ಕೊಪ್ಪಳ: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ಮೂವರನ್ನು ಬಂಧಿಸಲಾಗಿದೆ.ಹಿಜಾಬ್ ಕುರಿತಂತೆ ಯತ್ನಾಳ್ ನೀಡಿದ ಹೇಳಿಕೆಯ ವಿಡಿಯೋ ತಿರುಚಿ ಜೀವ ಬೆದರಿಕೆ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿತ್ತು.
ಕಾಸಿಂಸಾಬ್, ರಿಯಾಜ್, ದಾದಾ ಕಲಂದರ್, ಹುಸೇನ್ ಸಾಧಿಕ್ ಎಂಬುವರ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಯತ್ನಾಳ್ ಅವರ ಹೇಳಿಕೆ ಎಡಿಟ್ ಮಾಡಿದ ವಿಡಿಯೋ ಅಪ್ ಲೋಡ್ ಮಾಡಿರುವ ಬಗ್ಗೆ ಶಿವಾನಂದ ಶರಣಪ್ಪ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

