Breaking News

ದಕ್ಷಿಣ ಕನ್ನಡ

ಕುಡುಕನ ಅವಾಂತರ: ಕಂಠಪೂರ್ತಿ ಕುಡಿದು ಆಂಬುಲೆನ್ಸ್ ಗೆ ಕರೆ ಮಾಡಿ ಚೇಷ್ಟೆ ಮಾಡಿದ ಕುಡುಕ.

ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಬಾಳೆಹೊನ್ನೂರಿನಲ್ಲಿರುವ ಆಯಂಬುಲೆನ್ಸ್ ಗೆ ಕರೆ ಮಾಡಿ ಶೃಂಗೇರಿಯಲ್ಲಿ ಗಲಾಟೆಯಾಗಿ ನನಗೆ ತುಂಬಾ ಪೆಟ್ಟಾಗಿದೆ ಕೂಡಲೇ ಬನ್ನಿ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಕರೆ ಮಾಡಿದ್ದಾನೆ, ಮಾಹಿತಿ ಪಡೆದ ಆಯಂಬುಲೆನ್ಸ್ ಚಾಲಕ 40 ಕಿಲೋಮೀಟರ್ ದೂರದಲ್ಲಿರುವ ಬಾಳೆಹೊನ್ನೂರಿನಿಂದ ಶೃಂಗೇರಿಗೆ ಬಂದಿದ್ದಾನೆ, ಆಯಂಬುಲೆನ್ಸ್ ನೋಡುತ್ತಿದ್ದಂತೆ ನನಗೇನು ಆಗಿಲ್ಲ ನಿಮಗೆ ಸಾಧ್ಯವಾದರೆ ನನ್ನನ್ನು ಹಿಡಿಯಿರಿ ನೋಡೋಣ ಎಂದು ಹೇಳಿದ್ದಾನೆ.ಪೊಲೀಸರು ಕುಡುಕನನ್ನು ಹಿಡಿಯಲು ಹರಸಾಹಸ ಪಟ್ಟಿದ್ದು ಕೊನೆಗೆ ಸ್ಥಳೀಯರು ಕುಡುಕನನ್ನು …

Read More »

ನೇತ್ರಾವತಿ‌ ಪೀಕ್ ಕೆಳಭಾಗದಲ್ಲಿ ಸಾವಿರಾರು ಎಕ್ರೆ ಪ್ರದೇಶದಲ್ಲಿ ಕಾಡ್ಗಿಚ್ಚು

ಕುದುರೆಮುಖ ವನ್ಯಜೀವಿ ವಿಭಾಗದ ನೇತ್ರಾವತಿ‌ ಪೀಕ್ ಕೆಳಭಾಗದಲ್ಲಿ ಸಾವಿರಾರು ಎಕ್ರೆ ಪ್ರದೇಶಕ್ಕೆ ಕಾಡ್ಗಿಚ್ಚು ಹಬ್ಬಿದ್ದು ಕಳೆದ ಎರಡು ದಿನಗಳಿಂದ ಅರಣ್ಯ ನಿರಂತರವಾಗಿ ಬೆಂಕಿಗೆ ಆಹುತಿಯಾಗುತ್ತಿದೆ.ವನ್ಯಜೀವಿ‌ ವಿಭಾಗದ ಸಾಕಷ್ಟು ಮರಗಿಡ, ಹುಲ್ಲು, ಪ್ರಾಣಿಗಳು ಬಲಿಯಾಗಿರುವ ಆತಂಕ ಎದುರಾಗಿದೆ.

Read More »

ನಾಲ್ವರ ಹತ್ಯೆಗೈದ ಆರೋಪಿ ಪ್ರವೀಣ್ ಚೌಗಲೇ ಹತ್ಯೆ ಮಾಡಿದ ಚೂರಿಯನ್ನು ಅಡುಗೆ ಮನೆಯಲ್ಲೇ ಇಟ್ಟು ಸಂಶಯ ಬರದಂತೆ ವರ್ತಿಸಿದ….

ಉಡುಪಿ: ಉಡುಪಿಯಲ್ಲಿ ನಾಲ್ವರ ಹತ್ಯೆಗೈದ ಆರೋಪಿ ಪ್ರವೀಣ್ ಚೌಗಲೇ ಹತ್ಯೆ ಮಾಡಿದ ಚೂರಿಯನ್ನು ಅಡುಗೆ ಮನೆಯಲ್ಲೇ ಇಟ್ಟು ಪತ್ನಿಗೆ ಸಂಶಯ ಬರದಂತೆ ವರ್ತಿಸಿದ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ. ನಾಲ್ವರ ಹತ್ಯೆ ಕುರಿತು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಉಡುಪಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಾ.ಅರುಣ್, ಪ್ರವೀಣ್ ನಾಲ್ವರ ಕೊಲೆಗೈದು ಚೂರಿಯನ್ನು ಅಡುಗೆ ಮನೆಯಲ್ಲಿ …

Read More »

ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ವಿಯಾದ ಕರಾವಳಿ ಉದ್ಯಮಿ…

ಬಂಟ್ವಾಳ (ದಕ್ಷಿಣ ಕನ್ನಡ):ಇತ್ತೀಚಿನ ಕೆಲ ದಿನಗಳಿಂದ ಟೊಮೆಟೊ ಸೇರಿದಂತೆ ತರಕಾರಿಗಳ ಬೆಲೆ ಗಗನಕಗ್ಕೇರಿರುವುದು ನಿತ್ಯ ಸುದ್ದಿಯಾಗ್ತಿದೆ. ಈ ನಡುವೆದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ನೋರ್ನಡ್ಕಪಡು ಎಂಬಲ್ಲಿ ಉದ್ಯಮಿಯೊಬ್ಬರು ತಮ್ಮ 14 ಎಕರೆ ಜಮೀನಿನಲ್ಲಿ ಎರಡು ಎಕರೆಯಷ್ಟು ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. ಈ ಬೆಳೆಯಲ್ಲಿ ಉತ್ತಮ ಲಾಭ ಪಡೆದು ತೋರಿಸಿದ್ದಾರೆ ಬಂಟ್ವಾಳದ ಹೋಟೆಲ್ ಉದ್ಯಮಿ ಚಂದ್ರಹಾಸ ಶೆಟ್ಟಿ. ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ವಿ ಕಂಡಿರುವ ಚಂದ್ರಹಾಸ …

Read More »

ತ್ಯಾಜ್ಯ ವಿಲೇವಾರಿಗೆ ಪುತ್ತೂರಿನ ಗ್ರಾ.ಪಂಚಾಯತಿಯಿಂದ ವಿನೂತನ ಪ್ರಯೋಗ

ಪುತ್ತೂರು: ತ್ಯಾಜ್ಯ ವಿಲೇವಾರಿ ಮಾಡುವುದು ದೊಡ್ಡ ಸವಾಲೇ ಸರಿ. ಕಸ ವಿಲೇವಾರಿಗೆ ಮಹಾನಗರ ಪಾಲಿಕೆಗಳೇ ಪರದಾಡುತ್ತಿರಬೇಕಾದರೆ, ಸ್ಥಳೀಯಾಡಳಿತಗಳ ಸ್ಥಿತಿಯನ್ನೊಮ್ಮೆ ಊಹಿಸಿಕೊಳ್ಳಿ. ಇದಲ್ಲದೇ, ತ್ಯಾಜ್ಯ ಸುರಿಯಲು ಸ್ಥಳದ ಸಮಸ್ಯೆ, ಇದರೊಂದಿಗೆ ಸುತ್ತಲಿನ ಜನರ ವಿರೋಧ. ಮನೆಗಳಲ್ಲಿನ ಕಸವನ್ನು ಸಂಗ್ರಹಿಸಬಹುದು, ಅದನ್ನು ವಿಲೇವಾರಿ ಮಾಡುವುದು ಹೇಗೆ? ಎಂಬ ಸಮಸ್ಯೆಗೆ ಸಿಲುಕಿದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂಕೂರು ಗ್ರಾಮ ಪಂಚಾಯಿತಿಯ ವಿನೂತನ ಪ್ರಯೋಗ ಯಶಸ್ಸು ಕಂಡಿದೆ. ಹೌದು, ಮನೆಗಳ ತ್ಯಾಜ್ಯವನ್ನು ಸಂಗ್ರಹಿಸಿ ಎಲ್ಲೆಂದರಲ್ಲಿ …

Read More »

ಆಹಾರದಲ್ಲಿ ವಿಷಬಾಧೆ ಸ್ಥಳದಲ್ಲೇ ಪ್ರತಿಭಟನೆ ನಡೆಸಿ ಹೊಟೇಲು ಮುಚ್ಚಿಸಿದ ಜಿ.ಪಂ.ಸದಸ್ಯ

ಮಂಗಳೂರು:ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿಯ ಹೊಟೇಲೊಂದರಲ್ಲಿ ಆಹಾರ ಸೇವಿಸಿ 40ರಷ್ಟು ಮಂದಿ ಅಸ್ವಸ್ಥರಾಗಿದ್ದು ಆಸ್ಚತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಹೊಟೇಲು ಯಾವುದೇ ಎಗ್ಗಿಲ್ಲದೆ ತೆರೆದು ಕಾರ್ಯಾಚರಿಸುವುದನ್ನು ಮನಗಂಡ ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮತ್ತು ಶಫೀಕ್ ಅರಫಾ ಹೊಟೇಲಿನ ಮುಂಭಾಗದಲ್ಲಿಯೇ ಪ್ರತಿಭಟನೆ ನಡೆಸಿ ಆರೋಗ್ಯ ಅಧಿಕಾರಿಗಳ ನೆರವಿನೊಂದಿಗೆ ಹೊಟೇಲನ್ನು ಮುಚ್ಚುಗಡೆಗೊಳಿಸಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾದವರ ಪೈಕಿ ಹೆಚ್ಚಿನ ಮಂದಿ …

Read More »

ಸುಲ್ತಾನ್ ಗೋಲ್ಡ್ ಶೋರೂಂಗೆ ಏಕಕಾಲದಲ್ಲಿ ದಾಳಿ

ಮಂಗಳೂರಿನ ಪ್ರತಿಷ್ಠಿತ ಸುಲ್ತಾನ್ ಗೋಲ್ಡ್ ಮತ್ತು ಸಿಟಿ ಗೋಲ್ಡ್ ಗೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಚಿನ್ನದ ವ್ಯಾಪಾರಿಗಳಿಗೆ ಶಾಕ್ ನೀಡಿದ್ದಾರೆ. ಕೇರಳದ ರವೂಫ್ ಗೆ ಸೇರಿದ ಮಂಗಳೂರಿನ ಕಂಕನಾಡಿಯಲ್ಲಿರುವ ಸುಲ್ತಾನ್ ಗೋಲ್ಡ್ ಮತ್ತು ಸಿಟಿ ಗೋಲ್ಡ್ ಮಳಿಗೆಯಲ್ಲಿ ನಿನ್ನೆಯಿಂದ ಕಡತಗಳನ್ನ ಐಟಿ ಅಧಿಕಾರಿಗಳು ಪರೀಶೀಲನೆ ನಡೆಸಿದ್ದಾರೆ. ಇನ್ನೂ ಉಡುಪಿ, ಮಂಗಳೂರು ಮತ್ತು ಶಿವಮೊಗ್ಗದ ಸುಲ್ತಾನ್ ಗೋಲ್ಡ್ ಶೋರೂಂಗೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

Read More »

ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಮಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಅವರು ಪುತ್ತೂರಿನ ಸ್ನೇಹಿತರೊಬ್ಬರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ದರ್ಶನ್ ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಮಹಾಗಣಪತಿ ದೇವಸ್ಥಾನ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸೌತಡ್ಕ ಹಾಗೂ ಧರ್ಮಸ್ಥಳ …

Read More »

ಈತನ ವರ್ತನೆ ನೋಡುಗರಿಗೆ ಪುಕ್ಕಟೆ ಮನರಂಜನೆ

ಮಂಗಳೂರು:ಯೋಗ ದಿನಾಚರಣೆ ನಾಳೆ ನಡೆಯುತ್ತೆ. ಅದಕ್ಕಿಗಾಗಲ್ಲೇ ಹಲವು ವಿದ್ಯಾಸಂಸ್ಥೆಗಳಲ್ಲಿ ಹಾಗೂ ಮೈದಾನಗಳಲ್ಲಿ ತರಭೇತಿ ನಡೆಯುತ್ತಿದೆ. ಆದ್ರೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ವ್ಯಕ್ತಿಯೊರ್ವ ತರಭೇತಿ ಕೇಂದ್ರಗಳನ್ನು ಬಿಟ್ಟು ರಸ್ತೆ ಮದ್ಯೆದಲ್ಲಿ ಯೋಗಾಭ್ಯಾಸ ನಡೆಸಿದ್ದಾನೆ. ಇಷ್ಟೇ ಅಲ್ಲದೇ ಯೋಗದ ಜೊತೆಗೆ ಕರಾಟೆಯ ಒಂದೆರಡು ಜಲಕ್ ಸಹ ನೀಡಿದ್ದಾನೆ. ಈತನ ಈ ಹುಚ್ಚು ವರ್ತನೆ ನೆರೆದಿದ್ದ ಜನರಿಗೆ ಒಂದಿಷ್ಟು ಕಾಲ ಮನರಂಜನೆ ತಂದಿತ್ತು. ಈತ ಮದ್ಯಪಾನ ಮಾಡಿದ್ದನಾ ಅಥವಾ ಮಾನಸಿಕ …

Read More »

ಲಂಚ ಸ್ವೀಕರಿಸುವಾಗ ತಹಶಿಲ್ದಾರ್ ಎಸಿಬಿ ಬಲೆಗೆ

1.25 ಲಕ್ಷ ಲಂಚ ಸ್ವೀಕರಿಸುವಾಗ ತಹಶಿಲ್ದಾರ್ ಎಸಿಬಿ ಬಲೆಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ನಡೆದಿದೆ.ಪುತ್ತೂರು ತಹಶಿಲ್ದಾರ್ ಡಾ.ಪ್ರದೀಪ್ ಎಸಿಬಿ ಬಲೆಗೆ ಬಿದಿದ್ದು, ಊಟದ ಬಿಲ್ ಬಿಡುಗಡೆ ಮಾಡಲು ಲಂಚ ಕೇಳಿದ್ದರು. ಲೋಕಸಭಾ ಚುನಾವಣೆ ವೇಳೆ ಊಟೋಪಚಾರದ 9.37 ಲಕ್ಷ ಹಣ ಬಿಡುಗಡೆ ಮಾಡಬೇಕಿತ್ತು. ಆದ್ರೇ ಈ ಹಣ ಬಿಡುಗಡೆ ಮಾಡುವುದಕ್ಕೆ 1.25 ಲಕ್ಷ ಹಣ ಕೇಳಿ, ಇಂದು ಆ ಹಣವನ್ನು ಪಡೆಯುವಾಗ ಸಿಕ್ಕಿ ಬಿದಿದ್ದಾರೆ. ಎಸಿಬಿ …

Read More »