ಹುಬ್ಬಳ್ಳಿ: ವಂದೇ ಮಾತರಂ, ಜನಗಣಮನ ಎರಡೂ ರಾಷ್ಟ್ರ ಗೀತೆಗಳು. ಅವುಗಳಿಗೆ ಅಪಮಾನ ಮಾಡೋ ಕೆಲಸ ಯಾರೂ ಮಾಡಬಾರದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಂದೇ ಮಾತರಂ ಗೀತೆ ಸ್ವಾತಂತ್ರ್ಯ ಹೋರಾಟದಲ್ಲಿ ಸ್ಫೂರ್ತಿ ಆಗಿದ್ದು,ಸಂವಿಧಾನದ ಪ್ರಕಾರ ಜನಗಣಮನ ಅಧಿಕೃತ ರಾಷ್ಟ್ರಗೀತೆ. ಎರಡಕ್ಕೂ ಸಹ ಅದರದ್ದೇ ಆದ ಗೌರವ ಇದೆ. ಈ ಬಗ್ಗೆ ಮತ್ತೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದರು.
ರಾಷ್ಟ್ರ ಭಕ್ತಿ ಗೀತೆಗಳಿಗೆ ಮೊದಲಿನಿಂದಲೂ ಅಸಡ್ಡೆ ಮಾಡಿದ್ದೆ ಕಾಂಗ್ರೆಸ್. ಬಿಜೆಪಿಯಲ್ಲಿ ಆಂತರಿಕ ಕಲಹ ವಿಚಾರವಾಗಿ ಮಾತನಾಡಿದ ಅವರು, ರಾಜ್ಯಧ್ಯಕ್ಷರು ಇದ್ದಾರೆ, ಬದಲಾವಣೆ ಪ್ರಶ್ನೆ ಇಲ್ಲ. ಯಾರು ಹೇಳಿದ್ದು..?ಒಂದು ಪ್ರೊಸಿಸರ್ ಇರುತ್ತದೆ. ಪ್ರತಿ 3 ವರ್ಷಕ್ಕೊಮ್ಮೆ ಬದಲಾವಣೆ ಇರುತ್ತದೆ. ಈಗ ಈ ವಿಷಯ ಯಾಕೆ ಮುನ್ನೆಲೆಗೆ ಬಂದಿದೆಯೋ ನನಗೆ ಗೊತ್ತಿಲ್ಲ ಎಂದು ಅವರು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

