BigTv News
September 12, 2022
Breaking News, ಕೊಪ್ಪಳ
ಕೊಪ್ಪಳ : ಪಿಎಸ್ ಐ ನೇಮಕಾತಿ ಹಗರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪಿಎಸ್ ಐ ಹುದ್ದೆಗಾಗಿ ಶಾಸಕರು 15 ಲಕ್ಷ ರೂ. ಪಡೆದುಕೊಂಡಿದ್ದಾರೆ ಎಂಬ ಆಡಿಯೋ ವೈರಲ್ ಬೆನ್ನಲ್ಲೇ ಶಾಸಕರು ಹಣ ವಾಪಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ಪರಸಪ್ಪ ಮೇಗೂರು ಎಂಬುವರು ಪಿಎಸ್ ಐ ಹುದ್ದೆಗಾಗಿ ಶಾಸಕ ಬಸವರಾಜ ದಡೇಸಗೂರು ಅವರಿಗೆ 15 ಲಕ್ಷ ರೂ. ನೀಡಿರುವುದಾಗಿ ಹೇಳಿಕೊಂಡಿದ್ದ ಆಡಿಯೋ ವೈರಲ್ ಆಗಿತ್ತು. ಆಡಿಯೋ ವೈರಲ್ ಬೆನ್ನಲ್ಲೇ ಪರಸಪ್ಪಗೆ ಶಾಸಕರು …
Read More »
BigTv News
September 9, 2022
Breaking News, ಕೊಪ್ಪಳ
ಕೊಪ್ಪಳ: ನಗರದ ವಿವಿಧೆಡೆ ಹಲವು ಸಂಘ ಸಂಸ್ಥೆಗಳು ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ 9ನೇ ದಿನದ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ಆರಂಭವಾಗಿದೆ. ರಾತ್ರಿ ಕೆಲ ಹೊತ್ತು ಮಳೆ ಬಂದ ಕಾರಣ ಸಂಘಟಕರು ವಿಸರ್ಜನಾ ಮೆರವಣಿಗೆ ನಡೆಯುವ ಬಗ್ಗೆ ಆತಂಕಗೊಂಡಿದ್ದರು. ಕೆಲವೇ ಹೊತ್ತಿನಲ್ಲಿ ಮಳೆ ನಿಂತಿದ್ದರಿಂದ ಸಂಘಟಕರ ಹಾಗೂ ಯುವಕರ ಸಂಭ್ರಮಕ್ಕೆ ಪಾರವೇ ಇಲ್ಲದಂತಾಯಿತು. ಗಡಿಯಾರ ಕಂಬದ ಬಳಿಯ ಗಜಾನನ ಮಿತ್ರ ಮಂಡಳಿ, ವಾರಕಾರ ಓಣಿಯ ವಿಜಯವಿನಾಯಕ ಮಿತ್ರ ಮಂಡಳಿ ಮತ್ತು ಕೋಟೆ …
Read More »
BigTv News
August 21, 2022
Breaking News, ಕೊಪ್ಪಳ
ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಗುಂಪು ಘರ್ಷಣೆ ನಡೆದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಮತ್ತೆ ಐದು ದಿನಗಳ ವಿಸ್ತರಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಆದೇಶ ಹೊರಡಿಸಿದ್ದಾರೆ. ಆ. ೧೧ ರಂದು ಹುಲಿಹೈದರ್ ಗ್ರಾಮದಲ್ಲಿ ಗುಂಪು ಘರ್ಷಣೆ ನಡೆದಿತ್ತು. ಈ ಘಟನೆಯಿಂದ ಇಬ್ಬರು ಸಾವನ್ನಪ್ಪಿದ್ದರು. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಗ್ರಾಮದಲ್ಲಿ ಆ. ೨೦ ವರರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಆದರೆ ಇದೀಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ …
Read More »
BigTv News
May 12, 2022
Breaking News, ಕೊಪ್ಪಳ
ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಬಗ್ಗೆ ಮಾತನಾಡಿರುವ ಬಿಜೆಪಿ ಸಂಸದ ಕರಡಿ ಸಂಗಣ್ಣ ಅವರ ನಾಯಕತ್ವ ನಂಬಿಕೊಂಡರೆ ಚುನಾವಣೆ ಗೆದ್ದಂಗೆ ಎಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಕಾರ್ಯಕ್ರಮವಾಗಲಿ ರಾಷ್ಟ್ರೀಯ ನಾಯಕರ ಫೋಟೋಗಳನ್ನು ಹಾಕುತ್ತಾರೆ. ಎಲ್ಲಿಯೇ ನಡೆದರೂ ಅವರ ಫೋಟೋಗಳಿರುತ್ತವೆ. ಇದನ್ನು ಯಾರು ಹೇಳಿದ್ದಾರೋ ಏನೋ ಗೊತ್ತಿಲ್ಲ. ಹಾಕಿಕೊಳ್ಳಲಿ ಅದರಲ್ಲಿ ತಪ್ಪೇನು ಇಲ್ಲ. ಆದರೆ ಅದಕ್ಕೆಂದು ಒಂದು ನೀತಿ, ನಿಯಮ ಇರುತ್ತೆ ಅಲ್ಲವಾ. …
Read More »
BigTv News
May 11, 2022
Breaking News, ಕೊಪ್ಪಳ
ಕೊಪ್ಪಳ: ಕಾಮಗಾರಿಗಾಗಿ ಗುಂಡಿ ಅಗೆಯಲಾಗಿದ್ದು, ನಿನ್ನೆ ಮಳೆಯಾದ ಕಾರಣ ಗುಂಡಿ ತುಂಬಿಕೊಂಡಿದೆ. ಆ ಗುಂಡಿಯಲ್ಲಿ ಬಿದ್ದ ಬಾಲಕಿ ಶ್ರೀದೇವಿ ಸಾವನಪ್ಪಿರುವ ಘಟನೆ ಕೊಪ್ಪಳ ನಗರದ ಹೊಸಪೇಟೆ ರಸ್ತೆಯಲ್ಲಿರೋ KS ಅಸ್ಪತ್ರೆ ಮುಂಭಾಗದಲ್ಲಿ ಘಟನೆ ನಡೆದಿದೆ. 15 ವರ್ಷದ ಬಾಲಕಿ ಶ್ರೀದೇವಿ ವಿದಿ ಆಟಕ್ಕೆ ಬಲಿಯಾದ ಬಾಲಕಿ. ಊಟ ಕೊಡಲು ಬಂದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ನಿನ್ನೆ ಇಂದ ಪಾಲಕರು ಹುಡಕಾಡಿದ್ರೂ ಶ್ರೀದೇವಿ ಕಂಡುಬಂದಿಲ್ಲಾ. ಇಂದು ಗುಂಡಿಯಲ್ಲಿ ಶ್ರೀದೇವಿ ಮೃತ …
Read More »
admin
May 9, 2022
Breaking News, ಕೊಪ್ಪಳ
ಕೊಪ್ಪಳ: ಜಮೀನಿನಲ್ಲಿ ಸಿಡಿಲು ಬಡಿದು 65 ವರ್ಷದ ವೃದ್ಧ ಸಾವನ್ನಪ್ಪಿರುವ ದುರ್ಘಟನೆ ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ಬಳಿ ನಡೆದಿದೆ. ಜಮೀನಿಗೆ ತೆರಳಿದ್ದಾಗ ಜಮೀನಿನಲ್ಲಿ ಸಿಡಿಲು ಬಡಿದು 65 ವರ್ಷದ ಶಿವಪ್ಪ ಸಾವನ್ನಪ್ಪಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Read More »
admin
March 4, 2022
Breaking News, ಕೊಪ್ಪಳ
ಕೊಪ್ಪಳ : ಯುದ್ದ ಪೀಡಿತ ಉಕ್ರೇನ್ ನಿಂದ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ಯುವ ಸಂಗಮೇಶ ಸೊಪ್ಪಿಮಠ ಸ್ವಗ್ರಾಮಕ್ಕೆ ಮರಳಿದ್ದಾನೆ..ಮನೆಗೆ ಬರುತ್ತಿದ್ದ ಹಾಗೆ ಕುಟುಂಸ್ಥರು ನಿಟ್ಟುಸಿರು ಬಿಟ್ಟಿದ್ದು ಆರತಿ ಮಾಡಿ ಆತನನ್ನ ಸ್ವಾಗತಿಸಿದ್ದಾರೆ. ತಂದೆ-ತಾಯಿಗೆ ನಮಸ್ಕರಿಸಿ ಸಂಗಮೇಶ ಭಾವುಕರಾಗಿದ್ದಾರೆ. ಉಕ್ರೇನ್ ನಲ್ಲಿ ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿ ಸಂಗಮೇಶ ಹಂಗೇರಿ ಮೂಲಕ ದೆಹಲಿಗೆ ಬಂದಿದ್ದಾರೆ. ದೆಹಲಿಯಿಂದ ಬೆಂಗಳೂರು, ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಂಗಮೇಶನನ್ನು ಕುಟುಂಬಸ್ಥರು …
Read More »
admin
February 9, 2022
Breaking News, ಕೊಪ್ಪಳ
ಕೊಪ್ಪಳ: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ಮೂವರನ್ನು ಬಂಧಿಸಲಾಗಿದೆ.ಹಿಜಾಬ್ ಕುರಿತಂತೆ ಯತ್ನಾಳ್ ನೀಡಿದ ಹೇಳಿಕೆಯ ವಿಡಿಯೋ ತಿರುಚಿ ಜೀವ ಬೆದರಿಕೆ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿತ್ತು. ಕಾಸಿಂಸಾಬ್, ರಿಯಾಜ್, ದಾದಾ ಕಲಂದರ್, ಹುಸೇನ್ ಸಾಧಿಕ್ ಎಂಬುವರ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯತ್ನಾಳ್ ಅವರ ಹೇಳಿಕೆ ಎಡಿಟ್ ಮಾಡಿದ ವಿಡಿಯೋ ಅಪ್ ಲೋಡ್ ಮಾಡಿರುವ ಬಗ್ಗೆ ಶಿವಾನಂದ ಶರಣಪ್ಪ …
Read More »
admin
January 24, 2022
Breaking News, ಕೊಪ್ಪಳ
ಕೊಪ್ಪಳ: ಕೊರೊನಾ ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ಆತಂಕದ ಮಧ್ಯೆ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಸೋಂಕು ನಿವಾರಣೆಗೆ ಹಗಲಿರುಳು ಶ್ರಮಿಸುತ್ತಿದ್ದರೂ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಕೊಪ್ಪಳ ಜಿಲ್ಲೆಯಲ್ಲಿ ಒಂದೇ ದಿನ 73 ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಟ್ಟಿದೆ. ಜಿಲ್ಲೆಯ ವಿವಿಧ ಶಾಲೆಗಳಲ್ಲಿ 73 ವಿದ್ಯಾರ್ಥಿಗಳು, 6 ಶಿಕ್ಷಕರು ಹಾಗೂ ಒಬ್ಬ ಅಡುಗೆ ಸಹಾಯಕರಿಗೆ ಸೋಂಕು ದೃಢ ಪಟ್ಟಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತವು 9 ಶಾಲೆಗಳಿಗೆ ರಜೆ ನೀಡಿದೆ. ಕೊಪ್ಪಳ ಜಿಲ್ಲೆ …
Read More »
admin
January 24, 2022
Breaking News, ಕೊಪ್ಪಳ
ಕೊಪ್ಪಳ: ಆಕಸ್ಮಿಕ ಬೆಂಕಿ ತಗುಲಿ ಸುಮಾರು 5.50 ಲಕ್ಷ ರೂಪಾಯಿ ಮೌಲ್ಯದ ಕಬ್ಬು ಸುಟ್ಟು ಕರಕಲಾಗಿದೆ. ಕೊಪ್ಪಳ ತಾಲೂಕಿನ ಭಾಗ್ಯನಗರದ ರೈತ ಈರಣ್ಣ ಬುಲ್ಟಿ ಎಂಬುವವರಿಗೆ ಸೇರಿದ ಕಬ್ಬು ಬೆಂಕಿಗಾಹುತಿಯಾಗಿದೆ. ಸುಮಾರು 6 ಎಕೆರೆ ಪ್ರದೆಶದಲ್ಲಿ ರೈತ ಈರಣ್ಣ ಕಬ್ಬು ಬೆಳೆದಿದ್ದರು. ಬೆಳೆ ಕಟಾವುವಿಗೆ ಬಂದಿತ್ತು. ಆದರೆ ಆಕಸ್ಮಿಕ ಬೆಂಕಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
Read More »