ಬೆಂಗಳೂರು : ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್ ಕತ್ತಿ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
‘ರಾಜ್ಯ ವಿಧಾನ ಸಭೆಯ ಹಿರಿಯ ನಾಯಕರಾಗಿದ್ದ ಉಮೇಶ್ ಕತ್ತಿ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. 25ನೇ ವಯಸ್ಸಿಗೆ ವಿಧಾನಸಭೆ ಪ್ರವೇಶಿಸಿದ್ದ ಅವರು ಉತ್ತರ ಕರ್ನಾಟಕದ ಗಟ್ಟಿ ಧ್ವನಿಯಾಗಿದ್ದರು.
ಇದ್ದುದನ್ನು ಇದ್ದಂತೆ ಹೇಳುವ ನೇರ ನಡೆ-ನುಡಿಯ ವ್ಯಕ್ತಿತ್ವ ಹೊಂದಿದ್ದ ಉಮೇಶ್ ಕತ್ತಿ ಅವರು ಜನರ ಸಮಸ್ಯೆ, ಭಾವನೆಗಳಿಗೆ ಧ್ವನಿ ಆಗುವಾಗ ಆಡಳಿತ ಪಕ್ಷ, ವಿರೋಧ ಪಕ್ಷ ಎಂದು ಭೇದ ಮಾಡುತ್ತಿರಲಿಲ್ಲ. ಅದೇ ಕಾಲಕ್ಕೆ ಎಂಥದೇ ಗಂಭೀರ ಪರಿಸ್ಥಿತಿಯನ್ನು ನವಿರು ಹಾಸ್ಯದ ಮೂಲಕ ತಿಳಿಗೊಳಿಸುವ ಸ್ವಭಾವ ಅವರದಾಗಿತ್ತು. ಸಹಕಾರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದ ಕತ್ತಿ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಲವು ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು. ಸಕ್ಕರೆ ಉದ್ಯಮಕ್ಕೆ ಅವರ ಕೊಡುಗೆ ಮರೆಯುವಂತಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

