BigTv News
March 20, 2025
Breaking News, Crime, ಬೆಂಗಳೂರು
ಕನಕಪುರ ನಗರದ ಮಹಾರಾಜರಕಟ್ಟೆಯ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದ ಜ್ಯೋತಿ ಬಾಯಿ ಮತ್ತು ರಮೇಶ್ ದಂಪತಿಯ ಪುತ್ರ ದೀಕ್ಷಿತ್ ಎಂಬ ಮಗುವಿನ ಕೈ ಮೇಲೆ ಕಾದ ಚಾಕುವಿನಿಂದ ಬರೆ ಹಾಕಿದ್ದಲ್ಲದೆ ಗುದದ್ವಾರಕ್ಕೆ ಖಾರದಪುಡಿ ಹಾಕಿದ್ದಾಳೆ.ತಮ್ಮ ಮನೆಯಲ್ಲಿನ ಒತ್ತಡದಿಂದ ಮಗುವಿಗೆ ಈ ರೀತಿ ಮಾಡಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಅಂಗನವಾಡಿ ಸಹಾಯಕಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Read More »
BigTv News
March 20, 2025
Breaking News, Crime, ಬೆಳಗಾವಿ
ಬೆಳಗಾವಿ ನಗರದ ಪಾಂಗುಳಗಲ್ಲಿ ಅಶ್ವಥಾಮ ದೇವಸ್ಥಾನದ ಮೇಲೆ ಯುವಕ ಕಲ್ಲು ತೂರಾಟ ನಡೆಸಿದ್ದಾನೆ. ದೇವಸ್ಥಾನದ ಮೇಲೆ ಕಲ್ಲು ತೂರುತ್ತಿದ್ದಂತೆ ಸ್ಥಳೀಯರು ಯುವಕನನ್ನು ಹಿಇಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ.ದೇವಸ್ಥಾನದ ಮೇಲೆ ಕಲ್ಲೆಸೆದ ವ್ಯಕ್ತಿಯನ್ನು ಉಜ್ವಲ್ ನಗರದ ಯಾಸಿರ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಸ್ಥಳಿಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
Read More »
BigTv News
March 20, 2025
Breaking News, Crime, ತುಮಕೂರು
ತುಮಕೂರಿನ ಬಸ್ ಸ್ಟಾಂಡ್‌ನಿಂದ ಕಡೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಗರದ ಟೌನ್‌ಹಾಲ್ ಸರ್ಕಲ್ ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಬಸ್ ಡಿಕ್ಕಿ ಹೊಡೆದಿದೆ ಡಿಕ್ಕಿಯ ರಭಸಕ್ಕೆ ಮಂಜಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Read More »
BigTv News
March 20, 2025
Breaking News, Crime, ಬೆಳಗಾವಿ
ಮಾವಿನಕಟ್ಟಿ ಗ್ರಾಮದಲ್ಲಿ ಪತಿ ತನ್ನ ತಾಯಿ ಮನೆಗೆ ಊಟಕ್ಕೆ ಹೋಗಿದ್ದಕ್ಕೆ ಪತ್ನಿ ಶಿಲ್ಪಾ ಆಕ್ರೋಶ ವ್ಯಕ್ತಪಡಿಸಿ ಅತ್ತೆಯ ಮೇಲೆ ಕುಡಗೋಲಿನಿಂದ ಹಲ್ಲೆ ನಡೆಸಿದ್ದಾಳೆ ಎಂದು ಹೇಳಲಾಗಿದೆ. ಅತ್ತೆ ಸೊಸೆ ಮಧ್ಯೆ ಕಳೆದ ಹಲವು ವರ್ಷಗಳಿಂದ ಜಗಳ ನಡೆಯುತ್ತಿದ್ದು, ಹಲವು ಬಾರಿ ಪೊಲೀಸ್ ಠಾಣೆಗೂ ಹೋಗಿದ್ದಾರೆ.ಶಿಲ್ಪಾ ವಿರುದ್ಧ ಮಹಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಶಿಲ್ಪಾ ಮಾತ್ರ ತಾನು ಹಲ್ಲೆ ಮಾಡಿಲ್ಲ ಎಂದು ಆರೋಪ ನಿರಾಕರಿಸಿದ್ದಾರೆ.ಸಧ್ಯ ಜಾನವ್ವ ಬೀಮ್ಸ್ ಆಸ್ಪತ್ರೆಯಲ್ಲಿ …
Read More »
BigTv News
March 20, 2025
Breaking News, Crime, ಮಹಾರಾಷ್ಟ್ರ
ಠಾಣೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಆರೋಪಿ ಜೈಲು ಕಂಬಿಯ ನಡುವೆಯೇ ನುಸುಳಿ ಪರಾರಿಯಾಗಿದ್ದಾನೆ. ಆರೋಪಿಯು ಇದಕ್ಕೂ ಮೊದಲು ಹಲವಾರು ಬಾರಿ ಇದೆ ರೀತಿ ಪರಾರಿಯಾಗಿದ್ದ ಎನ್ನಲಾಗಿದೆ.ಆರೋಪಿ ತಪ್ಪಿಸಿಕೊಂಡು ಹೋಗುತ್ತಿದ್ದಂತೆ ಪೊಲೀಸರು ಮತ್ತೆ ಆತನನ್ನು ಬಂಧಿಸಿ ಬಂಧೀಖಾನೆ ಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಬೀಗ, ಸರಳು ಯಾವುದಕ್ಕೂ ಹಾನಿ ಮಾಡದೆ ಆಚೆ ಬಂಡಿರೋದನ್ನು ನೋಡಿ ಒಂದು ಕ್ಷಣ ಪೊಲೀಸರೇ ಶಾಕ್ ಆಗಿದ್ದಾರೆ.
Read More »
BigTv News
March 20, 2025
Breaking News, Crime, ವಿಜಯಪುರ
ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲ್ಲೂಕಿನ ಜಂಬಲದಿನ್ನಿ ಗ್ರಾಮದ ವೀರೇಶ ಶಾಂತಗೌಡ ಬಿರಾದಾರ ಟ್ಯಾಂಕರ್ ಚಾಲಕ ಶಿಕ್ಷೆಗೆ ಒಳಗಾದ ವ್ಯಕ್ತಿ. ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮದ ಟಂಟಂ ಚಾಲಕ ಮಲ್ಲಪ್ಪ ಮಲ್ಲಪ್ಪ ನಾಯ್ಕೋಡಿ ಅವರಿಗೆ ದಂಡ ವಿಧಿಸಲಾಗಿದೆ. ಟ್ರ್ಯಾಕ್ಟರ್-ಟಂಟಂ ಡಿಕ್ಕಿಯಾಗಿ ಆರು ಜನರ ಸಾವಿಗೆ ಕಾರಣವಾದ ಟ್ಯಾಂಕರ್ ಚಾಲಕನಿಗೆ ಆರು ತಿಂಗಳು ಜೈಲು ಶಿಕ್ಷೆ, ₹3500 ದಂಡ, ವಿಧಿಸಲಾಗಿದೆ.
Read More »
BigTv News
March 20, 2025
Breaking News, Crime, ಚಿಕ್ಕಮಗಳೂರು
ಜೀಪ್ ಡಿಕ್ಕಿಯಿಂದ ಗಂಗಾಧರ ಎಂಬುವವರು ಸಾವನ್ನಪ್ಪಿದ್ದರು. ಕಡೂರು ಪಟ್ಟಣದ ಮಚ್ಚೇರಿ ಗ್ರಾಮದ ಬಳಿ ಅಪಘಾತ ಸಂಭವಿಸಿತ್ತು. ಕಡೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಅಪಘಾತ ವೇಳೆ ಪೊಲೀಸ್ ಜೀಪ್ ನಿಲ್ಲಿಸದೇ ಶಿವಕುಮಾರ್ ಪರಾರಿಯಾಗಿದ್ದ. ಜೀಪ್ ಚಾಲಕನ ನಿರ್ಲಕ್ಷ್ಯದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗಟಗೆರೆ ಪೊಲೀಸ್ ಠಾಣೆಯ ಜೀಪ್ ಚಾಲಕ ಶಿವಕುಮಾರ್ನ್ನು ಅಮಾನತು ಮಾಡಿ ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಆಮ್ಟೆ ಆದೇಶ ಹೊರಡಿಸಿದ್ದಾರೆ.
Read More »
BigTv News
March 20, 2025
Breaking News, Crime, ಬಳ್ಳಾರಿ
7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸೆಗಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇದೀಗ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಠಾಣೆಯ ಪೊಲೀಸರು ಬಿಜೆಪಿ ಮುಖಂಡ ದೇವು ನಾಯಕ್ ನನ್ನು ಅರೆಸ್ಟ್ ಮಾಡಿದ್ದಾರೆ. ಬಿಜೆಪಿ ಮುಖಂಡ ದೇವು ನಾಯಕ ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಜಿಲ್ಲಾ ಪಂಚಾಯಿತಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದಾನೆ.
Read More »
BigTv News
March 20, 2025
Breaking News, Crime, ಆಂಧ್ರ ಪ್ರದೇಶ
ಪ್ರೀತಿ ಎಂಬ ಮೋಹಕ್ಕೆ ಬಲಿಯಾಗಿ ಅದೆಷ್ಟೋ ಕೃತ್ಯಗಳು ನಡೆದಿರೋದನ್ನ ನೋಡಿರುತ್ತೇವೆ. ಅಂಥದ್ದೇ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಸಾಹಿಲ್ ಎಂಬಾತನ ಹಿಂದೆ ಬಿದ್ದ ಮುಸ್ಕಾನ್ ರಸ್ತೋಗಿ ಪತಿ ಸೌರಭ್ ರಜಪೂತ್‌ನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಅಷ್ಟೇ ಅಲ್ಲ ಬಳಿಕ ಸೌರಭ್ ದೇಹವನ್ನ 15 ಪೀಸ್ ಮಾಡಿ ಪ್ಲಾಸ್ಟಿಕ್ ಬ್ಯಾರಲ್‌ನಲ್ಲಿ ಹಾಕಿ ಅದಕ್ಕೆ ಸಿಮೆಂಟ್ ತುಂಬಿಸಿ ಪ್ರಕರಣವನ್ನೇ ಕ್ಲೋಸ್ ಮಾಡೋ ಹುನ್ನಾರ ಮಾಡಿದ್ದರು.ಅಳಿಯನ ಕೊಲೆ ಸುದ್ದಿ ಕೇಳಿ ಆರೋಪಿ ಮುಸ್ಕಾನ್ ಪೋಷಕರು …
Read More »
BigTv News
March 20, 2025
Breaking News, Crime, ಆಂಧ್ರ ಪ್ರದೇಶ
ಆಗ್ರೋಹಾ ಪ್ರದೇಶದ ಗ್ರಾಮವೊಂದರ ಅಪ್ರಾಪ್ತ ಬಾಲಕಿಯ ತಾಯಿ ಪೊಲೀಸ್ ದೂರು ದಾಖಲಿಸಿದ್ದರು. ಯೂಟ್ಯೂಬ್‌ನಲ್ಲಿನ ಹಾಸ್ಯ ವೀಡಿಯೊಗಳಿಗೆ ಹೆಸರುವಾಸಿಯಾದ ದರ್ಶನ್, ತನ್ನ ವೀಡಿಯೊಗಳಲ್ಲಿ ಒಂದರಲ್ಲಿ ನಟಿಸುವ ನೆಪದಲ್ಲಿ ಬಾಲಕಿಗೆ ಆಮಿಷವೊಡ್ಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಬೈಕ್‌ನಲ್ಲಿ ಚಂಡೀಗಢಕ್ಕೆ ಕರೆದೊಯ್ದು, ಅಲ್ಲಿ ಹೋಟೆಲ್ ಕೋಣೆಯಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿತ್ತು.ಹರಿಯಾಣ ಮೂಲದ ದರ್ಶನ್, ಮಾರ್ಚ್ 11 ರಂದು ತಪ್ಪಿತಸ್ಥರೆಂದು ಸಾಬೀತಾಗಿದ್ದು, ಅಂದಿನಿಂದ ಪೊಲೀಸ್ ವಶದಲ್ಲಿದ್ದಾರೆ.ಜೈಲು ಶಿಕ್ಷೆ ಮತ್ತು ದಂಡದ ಜೊತೆಗೆ, ಬಲಿಪಶುವಿಗೆ 2,00,000 ರೂಪಾಯಿ …
Read More »