ಆಟೋ ಮಾಲೀಕನೊಬ್ಬ ತನ್ನ ಆಟೋವನ್ನು 12 ವರ್ಷದ ಬಾಲಕನಿಗೆ ಚಾಲನೆಗೆ ನೀಡಿದಿದ್ದು, ಬಾಲಕ ಆಟೋ ಓಡಿಸುತ್ತಿದ್ದ ವೇಳೆ ಯಲಬುರ್ಗಾ ಪಟ್ಟಣದ ಅಂಗಡಿಯೊಂದರ ಬಳಿ ಮೊಬೈಲ್‌ನಲ್ಲಿ ಮಾತನಾಡುತ್ತಾ ನಿಂತಿದ್ದ ರಾಜಶೇಖರ ಪಾಟೀಲ್ ಎಂಬ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದ. ಈ ಅಪಘಾತದಲ್ಲಿ ರಾಜಶೇಖರ ಪಾಟೀಲ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಅವರು ಕೊಪ್ಪಳದ ಯಲಬುರ್ಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಗಂಗಾವತಿ ನಿವಾಸಿಯಾಗಿದ್ದರು. ಗಂಗಾವತಿ ಹಿರಿಯ ಸಿವಿಲ್ ನ್ಯಾಯಾಲಯವು 12 ವರ್ಷದ ಅಪ್ರಾಪ್ತನಿಗೆ ಆಟೋ ಚಾಲನೆಗೆ ನೀಡಿದ್ದ ಮಾಲೀಕನ ವಿರುದ್ಧ ತೀರ್ಪು ನೀಡಿದ್ದು, ಮೃತ ವ್ಯಕ್ತಿಯ ಕುಟುಂಬಕ್ಕೆ 1,41,61,580 ರೂ.ಅಪ್ರಾಪ್ತರ ಕೈಗೆ ವಾಹನ ನೀಡುವ ಮೊದಲು ಎಷ್ಟೊಂದು ಮುನ್ನೆಚ್ಚರಿಕೆ ಅಗತ್ಯ ಎಂಬುದನ್ನು ಈ ತೀರ್ಪು ಮತ್ತೊಮ್ಮೆ ಸಾಬೀತುಪಡಿಸಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

