Breaking News

ದಾವಣಗೆರೆ

ದಾವಣಗೆರೆಯಲ್ಲು ಯೋಗ ದಿನದ ಸಂಭ್ರಮ.

ಇಂದು ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲು ಯೋಗ ದಿನದ ಸಂಭ್ರಮ ಮನೆಮಾಡಿತ್ತು. ಜಿಲ್ಲಾಡಳಿತ, ಆಯುಷ್ ಇಲಾಖೆ ಮತ್ತು ಯೋಗ ಒಕ್ಕೂಟದಿಂದ ಯೋಗ ಪ್ರದರ್ಶನ ಮಾಡಲಾಯಿತು. ದಾವಣಗೆರೆ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮದಲ್ಲಿ ಯೋಗ ಕಾರ್ಯಕ್ರಮದಲ್ಲಿ ಯೋಗಪಟುಗಳು ಸೇರಿ ಸಾವಿರಾರು ಜನರು ಭಾಗಿಯಾಗಿದ್ದರು. ಪೇಜಾವರದ ವಿಶ್ವೇಶತೀರ್ಥ ಶ್ರೀಗಳು , ವೈದ್ಯ ಚನ್ನಬಸವಣ್ಣ, ಸೇರಿಂದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

Read More »

ಪಾದಯಾತ್ರೆ ಮಾಡಲಿ. ಇದರಿಂದ ರೋಗವಾದ್ರು ದೂರವಾಗುತ್ತವೆ

ಜಿಂದಾಲ್ ಕಂಪನಿಗೆ ಸರ್ಕಾರ ಭೂಮಿ ನೀಡಿಕೆ ವಿಚಾರವಾಗಿ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ ನೀಡಿ ಇದು ಹಿಂದೆ ಬಿಜೆಪಿಯವರ ಕಾಲದಲ್ಲಿ ಆಗಿರೋದು. ಜೆಡಿಎಸ್ , ಕಾಂಗ್ರೆಸ್ ನವರು ಮಾಡಿರೋದಲ್ಲ. ಈ ಬಗ್ಗೆ ಪರಾಮರ್ಶೆಗೆ ಸಂಪುಟ ಉಪಸಮಿತಿ ರಚಿಸಲಾಗಿದೆ. ಉಪಸಮಿತಿಯಲ್ಲಿ ಎಲ್ಲರು ಹಿರಿಯರು ಇದ್ದಾರೆ. ಅವರೇ ಒಳ್ಳೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇನ್ನೂ ಜಿಂದಾಲ್ ವಿರುದ್ಧ ಬಿಜೆಪಿ ಪಾದಯಾತ್ರೆ ವಿಚಾರವಾಗಿ ಅವರು ಪಾದಯಾತ್ರೆ ಮಾಡಲಿ. ಇದರಿಂದ ರೋಗವಾದ್ರು ದೂರವಾಗುತ್ತವೆ ಎಂದು ಕಾಂಗ್ರೆಸ್ ಶಾಸಕ …

Read More »

ಜಿಲ್ಲಾಪಂಚಾಯಿತಿ ಆವರಣ ಶುಚಿಗೊಳಿಸಲು ಸಿಇಓ ಶಪಥ

ಜಿಲ್ಲಾಪಂಚಾಯಿತಿ ಆವರಣ ಶುಚಿಗೊಳಿಸಲು ಸಿಇಓ ಶಪಥ ಮಾಡಿದ್ದಾರೆ. ದಾವಣಗೆರೆ ಜಿಲ್ಲಾಪಂಚಾಯಿತಿ ಸಿಇಓ ಬಸವರಾಜೇಂದ್ರ ರಿಂದ ಜಿಲ್ಲಾಪಂಚಾಯಿತಿ ಆವರಣ ಕ್ಲೀನ್ ಮಾಡುವ ಹೊಸ ಅಭಿಯಾನ ಕೈಗೆತ್ತಿಗೊಂಡಿದ್ದು, ಸಿಇಓ ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡ ಸಾಥ್ ನೀಡಿದರು. ಇನ್ನೂ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಆಯ್ದು, ಪೊರಕೆ ಹಿಡಿದು ಕ್ಲೀನ್ ಮಾಡಿದ ಸಿಇಓ ಪ್ರತೀ ಶನಿವಾರ ಸರ್ಕಾರಿ ಕಚೇರಿ ಆವರಣ ಕ್ಲೀನ್ ಮಾಡಲು ನಿರ್ದರಿಸಿದ್ದಾರೆ. ಈ ಒಂದು ಉತ್ತಮ ಕಾರ್ಯ …

Read More »

ಖೋಟಾ ನೋಟು ಚಲಾವಣೆಗೆ ಯತ್ನ.

ಖೋಟಾ ನೋಟು ಚಲಾವಣೆಗೆ ಯತ್ನಿಸಿದ ವ್ಯಕ್ತಿ ಬಂದಿಸಿದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ. ಸಿಗಂದೂರೇಶ್ವರಿ ಹೋಟೆಲ್ ನಲ್ಲಿ ಉತ್ತರ ಪ್ರದೇಶ ಮೂಲದ ವ್ಯಕ್ತಿ ಟಿಪನ್ ಮಾಡಿ ೫೦೦ ರೂ. ನೋಟು ನೀಡಿದ್ದ. ಖೋಟಾ ನೋಟು ನೋಡಿ ದಂಗಾದ ಹೋಟೆಲ್ ಮಾಲಿಕ ಕೂಡಲೇ ಸ್ಥಳೀಯ ಪೋಲಿಸ್ ಠಾಣೆಗೆ ಮಾಹಿತಿ ನೀಡಿದರು. ವಶಕ್ಕೆ ಪಡಿದಪೊಲೀಸರು ನೋಟಿನ ಬಗ್ಗೆ ವಿಚಾರಣೆ ಮಾಡಿದಾಗ ನನಗೆ ಗೊತ್ತಿಲ್ಲ ಎಂದು ತಡವರಿಸಿದ್ದಾನೆ. ನಂತರ ಪೋಲಿಸರು ಠಾಣೆಗೆ ಕರೆದೊಯ್ದು ವಿಚಾರಣೆ …

Read More »

ಐ ಎಮ್ ಎ ವಂಚನೆ, ದಾವಣಗೆರೆಯಲ್ಲಿ ಐದು ನೂರಕ್ಕೂ ಹೆಚ್ಚು ಪ್ರಕರಣ

ಐ ಎಮ್ ಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ದಾವಣಗೆರೆಯಲ್ಲಿ ಐದು ನೂರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ದಾವಣಗೆರೆ ವಿವಿಧ ಠಾಣೆಗಳಲ್ಲಿ ಇನ್ನೂ ದೂರುಗಳ ಸರಣಿ ಮುಂದುವರೆದಿದೆ. ೧೮ ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಪ್ರಕರಣ ದಾಖಲಾಗಿವೆ. ಈ ಕುರಿತು ಐ ಎಮ್ ಎ ಕಚೇರಿಯಿಂದ ನಾಲ್ಕು ಕಂಪ್ಯೂಟರ್, ಮತ್ತು ಹಲವು ದಾಖಲೆಗಳನ್ನ ವಷಪಡಿಸಕೊಳ್ಳಲಾಗಿದೆ. ಮಹತ್ವದ ದಾಖಲೆಗಳ ಬಗ್ಗೆ ಇನ್ನೂ ತನಿಖೆ ಮುಂದುವರೆದಿದೆ.ವಶಪಡಿಸಿಕೊಂಡ ದಾಖಲೆಗಳನ್ನ ಎಸ್ ಐ ಟಿ ಗೆ …

Read More »

ಮಾಜಿ ಸಿಎಮ್ ಸಂಬಂಧಿ ಎಂದು ಹೇಳಿಕೊಂಡು ಲಕ್ಷಾಂತರ ವಂಚನೆ

ಮಾಜಿ ಸಿಎಂ ಸಿದ್ದರಾಮಯ್ಯನ ಸಂಬಂಧಿಗಳೆಂದು ಹೇಳಿಕೊಂಡು ಯುವಕರಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದೊಡ್ಡೆ ಅರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಹತ್ತು ಜನ ಯುವಕರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಮಂಡ್ಯ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬೆನಕನಹಳ್ಳಿ ಗ್ರಾಮದ ಮಹೇಶ್.ಬಿ.ಎಂ, ಬಿ.ಎಂ.ವಿಜಯಕುಮಾರ್, ಬಿ.ಎಂ.ನಟರಾಜ ಎಂಬುವವರು ಬರೋಬ್ಬರಿ 60 ಲಕ್ಷ ವಂಚನೆ ಮಾಡಿದ್ದಾರೆ. ಮೂವರು ಸಹೋದರರು ಸೇರಿಕೊಂಡು ಲಕ್ಷಾಂತರ ಹಣ ಪಂಗನಾಮ ಹಾಕಿದ್ದು, …

Read More »