Breaking News

ಸ್ನೇಹಿತರೊಂದಿಗೆ ಸ್ನಾನಕ್ಕೆಂದು ನದಿಗಿಳಿದ ಬಾಲಕ ಶವವಾಗಿ ಪತ್ತೆ

ದಕ್ಷಿಣ
ಕನ್ನಡದ ಸವಣೂರು ಶಾಂತಿಮೊಗರು ಸೇತುವೆಯ ಹತ್ತಿರ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ನದಿಗಿಳಿದ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಬುಧವಾರ ಜೂ.12ರಂದು ಸಂಜೆ ನಡೆದಿದೆ. ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾದ
ಕೂಡಲೇ ಸ್ಥಳೀಯರ ನೆರವಿನಿಂದ ಹುಡುಕಾಟ ನಡೆಸಿದಾಗ
ಮುಳುಗಿದ ಸ್ಥಳದಲ್ಲಿಯೇ ಬಾಲಕನ ಶವ ಪತ್ತೆಯಾಗಿದೆ. ಪರಣೆ ಹಮೀದ್ ಎಂಬವರ ಪುತ್ರ ಅಶ್ಫಾಕ್
ಮೃತಪಟ್ಟ ಬಾಲಕ. ಕಡಬ ಮತ್ತು ಬೆಳ್ಳಾರೆ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು..

Share News

About admin

Check Also

ಇಂದಿನಿಂದ ದಸರಾ ಗಜಪಡೆಗಳ ತಾಲೀಮು ಆರಂಭ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆ ಇಂದಿನಿಂದ ದಸರಾ ಗಜಪಡೆಗಳ ತಾಲೀಮು ಆರಂಭಿಸಲಾಗಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗಳು …

Leave a Reply

Your email address will not be published. Required fields are marked *