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳ ಕುರಿತು ಗಮನಕ್ಕೆ ತಂದರು .ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಮುಖ್ಯಮಂತ್ರಿ ಗಳ …

Read More »

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ದೇಶಾದ್ಯಂತ ಮುಷ್ಕರ

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ದೇಶಾದ್ಯಂತ ಮುಷ್ಕರಕ್ಕೆ ಮಂಗಳೂರಿನಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ಹಲವೆಡೆ ಇಂದು ಬೆಳಿಗ್ಗೆಯಿಂದಲ್ಲೆ ಓಪಿಡಿಗಳು ಸಂಪೂರ್ಣ ಬಂದ್ ಮಾಡಲಾಗಿದ್ದು ವೈದ್ಯರು ಪ್ರತಿಭಟನೆ ಮಾಡುತ್ತಿದ್ದರೇ ಇತ್ತ ವೈದ್ಯರನ್ನೇ ನಂಬಿದ ರೋಗಿಗಳು ಬಂದ್ ನಿಂದಾಗಿ ಪರದಾಡುತ್ತಿದ್ದಾರೆ. ಆದ್ರೇ ತುರ್ತು ಚಿಕಿತ್ಸೆ, ಒಳ ರೋಗಿಗಳಿಗೆ ಮಾತ್ರ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದೆ.

Read More »

ಕಡಲಕೊರೆತ ಪ್ರದೇಶಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಪರಿಶೀಲನೆ.

ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಆಗುತ್ತಿದೆ . ಭಾರೀ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ಮರಗಳು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ . ನಗರದ ಪಂಪ್ ವೆಲ್ ಬಳಿ ಹಲವು ಮನೆಗಳಿಗೆ ನೀರು ನುಗ್ಗಿದೆ . ಉಳ್ಳಾಲದಲ್ಲಿ ಕಡಲ್ಕೊರೆತ ಪ್ರದೇಶಲ್ಲಿ ಹುಚ್ಚು ಸಾಹಸ ಮಾಡಲು ಯತ್ನಿಸಿದ್ದ ಯುವಕನೋರ್ವ ಅಪಾಯದಿಂದ ಪಾರಾಗಿದ್ದಾನೆ . ಉಳ್ಳಾಲದ ಮೊಗವೀರಪಟ್ಟಣ ಕೈಕೋ ಹಿಲರಿ ನಗರ ಕೋಟೆಪುರ ಉಚ್ಚಿಲ ಮುಂತಾದ ಪ್ರದೇಶಗಲ್ಲಿ ಕಡಲ ಕೊರೆತ …

Read More »

ಉಳ್ಳಾಲದಲ್ಲಿ ಕಡಲ ಕೊರೆತ ಹಾವಳಿ

ರಾಜ್ಯದ ಕರಾವಳಿಯಲ್ಲಿ ಮಳೆ ಆರ್ಭಟ ಮುಂದುವರಿದಿದೆ . ಉಳ್ಳಾಲದಲ್ಲಿ ಕಡಲ ಕೊರೆತ ಹಾವಳಿ ತೀವ್ರ ಗೊಂಡಿದೆ .ಹಲವು ಮನೆಗಳಿಗೆ ಹಾನಿ ಆಗಿದೆ .ಇನ್ನೂ ಕೆಲವು ಮನೆಗಳು ಅಪಾಯದ ಅಂಚಿನಲ್ಲಿವೆ .ಇಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಉಳ್ಳಾಲ ದ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು . ಈ ವೇಳೆ ಮಾಧ್ಯಮ ದವರೊಂದಿಗೆ ಮಾತನಾಡಿದ ಯು ಟಿ ಖಾದರ್ ಚಂಡಮಾರುತದ ಪ್ರಭಾವದಿಂದಾಗಿ ಈ …

Read More »

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ

ರಾಜ್ಯದ ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡಿದೆ. ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಆಗುತ್ತಿದೆ . ಉಳ್ಳಾಲ ಹಾಗೂ ಉಚ್ಚಿಲ ದಲ್ಲಿ 10 ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಆಗಿದೆ .40 ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ. 50 ಕ್ಕೂ ಹೆಚ್ಚು ಮರಗಳು ಸಮುದ್ರ ಪಾಲಾಗಿವೆ. ಉಳ್ಳಾಲದ ಹಲವು ಕಡೆಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಕಡಲ ತೀರದ ನಿವಾಸಿಗಳು ಎಚ್ಚರಿಕೆ ಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ …

Read More »

ಸ್ನೇಹಿತರೊಂದಿಗೆ ಸ್ನಾನಕ್ಕೆಂದು ನದಿಗಿಳಿದ ಬಾಲಕ ಶವವಾಗಿ ಪತ್ತೆ

ದಕ್ಷಿಣ ಕನ್ನಡದ ಸವಣೂರು ಶಾಂತಿಮೊಗರು ಸೇತುವೆಯ ಹತ್ತಿರ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ನದಿಗಿಳಿದ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಬುಧವಾರ ಜೂ.12ರಂದು ಸಂಜೆ ನಡೆದಿದೆ. ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾದ ಕೂಡಲೇ ಸ್ಥಳೀಯರ ನೆರವಿನಿಂದ ಹುಡುಕಾಟ ನಡೆಸಿದಾಗ ಮುಳುಗಿದ ಸ್ಥಳದಲ್ಲಿಯೇ ಬಾಲಕನ ಶವ ಪತ್ತೆಯಾಗಿದೆ. ಪರಣೆ ಹಮೀದ್ ಎಂಬವರ ಪುತ್ರ ಅಶ್ಫಾಕ್ ಮೃತಪಟ್ಟ ಬಾಲಕ. ಕಡಬ ಮತ್ತು ಬೆಳ್ಳಾರೆ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು..

Read More »

ವಿದ್ಯುತ್ ಸ್ಪರ್ಶಿಸಿ ಪವರ್ ಮೆನ್ ದುರ್ಮರಣ

ವಿದ್ಯುತ್ ಸ್ಪರ್ಶಿಸಿ ಪವರ್ ಮೆನ್ ದುರ್ಮರಣ ಹೊಂದಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಕ್ಕಿಲಾಡಿ ನಡೆದಿದೆ. ದಾವಣಗೆರೆ ಮೂಲದ ಮಿಟ್ಯಾ ನಾಯಕ್(35), ಮೃತ ಪಟ್ಟ ವ್ಯಕ್ತಿಯಾಗಿದ್ದು, ವಿದ್ಯುತ್ ದುರಸ್ಥಿ ಮಾಡಿದ ಬಳಿಕ ವಿದ್ಯುತ್ ಪೂರೈಕೆ ಮಾಡುವ ವೇಳೆ ಘಟನೆ ಸಂಬವಿಸಿದೆ. ವಿದ್ಯುತ್ ಪರಿವರ್ತಕದಲ್ಲಿ ಚಾಲನೆ ಕೊಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ಮೃತ ವ್ಯಕ್ತಿ ಉಪ್ಪಿನಂಗಡಿ ಮೆಸ್ಕಾಂ ಶಾಖೆಯಲ್ಲಿ ಪವರ್ ಮೆನ್ ಕೆಲಸ ನಿರ್ವಹಿಸುತ್ತಿದ್ದರು. ಪೊಲೀಸ್ ವಸತಿ …

Read More »

ಸಣ್ಣ ಕೋಣೆ ಕಡಲ್ಕೊರೆತ ಹಾವಳಿಗೆ ಸಿಲುಕಿ ಸಮುದ್ರ ಪಾಲು

ಆರಭಿ ಸಮುದ್ರದಲ್ಲಿ ಬಲವಾದ ಬಿರುಗಾಳಿ ಬಿಸುತ್ತಿರುವುದರಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ತೀವ್ರಗೊಂಡಿದೆ . ಉಳ್ಳಾಲದಲ್ಲಿ ಕಡಲ್ಕೊರೆತ ಕೂಡ ತೀವ್ರಗೊಂಡಿದೆ .ಈ ಭಾಗದಲ್ಲಿ ಹಲವು ಮನೆಗಳು ಅಪಾಯದಲ್ಲಿವೆ .ಇಂದು ಸಂಜೆ 7 ಗಂಟೆಗೆ ಉಳ್ಳಾಲದ ಸಮ್ಮರ್ ಸ್ಯಾಂಡ್ಸ್ ಬೀಚ್ ರೆಸಾರ್ಟ್ ನ ಹಿಂಭಾಗದಲ್ಲಿ ಸಣ್ಣ ಕೋಣೆ ಕಡಲ್ಕೊರೆತ ಹಾವಳಿಗೆ ಸಿಲುಕಿ ಸಮುದ್ರ ಪಾಲಾಗಿದೆ.ಈ ದ್ರಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಆಗಿದೆ .

Read More »