Breaking News

ಗಂಗಾವತಿ: ಅಕ್ಕಿ ಸಂಗ್ರಹ ಟ್ಯಾಂಕ್‌ ಒಡೆದು ಯುವಕ ಸಾವು!!

ಮಹಾರಾಣ ಪ್ರತಾಪ್ ಸಿಂಗ್ ವೃತ್ತದ ಸಮೀಪದ ಎನ್.ಆರ್ ರೈಸ್ ಮಿಲ್‌ನಲ್ಲಿ ಆಪರೇಟರ್ ಕೆಲಸ ಮಾಡುವ ಯುವಕ ಅಕ್ಕಿ ಸಂಗ್ರಹದ ಟ್ಯಾಂಕ್‌ ಒಡೆದು, ಅಕ್ಕಿಯಡಿ ಸಿಲುಕಿ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.ಅಕ್ಕಿ ಸಂಗ್ರಹದ ಟ್ಯಾಂಕ್‌ನಿಂದ ಅಕ್ಕಿ ಹೊರ ಬಿಡುವ ವೇಳೆ ತಾಂತ್ರಿಕ ದೋಷ ಸಂಭವಿಸಿ, ಸುಮಾರು 250 ಟನ್ ಅಕ್ಕಿ ಸಂಗ್ರಹದ ಟ್ಯಾಂಕ್ ಒಡೆದು ಅವಘಡ ಸಂಭವಿಸಿದೆ.ಕೂಡಲೇ ಅಗ್ನಿಶಾಮಕ ದಳ, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದರು. 3‌ ಜೆಸಿಬಿ, 1 ಕ್ರೇನ್ ಸಹಾಯದಿಂದ 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಅಕ್ಕಿ ತೆರವು ಮಾಡಿದ ನಂತರ ಯುವಕನ ಮೃತದೇಹ ಪತ್ತೆಯಾಗಿದೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *