Breaking News

ಬೆಳಗ್ಗೆಯಿಂದಲೂ ಸಿಡಿಯುತ್ತಿರುವ ಬಾಂಬ್‌ಗಳ ಸದ್ದು ನಮ್ಮನ್ನು ಆತಂಕಕ್ಕೆ ತಳ್ಳಿದೆ


ಬಾಗಲಕೋಟೆ : ಸೋಮವಾರ ರಾತ್ರಿ ರಷ್ಯಾ ದೇಶ ಯುದ್ಧ ಘೋಷಿಸುತ್ತಿದ್ದಂತೆ ಉಕ್ರೇನ್ ಅಕ್ಷರಶಃ ನಲುಗಿದ್ದು, ಅಲ್ಲಿರುವ ಭಾರತೀಯರ ಪೈಕಿ ಕರ್ನಾಟಕದ 135 ವಿದ್ಯಾರ್ಥಿಗಳು ಕಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ (ಕೆಎನ್‌ಎಂಯು) ವ್ಯಾಸಂಗ ಮಾಡುತ್ತಿದ್ದಾರೆ. ಅವರೆಲ್ಲರ ಸುರಕ್ಷತೆ ಬಗ್ಗೆ ಪಾಲಕರಲ್ಲಿ ಆತಂಕ ಮೂಡಿದೆ. ಸದ್ಯದ ಮಾಹಿತಿ ಪ್ರಕಾರ ಬಾಗಲಕೋಟೆ ಜಿಲ್ಲೆಯ 22 ಜನ ಉಕ್ರೇನ್‌ನಲ್ಲಿದ್ದು, ಅವರೆಲ್ಲರಿಗೂ ಅಪಾಯ ಎದುರಾಗದಿರಲಿ ಎಂಬ ಪ್ರಾರ್ಥನೆ ಎಲ್ಲರದಾಗಿದೆ.

ಮಗಳು ಫೋನ್‌ನಲ್ಲಿ ಮಾತನಾಡುತ್ತಲೇ ಸೈರನ್ ಸದ್ದು ಆಯಿತು. ಬೆಳಗ್ಗೆಯಿಂದಲೂ ಸಿಡಿಯುತ್ತಿರುವ ಬಾಂಬ್‌ಗಳ ಸದ್ದು ನಮ್ಮನ್ನು ಆತಂಕಕ್ಕೆ ತಳ್ಳಿದೆ. ದೂರದ ದೇಶದಲ್ಲಿರುವ ಮಕ್ಕಳ ಬಗ್ಗೆ ಕ್ಷಣ.. ಕ್ಷಣಕ್ಕೂ ಆತಂಕ ಹೆಚ್ಚಾಗಿದೆ.

ಕೇಂದ್ರ ಸರ್ಕಾರ ಎಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ನಂಬಿಕೆಯಿದೆ. ಅದಕ್ಕಾಗಿ ದೇವರಲ್ಲಿ ಪ್ರಾರ್ಥಿಸುವುದೊಂದೆ ನಮಗಿರುವ ಮಾರ್ಗ.. ಉಕ್ರೇನ್‌ನ ಕಾರ್ಕಿವ್ ಪ್ರದೇಶದಲ್ಲಿ ವೈದ್ಯಕೀಯ ಪದವಿ ವ್ಯಾಸಂಗಕ್ಕೆ ತೆರಳಿರುವ ವಿದ್ಯಾಗಿರಿಯ ಅಪೂರ್ವ ಕದಾಂಪುರ ಅವರ ತಾಯಿ ಜ್ಯೋತಿ ಕದಾಂಪುರ ಕಣ್ಣೀರಿಡುತ್ತ ಹೇಳಿದ ಮಾತುಗಳಿವು.

Share News

About admin

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *