Breaking News

ಮೈಸೂರು

ಟಿ.ಎಸ್.ಛಾಯಾಪತಿ ನಿಧನ

ಮೈಸೂರು: ಸಾಹಿತಿ ದಿ.ತ.ಸು.ಶಾಮರಾಯ ಅವರ ಪುತ್ರ, ಪ್ರಕಾಶಕ, ಗೋಕುಲಂ ‌ಬಡಾವಣೆ ನಿವಾಸಿ ಟಿ.ಎಸ್.ಛಾಯಾಪತಿ (79)  ರಾತ್ರಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ. ತಳುಕಿನ ವೆಂಕಣ್ಣಯ್ಯ ಗ್ರಂಥಮಾಲೆ‌ ಎಂಬ ಪ್ರಕಾಶನ ನಡೆಸುತ್ತಿದ್ದ ಅವರು, ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಪ್ರಕಟಿಸಿದ್ದರು. 25 ಕೃತಿಗಳನ್ನು ತಾವೇ ಬರೆದಿದ್ದರು. ಅವರಿಗೆ ಸರ್ಕಾರದಿಂದ ಅತ್ಯುತ್ತಮ ಪ್ರಕಾಶಕ‌ ಸೇರಿದಂತೆ ಹಲವು‌ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅಂತ್ಯಕ್ರಿಯೆ ಅ.2 (ಭಾನುವಾರ) ಮಧ್ಯಾಹ್ನ ಗೋಕುಲಂ ಬಡಾವಣೆಯ ರುದ್ರಭೂಮಿಯಲ್ಲಿ‌ …

Read More »

ರಾಜ್ಯದ ರೈತರಿಗೆ ಗುಡ್ ನ್ಯೂಸ್

ಮೈಸೂರು : ರಾಜ್ಯದ ರೈತರಿಗೆ ಇಂಧನ ಸಚಿವ ಸುನೀಲ್ ಕುಮಾರ್ ಗುಡ್ ನ್ಯೂಸ್ ನೀಡಿದ್ದು, ನಿರಂತರ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ ಎಂದರು. ಮೈಸೂರಿನಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ ಬಳಿಕ ಸಚಿವ ಸುನೀಲ್ ಕುಮಾರ್ ಸುದ್ದಿಗಾರರ ಜೊತೆ ಮಾತನಾಡಿದರು. ರಾಜ್ಯದಲ್ಲಿ ರೈತರಿಗೆ ನಿರಂತರ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ, ಬಿಜೆಪಿ ಸರ್ಕಾರ ಬಂದ ಮೇಲೆ 6 ಲಕ್ಷ ರೈತರಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ನೀಡಲಾಗಿದೆ. …

Read More »

ದಸರಾ ವಿದ್ಯುತ್‌ ದೀಪಾಲಂಕಾರವನ್ನು ವೀಕ್ಷಿಸಿದ ಸಿಎಂ

ಮೈಸೂರು: ದಸರಾ ಅಂಗವಾಗಿ ನಗರದಲ್ಲಿ ಮಾಡಿರುವ ವಿದ್ಯುತ್‌ ದೀಪಾಲಂಕಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಮತ್ತು ಇಂಧನ ಸಚಿವ ಸುನೀಲ್‌ಕುಮಾರ್‌ ಭಾನುವಾರ ಮಧ್ಯರಾತ್ರಿವರೆಗೂ ವೀಕ್ಷಿಸಿದರು. ರಾತ್ರಿ 10.30ರ ಸುಮಾರಿಗೆ ನಗರ ಪ್ರದಕ್ಷಿಣೆ ಆರಂಭಿಸಿದ ಅವರು, ರ‍್ಯಾಡಿಷನ್ ಬ್ಲೂ ಹೋಟೆಲ್‌ನಿಂದ ಕೆಎಸ್‌ಆರ್‌ಟಿಸಿಯ ಎರಡು ವೋಲ್ವೋ ಬಸ್ ಮೂಲಕ ಜೆಎಸ್‌ಎಸ್‌ ಮಹಾವಿದ್ಯಾಪೀಠ ವೃತ್ತಕ್ಕೆ ಬಂದರು. ಅಲ್ಲಿಂದ ಪ್ರವಾಸೋದ್ಯಮ ನಿಗಮದ ‘ಅಂಬಾರಿ’ ಡಬ್ಬಲ್ ಡೆಕ್ಕರ್ …

Read More »

ಮೈಸೂರು ದಸರಾ : ರಾಷ್ಟ್ರಪತಿಯಿಂದ ಮೊದಲ ಬಾರಿಗೆ ಉದ್ಘಾಟನೆ

ಮೈಸೂರು: ಸಾಂಸ್ಕೃತಿಕ ಸಿರಿ ಮತ್ತು ಧಾರ್ವಿುಕ ಐಸಿರಿಯ ಸಮ್ಮಿಲನವಾದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವೊಂದು ಸುಂದರ ದೃಶ್ಯಕಾವ್ಯ. ವರ್ಷಕ್ಕೊಮ್ಮೆ ಬರುವ ಈ ರಮಣೀಯ ಘಳಿಗೆಗೆ ಸಾಂಸ್ಕೃತಿಕ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕೋವಿಡ್ ಸಂಕ್ರಮಣದಿಂದ ಕಳೆದ 2 ವರ್ಷ ಸರಳವಾಗಿ ನಡೆದಿದ್ದ ಉತ್ಸವದಲ್ಲಿ ಈ ಬಾರಿ ಸಡಗರ ಮೇಳೈಸಲಿದೆ. ಸೆ. 26ರಂದು ನಾಡಹಬ್ಬದ ಅಂಕದ ಪರದೆ ಗರಿ ಬಿಚ್ಚಲಿದೆ. ಮೊದಲ ಬಾರಿಗೆ ರಾಷ್ಟ್ರಪತಿಯಿಂದ ಚಾಲನೆ: ಚಾಮುಂಡಿಬೆಟ್ಟದ …

Read More »

ಮೈಸೂರು ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿ ಆಗಮನ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮೈಸೂರಿಗೆ ಆಗಮಿಸಲಿದ್ದಾರೆ. ಸೋಮವಾರ ಬೆಳಿಗ್ಗೆ 6.15ಕ್ಕೆ ರಾಷ್ಟ್ರಪತಿ ಮುರ್ಮು ಅವರು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದು, 9 ಗಂಟೆಗೆ ಮೈಸೂರಿನ ಮಂಡಕಳ್ಳಿ ಏರ್​ಪೋರ್ಟ್​ಗೆ ಆಗಮಿಸಲಿದ್ದಾರೆ. ನಂತರ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. 10 ಗಂಟೆಗೆ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೈಸೂರು …

Read More »

ಮಹಿಷ ದಸರಾಗೆ ಅವಕಾಶ ಇಲ್ಲ : ಪ್ರತಿಮೆ ಮುಚ್ಚಿದ ಅಧಿಕಾರಿಗಳು

ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾಗೆ ಅವಕಾಶ ಇಲ್ಲ, ಇದೇ ಮೊದಲ ಬಾರಿ ಅಧಿಕಾರಿಗಳು ಮಹಿಷ ಪ್ರತಿಮೆ ಮುಚ್ಚಿದ್ಧಾರೆ. ಚಾಮುಂಡಿ ಬೆಟ್ಟದ ಪ್ರವೇಶದ್ವಾರದ ಮಹಿಷಾಸುರ ಪ್ರತಿಮೆಯಿದ್ದು, ಟಾರ್ಪಲ್ ಮೂಲಕ ಮಹಿಷ ಪ್ರತಿಮೆ ಬಂದ್ ಮಾಡಲಾಗಿದ್ದು, ಜಿಲ್ಲಾಡಳಿತದಿಂದ ಮಹಿಷ ದಸರಾಗೆ ಅನುಮತಿ ನಿರಾಕರಣೆ ಮಾಡಿದ್ಧಾರೆ. ಆಯೋಜಕರು ಪಾರ್ಕ್​​ನಲ್ಲಿ ಮಹಿಷ ದಸರಾ ಮಾಡಲು ನಿರ್ಧರಿಸಿದ್ಧಾರೆ.

Read More »

ಇಂದಿನಿಂದ 2 ದಿನ ಸಿಎಂ ಮೈಸೂರು ಪ್ರವಾಸ

ಮೈಸೂರು: ದಸರಾ ಉದ್ಘಾಟನೆ ಹಾಗೂ ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮತ್ತು ನಾಳೆ ಮೈಸೂರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ಇಂದು ಮಧ್ಯಾಹ್ನ 2.30ಕ್ಕೆ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ಹೊರಡಲಿದ್ದಾರೆ. ಬಳಿಕ 3.30ಕ್ಕೆ ಕರಾಮುವಿ ಘಟಿಕೋತ್ಸವ ಭವನದಲ್ಲಿ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಏರ್ಪಡಿಸಿರುವ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4.30ಕಕ್ಕೆ ಕೆ.ಆರ್.ಕ್ಷೇತ್ರದ ವಿದ್ಯಾರಣ್ಯಪುರಂನಲ್ಲಿರುವ ಶ್ರೀ …

Read More »

ಮೈಸೂರು ದಸರಾಗೆ ಪೋಲಿಸರಿಂದ ಬಿಗಿ ಬಂದೋಬಸ್ತ್

ಮೈಸೂರು: ಎರಡು ವರ್ಷಗಳ ಬಳಿಕ ಅದ್ಧೂರಿಯಾಗಿ ದಸರಾವನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲು ಇಲಾಖೆ ಮುಂದಾಗಿದೆ. ಸೆ.26ರಂದು ರಾಷ್ಟ್ರಪತಿ ದ‍್ರೌಪದಿ ಮುರ್ಮು ಅವರು ಮೈಸೂರಿಗೆ ಆಗಮಿಸಿ ದಸರಾ ಉದ್ಘಾಟಿಸಲಿದ್ದಾರೆ.ಹೀಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸರ ಜೊತೆಗೆ ಹೊರ ಜಿಲ್ಲೆಗಳ ಒಟ್ಟು 3,079 ಪೊಲೀಸ್ ಅಧಿಕಾರಿಗಳು ಹಾಗೂ …

Read More »

ಸಾಲಕ್ಕೆ ಹೆದರಿ ದಂಪತಿ‌ ಆತ್ಮಹತ್ಯೆ

ಮೈಸೂರು : ಸಾಲಕ್ಕೆ ಹೆದರಿ ದಂಪತಿ‌ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರತಾಲೂಕಿನಭೇರ್ಯಸಮೀಪದಸಂಬ್ರವಳ್ಳಿಗ್ರಾಮದಲ್ಲಿನಡೆದಿದೆ. 50 ವರ್ಷದ ಬೆಟ್ಟಪ್ಪ, 43 ವರ್ಷದರುಕ್ಮಿಣಿಮೃತರಾಗಿದ್ದಾರೆ. ಇವರು ಗ್ರಾಮದಜಮೀರ್ಸಾಹೇಜ್ತೋಟದಲ್ಲಿ‌ 20 ವರ್ಷಗಳಿಂದ ಕೂಲಿ ಕೆಲಸಮಾಡಿಕೊಂಡಿದ್ದರು. ಕೆಲಸಮಾಡಿಕೊಂಡುತೋಟದಮನೆಯಲ್ಲೇವಾಸವಿದ್ದರು. ಇತ್ತೀಚೆಗೆಮಕ್ಕಳಮದುವೆಮಾಡಿದ್ದರು.‌ ಜೊತೆಗೆ ಸಂಬ್ರವಳ್ಳಿಯಲ್ಲಿ ಸಾಲ ಮಾಡಿ ಮನೆ ಸಹ ಕಟ್ಟಿದರು. ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಸೋಮವಾರ ವಿಶ್ವವಿಖ್ಯಾತ ಮೈಸೂರು ದಸರಾ ರಾಷ್ಟ್ರಪತಿಯಿಂದ ಉದ್ಘಾಟನೆ

ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಲಿದ್ದು, ದೇಶದ ಮೊದಲ ಪ್ರಜೆಗೆ ಅದ್ಧೂರಿ ಸ್ವಾಗತ ನೀಡಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಮೈಸೂರು ದಸರಾ ಉದ್ಘಾಟನೆಗೆ ಆಗಮಿಸುತ್ತಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಾರ್ಯಕ್ರಮ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಸೆಪ್ಟೆಂಬರ್ 26ರ ಸೋಮವಾರ ಬೆಳಗ್ಗೆ 6.15ಕ್ಕೆ ರಾಷ್ಟ್ರಪತಿ ಮುರ್ಮು ಅವರು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಸೆಪ್ಟೆಂಬರ್ 26ರ …

Read More »