Breaking News

ಯುದ್ಧ ಪೀಡಿತ ಉಕ್ರೇನ್ ನಿಂದ ಮರಳಿ ಕೊಪ್ಪಳ ಬಂದ ಯುವಕ

ಕೊಪ್ಪಳ : ಯುದ್ದ ಪೀಡಿತ ಉಕ್ರೇನ್ ನಿಂದ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ಯುವ ಸಂಗಮೇಶ ಸೊಪ್ಪಿಮಠ ಸ್ವಗ್ರಾಮಕ್ಕೆ ಮರಳಿದ್ದಾನೆ..ಮನೆಗೆ ಬರುತ್ತಿದ್ದ ಹಾಗೆ ಕುಟುಂಸ್ಥರು ನಿಟ್ಟುಸಿರು ಬಿಟ್ಟಿದ್ದು ಆರತಿ ಮಾಡಿ ಆತನನ್ನ ಸ್ವಾಗತಿಸಿದ್ದಾರೆ. ತಂದೆ-ತಾಯಿಗೆ ನಮಸ್ಕರಿಸಿ ಸಂಗಮೇಶ ಭಾವುಕರಾಗಿದ್ದಾರೆ.

ಉಕ್ರೇನ್ ನಲ್ಲಿ ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿ ಸಂಗಮೇಶ ಹಂಗೇರಿ ಮೂಲಕ ದೆಹಲಿಗೆ ಬಂದಿದ್ದಾರೆ. ದೆಹಲಿಯಿಂದ ಬೆಂಗಳೂರು, ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಂಗಮೇಶನನ್ನು ಕುಟುಂಬಸ್ಥರು ಸ್ವಾಗತಿಸಿದ್ದಾರೆ.

Share News

About admin

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *