Breaking News

ಬಾಗಲಕೋಟೆ

ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷರಾಗಿ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಆಯ್ಕೆ

ಬಾಗಲಕೋಟೆ: ಬಾದಾಮಿ ತಾಲೂಕಿನ ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷರಾಗಿ ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಆಯ್ಕೆ ಆಗಿದ್ದಾರೆ. 5 ತಿಂಗಳ ಹಿಂದೆ ಸಂಗನಬಸವ ಸ್ವಾಮೀಜಿ ಲಿಂಗೈಕ್ಯರಾಗಿದ್ದರು. ಹೀಗಾಗಿ ತೆರವಾಗಿದ್ದ ಸ್ಥಾನಕ್ಕೆ ವೀರಶೈವ ಲಿಂಗಾಯತ ಮಠಾಧೀಶರು, ಟ್ರಸ್ಟಿಗಳ ಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕ ಮಾಡಲಾಗಿದೆ.

Read More »

ಉರುಸ್‌ನಲ್ಲಿ ಊಟ ಸೇವಿಸಿ ಆಸ್ಪತ್ರೆ ಸೇರಿದ ಜನರು

ಬಾಗಲಕೋಟೆ: ಉರುಸ್‌ನಲ್ಲಿ ಊಟ ಸೇವಿಸಿದ್ದ ಜನರ ಆರೋಗ್ಯ ಸ್ಥತಿಯು ಹದಗೇಟ್ಟು ಹೋಗಿದೆ. 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ಬಾಗಲಕೋಟೆ ತಾಲೂಕಿನ ಡೋಮನಾಳ ಗ್ರಾಮದಲ್ಲಿ ನಡೆದಿದೆ. ಉರುಸ್‌ನಲ್ಲಿ ಊಟ ಸೇವಿಸಿದ್ದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, 22 ಮಕ್ಕಳು ಸೇರಿದಂತೆ 26 ಜನರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇವರೆಲ್ಲರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Read More »

ಬೆಳಗ್ಗೆಯಿಂದಲೂ ಸಿಡಿಯುತ್ತಿರುವ ಬಾಂಬ್‌ಗಳ ಸದ್ದು ನಮ್ಮನ್ನು ಆತಂಕಕ್ಕೆ ತಳ್ಳಿದೆ

ಬಾಗಲಕೋಟೆ : ಸೋಮವಾರ ರಾತ್ರಿ ರಷ್ಯಾ ದೇಶ ಯುದ್ಧ ಘೋಷಿಸುತ್ತಿದ್ದಂತೆ ಉಕ್ರೇನ್ ಅಕ್ಷರಶಃ ನಲುಗಿದ್ದು, ಅಲ್ಲಿರುವ ಭಾರತೀಯರ ಪೈಕಿ ಕರ್ನಾಟಕದ 135 ವಿದ್ಯಾರ್ಥಿಗಳು ಕಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ (ಕೆಎನ್‌ಎಂಯು) ವ್ಯಾಸಂಗ ಮಾಡುತ್ತಿದ್ದಾರೆ. ಅವರೆಲ್ಲರ ಸುರಕ್ಷತೆ ಬಗ್ಗೆ ಪಾಲಕರಲ್ಲಿ ಆತಂಕ ಮೂಡಿದೆ. ಸದ್ಯದ ಮಾಹಿತಿ ಪ್ರಕಾರ ಬಾಗಲಕೋಟೆ ಜಿಲ್ಲೆಯ 22 ಜನ ಉಕ್ರೇನ್‌ನಲ್ಲಿದ್ದು, ಅವರೆಲ್ಲರಿಗೂ ಅಪಾಯ ಎದುರಾಗದಿರಲಿ ಎಂಬ ಪ್ರಾರ್ಥನೆ ಎಲ್ಲರದಾಗಿದೆ. ಮಗಳು ಫೋನ್‌ನಲ್ಲಿ ಮಾತನಾಡುತ್ತಲೇ ಸೈರನ್ ಸದ್ದು ಆಯಿತು. …

Read More »

ಇಂದಿನಿಂದ ಪಿಯು ವಿದ್ಯಾರ್ಥಿಗಳ ಪ್ರಾಯೋಗಿಕ ಪರೀಕ್ಷೆ ಪ್ರಾರಂಭಬಾಗಲ

ಬಾಗಲಕೋಟೆ: ರಾಜ್ಯದಲ್ಲಿ ಹಿಜಾಬ್‌ ಸಂಘರ್ಷ ಹೊತ್ತಿ ಉರಿಯುತ್ತಿದೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಡಿಸಿ ನಿಷೇಧಾಜ್ಞೆ ಮುಂದುವರೆಸಿದ್ದಾರೆ. ಜಿಲ್ಲೆಯಲ್ಲಿ ಇಂದು ನಡೆಯಬೇಕಿರುವ ಪಿಯು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.ಈ ಹಿನ್ನೆಲೆ ಬಾಗಲಕೋಟೆ ಜಿಲ್ಲೆ ಡಿಸಿ ನಿಷೇಧಾಜ್ಞೆ ಮುಂದುವರೆಸಿದ್ದಾರೆ. ಅಷ್ಟೇ ಅಲ್ಲದೇ ಶಾಲಾ-ಕಾಲೇಜುಗಳ ಸುತ್ತಮುತ್ತ ಪೊಲೀಸ್‌ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Read More »

ಮಾಜಿ ಶಾಸಕ ಜಿ.ವಿ.ಮಂಟೂರ ನಿಧನನಾ

ಬಾಗಲಕೋಟೆ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಾಗಲಕೋಟೆಯ ಮಾಜಿ ಶಾಸಕ ಜಿ.ವಿ.ಮಂಟೂರ (92) ಗುರುವಾರ  ಬೆಳಗ್ಗೆ 5.30ಕ್ಕೆ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಾಗಲಕೋಟೆ ತಾಲೂಕಿನ ಸ್ವಗ್ರಾಮ ಖಜ್ಜಿಡೋಣಿಯಲ್ಲಿ ಮಂಟೂರ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಕ್ಕೆ ನಡೆಯಲಿದೆ. ಮಂಟೂರ ಅವರರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಜಿ.ವಿ.ಮಂಟೂರ ಬಾಗಲಕೋಟೆ ಕ್ಷೇತ್ರದಲ್ಲಿ ಎರಡು ಸಲ ಶಾಸಕರಾಗಿದ್ದರು.

Read More »

ಜಮೀರ್ ಅಹ್ಮದ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಮೋದ್ ಮುತಾಲಿಕ್

ಬಾಗಲಕೋಟೆ: ಹಿಜಾಬ್ ವಿಚಾರವಾಗಿ ಶಾಸಕ ಜಮೀರ್ ಅಹ್ಮದ್ ನೀಡಿರುವ ಹೇಳಿಕೆ ಮಹಿಳೆಯರಿಗೆ ಮಾಡಿದ ಅಪಮಾನ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಹಿಜಾಬ್ ಧರಿಸದೇ ಇದ್ದರೆ ರೇಪ್ ಆಗುತ್ತೆ ಎಂಬ ಜಮೀರ್ ಹೇಳಿಕೆ ಅತ್ಯಂತ ನಿರ್ಲಜ್ಜದ ಹೇಳಿಕೆ.ಈ ದೇಶದಲ್ಲಿ ಹಿಂದೂ ಮಹಿಳೆಯರು ಹಿಜಾಬ್ ಇಲ್ಲದೇ ಜೀವನ ಮಾಡುತ್ತಿದ್ದಾರೆ. ಅವರು ಸುರಕ್ಷಿತರಾಗಿಯೇ ಇದ್ದಾರೆ. ಹೀಗಿರುವಾಗ ಹಿಜಾಬ್ ಇಲ್ಲದಿದ್ದರೆ ಅತ್ಯಾಚಾರವಾಗುತ್ತದೆ ಎಂಬ ರೀತಿಯಲ್ಲಿ ಶಾಸಕರು …

Read More »

ಬ್ರಾಹ್ಮಿ ಮುಹೂರ್ತದಲ್ಲಿ ಜರುಗಿದ ಪಂಚಮಸಾಲಿ 3ನೇ ಪೀಠದ ಪೀಠಾಧೀಶರ ಪಟ್ಟಾಭಿಷೇಕ

ಬಾಗಲಕೋಟೆ: ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದಿಂದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದಲ್ಲಿ ಒಕ್ಕೂಟದ ಜಾಗೆಯಲ್ಲಿ ರಾಜ್ಯದ ಪಂಚಮಸಾಲಿ 3ನೇ ಪೀಠದ ಪೀಠಾಧೀಶರ ಪಟ್ಟಾಭಿಷೇಕ ಕಾರ್ಯಕ್ರಮ ಭಾನುವಾರ ನಸುಕಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಈ ಕಾರ್ಯಕ್ರಮ ನಡೆಯಿತು. 3ನೇ ಪೀಠದ ಪೀಠಾಧಿಕಾರಿ ಆಗುತ್ತಿರುವ ಷ. ಬ್ರ. ಡಾ. ಮಹದೇವ ಶಿವಾಚಾರ್ಯ ಸ್ವಾಮೀಜಿಗಳಿಗೆ ಪಟ್ಟಾಭಿಷೇಕ ಕಾರ್ಯ ನಡೆಯಿತು. ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹೆಸರಿನಲ್ಲಿ ಜಗದ್ಗುರು ಡಾ.ಮಹಾದೇವ …

Read More »

ಪದ್ಮಶ್ರೀ ಪುರಸ್ಕೃತರ ಇಬ್ರಾಹಿಂ ಎನ್‌.ಸುತಾರ ನಿಧನ

ಬಾಗಲಕೋಟೆ: ಪದ್ಮಶ್ರೀ ಪುರಸ್ಕೃತರ ಇಬ್ರಾಹಿಂ ಎನ್‌.ಸುತಾರ ಅವರು ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಪ್ರಾಥಮಿಕ ಮೂಲಗಳ ಪ್ರಕಾರ ಅವರಿಗೆ ಇಂದು ಮುಂಜಾನೆ ಹೃದಯಘಾತವಾಗಿತ್ತು ಎನ್ನಲಾಗಿದೆ. ಇಬ್ರಾಹಿಂ ಎನ್. ಸುತಾರ್ (ಇಬ್ರಾಹಿಂ ನಬೀ ಸಾಹೇಬ್ ಸುತಾರ್) (ಹುಟ್ಟು-10 ಮೇ 1940) ವೈದಿಕ, ವಚನ ಮತ್ತು ಸೂಫಿ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ಉಂಟು ಮಾಡುತ್ತಿರುವ ತತ್ವಪದಕಾರರು ಮತ್ತು ಪ್ರವಚನಕಾರರು.ಇವರಿಗೆ 2018ರ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಲಾಗಿದೆ.

Read More »

ಕಾಂಗ್ರೆಸ್ ಪಕ್ಷ ಕುರಿತು ಲೇವಡಿ ಮಾಡಿದ ಗೋವಿಂದ ಕಾರಜೋಳ

ಬಾಗಲಕೋಟೆ : ಪ್ರವಾಹ, ಕೊರೊನಾದಂತಹ ಸಂಕಷ್ಟಗಳಿಲ್ಲದಿದ್ದರೂ ಕಾಂಗ್ರೆಸ್ ನಿಂದ ಅಭಿವೃದ್ಧಿ ಕಾರ್ಯ ಮಾಡಲು ಆಗಿರಲಿಲ್ಲ. ಹೀಗಾಗಿಯೇ ಜನರು ಆ ಪಕ್ಷವನ್ನು ಹೀನಾಯವಾಗಿ ಸೋಲಿಸಿದರು ಎಂದು ಸಚಿವ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸ ಮಾಡುವುದಿಲ್ಲ ಎಂದೇ ಜನರು ಕಾಂಗ್ರೆಸ್ ನ್ನು ತಿರಸ್ಕರಿಸಿದ್ದಾರೆ ಎಂಬುವುದನ್ನು ಸಿದ್ದರಾಮಯ್ಯ ಅವರು ಒಪ್ಪಿಕೊಳ್ಳಬೇಕು. ಕಾಂಗ್ರೆಸ್ ಮುಳುಗುವ ಹಡಗಿನಂತಾಗಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಇಲ್ಲದಂತಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

Read More »

ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ ಉತ್ತರ ನೀಡಿದ ಸಿಸಿ ಪಾಟೀಲ್

ಬಾಗಲಕೋಟೆ: ರಾಜ್ಯ ರಾಜಕಾರಣದಲ್ಲಿ ಮತ್ತೆ ಪಕ್ಷಾಂತರದ ಗುಲ್ಲು ಎದ್ದಿರುವಾಗ ನಾಯಕರ ನಡುವೆ ವಾಕ್ ಸಮರಕ್ಕೂ ವೇದಿಕೆ ಸಿಕ್ಕಿದೆ. ಮಾಜಿ ಸಿಎಂ ಸಿದ್ದರಾಮಯ್ಯಗೆ ಸಚಿವ ಸಿ.ಸಿ. ಪಾಟೀಲ್ ಟಾಂಗ್ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಸಿಸಿ ಪಾಟೀಲ್ ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗದ ಉತ್ತರ ನೀಡಿದರು. ಯಾವ ಕಾರಣಕ್ಕೂ ಅವರನ್ನ ವಾಪಸ್ ತಗೊಳೋದಿಲ್ಲ ಅಂತ ಹೇಳಿದ್ದು ಯಾರು..? ಬಿಟ್ಟು ಹೋದವರನ್ನ ವಾಪಸ್ ತಗೊಳೋದಿಲ್ಲ ಅಂತ ಗುದ್ದಿ ಹೇಳಿದವರು ಯಾರು? ಬಿಟ್ಟು ಹೋದವನ್ನ ಯಾವ ಕಾಲಕ್ಕೂ …

Read More »