Breaking News

ಗಣೇಶ ಮೂರ್ತಿ ವಿಸರ್ಜನೆ ವೇಳೆ ಗುಂಪುಗಳ ನಡುವೆ ಘರ್ಷಣೆ: ಓರ್ವ ಸಾವು

ಸಿಂಧನೂರು: ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಉಂಟಾದ ಗಲಾಟೆ ಒಬ್ಬರ ಸಾವಿನಲ್ಲಿ ಕೊನೆಗೊಂಡ ಘಟನೆ ತಾಲೂಕಿನ 3ನೇ ಮೈಲ್ ಕ್ಯಾಂಪಿನಲ್ಲಿ ಸೆ.7ರ ಶನಿವಾರ ರಾತ್ರಿ ನಡೆದಿದೆ.
ವೀರಬಸಪ್ಪ (55) ಮೃತಪಟ್ಟ ವ್ಯಕ್ತಿ. 3ನೇ ಮೈಲ್ ಕ್ಯಾಂಪ್ ನಲ್ಲಿ ಗಣೇಶ ಪ್ರತಿಷ್ಠಾಪನೆ ನಂತರ ಸಂಜೆ ವಿಸರ್ಜನೆ ವೇಳೆ ಮೆರವಣಿಗೆ ಮನೆಯೊಂದರ ಬಳಿ ಕುಣಿತದೊಂದಿಗೆ ಆರಂಭವಾಗಿದೆ. ಮೆರವಣಿಗೆ ನಿಲ್ಲಿಸಿ ಕುಣಿತ ಮಾಡುವಂತೆ, ಮುಂದಕ್ಕೆ ಹೋಗುವಂತೆ ಎರಡು ಗುಂಪಿನ ನಡುವೆ ಜಗಳವಾಗಿದೆ. ಈ ವೇಳೆ ಬಸವರಾಜ ಎಂಬವರ ಮನೆಗೆ ಹೋಗಿ ಆತನನ್ನು ಹೊರಗೆ ಕರೆಯಲು ಮುಂದಾದಾಗ ಜಗಳ ಬಿಡಿಸಲು ಹೋಗಿದ್ದ ವೀರಬಸಪ್ಪ ಎನ್ನುವ ವ್ಯಕ್ತಿಗೆ ಪೆಟ್ಟು ಬಿದ್ದಿದ್ದರಿಂದ ರಾತ್ರಿ ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಈ ಕುರಿತು ಸಿಂಧನೂರು ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *