BigTv News
September 14, 2024
Breaking News, ರಾಯಚೂರು
ರಾಯಚೂರು: ವಿಮಾನ ನಿಲ್ದಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸುವಂತೆ ಕೇಂದ್ರ ವಿಮಾನಯಾನ ಸಚಿವರೊಂದಿಗೆ ರಾಯಚೂರು ಲೋಕಸಭಾ ಸದಸ್ಯರಾದ ಜಿ ಕುಮಾರ್ ನಾಯಕ್ ಹಾಗೂ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಸುಧೀರ್ಘವಾಗಿ ಚರ್ಚಿಸಿದರು. ನವದೆಹಲಿಯಲ್ಲಿ ವಿಮಾನಯಾನ ಸಚಿವರನ್ನು ಭೇಟಿಯಾಗಿ ರಾಯಚೂರು ವಿಮಾನ ನಿಲ್ದಾಣದ ಕುರಿತು ಮಾತನಾಡಿ,ರಾಯಚೂರಿನಲ್ಲಿ ವಿಮಾನ ನಿಲ್ದಾಣ ತ್ವರಿತಗತಿಯಲ್ಲಿ ಕಾಮಗಾರಿ ಪ್ರಾರಂಬಿಸುವ ಕುರಿತು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಅನುಮತಿ ನೀಡಲು ಅಗತ್ಯ …
Read More »
BigTv News
September 13, 2024
Breaking News, ರಾಯಚೂರು
ಲಿಂಗಸುಗೂರು: ತಾಲ್ಲೂಕಿನ ಆನೆಹೊಸೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗೆ 132/11ಕೆವಿ ವಿದ್ಯುತ್ ವಿತರಣಾ ಉಪ ಕೇಂದ್ರ ಮಂಜೂರಾತಿ ಹಂತದಲ್ಲಿದೆ. ಮಂಜೂರಾತಿ ಹಂತದಲ್ಲಿ ಇರುವಾಗಲೇ ಸ್ಥಳಾಂತರದ ಶಂಕೆ ಕೇಳಿಬಂದಿದ್ದು ರೈತರ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ. 2023ರಲ್ಲಿ ತಾಲ್ಲೂಕಿನ ಆನೆಹೊಸೂರು, ಆನ್ವರಿ, ಗುಂತಗೋಳ ಗ್ರಾಮಗಳಲ್ಲಿ 110/11ಕೆವಿ ವಿದ್ಯುತ್ ವಿತರಣಾ ಉಪಕೇಂದ್ರ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು, ಈಚೆಗೆ ಜರುಗಿದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ 110/11ಕೆವಿ ಬದಲು 132/11ಕೆವಿ ಮಾರ್ಪಡಿಸಿ ಸಂಪೂರ್ಣ …
Read More »
BigTv News
September 13, 2024
Breaking News, ರಾಯಚೂರು
ಶಕ್ತಿನಗರ: ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿದ್ದರಿಂದ ಜಲವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಿಸಿದ ಪರಿಣಾಮ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ಆರು ಘಟಕಗಳಲ್ಲಿ ಹಾಗೂ ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ವೈಟಿಪಿಎಸ್) ಎರಡು ಘಟಕಗಳಲ್ಲಿ ತಾತ್ಕಲಿಕವಾಗಿ ವಿದ್ಯುತ್ ಉತ್ಪಾದನೆ ನಿಲ್ಲಿಸಲಾಗಿದೆ. ಬಹುತೇಕ ಜಲಾಶಯಗಳು ಭರ್ತಿ ಹಂತಕ್ಕೆ ತಲುಪಿದ್ದರಿಂದ ಜಲವಿದ್ಯುತ್ ಕೇಂದ್ರಗಳು ಕಾರ್ಯಾರಂಭಿಸಿವೆ. ಶಾಖೋತ್ಪನ್ನ ಘಟಕಗಳ ಉತ್ಪಾದನೆ ತಾತ್ಕಲಿಕವಾಗಿ ಬಂದ್ ಮಾಡಲು ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಮುಂದಾಗಿದೆ. ಮತ್ತೊಂದೆಡೆ ಪವನ ಮತ್ತು …
Read More »
BigTv News
September 13, 2024
Breaking News, ರಾಯಚೂರು
ಮುದಗಲ್: ಸಮೀಪದ ನಾಗಲಾಪುರ ಗ್ರಾಮದ ರೈತ ಕನಕಪ್ಪ ತಮ್ಮ ಹೊಲದಲ್ಲಿನ ಬೆಳೆಗಳಿಗೆ ಎಸಿ ರೈನ್ ಜೆಟ್ ಅಳವಡಿಸಿ ಕಡಿಮೆ ನೀರಿನಲ್ಲಿ ಉತ್ತಮ ಬೆಳೆಯುತ್ತಿದ್ದಾರೆ. ಎಸಿ ರೈನ್ ಜೆಟ್ ಮೂಲಕ 7 ಗಂಟೆಗಳಲ್ಲಿ 3 ಎಕರೆ ಬೆಳೆಗೆ ನೀರು ಉಣಿಸಲಾಗುತ್ತಿದೆ. ಈ ಪದ್ಧತಿಯಿಂದ ಭೂಮಿ ಸವಕಳಿ ಬರುವುದಿಲ್ಲ, ಗಟ್ಟಿಯಾಗುವುದಿಲ್ಲ ಇದರಿಂದ ಎರೆ ಹುಳುಗಳ ಸಂಖ್ಯೆ ಹೆಚ್ಚಾಗಿ ಬೆಳೆಯೂ ಫಲವತ್ತಾಗಿ ಬರುತ್ತದೆ. ಗಾಳಿಯಲ್ಲಿನ ಸಾರಜನಕ, ರಂಜಕ, ಪೊಟಾಸಿಯಂ ಕಾಂಪ್ಲೆಕ್ಸ್ ನೀರಿನ ಮೂಲಕ ಬೆಳೆ …
Read More »
BigTv News
September 8, 2024
Breaking News, ರಾಯಚೂರು
ರಾಯಚೂರು: ಪತಿ ಮಾನಸಿಕ, ದೈಹಿಕ ಹಿಂಸೆ ನೀಡಿದ ಕಾರಣಕ್ಕೆ ಯುವತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹರಿಜನವಾಡದ ಸುಜಾತಾ (25) ನೇಣಿಗೆ ಶರಣಾದ ಯುವತಿ. ಪತಿ ಸಂದೇಶಕುಮಾರ ಪತ್ನಿ ಶೀಲ ಶಂಕಿಸಿ ಪದೇಪದೆ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ವೇಲ್ ಕಿಟಕಿಗೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಯುವತಿ ತಾಯಿ ಲಕ್ಷ್ಮಿ ನೀಡಿದ ದೂರಿನ ಮೇರೆಗೆ ಮಹಿಳಾ …
Read More »
BigTv News
September 8, 2024
Breaking News, ರಾಯಚೂರು
ಸಿಂಧನೂರು: ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಉಂಟಾದ ಗಲಾಟೆ ಒಬ್ಬರ ಸಾವಿನಲ್ಲಿ ಕೊನೆಗೊಂಡ ಘಟನೆ ತಾಲೂಕಿನ 3ನೇ ಮೈಲ್ ಕ್ಯಾಂಪಿನಲ್ಲಿ ಸೆ.7ರ ಶನಿವಾರ ರಾತ್ರಿ ನಡೆದಿದೆ. ವೀರಬಸಪ್ಪ (55) ಮೃತಪಟ್ಟ ವ್ಯಕ್ತಿ. 3ನೇ ಮೈಲ್ ಕ್ಯಾಂಪ್ ನಲ್ಲಿ ಗಣೇಶ ಪ್ರತಿಷ್ಠಾಪನೆ ನಂತರ ಸಂಜೆ ವಿಸರ್ಜನೆ ವೇಳೆ ಮೆರವಣಿಗೆ ಮನೆಯೊಂದರ ಬಳಿ ಕುಣಿತದೊಂದಿಗೆ ಆರಂಭವಾಗಿದೆ. ಮೆರವಣಿಗೆ ನಿಲ್ಲಿಸಿ ಕುಣಿತ ಮಾಡುವಂತೆ, ಮುಂದಕ್ಕೆ ಹೋಗುವಂತೆ ಎರಡು ಗುಂಪಿನ ನಡುವೆ ಜಗಳವಾಗಿದೆ. …
Read More »
BigTv News
September 5, 2024
Breaking News, ರಾಯಚೂರು
ರಾಯಚೂರು : ಹಳ್ಳ ದಾಟುತ್ತಿದ್ದ ವೇಳೆ ಮಳೆಯ ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತ ದೇಹ ಪತ್ತೆಯಾಗಿದೆ. ಮೃತ ಯುವಕ ರಾಯಚೂರು ತಾಲೂಕಿನ ಫತ್ತೆಪುರ ಗ್ರಾಮದ ಎಚ್ ಡಿ ಎಫ್ ಸಿ ಬ್ಯಾಂಕ್ ಸಿಬ್ಬಂದಿ ಬಸವರಾಜು (33) ಎಂದು ತಿಳಿದುಬಂದಿದೆ. ಕಳೆದ ಸೆಪ್ಟೆಂಬರ್ 3ರಂದು ರಾತ್ರಿ ಹಳ್ಳ ದಾಟುತ್ತಿದ್ದಾಗ ಬಸವರಾಜು ಕೊಚ್ಚಿ ಹೋಗಿದ್ದ. ರಾಯಚೂರು ತಾಲೂಕಿನ ಫತ್ತೆಪುರ ಗ್ರಾಮದಿಂದ ಒಂದುವರೆ ಕಿಲೋಮೀಟರ್ ದೂರದಲ್ಲಿ ಇದೀಗ ಬಸವರಾಜುವಿನ ಮೃತ …
Read More »
BigTv News
September 5, 2024
Breaking News, ರಾಯಚೂರು
ರಾಯಚೂರು: ಮಾನ್ವಿ ತಾಲೂಕಿನ ಕಪಗಲ್ ಕ್ರಾಸ್ ಬಳಿ ನಡೆದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಶಾಲಾ ಬಸ್ ನಡುವೆ ಡಿಕ್ಕಿ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಖಾಸಗಿ ಶಾಲಾ ಬಸ್ ಹಾಗೂ ಸರ್ಕಾರಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು. ಘಟನೆ ವೇಳೆ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಮೂವರು ವಿದ್ಯಾರ್ಥಿಗಳ ಕಾಲು ಕಟ್ ಆಗಿತ್ತು ಗಂಭೀರ ಗಾಯಗೊಂಡ ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಬ್ಬರು …
Read More »
BigTv News
January 8, 2024
ಕರ್ನಾಟಕ, ರಾಯಚೂರು, ಸುದ್ದಿ
ರಾಯಚೂರು: ರಾಯಚೂರು ಅಂದರೆ ಸಾಕು ಬಿಸಿಲು, ಧೂಳು, ಗುಂಡಿ ಬಿದ್ದ ರಸ್ತೆಗಳು ನೆನಪಿಗೆ ಬರುವಂತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಿರ್ಮಾಣಗೊಂಡ ರಸ್ತೆಯೊಂದು ಕೆಲವೇ ದಿನಗಳಲ್ಲಿ ಎಥಾ ಸ್ಥಿತಿಗೆ ತಲುಪಿದ ಘಟನೆ ನಡೆದಿದೆ. ಇದರಿಂದ ಜನ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಕವಿತಾಳ ಸಮೀಪದ ಮಲ್ಲದಗುಡ್ಡ ಗ್ರಾಮದಿಂದ ತೋರಣದಿನ್ನಿ ಸಂಪರ್ಕಿಸುವ ಮುಖ್ಯ ರಸ್ತೆಯ ದುರಸ್ತಿ ಕಾಮಗಾರಿ ಕಳಪೆಯಾಗಿದ್ದು ಕಾಮಗಾರಿ ಮುಗಿದ ಕೆಲವೇ ದಿನಗಳಲ್ಲಿ ರಸ್ತೆ ಹಾಳಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಗುತ್ತಿಗೆದಾರರ ವಿರುದ್ದ …
Read More »
BigTv News
December 25, 2023
ಕರ್ನಾಟಕ, ರಾಯಚೂರು, ಸುದ್ದಿ
ರಾಯಚೂರು: 2023ನೇ ವರ್ಷದ ಕೊನೆಯ ದಿನದಲ್ಲಿದ್ದೇವೆ. 2023ನೇ ವರ್ಷ ರಾಜ್ಯ ರಾಜಕಾರಣದ ದಿಕ್ಕು ಬದಲಿಸಿದರೆ, ಜಿಲ್ಲೆಯ ರಾಜಕಾರಣದಲ್ಲಿ ದೂಳೆಬ್ಬಿಸಿತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೆರೆದ ರಾಜಕಾರಣಿಗಳು ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾದರು. ಪಿಡಿಒಗಳು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದ್ದು ಹಾಗೂ ಅಕ್ರಮ ಮರಳು ದಂದೆ ಜಿಲ್ಲೆಯಲ್ಲಿ ಹೆಚ್ಚು ಸದ್ದು ಮಾಡಿತು. ಜೂನ್ 28ರಂದು ಸಿಂಧನೂರಲ್ಲಿ ನಗರ ಯೋಜನೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರಣಪ್ಪ ಮಡಿವಾಳ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ …
Read More »