ಜಿಲ್ಲಾಪಂಚಾಯಿತಿ ಆವರಣ ಶುಚಿಗೊಳಿಸಲು ಸಿಇಓ ಶಪಥ ಮಾಡಿದ್ದಾರೆ. ದಾವಣಗೆರೆ ಜಿಲ್ಲಾಪಂಚಾಯಿತಿ ಸಿಇಓ ಬಸವರಾಜೇಂದ್ರ ರಿಂದ ಜಿಲ್ಲಾಪಂಚಾಯಿತಿ ಆವರಣ ಕ್ಲೀನ್ ಮಾಡುವ ಹೊಸ ಅಭಿಯಾನ ಕೈಗೆತ್ತಿಗೊಂಡಿದ್ದು, ಸಿಇಓ ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡ ಸಾಥ್ ನೀಡಿದರು. ಇನ್ನೂ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಆಯ್ದು, ಪೊರಕೆ ಹಿಡಿದು ಕ್ಲೀನ್ ಮಾಡಿದ ಸಿಇಓ ಪ್ರತೀ ಶನಿವಾರ ಸರ್ಕಾರಿ ಕಚೇರಿ ಆವರಣ ಕ್ಲೀನ್ ಮಾಡಲು ನಿರ್ದರಿಸಿದ್ದಾರೆ. ಈ ಒಂದು ಉತ್ತಮ ಕಾರ್ಯ ಹೀಗೆ ಎಲ್ಲಾ ಕಡೆಯೂ ಮುಂದುವರೆದರೇ ನಗರ ಪ್ರದೇಶಗಳು ಸ್ವಚ್ಚ ನಗರವಾಗಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





