admin
February 8, 2022
Breaking News, ಜಿಲ್ಲೆ, ಮೈಸೂರು
ಮೈಸೂರು: ನಗರದ ತಮ್ಮ ಮನೆಯಲ್ಲಿ ಅಸ್ವಸ್ಥರಾದ ಶಾಸಕ ತನ್ವೀರ್‌ಸೇಠ್ ಅವರನ್ನು ಇಲ್ಲಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶೆಣೈ, ‘ಅಸಿಟಿಡಿ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಅವರು ಆಸ್ಪತ್ರೆಗೆ ಬಂದರು. ಕೆಲವೊಂದು ಪರೀಕ್ಷೆಗಳನ್ನು ಮಾಡಬೇಕಿರುವುದರಿಂದ ಒಂದು ದಿನದ ಮಟ್ಟಿಗೆ ದಾಖಲಿಸಿಕೊಳ್ಳಲಾಗಿದೆ. ಸದ್ಯ, ಅವರು ಸಾಮಾನ್ಯ ವಾರ್ಡ್‌ನಲ್ಲಿದ್ದು, ಆರೋಗ್ಯ ಸ್ಥಿರವಾಗಿದೆ’ ಎಂದು ಹೇಳಿದರು.
Read More »
admin
February 5, 2022
Breaking News, ಜಿಲ್ಲೆ, ಮೈಸೂರು
ಮೈಸೂರು: ಹಿಜಾಬ್ ಧರಿಸಬೇಕೆಂದರೆ ನೀವು ಪಾಕಿಸ್ತಾನಕ್ಕೆ ಹೋಗಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಇಂದು ಕಾಲೇಜಿಗೆ ಹಿಜಾಬ್ ಧರಿಸಿ ಬರುತ್ತೇವೆ ಎಂದು ಹೇಳುವವರು ನಾಳೆ ಶಾಲೆಯಲ್ಲಿ ಮಸೀದಿ ಕಟ್ಟಲು ಅವಕಾಶ ಕೊಡಿ ಎನ್ನುತ್ತಾರೆ.ತಾಲಿಬಾನ್ ಸಂಸ್ಕೃತಿಗೆ ಅವಕಾಶ ಕೊಡಲ್ಲ ಎಂದು ವಾಗ್ದಾಳಿ ನಡೆಸಿದರು.
Read More »
admin
February 4, 2022
Breaking News, ಜಿಲ್ಲೆ, ಮೈಸೂರು
ಮೈಸೂರು: ಈಚೆಗಷ್ಟೇ ಮೈಸೂರು ವಿಶ್ವವಿದ್ಯಾನಿಲಯವು ಉಪಕುಲಸಚಿವ ಸ್ಥಾನದಿಂದ ಡಾ.ಬಸಪ್ಪ ಅವರನ್ನು ಏಕಾ-ಏಕಿ ವರ್ಗಾವಣೆ ಮಾಡಿರುವ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ಸ್ಪಷನೆ ನೀಡಿರುವ ಡಾ.ಬಸಪ್ಪ ಅವರು, ʻವರ್ಗಾವಣೆ ಮಾಡುವುದು ವಿಶ್ವವಿದ್ಯಾನಿಲಯದ ನಿರ್ಧಾರ, ಅದಕ್ಕೆ ನಾನು ಬದ್ಧನಾಗಿದ್ದೇನೆ. ವಿವಿಯ ಯಾವುದೇ ವಿಭಾಗಕ್ಕೆ ವರ್ಗಾವನೆ ಮಾಡಿದರೂ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಇದರಲ್ಲಿ ನನಗೆ ಯಾವುದೇ ಅಸಮಾಧಾನವಿಲ್ಲʼ ಎಂದು ಸ್ಪಷ್ಟಪಡಿಸಿದ್ದಾರೆ.
Read More »
admin
February 4, 2022
Breaking News, ಜಿಲ್ಲೆ, ಮೈಸೂರು
ಮೈಸೂರು: ಅತೃಪ್ತ ಎಂಎಲ್‌ಸಿ ಹಾಗೂ ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರನ್ನು ಭೇಟಿ ಮಾಡಿ ಕಾಂಗ್ರೆಸ್‌ನಲ್ಲಿಯೇ ಇರುವಂತೆ ಮನವರಿಕೆ ಮಾಡುವುದಾಗಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ನಾಯಕರಿಗೆ ಅವರ ಧರ್ಮ ಅಥವಾ ಜಾತಿಯ ಆಧಾರದ ಮೇಲೆ ಉನ್ನತ ಹುದ್ದೆಗಳನ್ನು ನೀಡುವ ಸಂಪ್ರದಾಯ ಕಾಂಗ್ರೆಸ್‌ನಲ್ಲಿ ಇಲ್ಲ. ಶೀಘ್ರದಲ್ಲೇ ಇಬ್ರಾಹಿಂ ಅವರನ್ನು ಭೇಟಿ ಮಾಡಿ ಅವರು ಪ್ರಸ್ತಾಪಿಸಿದ ಸಮಸ್ಯೆಗಳನ್ನು ಚರ್ಚಿಸಿ …
Read More »
admin
February 3, 2022
Breaking News, ಜಿಲ್ಲೆ, ಮೈಸೂರು
ಮೈಸೂರು: ಇಲ್ಲಿನ ಮಾನಸ ಗಂಗೋತ್ರಿಯಲ್ಲಿಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕ್ಲಾಕ್ ಟವರ್ ನಿಂದ ಹೊರಟ ಮೆರವಣಿಗೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವದ ದಿನ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆರವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವಿದ್ಯಾರ್ಥಿ ಮುಖಂಡರಾದ ಎಸ್.ಮರಿದೇವಯ್ಯ, ಮಹೇಶ್ ಸೋಸಲೆ, ನಂಜುಂಡಸ್ವಾಮಿ, ಹೂವಿನ ಸಿದ್ದು, ಕರುಣಾ, ಸರಸ್ವತಿ …
Read More »
admin
February 3, 2022
Breaking News, ಜಿಲ್ಲೆ, ಮೈಸೂರು
ಮೃಸೂರ : ಜಿಲ್ಲೆಯ ರೈತನ ಮೇಲೆ ಒಂಟಿ ಸಲಗ ದಾಳಿ ಹುಣಸೂರು ತಾಲೂಕಿನ ಕೊಳವಿಗೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತ ಬಲಿಯಾದ ಘಟನೆ ನಡೆದಿದೆ. ಕೊಳವಿಗೆ ಗ್ರಾಮದ ರೈತ ರಾಜೇಶ್(50) ಮೃತಪಟ್ಟವರು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಗರಹೊಳೆ ವೀರನಹೊಸಹಳ್ಳಿ ಅರಣ್ಯ ವಲಯದಿಂದ ಕಾಡಾನೆ ಬಂದಿತ್ತು. ರೈತ ರಾಜೇಶ್ ಮನೆ ಹಿಂಭಾಗ ಹಿತ್ತಲಲ್ಲಿ ದನಗಳಿಗೆ ಹುಲ್ಲು ತರಲು ಹೋಗುವಾಗ ಪಕ್ಕದ ಜಮೀನಿನಲ್ಲಿ ನಿಂತಿದ್ದ ಒಂಟಿ …
Read More »
admin
January 31, 2022
Breaking News, ಜಿಲ್ಲೆ, ಮೈಸೂರು
ಮೈಸೂರು:ಪ್ರಸ್ತುತ ದಿನಗಳಲ್ಲಿ ಸಮಾಜಕ್ಕೆ ಆಸ್ಪತ್ರೆಗಳು ತೀರಾ ಅತ್ಯಗತ್ಯ. ‘ಬಡವರು ಮತ್ತು ಶ್ರೀಮಂತರ ಮಧ್ಯೆ ಯಾವುದೇ ಕಾರಣಕ್ಕೂ ಭೇದ ಬೇಡ. ಇಬ್ಬರ ಪ್ರಾಣವೂ ಒಂದೇ. ಇಬ್ಬರಿಗೂ ಒಂದೇ ಬಗೆಯ ಚಿಕಿತ್ಸೆ ನೀಡಬೇಕು’ ಎಂದು ನಟ ಶಿವರಾಜ್‌ಕುಮಾರ್ ಸಲಹೆ ನೀಡಿದರು. ದಟ್ಟಗಳ್ಳಿಯಲ್ಲಿ ನಿರ್ಮಿಸಿರುವ ನಯನ ಕುಮಾರ‍್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.’ ಮೈಸೂರಿನ ಈ ಭಾಗದಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಿಸಿರುವುದು ಸಮಯೋಚಿತ. ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಯಾರೇ ಬಂದರೂ ಎಲ್ಲರಿಗೂ …
Read More »
admin
January 29, 2022
Breaking News, ಜಿಲ್ಲೆ, ಮೈಸೂರು
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಡುಗೆ ಅನಿಲ ಕೊಳವೆ ಮಾರ್ಗ ಅಳವಡಿಸುವ ವಿಷಯದಲ್ಲಿ ಸ್ವಪಕ್ಷೀಯರಿಂದ ಟೀಕೆಗೆ ಒಳಗಾಗಿರುವ ಮೈಸೂರು-ಕೊಡಗು ಸಂಸದೀಯ ಕ್ಷೇತ್ರಕ್ಕೆ ಎರಡು ಬಾರಿ ಸಂಸದರಾಗಿರುವ ಪ್ರತಾಪ್ ಸಿಂಹ ಮೈಸೂರಿನ ಶಾಸಕರಿಗೆ ಸಿಂಹ ಸವಾಲು ಹಾಕಿದ್ದಾರೆ. ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ತಮ್ಮಕ್ಷೇತ್ರದಲ್ಲಿ ಬೆಳವಣಿಗೆಗಳು, ಅಭಿವೃದ್ಧಿ ಕಾರ್ಯಗಳ ಅಗಲಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ. ಮೈಸೂರು ಅಭಿವೃದ್ಧಿ ಮಾಡಿದ್ದು ನಾನು, ನಾನು, ನಾನು..! ಎಂದು ಘಂಟಾಘೋಷವಾಗಿ ಹೇಳಿರುವ ಸಂಸದ ಪ್ರತಾಪ್ …
Read More »
admin
January 29, 2022
Breaking News, ಜಿಲ್ಲೆ, ಮೈಸೂರು
ಮೈಸೂರು: ಶಾಲೆಯೊಂದರಲ್ಲಿ ವಿದ್ಯಾರ್ಥಿನಿ ಜತೆ ಮುಖ್ಯಶಿಕ್ಷಕ ರೊಮ್ಯಾನ್ಸ್ ಮಾಡಿರುವ ಘಟನೆ ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಶಾಲೆಯಲ್ಲಿ ನಡೆದಿತ್ತು. ಇದೀಗ ವಿಡಿಯೋ ವೈರೆಲ್ ಆಗಿದೆ. ಈ ಕಾಮುಕ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತುಂಬಾ ಆಗ್ರಹಗಳು ಕೇಳಿಬಂದಿತ್ತು. ಹಾಗಾಗಿ ಖಾಸಗಿ ಶಾಲಾ ಆಡಳಿತ ಮಂಡಳಿ ತುರ್ತು ಸಭೆಯಲ್ಲಿ ಆ ಮುಖ್ಯ ಶಿಕ್ಷಕನನ್ನು ಸೇವೆಯಿಂದಲೇ ಖಾಯಂ ವಜಾಗೊಳಿಸಲು ತೀರ್ಮಾಣಿಸಿದ್ದಾರೆ. ಮುಖ್ಯಶಿಕ್ಷಕ ಆರ್.ಎಂ.ಅನಿಲ್ ಕುಮಾರ್ ಎಂಬುವರೇ ಸೇವೆಯಿಂದಲೇ ಖಾಯಂ ವಜಾಗೊಂಡಿರುವವರು.
Read More »
admin
January 28, 2022
Breaking News, ಜಿಲ್ಲೆ, ಮೈಸೂರು
ಮೈಸೂರು: ಚಿತ್ರೀಕರಣದ ಬ್ಯೂಸಿ ಕೆಲಸದ ಮಧ್ಯೆಯೂ ಶಿವಣ್ಣ ಶಕ್ತಿಧಾಮಕ್ಕೆ ಭೇಟಿ ನೀಡಿ ಮಕ್ಕಳಿಗೆ ಬಾಡೂಟ ಬಡಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದ ಹಿನ್ನಲೆ ಶಕ್ತಿಧಾಮಕ್ಕೆ ಭೇಟಿ ನೀಡಿದ್ದಾರೆ. ಮೈಸೂರಿನ ದೊನ್ನೆ ಬಿರಿಯಾನಿ ಪ್ಯಾಲೇಸ್ ವತಿಯಿಂದ ಸಚಿನ್ ಗೌಡ ಎನ್ನುವವರು ಶಕ್ತಿಧಾಮದ ಮಕ್ಕಳಿಗೆ ಬಿರಿಯಾನಿ ಹಾಗೂ ಕಬಾಬ್ ಊಟ ಹಂಚಿದ್ದಾರೆ.
Read More »