Breaking News

ಐ ಎಮ್ ಎ ವಂಚನೆ, ದಾವಣಗೆರೆಯಲ್ಲಿ ಐದು ನೂರಕ್ಕೂ ಹೆಚ್ಚು ಪ್ರಕರಣ

ಐ ಎಮ್ ಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ದಾವಣಗೆರೆಯಲ್ಲಿ ಐದು ನೂರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ದಾವಣಗೆರೆ ವಿವಿಧ ಠಾಣೆಗಳಲ್ಲಿ ಇನ್ನೂ ದೂರುಗಳ ಸರಣಿ ಮುಂದುವರೆದಿದೆ. ೧೮ ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಪ್ರಕರಣ ದಾಖಲಾಗಿವೆ. ಈ ಕುರಿತು ಐ ಎಮ್ ಎ ಕಚೇರಿಯಿಂದ ನಾಲ್ಕು ಕಂಪ್ಯೂಟರ್, ಮತ್ತು ಹಲವು ದಾಖಲೆಗಳನ್ನ ವಷಪಡಿಸಕೊಳ್ಳಲಾಗಿದೆ. ಮಹತ್ವದ ದಾಖಲೆಗಳ ಬಗ್ಗೆ ಇನ್ನೂ ತನಿಖೆ ಮುಂದುವರೆದಿದೆ.ವಶಪಡಿಸಿಕೊಂಡ ದಾಖಲೆಗಳನ್ನ ಎಸ್ ಐ ಟಿ ಗೆ ವರ್ಗಾಯಿಸುವ ವಿಚಾರದಬಗ್ಗೆ ಸರ್ಕಾರದಿಂದ ಇನ್ನೂ ಆದೇಶ ಬಂದಿಲ್ಲ. ಆದೇಶ ಬಂದರೆ ದಾಖಲೆಗಳನ್ನ ಹಸ್ತಾಂತರ ಮಾಡುತ್ತೇವೆ ಎಂದು ದಾವಣಗೆರೆಯಲ್ಲಿ ಅಡಿಷನಲ್ ಎಸ್.ಪಿ.ಉದೇಶ್ ಹೇಳಿಕೆ ನೀಡಿದರು.

Share News

About admin

Check Also

ದಾವಣಗೆರೆ : ಚಿನ್ನಾಭರಣ ಕಳವು ಪ್ರಕರಣವನ್ನು ಭೇದಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿ.

ದಾವಣಗೆರೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನ್ಯಾಮತಿ ಶಾಖೆಯಿಂದ ಕಳುವಾಗಿದ್ದ ಚಿನ್ನವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕರ್ನಾಟಕ ಪೊಲೀಸರು ಆರು …

Leave a Reply

Your email address will not be published. Required fields are marked *